ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ; ಪಿಯಾದಿದಾರರಾದ ಕೆ ಗೋಪಾಲ ಕುಂದರ್ (56) ತಂದೆ: ದಿ|| ರಾಮ ಪೂಜಾರಿ ವಾಸ: ತಾಂಗದಗಡಿ, ಕರಂಬಲ್ಳಿ ಶಿವಳ್ಳಿ ಗ್ರಾಮ ಉಡುಪಿ ಇವರು ದಿನಾಂಕ 14/05/2022 ರಂದು ತಮ್ಮ KA-20 C-8776 ನೇ ಅಟೋ ರಿಕ್ಷಾದಲ್ಲಿ ಮೂರು ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಸಿಂಡಿಕೇಟ್ ಸರ್ಕಲ್ ನಿಂದ ಡಿಸಿ ಕಛೇರಿ ರಸ್ತೆಯಲ್ಲಿ ಹೋಗುತ್ತಿರುವಾಗ ಸುಮಾರು 21:15 ಗಂಟೆ ಸಮಯಕ್ಕೆ Hot & Spice ಹೋಟೆಲ್ ಸ್ವಲ್ಪ ಮುಂದೆ ತಲುಪಿದಾಗ KA-19 HD-5215 ನೇಮೋಟಾರ್‌ ಸೈಕಲ್‌ ನ ಸವಾರ ಪ್ರಜ್ವಲ್‌ರವರು ತನ್ನ ಮೋಟಾರ್‌ ಸೈಕಲ್ನ್ನುಡಿಸಿ ಕಛೇರಿ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಹೋಗುವ ರಸ್ತೆಯಲ್ಲಿ  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಿರಿವಿನಲ್ಲಿ ಮೋಟಾರ್ ಸೈಕಲನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೋಡೆದು ಡಿವೈಡರ್ ಮೇಲಿಂದ ಜಂಪ್ ಹೊಡೆದು ಕೆ ಗೋಪಾಲ ಕುಂದರ್ ರವರು ಹೋಗುತ್ತಿದ್ದ ರಸ್ತೆಗೆ ಬಿದ್ದು ಮೋಟಾರ್‌ಸೈಕಲ್‌ ರಿಕ್ಷಾದ ಎದುರಿನ ಬಲಬಾಗಕ್ಕೆ ಡಿಕ್ಕಿ ಹೊಡೆಯಿತು ಮೊಟಾರ್‌ ಸೈಕಲ್‌ ಸವಾರ ಪ್ರಜ್ವಲ್‌ ಹಾಗೂ ಸಹಸವಾರ ಸುಪ್ರೀತ್‌ ರಸ್ತೆಗೆ ಬಿದ್ದು ಪ್ರಜ್ವಲ್‌ರವರಿಗೆ ತಲೆಗೆ ತಿವ್ರತರವಾದ ಗಾಯ ಉಂಟಾಗಿದ್ದು  ಅವರನ್ನು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೊಗಿದ್ದು 21:30 ಗಂಟೆಗೆ ಕೆ ಎಂ ಸಿ ಆಸ್ಪತ್ರೆಯ ವೈದ್ಯರು ಪರೀಕ್ಷಿಸಿ ಪ್ರಜ್ವಲ್‌ರವರು ಮೃತ ಪಟ್ಟಿರುವದಾಗಿ ತಿಳಿಸಿರುತ್ತಾರೆ, ಮೋಟಾರ್‌ ಸೈಕಲ್‌ ನ ಸಹಸವಾರ ಸುಪ್ರೀತ್‌ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಧುಮಿತ ಸುಶ್ಮಿತಾ ಹಾಗೂ ಸನಿತ್‌ ಎಂಬುವರಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ, ಸದ್ರಿಯವರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 66/2022 ಕಲಂ; 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ; ಪಿರ್ಯಾದಿದಾರರಾದ ಅಶೋಕ್‌ ಶೆಟ್ಟಿ (59)ತಂದೆ: ದಿ. ಭುಜಂಗಶೆಟ್ಟಿವಾಸ: ಮನೆನಂ 3/11, ನಡುಹೊಸಮನೆ, ಕೆಮ್ತೂರು,ಕೊರಂಗ್ರ ಪಾಡಿ ಗ್ರಾಮ, ಉಡುಪಿ ಇವರ ತಮ್ಮನಾದ ರವಿಶೆಟ್ಟಿ, (55)ರವರು ಉಡುಪಿಯಲ್ಲಿ ವಾಚ್‌ಮ್ಯಾನ್‌ ಕೆಲಸಮಾಡಿಕೊಂಡಿದ್ದು, ಅಲ್ಲಲ್ಲಿಯೇ ವಾಸಮಾಡುತ್ತಿದ್ದರು. ರವಿಶೆಟ್ಟಿ ರವರಿಗೆ ವಿಪರೀತ ಕುಡಿತದ ಚಟವಿರುತ್ತದೆ. ದಿನಾಂಕ 14/05/2022 ರಂದು ಉಡುಪಿ ಅಜ್ಜರಕಾಡು ಪಾರ್ಕ್‌ ನಲ್ಲಿ ಬಿದ್ದಿದ್ದವರನ್ನು ಸಾರ್ವಜನಿಕರು ಸೇರಿಕೊಂಡು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ರವಿಶೆಟ್ಟಿಯವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ರವಿಶೆಟ್ಟಿಯವರು ದಿನಾಂಕ 14/05/2022 ರಂದುಸಂಜೆ 5:45 ಗಂಟೆಯಿಂದ 6:45  ಗಂಟೆಯ ಮದ್ಯಾವಧಿಯಲ್ಲಿ ಮೃತಪಟ್ಟಿದ್ದು, ಮೃತನು ವಿಪರೀತ ಕುಡಿತದ ಚಟದಿಂದಾಗಿ ಖಾಯಿಲೆ ಗೀಡಾಗಿ ಮೃತಪಟ್ಟಿರಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 28/2022 