ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು:

 • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ: 26/04/2021 ರಿಂದ ದಿನಾಂಕ: 24/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು, ಈ ಬಗ್ಗೆ ಜನಾರ್ಧನ ಅಪರಾಧ ಪಿಎಸ್ ಐ  ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ದಿನಾಂಕ: 14/05/2021 ರಂದು ಸಿಬ್ಬಂದಿಯವರಾದ  ಹೆಚ್,ಸಿ, 38 ಸತೀಶ್ ಬಟ್ವಾಡಿ ಇವರೊಂದಿಗೆ 15:00 ಗಂಟೆಯಿಂದ 16:00 ಗಂಟೆಯವರೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಬಸ್ ನಿಲ್ದಾಣದ ಬಳಿ ತಪಾಸಣೆ ಮಾಡುತ್ತಿರುವಾಗ ಅನಗತ್ಯವಾಗಿ ಓಡಾಡಿ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡಿ ಕೋವಿಡ್ ನಿಯಮ ಉಲ್ಲಂಘಿಸಿ ಅಪರಾಧ ಎಸಗಿರುವ ಆರೋಪಿತರುಗಳಾದ 1)ಮಯ್ಯದ್ದಿ  ಪ್ರಾಯ: 48 ವರ್ಷ ತಂದೆ: ಮಹಮ್ಮದ್ ವಾಸ: ಸೌಕತ್ ಮಂಜಿಲ್ ಎಂ, ಜಿ ರಸ್ತೆ ಸಚ್ಚರೀಪೇಟೆ, ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು 2)ನವಾಜ್  ಪ್ರಾಯ: 20 ವರ್ಷ ತಂದೆ: ಅನಿಫ್  ವಾಸ: ಅನ್ವರ್ ಮಂಜಿಲ್ ಎಂ, ಜಿ ರಸ್ತೆ ಸಚ್ಚರೀಪೇಟೆ, ಮುಂಡ್ಕೂರು ಗ್ರಾಮ ಕಾರ್ಕಳ ತಾಲೂಕು, 3)ಬಾಲಕೃಷ್ಣ ಶೆಟ್ಟಿ  ಪ್ರಾಯ: 60 ವರ್ಷ ತಂದೆ: ರಾಘು ಶೆಟ್ಟಿ  ವಾಸ: ಪಿರ್ಧಬೆಟ್ಟು ಕಡಂದಲೆ ಗ್ರಾಮ ಮೂಡಬಿದ್ರೆ ತಾಲೂಕು ಇವರುಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು 1) ಕೆ ಕೆ,ಎ-20-ಇ ವಿ 1224 ನೇ ನಂಬ್ರದ ಹೋಂಡಾ ಆ್ಯಕ್ಟೀವ್ ಸ್ಕೂಟಿ 2) ಕೆ ಕೆ,ಎ-20 ಇಪಿ-1327 ನೇ ನಂಬ್ರದ ಎಫ್ ಝಡ್ ಬೈಕ್ 3) ಕೆ,ಎ19-ಇ,ಆರ್-9858 ನೇ ನಂಬ್ರದ ವೇಗೋ ಸ್ಕೂಟಿ ಯನ್ನು ಸ್ವಾಧೀನ ಪಡಿಸಿಕೊಂಡು ಕಾರ್ಕಳ  ಗ್ರಾಮಾಂತರ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 55/2021 ಕಲಂ: 269, ಐ,ಪಿ,ಸಿ ರಂತೆ ಪ್ರಕರಣ  ದಾಖಲಿಸಲಾಗಿದೆ.
