ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಪಡುಬಿದ್ರಿ: ದಿನಾಂಕ 14/05/2021 ರಂದು ಬೆಳಿಗ್ಗೆ ಪಿರ್ಯಾದಿದಾರರಾದ ರವಿ ಕೆ ಶೆಟ್ಟಿ (60), ತಂದೆ: ದಿ. ಕರಿಯ ಶೆಟ್ಟಿ, ವಾಸ: ಗಣೇಶ ತೀರ್ಥ, ಬೀಡು, ನಡ್ಸಾಲು ಗ್ರಾಮ, ಕಾಪು ತಾಲೂಕು ಇವರ ಪರಿಚಯದ ಶ್ರೀನಾಥ್ ಹೆಗ್ಡೆ (55) ಎಂಬುವರು ಪಡುಬಿದ್ರಿಯಲ್ಲಿರುವ ಸನ್ನಿಧಿ ಮೆಡಿಕಲ್ ತೆರೆಯಲು ತಮ್ಮ  KA-20-Q-2320 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ಹೋಗುತ್ತಾ  07:00 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮದ ಬೀಡು ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸುಜ್ಲಾನ್ ಗೇಟ್ ಡೈವರ್ಶನ್ ಬಳಿ ತಿರುವಿನಲ್ಲಿ ಪಡುಬಿದ್ರಿ ಕಡೆಗೆ ಹೋಗಲು ನಿಂತಿದ್ದ ಸಮಯ KA-20-V-6631 ನೇ ನಂಬ್ರದ  ಮೋಟಾರ್ ಸೈಕಲ್ ಸವಾರ ಮಹಮ್ಮದ್ ಮಶ್ರೂಫ್  ಎಂಬುವವರು ತನ್ನ ಮೋಟಾರ್ ಸೈಕಲ್ ನ್ನು ಪಡುಬಿದ್ರಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಶ್ರೀನಾಥ್ ಹೆಗ್ಡೆ ಯವರ ಮೋಟಾರ್ ಸೈಕಲ್ಲಿನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಶ್ರೀನಾಥ್ ಹೆಗ್ಡೆ ಮತ್ತು ಡಿಕ್ಕಿ ಹೊಡೆದ ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಯ ಮೇಲೆ ಬಿದ್ದಿರುತ್ತಾರೆ.  ಅಪಘಾತದಿಂದ ಶ್ರೀನಾಥ್ ಹೆಗ್ಡೆ ರವರಿಗೆ ಬಲಕಾಲಿಗೆ ಮೂಳೆ ಮುರಿತದ ಗಾಯ ಮತ್ತು  ಮೋಟಾರ್ ಸೈಕಲ್ ಸವಾರ ಹಾಗೂ ಸಹ ಸವಾರನಿಗೆ ತರಚಿದ ಗಾಯಗಳಾಗಿರುತ್ತದೆ. ನಂತರ ಗಾಯಾಳು ಶ್ರೀನಾಥ್ ಹೆಗ್ಡೆಯವರನ್ನು ಚಿಕಿತ್ಸೆ ಬಗ್ಗೆ ಸುರತ್ಕಲ್‌‌ನ ಪದ್ಮಾವತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಬ್ರಹ್ಮಾವರ: ಪಿರ್ಯಾದಿದಾರರಾದ ನಾಗರಾಜ ಕುಂಬಾರ (27), ತಂದೆ: ಮಲ್ಲಪ್ಪ ದಿವಂಗತ, ವಾಸ: ದುರ್ಗಾ ಕ್ಯಾಂಪ್, ಬಸವಪುರ ಗ್ರಾಮ, ಸಿಂಧನೂರು ತಾಲೂಕು, ರಾಯಚೂರು ಜಿಲ್ಲೆ ಇವರು ರಾಜೇಶ್ ಕಾರಂತರವರ ಗೋಪಾಲಕೃಷ್ಣ ಉಪ್ಪಿನಕುದ್ರು ಎಂಬ ಕಂಪೆನಿಯಲ್ಲಿ ರೈಟರ್ ಆಗಿ ಕೆಲಸ ಮಾಡುತ್ತಿದ್ದು. ಅವರ ಕಂಪೆನಿಯಿಂದ ಅಲೆಯಾ ಸೇತುವೆ ಹಾಗೂ ನಂಚಾರಿನಲ್ಲಿ ರಸ್ತೆ ಕಾಮಗಾರಿ ನಡೆಸುತ್ತಿದ್ದು,  ಕಾಮಗಾರಿ ಬಗ್ಗೆ ದಿನಾಂಕ 13/05/2021 ರಂದು ಬಸವನಬಾಗೇವಾಡಿ ವಾಸಿ ಬಸು ಬಿರಾದರ್ ರವರ KA-28-TD-2114 ನೇ TRACTOR  ನಲ್ಲಿ ಅವರ ಸಂಬಂಧಿಯಾದ ಯಮನೂರ್ ರವರು ಚಾಲಕನಾಗಿ ಶಿವರಾಜ್ ರವರನ್ನು ಕುಳ್ಳಿರಿಸಿಕೊಂಡು  ನಂಚಾರು ರಸ್ತೆ ಕಾಮಗಾರಿಗೆ ನೀರು ಹಾಕಿ  ಕಿವ್‌ರಿಂಗ್ ಮಾಡುವ ಬಗ್ಗೆ ಅಲೆಯಾದಿಂದ ಕುರಾಡಿ-ಕೊಕ್ಕರ್ಣೆ ಮುಖ್ಯ ರಸ್ತೆಯಲ್ಲಿ ಕೊಕ್ಕರ್ಣೆ ಕಡೆಗೆ ಬರುತ್ತಿರುವಾಗ ರಾತ್ರಿ 9:30 ಗಂಟೆಯ ಸಮಯಕ್ಕೆ ಕಾಡೂರು ಗ್ರಾಮದ ಬಾಯರ್‌ಬೆಟ್ಟು ಎಂಬಲ್ಲಿ  ಯಮನೂರ್ ರವರು ನಿರ್ಲಕ್ಷತನದಿಂದ ಸದ್ರಿ TRACTOR ನ್ನು ಚಲಾಯಿಸಿ ಅವರ ನಿಯಂತ್ರಣ ತಪ್ಪಿ ರಸ್ತೆಯ ಎಡಬದಿಯ ಮರಕ್ಕೆ ಡಿಕ್ಕಿ ಹೊಡೆದಿರುವುದಾಗಿದೆ. ಈ ಅಪಘಾತದ ಪರಿಣಾಮ ಯಮುನೂರ ರವರ ಎಡಮೂಗಿಗೆ, ಎಡಕಾಲಿನ ಮಂಡಿಗೆ ರಕ್ತಗಾಯವಾಗಿ ಹಣೆಗೆ ಒಳನೋವು ಆಗಿರುತ್ತದೆ. ಶಿವರಾಜ್ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ, ಗಾಯಾಳು ಯಮನೂರ್ ರವರನ್ನು ಚಿಕಿತ್ಸೆಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಾಸಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಬೈಂದೂರು: ದಿನಾಂಕ 06/05/2021 ರಂದು ಪಿರ್ಯಾದಿದಾರರಾದ ವಿಶ್ವನಾಥ (33), ತಂದೆ: ಬಾಬು ಶೇರುಗಾರ, ವಾಸ:ಪಾಯಕ್ಕನ ಮನೆ ಸೂರ್ಕೂಂದ ಗ್ರಾಮ ಬೈಂದೂರು, ಬೈಂದೂರು ತಾಲೂಕು ಇವರು ಬೆಳಿಗ್ಗೆ 8:00 ಗಂಟೆಗೆ ತನ್ನ KA-20-ED-5832ನೇ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನ್ನು ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹತ್ತಿರ ರಾಘವೇಂದ್ರ ಮಠದ ಎದುರು ಸಿಮೆಂಟ್ ಶೀಟಿನ ಮಾಡಿನ ಕೆಳಗೆ ಪಾರ್ಕ್ ಮಾಡಿ ಕೆಲಸಕ್ಕೆ ಹೋಗಿ ಸಂಜೆ ವಾಪಾಸ್ಸು 5:00 ಗಂಟೆಗೆ ಬಂದು ನೋಡಿದಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ಪಾರ್ಕ ಮಾಡಿದ ಸ್ಥಳದಲ್ಲಿ ಇರದೇ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಮೋಟಾರ್ ಸೈಕಲ್ ಪತ್ತೆಯಾಗದೇ ಇದ್ದು ಯಾರೋ ಕಳ್ಳರು  ಮೋಟಾರ್ ಸೈಕಲನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾಗಿರುವ ಮೋಟಾರ್ ಸೈಕಲಿನ ಒಟ್ಟು ಮೌಲ್ಯ ರೂಪಾಯಿ 30,000/- ಆಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರರಾಧ ಕ್ರಮಾಂಕ 89/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಜುಗಾರಿ ಪ್ರಕರಣ

 • ಹೆಬ್ರಿ:  ಮಹೇಶ.ಟಿ.ಎಂ, ಪೊಲೀಸ್ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರು  ದಿನಾಂಕ 14/05/2021 ರಂದು ರೌಂಡ್ಸ್ ನಲ್ಲಿರುವಾಗ ಚಾರ ಗ್ರಾಮದ ಕಾರಾಡಿ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಕೋಳಿ ಅಂಕ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆಗೆ ಹೋಗಿ ನೋಡಿದಲ್ಲಿ ಸುಮಾರು 8 ರಿಂದ 10 ಜನರು ಕೋಳಿಗಳ ಕಾಲಿಗೆ ಹರಿತವಾದ ಬಾಳುಗಳನ್ನು ಕಟ್ಟಿ ಅವುಗಳಿಗೆ ಹಿಂಸೆಯಾಗುವಂತೆ  ಕಾಳಗಕ್ಕೆ ಬಿಟ್ಟು ವಿಜೇತ ಕೋಳಿಗಳ ಮೇಲೆ ಹಣವನ್ನು ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದುದನ್ನು ಖಚಿತ ಪಡಿಸಿಕೊಂಡು ಸಂಜೆ 05:45 ಗಂಟೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ 1)ರಮೇಶ ನಾಯ್ಕ, 2) ಸುನಿಲ್ ಪೂಜಾರಿ, 3)ವೆಂಕಟೇಶ ಶೆಟ್ಟಿ, 4) ಸುರೇಶ ಮಡಿವಾಳ, 5) ಸುದೀಪ, 6) ಶಶಿಕಾಂತ, 7)ಶಂಕರ ಇವರನ್ನುವಶಕ್ಕೆ ಪಡೆದುಕೊಂಡಿದ್ದು ಉಳಿದವರು ಓಡಿ ಹೋಗಿದ್ದು , ಆಪಾದಿತರುಗಳು ಕೋವಿಡ್‌ -19 ಕಾಯ್ದೆಯ ನಿಯಂತ್ರಣಕ್ಕಾಗಿ ಮಾನ್ಯ ಕರ್ನಾಟಕ ಸರಕಾರವು ಲಾಕ್‌ ಡೌನ್‌ ಆದೇಶ ಹೊರಡಿಸಿದ್ದು,  ಆದೇಶವನ್ನು