ಅಭಿಪ್ರಾಯ / ಸಲಹೆಗಳು

 ಅಪಘಾತ ಪ್ರಕರಣ 

  • ಕಾರ್ಕಳ: ಪಿರ್ಯಾದಿದಾರರಾದ ಲತೀಫ್, ಪ್ರಾಯ: 36 ವರ್ಷ, ತಂದೆ: ಹುಸೇನ್ ಬ್ಯಾರಿ, ವಾಸ: ನೇರಲ್ ಪಲ್ಕೆ, ಕುಕ್ಕುಂದೂರು ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರು ಅಶ್ಪಕ್ ಎಂಬುವವರ ಮಾಲೀಕತ್ವದ ಲಾರಿ ನಂಬ್ರ KA-18-A-2594 ನೇದರಲ್ಲಿ ಲೋಡರ್ ಕೆಲಸ ಮಾಡಿಕೊಂಡಿದ್ದು ದಿನಾಂಕ: 13/05/2022 ರಂದು ಕುಕ್ಕುಂದೂರು ಗ್ರಾಮದ ನಕ್ರೆ ಪೊಸನೊಟ್ಟು ಎಂಬಲ್ಲಿ ಕಲ್ಲಿನ ಪ್ಯಾಕ್ಟರಿಯಿಂದ ಕಲ್ಲನ್ನು ಲೋಡ್ ಮಾಡಿಕೊಂಡು ಚಾಲಕ ಅಶ್ಪಕ್ ರವರು ಲಾರಿಯನ್ನು ಕಲ್ಲಿನ ಪ್ಯಾಕ್ಟರಿಯಿಂದ ಮುಖ್ಯರಸ್ತೆಗೆ ಚಲಾಯಿಸಿಕೊಂಡು ಬಂದು ನಿಲ್ಲಿಸಿದ್ದು, ಪಿರ್ಯಾದಿದಾರರು ಪ್ಯಾಕ್ಟರಿಯಿಂದ ನಡೆದುಕೊಂಡು ಮುಖ್ಯ ಕಾಂಕ್ರೀಟ್ ರಸ್ತೆಗೆ ಬಂದು ಲಾರಿಯನ್ನು ಹತ್ತಿಹೋಗಲು ಸಮಯ ಸುಮಾರು ಬೆಳಗ್ಗೆ 10:00 ಗಂಟೆಗೆ ಲಾರಿಯ ಎಡಗಡೆ ಬಾಗಿಲನ್ನು ತೆಗೆದು ಹತ್ತುತ್ತಿರುವಾಗ ಲಾರಿ ಚಾಲಕ ಅಶ್ಫಕ್ ನು ಒಮ್ಮೆಲೆ ಅಜಾಗರೂಕತೆಯಿಂದ ಲಾರಿಯನ್ನು ನಕ್ರೆ ಕಡೆಗೆ ಚಲಾಯಿಸಿದ್ದು ಪಿರ್ಯಾದಿದಾರರು ಜಾರಿ ಕಾಂಕ್ರೀಟ್ ರಸ್ತೆಯ ಮೇಲೆ ಬಿದ್ದಾಗ ಲಾರಿಯನ್ನು ಚಾಲಕ ಆಶ್ಪಕ್ ನು ಪಿರ್ಯಾದಿದಾರರ ಬಲಕಾಲಿನ ಮೇಲೆ ಚಲಾಯಿಸಿದ್ದು ಪರಿಣಾಮ ಬಲಕಾಲಿನ ಕೋಲು ಕಾಲು ಮೂಳೆ ಮುರಿತಗೊಂಡಿರುವುದಾಗಿದೆ. ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರನ್ನು ಸಿಟಿ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಓಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 04/05/2022 ರಂದು ಸುರೇಶ ಬೆಳ್ಳೆರಿ ಪ್ರಾಯ:38 ವರ್ಷ, ತಂದೆ: ಲಕ್ಷ್ಮಣ ಬೆಳ್ಳೆರಿ , ವಾಸ:ಕುಲ್ಮಿಂಚಿ, ಹುನುಗುಂದ ತಾಲೂಕು ಬಾಗಲಕೋಟೆ ಜಿಲ್ಲೆ ಎಂಬುವವರು ಠಾಣೆಗೆ ಹಾಜರಾಗಿ ತನ್ನ ಅಣ್ಣ ಯಮುನಪ್ಪ ಪ್ರಾಯ:43 ವರ್ಷ ರವರಿಗೆ ವಿಪರೀತ ಕುಡಿತದ ಚಟವಿದ್ದು ಪ್ರತಿ ದಿನ ಕುಡಿದು ಮನೆಗೆ ಹೋಗುತ್ತಿದ್ದವರು ದಿನಾಂಕ 03/05/2022 ರಂದು ಉಡುಪಿ ಕರಾವಳಿ ಜಂಕ್ಷನ್ ಬಳಿ ಅಸ್ವಸ್ಥರಾಗಿ ಬಿದ್ದಿದ್ದವರನ್ನು