 • ಕೋಟ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಈ ಪ್ರಕರಣದ ಸಾರಾಂಶವೇನೆಂದರೆ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅವಶ್ಯ ವಸ್ತುಗಳ ಖರೀದಿಯ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಪಿರ್ಯಾದಿ ಸಂತೋಷ ಬಿ.ಪಿ ಪೊಲೀಸ್ ಉಪನಿರೀಕ್ಷಕರು ಕೋಟ ಇವರು ದಿನಾಂಕ  15/05/2021 ರಂದು ಠಾಣಾ ಸಿಬ್ಬಂದಿಯವರೊಂದಿಗೆ ಹಾಗೂ ಇಲಾಖಾ ವಾಹನ ನಂಬ್ರ ಕೆಎ. 20. ಜಿ. 238ರಲ್ಲಿ ಚಾಲಕನಾಗಿ ಎ.ಹೆಚ್.ಸಿ 21 ನೇ ಮಂಜುನಾಥ ಇವರೊಂದಿಗೆ ಬ್ರಹ್ಮಾವರ ತಾಲೂಕು  ಪಾರಂಪಳ್ಳಿ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ  ತೆರಳಿ ಅವಶ್ಯ ವಸ್ತುಗಳ ಖರೀದಿಯ ಅಂಗಡಿಯನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 09.20 ಗಂಟೆಗೆ ಬ್ರಹ್ಮಾವರ ತಾಲೂಕು ಪಾರಂಪಳ್ಳಿ  ಗ್ರಾಮದ ಆಂಜನೇಯ ದೇವಸ್ಥಾನದ ಬಳಿಯಿರುವ  ಎಸ್.ಎಲ್ ಡ್ರೆಸ್ ಸೆಂಟರ್ ಅಂಗಡಿಯು ತೆರೆದುಕೊಂಡಿದ್ದು  ಗ್ರಾಹಕರೊಂದಿಗೆ  ವ್ಯವಹಾರ ನಡೆಸುತ್ತಿರುವುದು ಕಂಡು ಬಂದಿರುತ್ತದೆ. ಅಂಗಡಿಯ ಒಳಗಡೆ ಕುಳಿತುಕೊಂಡಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲಕನಾಗಿರುವುದಾಗಿ ತಿಳಿಸಿರುತ್ತಾನೆ. ಆತನ ಹೆಸರು ಕೇಳಲಾಗಿ ಮಂಜುನಾಥ ಎಂಬುದಾಗಿ ತಿಳಿಸಿದ್ದು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 96/2021 ಕಲಂ: 269 IPC   ರಂತೆ ಪ್ರಕರಣ  ದಾಖಲಿಸಲಾಗಿದೆ.
 • ಅಮಾಸೆಬೈಲು: ದಿನಾಂಕ 15/05/2021 ಫಿರ್ಯಾದಿ ಶ್ರೀ ಸುಬ್ಬಣ್ಣ ಬಿ ಪೊಲೀಸು ಉಪನಿರೀಕ್ಷಕರು ಅಮಾಸೆಬೈಲು ಪೊಲೀಸು ಠಾಣೆ ಇವರು ಠಾಣಾ ಸಿಬ್ಬಂದಿಗಳಾದ  ಎ ಎಸ್ ಐ ಉಮೇಶ್ ನಾಯ್ಕ  ಪಿಸಿ 1173  ಆದರ್ಶ  ಜೀಪು ಚಾಲಕ 1544 ಗೋಪಾಲ ಇವರುಗಳೊಂದಿಗೆ ಇಲಾಖಾ ಜೀಪು ನಂಬ್ರ KA 20 G 375 ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದು ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10-05-2021  ರಿಂದ 24-05-2021  ರವರೆಗೆ ಕೋವಿಡ್ – 19  ಸಾಂಕ್ರಾಮಿಕ  ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಆದೇಶ ಹೊರಡಿಸಿದ್ದು ಅನಗತ್ಯ ವಾಹನಗಳ ಓಡಾಟವನ್ನು ನಿಷೇಧಿಸಿ ಆದೇಶ ಹೊರಡಿಸಿದ್ದು  ಮದ್ಯಾಹ್ನ 14:30  ಗಂಟೆಗೆ ಶೇಡಿಮನೆ ಗ್ರಾಮದ ಗೋಳಿಯಂಗಡಿ ಕ್ರಾಸ್   ಬಳಿ ಆಪಾದಿತನು KA 20 Y 0423  Heo Honda Splender ಚಲಾಯಿಸಿಕೊಂಡು ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ಬಂದಿರುವುದು ಕಂಡು ಬಂದಿರುತ್ತದೆ.  ಸದ್ರಿ  ಮೇಲ್ಕಂಡ ದ್ವಿಚಕ್ರ ವಾಹನ ಸವಾರ  ಕೋವಿಡ್ – 2019  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರವು  ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು  ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಅನಾವಶ್ಯಕವಾಗಿ ಸಕಾರಣವಿಲ್ಲದೆ ಸಾರ್ವಜನಿಕ  ಸ್ಥಳದಲ್ಲಿ  ಸಂಚರಿಸಿಕೊಂಡು ನಿರ್ಲಕ್ಷತನದಿಂದ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸರಕಾರ ಹಾಗೂ ಜಿಲ್ಲಾಡಳಿತದ ಮಾರ್ಗಸೂಚಿಯಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕರವಾದಂಥ ರೋಗವು ಹರಡುವಂತೆ ಮಾಡಿ ನಿರ್ಲಕ್ಷತನ ತೋರಿರುವುದರಿಂದ ಸದ್ರಿ ವಾಹನವನ್ನು  ಸ್ವಾಧೀನಪಡಿಸಿಕೊಂಡು  ಅಮಾಸೆಬೈಲು  ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  19/2021  ಕಲಂ:269 ಐಪಿಸಿ ರಂತೆ ಪ್ರಕರಣ  ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು:

 • ಬ್ರಹ್ಮಾವರ: ಬೈಕಾಡಿ ಗ್ರಾಮದ, ಗಾಂಧಿನಗರ ಎಂಬಲ್ಲಿ ವಾಸವಾಗಿರುವ  ಪಿರ್ಯಾದಿ ಪಾರ್ವತಿ (45 ವರ್ಷ), ಗಂಡ: ಅಶೋಕ, ವಾಸ: ಗಾಂಧಿನಗರ, 3 ಸೆಂಟ್ಸ್, ಬೈಕಾಡಿ ಗ್ರಾಮ, ಇರನ್ನು  ಸುಮಾರು 20 ವರ್ಷಗಳ ಹಿಂದೆ ಅಶೋಕ (ಪ್ರಾಯ: 50 ವರ್ಷ) ಎಂಬವರು ಮದುವೆ ಆಗಿದ್ದು ಅಲ್ಲದೇ ಮದುವೆಯಾದ 4 ವರ್ಷದ ಬಳಿಕ  ಅದೇ ಗ್ರಾಮದ  ಪ್ರೇಮ ಎಂಬ ಹೆಂಗಸಿನ ಸಂಪರ್ಕ ಹೊಂದಿ ಅವಳನ್ನು ಮದುವೆ ಆಗದೇ ಪ್ರಸ್ತುತ  ಬ್ರಹ್ಮಾವರದ ಸಿಟಿ ಸೆಂಟರ್ ಬಳಿ ಬಾಡಿಗೆ ಮನೆಯಲ್ಲಿ ಪ್ರೇಮ ಹಾಗೂ ಅವಳ ಮಕ್ಕಳೊಂದಿಗೆ ವಾಸವಾಗಿರುತ್ತಾರೆ, ಅಪರೂಪಕ್ಕೊಮ್ಮೆ ಪಿರ್ಯಾದಿದಾರರ ಮನೆಗೆ ಬಂದು ಹೋಗುತ್ತಿರುವುದಾಗಿದೆ. ಅಶೋಕ ರವರು ಚಾಲಕ ವೃತ್ತಿ ಮಾಡಿಕೊಂಡಿದ್ದು  ವಿಪರೀತ ಮಧ್ಯಪಾನ ಮಾಡುತ್ತಿದ್ದರು. ಈಗ ಕೆಲವು ದಿನಗಳಿಂದ ಮದ್ಯಪಾನ ಸಿಗದೇ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದು, ಅಲ್ಲದೇ ಅವರ ಆರೋಗ್ಯ ತೀರಾ ಹದಗೆಟ್ಟಿದ್ದು ದೈಹಿಕ ಖಾಯಿಲೆಯಿಂದ ಅಥವಾ ಹೃದಯಾಘಾತದಿಂದ ದಿನಾಂಕ: 15.05.2021 ರಂದು  ಬೆಳಗ್ಗಿನ ಜಾವ 00:15 ಗಂಟೆಯಿಂದ ಬೆಳಿಗ್ಗೆ 08:30  ಗಂಟೆಯ ಮಧ್ಯಾವಧಿಯಲ್ಲಿ ಬ್ರಹ್ಮಾವರ ತಾಲೂಕು, ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಸಿಟಿ ಸೆಂಟರ್ ಬಳಿ ಇರುವ ಅವರು ವಾಸವಾಗಿರುವ ಬಾಡಿಗೆ  ಮನೆಯ ಸಮೀಪ ಮೊಬೈಲ್ ಟವರ್‌ನ ಬುಡದಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ ನಂ. 26/2021 ಕಲಂ 174 ಸಿಆರ್‌ಪಿಸಿ  ರಂತೆ ಪ್ರಕರಣ  ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 15-05-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080