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ರಾಘವ ಸೇರಿಗಾರ (43) ತಂದೆ: ರಾಮ ಸೇರಿಗಾರ ವಾಸ: ಶ್ರೀ ರಾಮ ನಿಲಯ, ಜೋಡುರಸ್ತೆ , ಅಲೆವೂರು ಗ್ರಾಮ, ಉಡುಪಿ ತಾಲೂಕು ಇವರ ತಂದೆಯಾದ ರಾಮ ಸೇರಿಗಾರ (80) ರವರು ಅಸೌಖ್ಯದಿಂದ ಬಳಲುತ್ತಿದ್ದು,  ಅವರನ್ನು ದಿನಾಂಕ 22/04/2022 ರಂದು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಿದ್ದು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು ದಿನಾಂಕ 13/05/2022 ರಂದು ವೆನ್ ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ 15/05/2022 ರಂದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ರಾಮ ಸೇರಿಗಾರ ರವರಿಗೆ ಉಬ್ಬಸ ಸುರುವಾಗಿದ್ದು ಅವರನ್ನು ಕೂಡಲೇ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈಧ್ಯಾಧಿಕಾರಿಗಳು ರಾಮ ಸೇರಿಗಾರರವರು ಆಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ,ಆಗ ಸಮಯ ಸುಮಾರು 11:25 ಗಂಟೆ ಆಗಿರುತ್ತದೆ. ಮೃತರು ವಯೋಸಹಜ ಖಾಯಿಲೆಯಿಂದ ಅಥವಾ ಇನ್ಯಾವುದೊ ಖಾಯಿಲೆಯಿಂದ ಮೃತ ಪಟ್ಟಿರಬಹುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಯು.ಡಿ.ಆರ್ ಕ್ರಮಾಂಕ 15/2022 ಕಲಂ 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಬೈಂದೂರು; ಪಿರ್ಯಾದಿದಾರರಾದ ನಿತ್ಯಾನಂದ ಶೇಟ್ (55) ವಾಸ: ಮಾಲಕರು ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್ ಉಪ್ಪುಂದ ಪಂಚಾಯತ್ ಕಟ್ಟಡ ಬಾಗಿಲುಉಪ್ಪುಂದ ಬೈಂದೂರು ಇವರು ದಿನಾಂಕ 14/05/2022 ರಂದು ಮಧ್ಯಾಹ್ನ 3:15 ಗಂಟೆಗೆ ಅವರ ಸ್ನೇಹಿತರಾದ ವೇಣುಗೋಪಾಲಕೃಷ್ಣ ಮತ್ತು ಪ್ರಕಾಶ್ ಶೇಟ್ ರೊಂದಿಗೆ ಬೈಂದೂರಿನಿಂದ ಕುಂದಾಪುರ ಕಡೆಗೆ ಅವರ XUV 500 ವಾಹನದಲ್ಲಿ ಬರುತ್ತಿರುವಾಗ ಕೆರ್ಗಾಲು ಗ್ರಾಮದ ಉಪ್ಪುಂದ ಪೆಂಟ್ರೋಲ್ ಬಂಕ್ ಎದುರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿ 1 ರಿಂದ 3ನೇಯವರು ಬೈಕ್ ಹಾಗೂ ಸ್ಕೂಟರ್ ನಲ್ಲಿ ಬಂದು ನಿತ್ಯಾನಂದ ಶೇಟ್ ರವರ ವಾಹನವನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು, ಈ ಮೊದಲು ತಮ್ಮ ಮೇಲೆ ದಾಖಲಿಸಿದ ಕ್ರಿಮಿನಲ್ ಕೇಸ್ ನ್ನು ಹಿಂತೆಗೆದುಕೊಳ್ಳಬೇಕು ಇಲ್ಲದಿದ್ದರೆ  ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿ, ಫಿರ್ಯಾದಿದಾರರ ಶರ್ಟನ ಕಾಲರ್ ನ್ನು ಹಿಡಿದೆಳೆದಾಡಿ ಹೊಡೆದಿರುತ್ತಾರೆ. ನಿತ್ಯಾನಂದ ಶೇಟ್ ರವರು ಆರೋಪಿತರ ಮೇಲೆ ಈ ಹಿಂದೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ರಿ ಕೇಸು ಉಡುಪಿ ಸೆನ್ ಪೊಲೀಸ್ ಠಾಣೆಗೆ ವರ್ಗಾವಣೆ ಗೊಂಡಿದ್ದು, ಈ ವಿಚಾರದಲ್ಲಿ ಆರೋಪಿತರು ನಿತ್ಯಾನಂದ ಶೇಟ್ ರವರ ಮೇಲೆ ದ್ವೇಷ ಸಾಧಿಸುತ್ತಿದ್ದು, ಅದೇ ವಿಚಾರದಲ್ಲಿ ನಿತ್ಯಾನಂದ ಶೇಟ್ ರವರ ಮೇಲೆ ಈ ಹಲ್ಲೆ ನಡೆಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 94/2022 ಕಲಂ; 341, 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-05-2022 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080