ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ದಿನಾಂಕ 14/04/2023 ರಂದು ಪಿರ್ಯಾದಿದಾರರಾದ ಸುದೇಶ್‌ ಗೋಪಾಲ ಪೂಜಾರಿ (31), ತಂದೆ: ಗೋಪಾಲ ಪೂಜಾರಿ, ವಾಸ:ನಂಬ್ರ 7/15/11, ಶ್ರೀ ದುರ್ಗಾ ನಿಲಯ, ಉಗ್ಗೇಲ್‌ ಬೆಟ್ಟು, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರ KA-20-EX-8452  ನೇ  ನಂಬ್ರ ಮೋಟಾರ್ ಸೈಕಲ್  ನಲ್ಲಿ ಉಡುಪಿ ಸಂತೆಕಟ್ಟೆಗೆ ಸ್ನೇಹಿತರನ್ನು ಭೇಟಿ ಮಾಡಲು ಹೋಗಿ ವಾಪಸ್ಸು ಮನೆಗೆ ಹೋಗಲು  ಉಪ್ಪೂರು ಗ್ರಾಮದ ಲಕ್ಷ್ಮೀ ನಗರ- ಕೆ.ಎಮ್.ಎಫ್ ಡೈರಿ ರಸ್ತೆಯಲ್ಲಿ ಹೋಗುತ್ತಾ ಕಾಂಕ್ರೀಟ್ ರಸ್ತೆಯ ತಿರುವಿನಲ್ಲಿ ಶೇಷಪ್ಪನ ಮನೆ ಎದುರು ತಲುಪುವಾಗ ಮಧ್ಯಾಹ್ನ 3:30 ಗಂಟೆಗೆ ಉಪ್ಪೂರು ಸರಕಾರಿ ಐ.ಟಿ.ಐ ಕಾಲೇಜ್ ಕಡೆಯಿಂದ ಲಕ್ಷ್ಮೀ ನಗರ ಕಡೆಗೆ KA-20-AA-3660 ನೇ ಆರೋಪಿ ಗೂಡ್ಸ್ ಟೆಂಪೋ ಚಾಲಕ ರಕ್ಷಿತ್ ಆತನ  ಟೆಂಪೋವನ್ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ನ ಮುಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಗಾಲಿನ ಮಣಿ ಗಂಟಿಗೆ ಒಳ ಜಖಂಗೊಂಡು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 79/2023 : ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ದಿವಾಕರ ಖಾರ್ವಿ (27), ತಂದೆ: ಮಂಜುನಾಥ ಖಾರ್ವಿ, ವಾಸ: ಸಣ್ಣನಮನೆ, ಮಹಾಕಾಳಿ ದೇವಸ್ಥಾನ ಖಾರ್ವಿಕೇರಿ ಗಂಗೊಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ  14/04/2023 ರಂದು ಬೆಳಗ್ಗೆ 8:30 ಗಂಟೆಗೆ ಮಹಾಮಾಯಿ ಮಹಾಸತಿ ದೇವಸ್ಥಾನದ ಬಳಿ ನೆಡೆದುಕೊಂಡು ಹೋಗುತ್ತಿರುವಾಗ ಮಹಾಕಾಳಿ ದೇವಸ್ಥಾನ ಕಡೆಯಿಂದ ಮಲಿಯಾಳಿ ಬೊಬ್ಬರ್ಯ ದೇವಸ್ಥಾನದ ಕಡೆಗೆ  ಹೋಗುವ ರಸ್ತೆಯಲ್ಲಿ  ಓರ್ವ ಮೋಟಾರ್‌ ಸೈಕಲ್‌ ಸವಾರನು ತನ್ನKA-20-EZ-9306 ನೇದರಲ್ಲಿ ಸಹಸವಾರನನ್ನಾಗಿ  ಕುಳ್ಳಿರಿಸಿಕೊಂಡು ಮೋಟಾರ್‌ ಸೈಕಲ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸ್ಕಿಡ್ ಆಗಿ ಬಿದ್ದ ಪರಿಣಾಮ ಸಹ ಸವಾರ ನಿತಿನ್ ಖಾರ್ವಿ ಇವರಿಗೆ ಎಡಗಾಲಿಗೆ ತೀವೃ ಸ್ವರೂಪದ ರಕ್ತಗಾಯವಾಗಿದ್ದು, ಮೋಟಾರ್ ಸೈಕಲ್ ಸವಾರ ನಿಖಿಲೇಶ ಖಾರ್ವಿರವರಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 44/2023 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಾಣೆ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ದೀಲಿಪ್‌ ಕುಮಾರ್‌ (42), ತಂದೆ: ದೇವರಾಜ, ವಾಸ:ನಶಿಯ, ನಡುಬನ ಪಂಚಾಯತ್‌ ಕೊಲ್ಲಂ ತಾಲೂಕು ಮತ್ತು ಜಿಲ್ಲೆ ಇವರು ಬಾವಿ ರಿಂಗ್ ಕೆಲಸ ಮಾಡಿಕೊಂಡಿದ್ದು, ಅವರೊಂದಿಗೆ ಒಂದು ತಿಂಗಳು ಹಿಂದೆ ಕೇರಳದಿಂದ ಬಂದು ಕೆಲಸಕ್ಕೆ ಸೇರಿಕೊಂಡಿರುವ ಶಿವನ್ ಕುಟ್ಟಿ(57) ಇವರಿಗೆ ಸುಮಾರು 15 ದಿನಗಳ ಹಿಂದೆ  ನಾಯಿ ಕಚ್ಚಿದ್ದು ಅದರ  ಚಿಕಿತ್ಸೆ ಪಡೆಯುತ್ತಿರುವಾಗ ಶರಾಬು ಕುಡಿಯುವುದನ್ನು ನಿಲ್ಲಿಸಿದ್ದರಿಂದ ಕೆಲಸ ಮಾಡುವಾಗ  ಸ್ವಲ್ಪ ಮಾನಸಿಕನಂತೆ ವರ್ತಿಸುತ್ತಿದ್ದ  ಶಿವನ್ ಕುಟ್ಟಿಯವರು  ದಿನಾಂಕ 31/03/2023 ರಂದು  ಬೆಳಿಗ್ಗೆ 10:30 ಗಂಟೆಗೆ  ಬಾರ್ಕೂರಿನ ಅವರು ಕೆಲಸ ಮಾಡುವ ಸ್ಥಳದಿಂದ ಸುದೇವ್ ರವರನಲ್ಲಿ ತನ್ನ ಊರಾದ ಕೇರಳಕ್ಕೆ ಹೋಗುವುದಾಗಿ   ತಿಳಿಸಿ ಬಾರ್ಕೂರಿನಿಂದ ಹೋದವರು ಕೇರಳದ ಅವರ  ಮನೆಗೂ  ಹೋಗದೇ  ವಾಪಾಸು ಬಾರ್ಕೂರಿಗೂ ಬಾರದೇ ಕಾಣೆಯಾಗಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 80/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ತಿಲಕ್‌  (19)  ಎಂಬುವವನು ಕುಂದಾಪುರ ಮೂಡ್ಲಕಟ್ಟೆ ಕಾಲೇಜ್‌ ನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡಕೊಂಡಿದ್ದು ದಿನಾಂಕ 14/04/2023 ರಂದು ಅಂಬೇಡ್ಕರ್‌ ಜಯಂತಿಯ ಪ್ರಯುಕ್ತ ಕಾಲೇಜಿಗೆ ರಜೆ ಇರುವುದರಿಂದ ಬೇರೆ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕುಂದಾಪುರ ತಾಲೂಕಿನ ಕೋಣಿ ಗ್ರಾಮದ ಕೇಳಕೇರಿ ಹೊಳೆಯ ಸಮೀಪ ಹೋದವರು ಸಂಜೆ 17:30 ಗಂಟೆಗೆ ಕಾಣೆಯಾಗಿರುವುದಾಗಿ ಅಲ್ಲಿನ ಸ್ಥಳೀಯರು ಪೋನ್‌ ಮಾಡಿ ತಿಳಿಸಿದಂತೆ ಪಿರ್ಯಾದಿದಾರರಾದ ಅಬ್ದುಲ್‌ ಕರೀಮ್ (41), ತಂದೆ:ಮೊಹಮ್ಮದ್‌ ಕುಂಙ, ವಾಸ: ವಿ ವಿ ಹೌಸ್‌ ಪಳ್ಳಿಕೇರೆ, ಕಾಸರಗೋಡು, ಕೇರಳ  ಮತ್ತು ಸ್ಥಳಿಯರೊಂದಿಗೆ  ಹುಡುಕಾಡಿದಲ್ಲಿ ಪತ್ತೆಯಾಗಿರುವುದಿಲ್ಲ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2023 ಕಲಂ:  ಹುಡುಗ ಕಾಣೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕಾರ್ಕಳ:  ದಿನಾಂಕ 13/04/2023 ರಂದು  ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೋಳಿ ಪೇಟೆಯಲ್ಲಿರುವ ಬಸ್ಸು ನಿಲ್ದಾಣದ ಬಳಿ ಇರುವ ಲಕ್ಷ್ಮೀ ವೈನ್ಸ್ ಶಾಪ್ ಪಕ್ಕದ ರಸ್ತೆಯಲ್ಲಿ ಆರೋಪಿ ದೇವೇಂದ್ರ ಶೆಟ್ಟಿ ಎಂಬಾತನು ಬೈಕ್ ನಂಬ್ರ KA-20-ER-6394 ನೇಯದರ ಮೇಲೆ ಕುಳಿತು ಕೆಲವು ಸಾರ್ವಜನಿಕರನ್ನು ಒಗ್ಗೂಡಿಸಿಕೊಂಡು IPL ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ತನ್ನ ಮೊಬೈಲ್ ನಲ್ಲಿ ಲೋಟಸ್ ಆ್ಯಪ್ ಮೂಲಕ ಪಂದ್ಯವನ್ನು ವೀಕ್ಷಿಸಿಸುತ್ತಾ ಕ್ರಿಕೆಟ್ ಬೆಟ್ಟಿಂಗ್‌‌ನಲ್ಲಿ ಹಣ ಹಾಕಿದರೆ, ಹೆಚ್ಚು ಹಣವನ್ನು ಕೊಡುವುದಾಗಿ, ಸಾರ್ವಜನಿಕರಿಗೆ ಹೇಳಿ ಅವರಿಂದ ಹಣವನ್ನು ಪಡೆದು ಬೆಟ್ಟಿಂಗ್ ಜೂಜಾಟ ನಡೆಸುತ್ತಿರುವುದಾಗಿ ಬಂದ ಮಾಹಿತಿಯಂತೆ ತೇಜಸ್ವಿ, ಪೊಲೀಸ್‌ ಉಪನಿರೀಕ್ಷಕರು, ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಸಿಬ್ಬಂಧಿಯವರೊಂದಿಗೆ ದಾಳಿ ನಡೆಸಿದಾಗ ಮಧು ಅಜೆಕಾರು, ಪ್ರಭಾಕರ ನೆಲ್ಲಿಕಾರ್,  ಕರ್ಣ ನಲ್ಲೂರು ಹಾಗೂ ನವೀನ್ ಬಜಗೋಳಿ ಇವರುಗಳು ಸ್ಥಳದಿಂದ ಓಡಿ ಹೋಗಿದ್ದು, ಆರೋಪಿ ದೇವೇಂದ್ರ ಶೆಟ್ಟಿ (42), ತಂದೆ: ಮೇಘರಾಜ ಶೆಟ್ಟಿ, ವಾಸ: ಶ್ರೀ ದೇವಿ ಕೃಪಾ, ಆರ್.