ಉಲ್ಲಂಘಿಸಿ ಆರೋಪಿತರುಗಳು ಕೋಳಿ ಅಂಕವನ್ನು ನಡೆಸುತ್ತಿದ್ದು. ಇವರುಗಳು ಕೋಳಿ ಅಂಕಕ್ಕೆ  ಬಳಸಿದ 03 ಕೋಳಿ ಹುಂಜಗಳನ್ನು  ಹಾಗೂ ಅರೋಪಿತರುಗಳ ಬಳಿ ಇದ್ದ ಕೋಳಿ ಅಂಕಕ್ಕೆ ಬಳಸಿದ ನಗದು 1,150/- ರೂಪಾಯಿ ಹಾಗೂ ಕೋಳಿಗಳಿಗೆ ಕಟ್ಟಿದ ಎರಡು ಬಾಳುಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: 269 ಕಲಂ: 149 ಐಪಿಸಿ,  ಕಲಂ: 87, 93 ಕೆಪಿ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಅಮಾಸೆಬೈಲು: ದಿನಾಂಕ 14/05/2021 ರಂದು ಸುಬ್ಬಣ್ಣ ಬಿ, ಪೊಲೀಸ್ ಉಪನಿರೀಕ್ಷಕರು‌, ಅಮಾಸೆಬೈಲು ಪೊಲೀಸ್ ಠಾಣೆ‌ ಇವರು ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021  ರಿಂದ 24/05/2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು 12:00 ಗಂಟೆಯಿಂದ 14:00 ಗಂಟೆ ಮಧ್ಯೆ ಅಮಾಸೆಬೈಲು ಗ್ರಾಮದ ಅಮಾಸೆಬೈಲು ಪೇಟೆಯ ಸರ್ಕಲ್ ಬಳಿ ಈ ಕೆಳಗೆ ತಿಳಿಸಿದ ದ್ವಿಚಕ್ರ ವಾಹನಗಳನ್ನು ಆಪಾದಿತರುಗಳು ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ̤ 1) KA 20 R 9887 TVS Victor GX ಮೋಟಾರು ಸೈಕಲ್‌, (2) KA 20 EE 9904 Hero HF Deluxe ಮೋಟಾರು ಸೈಕಲ್‌,  (3) KA 20 EN 5385 HORNET 160 R Honda ಮೋಟಾರು  ಸೈಕಲ್‌, (4) KA 19 EX 2620 Duet Scooty ಮೇಲ್ಕಂಡ ದ್ವಿಚಕ್ರ ವಾಹನ ಸವಾರರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2021  ಕಲಂ:269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬೈಂದೂರು:  ದಿನಾಂಕ 13/05/2021 ರಂದು ಬೆಳಿಗ್ಗೆ  10:00 ಗಂಟೆಗೆ ಬೈಂದೂರು ತಾಲೂಕು ಪಡುವರಿ ಗ್ರಾಮದ ಜೋಗೂರು ಎಂಬಲ್ಲಿ ಪಿರ್ಯಾದಿದಾರರಾದ ಹೆಚ್ ಕೃಷ್ಣಪ್ಪ ಶೆಟ್ಟಿ (65), ತಂದೆ:ಬಿ. ಹಿರಿಯಣ್ಣ ಶೆಟ್ಟಿ, ವಾಸ: ವನಸುಮ, ಜೋಗೂರು, ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರ ಹೆಂಡತಿಯ ಕುಟುಂಬದ ಹಕ್ಕಿನ ಆಸ್ತಿ ಸರ್ವೆ ನಂಬ್ರ 288 ನೇದರಲ್ಲಿರುವ ಜಮೀನಿಗೆ ಆರೋಪಿತರಾದ 1)ನಾಗರಾಜ ಶೆಟ್ಟಿ , 2)ರವೀಂದ್ರ ಶೆಟ್ಟಿ ಇವರು ಅಕ್ರಮ ಪ್ರವೇಶ ಮಾಡಿ ಜಮೀನಿನಲ್ಲಿದ್ದ ಬೆಲೆಬಾಳುವ ಮರಗಳನ್ನು ಕಡಿದು ಸಾಗಿಸಿದ್ದು ವಿಷಯ ತಿಳಿದು ಪಿರ್ಯಾದಿದಾರರು ತೋಟದ ಮೇಲ್ವಿಚಾರಕ ರವಿ ಎಂಬುವವರೊಂದಿಗೆ ಸದ್ರಿ ಸ್ಥಳಕ್ಕೆ ಹೋಗಿ ಅಲ್ಲಿ ಮರ ಗಿಡಗಳನ್ನು ಕಡಿಯುತ್ತಿದ್ದ ಆಪಾದಿತರಲ್ಲಿ ಯಾಕೆ ನಮ್ಮ ಸ್ವಾಧೀನದ ಪಟ್ಟಾ ಸ್ಥಳಕ್ಕೆ ಪ್ರವೇಶಿಸಿ ಮರಗಿಡಗಳನ್ನು ಕಡಿದು ಸಾಗಿಸುತ್ತಿದ್ದೀರಿ ಎಂದು ಕೇಳಿದ್ದಕ್ಕೆ ನಾಗರಾಜನು  ಬೈದಿದ್ದು ರವೀಂದ್ರ ಶೆಟ್ಟಿಯು ಕೈಯಲ್ಲಿದ್ದ ಕತ್ತಿಯನ್ನು ತೋರಿಸಿ ನಿನ್ನನ್ನು ಕೊಂದು ಮುಗಿಸುವುದಾಗಿ ಜೀವ ಬೆದರಿಕೆಯೊಡ್ಡಿದ್ದು ಮರಗಿಡಗಳನ್ನು ಕಡಿಯುತ್ತಿರುವ ಬಗ್ಗೆ ಪಿರ್ಯಾದಿದಾರರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿ ಅರಣ್ಯಾಧಿಕಾರಿಗಳು ಘಟನಾಸ್ಥಳ ಪರಿಶೀಲಿಸಿ ಪೊಲೀಸ್ ಠಾಣೆಗೆ ದೂರು ನೀಡುವಂತೆ ತಿಳಿಸಿದ ಮೇರೆಗೆ ದೂರು ನೀಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 90/2021 ಕಲಂ: 448, 379, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಹಿರಿಯಡ್ಕ: ಆರೋಪಿ 1 ) ರಮಾನಂದ ಭಟ್ (47), ತಂದೆ: ರಾಮಕೃಷ್ಣ ಭಟ್ ಇವರು ಪಿರ್ಯಾದಿದಾರರಾದ ಸುಮಾ ಭಟ್ (38), ಗಂಡ: ರಮಾನಂದ ಭಟ್, ವಾಸ: ವಿಜಯಲಕ್ಷ್ಮಿ ಉಪಾಧ್ಯಾಯ , ಮಹಾಕಾಳಿ ದೇವಸ್ಥಾನ ಬಳಿ, ಅಂಬಲಪಾಡಿ ಉಡುಪಿ ಇವರ ಗಂಡನಾಗಿದ್ದು 2 ಸ್ಕಂದ ಕುಮಾರ್ (19) ,ತಂದೆ: ರಮಾನಂದ ಭಟ್  ಇವರು ಹಿರಿಯ ಮಗನಾಗಿದ್ದು , ಅಪಾದಿತ 3 ರಾಮಕೃಷ್ಣ  ಭಟ್  , ವಾಸ: ಸಾನಿಧ್ಯ ನಿಲಯ, ದೇವಸ್ಥಾನ ಬೆಟ್ಟು ,ವಿಷ್ಣುಮೂರ್ತಿ ದೇವಸ್ಥಾನ ಬಳಿ  ಬೆಳ್ಳಾರ್ ಪಾಡಿ ಉಡುಪಿ ಇವರು  ಗಂಡನ ತಂದೆ ಅಂದರೆ ಮಾವನಾಗಿರುತ್ತಾರೆ. ಅಪಾದಿತ 4 ಭಾರತಿ (30), ಗಂಡ: ಸುರೇಶ್ ವಾಸ: ಬೆಳ್ಳಾರ್‌ಪಾಡಿ, ವಿಷ್ಣುಮೂರ್ತಿ ದೇವಸ್ಥಾನ ಉಡುಪಿ ಇವರು ಪಿರ್ಯಾದುದಾರರ ಮನೆಗೆ ಈ ಹಿಂದಿನ ಮನೆಕೆಲಸದವರಾಗಿರುತ್ತಾರೆ 22/02/2002 ರಲ್ಲಿ ಪಿರ್ಯಾದಿದಾರರು ಹಾಗೂ ಅಪಾದಿತ 1 ನೇಯವರಿಗೆ ಮದುವೆಯಾಗಿದ್ದು ಅವರ ದಾಂಪತ್ಯ ಜೀವನದಲ್ಲಿ 19 ವರ್ಷದ ಸ್ಕಂದ (ಅಪಾದಿತ 2) ಹಾಗೂ 9 ವರ್ಷದ ಶ್ರೀರಾಮ ಎನ್ನುವ ಇಬ್ಬರೂ ಗಂಡು ಮಕ್ಕಳಿರುತ್ತಾರೆ ಇವರ ದಾಂಪತ್ಯ ಜೀವನ 2020 ರವರೆಗೆ ಚೆನ್ನಾಗಿದ್ದು 6 ತಿಂಗಳ ಹಿಂದೆ ಮನೆಕೆಲಸಕ್ಕೆ ಬಂದ ಅಪಾದಿತ 4 ಭಾರತಿ ಎಂಬುವವರಿಂದ ಜಗಳ ಪ್ರಾರಂಭವಾಗಿರುತ್ತದೆ. ಈ ವಿಚಾರದಲ್ಲಿಅಪಾದಿತ 1 ಹಾಗೂ ಪಿರ್ಯಾದಿದಾರರಿಗೆ ಅಗಾಗ ಜಗಳವಾಗುತ್ತಿದ್ದು ಅಪಾದಿತ 4 ನೇಯ ವರು ಕೂಡ ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದಿ ಬೈದಿರುತ್ತಾರೆ ಅಪಾದಿತ 4 ನೇಯವರಿಗೆ ಮನೆ ಕೆಲಸದಿಂದ ಬಿಡಿಸಿದ ಬಳಿಕ ಅರೋಪಿ 1 ಹಾಗೂ 2 ನೇಯವರು ಪಿರ್ಯಾದಿದಾರರಿಗೆ ಮಾನಸಿಕ ಹಿಂಸೆ ನೀಡಿರುತ್ತಾರೆ. ಬಳಿಕ ಪಿರ್ಯಾದಿದಾರರು ಅಂಬಲಪಾಡಿಯಲ್ಲಿರುವ ತನ್ನ ಪೋಷಕರ ಒಟ್ಟಿಗೆ ತನ್ನ ಕಿರಿಯ ಮಗನೊಂದಿಗೆ ವಾಸಮಾಡಿಕೊಂಡಾಗ ಅಪಾದಿತ 1 ಹಾಗೂ 2 ನೇಯವರು ಒತ್ತಾಯಪೂರ್ವಕವಾಗಿ 2 ನೇ ಮಗನನ್ನು ಅವರ ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದಾಗ ಪಿರ್ಯಾದಿದಾರರು 1/12/2021 ರಂದು ಮಕ್ಕಳ ಕಲ್ಯಾಣ ಸಮಿತಿ (CWC) ಗೆ ದೂರು ನೀಡಿದಾಗ ಅವರು ಶ್ರೀರಾಮನಿಗೆ 16 ವರ್ಷ ತುಂಬುವವರೆಗೆ ಪಿರ್ಯಾದಿದಾರರ ಬಳಿ ಇರಬೇಕೆಂದು ಅದೇಶ ನೀಡಿದ್ದು ಬಳಿಕ ಪಿರ್ಯಾದಿ ಹಾಗೂ ಅರೋಪಿ  1ನೇಯವರು ರಾಜಿಯಾಗಿ ತನ್ನ ಗಂಡನ ಮನೆಗೆ ಹೋಗಿರುತ್ತಾರೆ. ಅದರೆ ಗಂಡನ ಮನೆಯಲ್ಲಿ ಅಕೆಗೆ ಅಡಿಗೆ ಮಾಡಲು ಬಿಡುತ್ತಿರಲಿಲ್ಲ ಅಲ್ಲದೆ ಊಟಕ್ಕೂ ಸರಿಯಾಗಿ ಕೊಡದೆ ಮಾನಸಿಕ ಹಿಂಸೆ ನೀಡುತ್ತಿದ್ದುರಿಂದ ದಿನಾಂಕ: 01/01/2021 ರಂದು ತಾನು ವಾಪಾಸು ಪೊಷಕರ ಬಳಿ ಹೋಗುವುದಾಗಿ ಅರೋಪಿ 1 ನೇಯವ ರಲ್ಲಿ ತಿಳಿಸಿ ಸಂಜೆ ಹೋಗಲು ರೆಡಿಯಾದಾಗ ಅಪಾದಿತ 1 ರಿಂದ 4ನೇಯವರು