ವಿಶು ಶೆಟ್ಟಿ ಎಂಬುವವರು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ 04/05/2022 ರಂದು ಬೆಳಿಗ್ಗೆ 04:30 ಗಂಟೆಗೆ ಮೃತಪಟ್ಟಿದ್ದು, ಮೃತನು ವಿಪರೀತ ಕುಡಿತದ ಚಟದಿಂದ ಖಾಯಿಲೆಗೀಡಾಗಿ ಮೃತಪಟ್ಟಿರುವುದಾಗಿದೆ. ದೂರಿನಂತೆ ಉಡುಪಿ ನಗರ ಠಾಣಾ ಯುಡಿಆರ್ ನಂಬ್ರ 27/2022 ಕಲಂ:174 ಸಿಆರ್ ಪಿಸಿಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು, ಪ್ರಕರಣವು ರಸ್ತೆ ಅಪಘಾತದಿಂದ ಉಂಟಾಗಿರುವುದಾಗಿ ತಿಳಿದ್ದು ಬಂದಿದ್ದು ಹಾಗೂ ಈ ಅಪಘಾತಕ್ಕೆ ಎರ್ಟಿಗಾ ಕಾರು ನಂಬ್ರ KA-20- Z -1683 ನೇದರ ಚಾಲಕನ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿದ್ದು ಪ್ರಕರಣದ ಪ್ರತ್ಯಕ್ಷ ಸಾಕ್ಷಿದಾರರ ಹೇಳಿಕೆಯಿಂದ, ಸಿಸಿಟಿವಿ ಪುಟೇಜ್ ನಿಂದ ಹಾಗೂ ವೈದ್ಯರ ಪಿಎಮ್ ವರದಿಯಿಂದ ತಿಳಿದು ಬಂದಿದ್ದು, ಪ್ರಕರಣದ ಮುಂದಿನ ತನಿಖೆಯ ಸಲುವಾಗಿ ಪ್ರಕರಣದ ಕಡತವನ್ನು ಉಡುಪಿ ಸಂಚಾರ ಪೊಲೀಸ್ ಠಾಣೆಗೆ ಹಸ್ತಾಂತರಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 279, 304(ಎ) ಐ.ಪಿ.ಸಿ ಮ,ತ್ತು 134(ಬಿ) ಜೊತೆಗೆ 187 ಐಎಂವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿಯಾದಿದಾರರಾದ ಕೆ ಗೋಪಾಲ ಕುಂದರ್ (56),ತಂದೆ: ದಿ|| ರಾಮ ಪೂಜಾರಿ, ವಾಸ: ತಾಂಗದಗಡಿ, ಕರಂಬಲ್ಳಿ ಶಿವಳ್ಳಿ ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ: 14/05/2022 ರಂದು KA-20-C-8776 ನೇ ಅಟೋ ರಿಕ್ಷಾದಲ್ಲಿ ಮೂರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಸಿಂಡಿಕೇಟ್ ಸರ್ಕಲ್ ನಿಂದ ಡಿಸಿ ಕಛೇರಿ ರಸ್ತೆಯಲ್ಲಿ ಹೋಗುತ್ತಿರುವಾಗ 21:15 ಗಂಟೆ ಸಮಯಕ್ಕೆ Hot & Spice ಹೋಟೆಲ್ ಸ್ವಲ್ಪ ಮುಂದೆ ತಲುಪಿದಾಗ KA-19-HD-5215 ನೇ ಮೋಟಾರ್‌ ಸೈಕಲ್‌ ನ ಸವಾರ ಪ್ರಜ್ವಲ್‌ ರವರು ತನ್ನ ಮೋಟಾರ್‌ ಸೈಕಲ್ ನ್ನು ಡಿಸಿ ಕಛೇರಿ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರಿವಿನಲ್ಲಿ ಮೋಟಾರ್ ಸೈಕಲನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೋಡೆದು ಡಿವೈಡರ್ ಮೇಲಿಂದ ಜಂಪ್ ಹೊಡೆದು ಪಿರ್ಯಾದಿದಾರರು ಹೋಗುತ್ತಿದ್ದ ರಸ್ತೆಗೆ ಬಿದ್ದು ಮೋಟಾರ್‌ ಸೈಕಲ್‌ ರಿಕ್ಷಾದ ಎದುರಿನ ಬಲಬಾಗಕ್ಕೆ ಡಿಕ್ಕಿ ಹೊಡೆಯಿತು ಮೊಟಾರ್‌ ಸೈಕಲ್‌ ಸವಾರ ಪ್ರಜ್ವಲ್‌ ಹಾಗೂ ಸಹಸವಾರ ಸುಪ್ರೀತ್‌ ರಸ್ತೆಗೆ ಬಿದ್ದು ಪ್ರಜ್ವಲ್‌ ರವರಿಗೆ ತಲೆಗೆ ತಿವ್ರತರವಾದ ಗಾಯ ಉಂಟಾಗಿದ್ದು ಅವರನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೊಗಿದ್ದು 21:30 ಗಂಟೆಗೆ ಕೆ ಎಂ ಸಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರಜ್ವಲ್‌ ರವರು ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ, ಮೋಟಾರ್‌ ಸೈಕಲ್‌ ನ ಸಹಸವಾರ ಸುಪ್ರೀತ್‌ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಧುಮಿತ ಸುಶ್ಮಿತಾ ಹಾಗೂ ಸನಿತ್‌ ಎಂಬುವವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 66/2022 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವ: ದಿನಾಂಕ 14/05/2022 ರಂದು ಪಿರ್ಯಾದಿ ರಘುನಾಥ ಪೂಜಾರಿ, ಪ್ರಾಯ 54ವರ್ಷ, ತಂದೆ: ಸಾಧು ಪೂಜಾರಿ, ವಾಸ: ಕುಂಜಿಗುಡ್ಡೆ, ಪಿಲಾರು ಗ್ರಾಮ, ಪೆರ್ನಾಲು ಪೋಸ್ಟ್, ಕಾಪು ಇವರು ತನ್ನ ಬಾಬ್ತು ಸ್ಕೂಟರ್ ನಂ KA20EW6311ನೇದರಲ್ಲಿ  ಸುಂದರ ದೇವಾಡಿಗರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು  ಪಿಲಾರುವಿನಿಂದ ಉಡುಪಿ ಕಡೆಗೆ ಹೊರಟು   ಶಿರ್ವಾ ಗ್ರಾಮದ ಬಂಟಕಲ್ಲು ಇಂಜಿನಿಯರಿಂಗ್ ಕಾಲೇಜ್ ಬಳಿ ತಲುಪುವಾಗ ಬೆಳಿಗ್ಗೆ ಸುಮಾರು 8.45 ಗಂಟೆಗೆ  ಕಟಪಾಡಿ ಕಡೆಯಿಂದ ಬಂಟಕಲ್ಲು ಇಂಜಿಯರಿಂಗ್ ಕಾಲೇಜ್  ಕಡೆಗೆ KA 19C 4369ನೇ ಕಾಲೇಜ್ ಬಸ್ ಚಾಲಕ ಶ್ರೀಕಾಂತ್ ಭಟ್ ನು ಅತಿವೇಗ ಹಾಗೂ ಅಜಾಗರೂಕತೆಯಿಂದ ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದು ಬಲಕಡೆಗೆ ತಿರುಗುವರೇ ಇಂಟಿಕೇಟರ್ ನ್ನು ಹಾಕದೇ ಒಮ್ಮೆಲೇ ಕಾಲೇಜ್ ಕಡೆಗೆ ಬಸ್ ನ್ನು ತಿರುಗಿಸಿದ್ದರಿಂದ ಪಿರ್ಯಾದಿದಾರರು ಚಲಾಯಿಸುತ್ತಿದ್ದ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ಇಬ್ಬರೂ ರಸ್ತೆಗೆ ಬಿದ್ದು, ಈ ಅಫಘಾತದಿಂದ ಪಿರ್ಯಾದಿದಾರರ ಬಲಕಾಲಿಗೆ ಗಾಯವಾಗಿ ಒಳಜಖಂ, ಬಲ ಮೊಣಗಂಟಿನ ಬಳಿ ತೀವ್ರ ತರಹದ ರಕ್ತಗಾಯ ಬಲಗಲ್ಲ,ಹೊಟ್ಟೆ ಎದೆ ಬಳಿ ಗಾಯ,ಒಳಜಖಂ ಆಗಿದ್ದಲ್ಲದೇ ಸುಂದರ ದೇವಾಡಿಗರವರಿಗೆ ತಲೆಯ ಎಡ ಬದಿ ರಕ್ತಗಾಯ,ಬಲಕಾಲಿನಲ್ಲಿ ತರಚಿದ ಗಾಯವಾಗಿರುತ್ತದೆ. ಸ್ಕೂಟರ್ ಜಖಂಗೊಂಡಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022, ಕಲಂ 279,   337,338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.  

ಅಸ್ವಾಭಾವಿಕ ಮರಣ ಪ್ರಕರಣ 

  • ಬ್ರಹ್ಮಾವರ: ಪಿರ್ಯಾದಿದಾರರಾದ ಲಕ್ಷ್ಮೀ ಭಾಯಿ (60), ಗಂಡ: ಕೃಷ್ಣ ನಾಯ್ಕ, ವಾಸ: 1-209/2, ಲಕ್ಷ್ಮೀ ನಿವಾಸ, ಕಾಡೂರು ಬೆಳ್ತಾಡಿ, ಕಾಡೂರು ಅಂಚೆ, ಬ್ರಹ್ಮಾವರ ತಾಲೂಕು ಇವರ ಮಗ ಮಂಜುನಾಥ ನಾಯ್ಕ, ಪ್ರಾಯ: 37 ವರ್ಷ ಎಂಬುವವರು ಸುಮಾರು 10-12 ವರ್ಷಗಳಿಂದ ವಿಪರೀತ ಮದ್ಯಪಾನ ವ್ಯಸನಿ ಆಗಿದ್ದು. ಈ ಬಗ್ಗೆ ಮದ್ಯವರ್ಜನ ಶಿಬಿರದಲ್ಲಿ ಮದ್ಯಪಾನದ ಸೇವಿಸುವುದನ್ನು ಬಿಡುವ ಬಗ್ಗೆ ಚಿಕಿತ್ಸೆ ಮಾಡಿಸಿದ್ದು, ಆಗ ಸ್ವಲ್ಪ ಸಮಯ ಮದ್ಯಪಾನ ಮಾಡುವುದನ್ನು ಬಿಟ್ಟಿದ್ದು, ಮತ್ತೆ ಅದೇ ಚಟಕ್ಕೆ ದಾಸನಾಗಿರುತ್ತಾನೆ. ಬಳಿಕ ತನ್ನ ಕುಡಿತಕ್ಕಾಗಿ ಕೈಸಾಲವನ್ನು ಮಾಡಿದ್ದು, ಅದೇ ಚಿಂತೆಯಿಂದ ಜೀವನದಲ್ಲಿ ಜೀಗುಪ್ಸೆಗೊಂಡು ದಿನಾಂಕ: 14/05/2022 ರಂದು ಬೆಳಿಗ್ಗೆ 11:00 ಗಂಟೆಯಿಂದ ಮದ್ಯಾಹ್ನ 3:05 ಗಂಟೆಯ ಮಧ್ಯಾವದಿಯಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಮಯ ಮನೆಯ ಬೆಡ್‌ ರೂಮ್‌ನ ಮಾಡಿನ ಜಂತಿಗೆ ಚೂಡಿದಾರ ಶಾಲನ್ನು ಕಟ್ಟಿ ಕುತ್ತಿಗೆಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 24/2022 ಕಲಂ: 174 ಸಿ.ಆರ್.‌ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 15-05-2022 12:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080