ಅವರನ್ನು ಕೊಲ್ಲುಲು ಪ್ರಯತ್ನಿಸಿದ್ದು ಅದರಲ್ಲಿ ಅಪಾದಿತ 1ಹಾಗೂ 2 ನೇಯವರು   ಪಿರ್ಯಾದಿದಾರರನ್ನು   ನೆಲಕ್ಕೆ ನೂಕಿ ಅವರ ಎದೆಯ ಮೇಲೆ ಕೂತು ಮುಖಕ್ಕೆ ಹೊಡೆದಿರುತ್ತಾರೆ . ಅವರಿಂದ ತಪ್ಪಿಸಿಕೊಂಡು ಹೋಗುವಾಗ ಅರೋಪಿಗಳಾದ 3 ಮತ್ತು 4 ನೇಯರು ಪಿರ್ಯಾದುದಾರರ ಕೈ ಹಿಡಿಕೊಂಡಿರುತ್ತಾರೆ. ಅಪಾದಿತ 3 ನೇಯವರು ಅವಳನ್ನು ಕೊಲ್ಲು ಅವಳನ್ನು ಬಿಟ್ಟರೆ ನಮಗೆ ಕಷ್ಟ ಎಂದು ಹೇಳಿದಾಗ. ಅರೋಪಿ 2 ನೇಯವರು ಪಿರ್ಯಾದಿದಾರರ ತಲೆಗೆ ಗುದ್ದಿದ್ದು ಪಿರ್ಯಾದಿದಾರರು ಪ್ರಜ್ಞೆ ತಪ್ಪಿರುತ್ತಾರೆ ಬಳಿಕ ಅಪಾದಿತ 1ರಿಂದ 3ನೇಯವರು ಅವರ ಸ್ನೇಹಿತ  ಆನಂದ ಭಟ್ ಹಾಗೂ  ಶ್ರೀನಿವಾಸ ತಂತ್ರಿಯವರಿಗೆ ಪಿರ್ಯಾದುದಾರು ಮಹಡಿಯಿಂದ ಬಿದ್ದಿರುತ್ತಾರೆ ಎಂದು ಹೇಳಿ ಫೋನ್ ಮಾಡಿ ಕರೆಸಿಕೊಂಡಿದ್ದು ಅವರು ಪಿರ್ಯಾದಿದಾರರನ್ನು ಉಡುಪಿ ಅದರ್ಶ ಅಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 324, 307, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ  ಪ್ರಕಾಶ, ಪೊಲೀಸ್ ವೃತ್ತ ನಿರೀಕ್ಷಕರು, ಕಾಪು ವೃತ್ತ, ಕಾಪು ಉಡುಪಿ ಜಿಲ್ಲೆ ಇವರು ಸಿಬ್ಬಂದಿಯವರೊಂದಿಗೆ  ದಿನಾಂಕ 14/05/2021 ರಂದು 11:35 ಗಂಟೆಗೆ ಕಾಪು ತಾಲ್ಲೂಕಿನ ಪಡು ಗ್ರಾಮದ ಕಾಪು ವೃತ್ತ ಕಛೇರಿ ಜಂಕ್ಷನ್‌ ನಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ  ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  ಗ್ರೇ ಬಣ್ಣದ ಹೋಂಡಾ ಆ್ಯಕ್ಟಿವಾ ಸ್ಕೂಟರ್ ನಂಬ್ರ ಕೆ.ಎ.20 ಇ.ಆರ್. 6284 ನೇದರ ಸವಾರಿಣೀ  ರುಕ್ಸಾನಾ ಬಾನು ಪ್ರಾಯ : 26 ವರ್ಷ ಗಂಡ : ಮೊಹಮ್ಮದ್ ಜಮೀಲ್, ವಾಸ : ಮನೆ ನಂಬ್ರ 1-110 ತವಕ್ಕಲ್ ಮಂಜಿಲ್ ಬೆಳಪು ಗ್ರಾಮ ಎಂದು ತಿಳಿಸಿದ್ದು,  ಅವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಆರೋಪಿಯೂ ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಗಂಗೊಳ್ಳಿ: ದಿನಾಂಕ 14/05/2021 ರಂದು ಸಂತೋಷ ಖಾರ್ವಿ, ಹೆಡ್ ಕಾನ್ಸಟೇಬಲ್ ಗಂಗೊಳ್ಳಿ ಪೊಲೀಸ್ ಠಾಣೆ ಇವರು ಗಂಗೊಳ್ಳಿ ಗ್ರಾಮದ ಮೇಲ್‌ ಗಂಗೊಳ್ಳಿಯಲ್ಲಿ  ಕರ್ತವ್ಯ ನಿರ್ವಹಿಸಿಕೊಂಡಿರುವಾಗ (1) KA-20-EP-5546 TVS APACHI ನೇ ಮೋಟಾರ್‌ ಸೈಕಲನ್ನು ಅದರ ಸವಾರ ಶಬ್ಬಿರ್ ಅಲಿ (27) ಎಂಬುವವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ಲಾಕ್‌ಡೌನ್ ಆದೇಶ/ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021 ರಿಂದ 14/05/2021 ರವರೆಗೆ ಕೋವಿಡ್ ಕರ್ಪ್ಯೂ ವಿಧಿಸಿದ್ದು ಕರ್ಪ್ಯೂ ಜ್ಯಾರಿಗೊಳಿಸುವ ಬಗ್ಗೆ ಆದೇಶ ಹೊರಡಿಸಿದ್ದು ಈ ಬಗ್ಗೆ  ದಿನಾಂಕ 14/05/2021 ರಂದು ಸುದರ್ಶನ್ ಬಿ.ಎನ್, ಪೊಲೀಸ್ ಉಪನೀರಿಕ್ಷಕರು, ಕುಂದಾಪುರ ಸಂಚಾರ ಪೊಲೀಸ್ ಠಾಣೆ ಇವರು ಕುಂದಾಪುರ ನಗರದ ಶಾಸ್ತ್ರಿ ಸರ್ಕಲ್  ಬಳಿ ವಾಹನ ತಪಾಸಣೆ ಕರ್ತವ್ಯದಲ್ಲಿರುವಾಗ  10:00  ಗಂಟೆಯಿಂದ  19.30 ಗಂಟೆಯ ಮದ್ಯಾವಧಿಯಲ್ಲಿ ಈ ಕೆಳಕಂಡ ವಾಹನಗಳನ್ನು ಸವಾರರು ಚಲಾಯಿಸಿಕೊಂಡು ಬರುತ್ತಿದ್ದು ನಿಲ್ಲಿಸಿ ತಪಾಸಣೆ ಮಾಡಿದಾಗ ಆಪಾದಿತರು ಸಕಾರಣವಿಲ್ಲದೆ ಅನಗತ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ. 1) KA 20 Q 2784  ಸವಾರ: ಫ್ರಾನ್ಸಿಸ್, ಪ್ರಾಯ: 50 ವರ್ಷ, ತಂದೆ: ರೋಜಾರಿಯೋಬರೆಟ್ಟೋ, ವಾಸ: ಹಂಗಳೂರು ಗ್ರಾಮ, ಕುಂದಾಪುರ ತಾಲೂಕು, 2) KA 20 EB 9279 ಸವಾರ: ಮಹೇಶ್, ಪ್ರಾಯ:28ವಷ್, ತಂದೆ: ಗಣೇಶ್, ವಾಸ: ಹುಣ್ಸೆಕಟ್ಟೆ ಸೇತುವೆ ಬಳಿ ವಡೇರಹೋಬಳಿ ಗ್ರಾಮ, ಕುಂದಾಪುರ ತಾಲೂಕು ಇವರು ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದಾಗಿದೆ. ಈ ಬಗ್ಗೆ  ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 63/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 15-05-2021 10:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080