ಕೆ. ನಗರ, ನಲ್ಲೂರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ  ಪಡೆದು ಆರೋಪಿಯು ಕೃತ್ಯಕ್ಕೆ ಬಳಸಿದ oppo ಕಂಪೆನಿಯ Android ಪೋನ್ -1, ACE ಕಂಪೆನಿಯ ಕೀ ಪ್ಯಾಡ್ ಪೋನ್-1 ಹಾಗೂ Itel  ಕಂಪೆನಿಯ ಕೀ ಪ್ಯಾಡ್ ಪೋನ್-1 ನ್ನು ಮತ್ತು IPL ಕ್ರಿಕೆಟ್ ಬೆಟ್ಟಿಂಗ್‌‌ನಿಂದ ಸಾರ್ವಜನಿಕರಿಂದ ಸಂಗ್ರಹಿಸಿದ 25,000/- ರೂಪಾಯಿ ನಗದು ಹಾಗೂ ಬೈಕ್ ನಂಬ್ರ KA-20-ER-6394 ನೇಯದನ್ನು  ವಶಕ್ಕೆ  ಪಡೆದಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 53/2023 ಕಲಂ: 78 (i)(iii) ಕರ್ನಾಟಕ ಪೊಲೀಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ದಿನಾಂಕ 13/04/2023 ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ಹರೀಶ್ ಪುತ್ರನ್ (41),  ತಂದೆ: ಕರಿಯ ಮರಕಾಲ, ವಾಸ: ಶ್ರೀದೇವಿ ನಿವಾಸ , ಪಾಲುಬೆಟ್ಟು ಅಂಜಾರು ಗ್ರಾಮ, ಉಡುಪಿ ತಾಲೂಕು ಇವರ ಮನೆಯ ಬಾವಿಗೆ ಅಳವಡಿಸಿದ ನೀರಿನ ಪಂಪ್ ಹಾಳಾಗಿದ್ದು,  ಪಂಪಿಗೆ  ಅಳವಡಿಸಿದ ಪುಟ್ ಬಾಲ್ ನ್ನು ಮೇಲಕ್ಕೆ ಎತ್ತಿ ಪುಟ್ ಬಾಲಿಗೆ ನೀರನ್ನು ಹಾಯಿಸಿ ಪೈಪ್ ಸಮೇತ ಬಾವಿಯ ನೀರಿಗೆ ಇಳಿಸುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಪೈಪ್ ಸಮೇತ ಅವರ ತಮ್ಮ ಮಹೇಶ್ ಪುತ್ರನ್(34) ರವರು  ರವರು ಬಾವಿಗೆ ಬಿದ್ದಿದ್ದು, ಕೂಡಲೇ ಅವರನ್ನು ಬಾವಿಯಿಂದ ಮೇಲಕ್ಕೆ ಎತ್ತಿ ನೋಡಲಾಗಿ ತಲೆಗೆ ರಕ್ತ ಗಾಯವಾಗಿ ರಕ್ತ ಸೋರುತ್ತಿದ್ದು, ಮಾತನಾಡದೇ ಇದ್ದು  ಕೂಡಲೇ ಕೆ ಎಂ ಸಿ ಆಸ್ಪತ್ರೆಗೆ  ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು,ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮಹೇಶ್ ಪುತ್ರನ್ ಅವರು ಬಾವಿಗೆ ಬಿದ್ದಾಗ ಬಾವಿಯಲ್ಲಿ ಅಳವಡಿಸಿದ ರಿಂಗ್ ಗೆ ತಲೆಯು ತಾಗಿ ತೀವ್ರ ಸ್ವರೂಪದ ರಕ್ತಗಾಯದಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2023 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದಿದಾರರಾದ ದೇವಪ್ಪ ಮರಾಠಿ (38), ತಂದೆ: ಕೃಷ್ಣ ಮರಾಠಿ, ವಾಸ: ಕೊಡಿಯಾಳ್ ಕೇರಿ  ಮೇಲ್ಮನೆ, ಗೋಳಿಹೊಳೆ  ಗ್ರಾಮ,ಬೈಂದೂರು  ತಾಲೂಕು ಇವರ ಅಣ್ಣನ ಮಗ ಮೋಹನ ಮರಾಠಿ (24) ರವರು ಆವರ ಬಾವ ಸುಬ್ರಹ್ಮಣ್ಯ ಮರಾಠಿ ರವರ ಜೊತೆಯಲ್ಲಿ ಹಾಲ್ಕಲ್ ನಲ್ಲಿ ಕೋಳಿ ಫಾರ್ಮನ್ನು ವಹಿಸಿಕೊಂಡು ವ್ಯವಹಾರ ನಡೆಸುತ್ತಿದ್ದರು. ದಿನಾಂಕ 12/04/2023 ರಂದು ಸಾಯಂಕಾಲ ಮೋಹನ ಮರಾಠಿ ಮತ್ತು ಸುಬ್ರಹ್ಮಣ್ಯ ಮರಾಠಿರವರು KA-20-EQ-6381  ನೇ ಅಪಾಚಿ ಮೋಟಾರು ಸೈಕಲ್ ನಲ್ಲಿ ತಮ್ಮ ಮನೆಯಿಂದ ಹಾಲ್ಕಲ್ ಗೆ  ಕೋಳಿ ಫಾರ್ಮ ಗೆ ಕೋಳಿಗಳಿಗೆ ಫುಡ್ ಹಾಕಿ ಬರಲು ಹೋಗಿದ್ದರು. ರಾತ್ರಿ  9:30 ಗಂಟೆಗೆ ಸುಬ್ರಹ್ಮಣ್ಯನು ಮನಗೆ ಪೋನ್ ಮಾಡಿ ತಾನು ಹಾಗೂ ಮೋಹನ ಮರಾಠಿ ಹಾಲ್ಕಲ್ ನಿಂದ  ಮನೆಗೆ  ಮೊಟಾರು ಸೈಕಲ್ ನಲ್ಲಿ ಹೊರಟಿದ್ದು  ಮೋಹನ್ ಮರಾಠಿ ಮೋಟಾರು ಸೈಕಲ್ ಚಲಾಯಿಸುತ್ತಿದ್ದನು.   ಗೋಳಿಹೊಳೆ ಗ್ರಾಮದ ಅರೆಶಿರೂರು ಸಮೀಪ ಕಮ್ಮರಕೋಣೆ  ಎಂಬಲ್ಲಿ  ತಲುಪುವಾಗ ಕಾಡಿನಿಂದ ಒಂದು  ಕಡವೆ ಓಡಿ ಬಂದು ಮೊಟಾರು ಸೈಕಲ್ ಮೇಲೆ ಹಾರಿದ್ದು  ತಾನು  ಹಾಗೂ ಮೋಹನ ಮರಾಠಿ  ಮೋಟಾರು ಸೈಕಲ್ ಸಮೇತ ಕೆಳಗಡೆ ಬಿದ್ದು ಮೋಹನ ಮರಾಠಿಯ ತಲೆಗೆ ಗಂಭೀರ ಸ್ವರೂಪದ ಗಾಯ ಉಂಟಾಗಿದ್ದು ತನಗೆ ಸಣ್ಣಪುಟ್ಟ ತರಚಿದ  ಗಾಯ  ಉಂಟಾಗಿರುವ  ವಿಷಯ ತಿಳಿಸಿರುತ್ತಾನೆ. ಈ ಘಟನೆಯ ಮಾಹಿತಿ ತಿಳಿದು  ಮಂಜು  ಪೂಜಾರಿ ಎಂಬವರು ಗಾಯಾಳು ಮೋಹನ ಮರಾಠಿಯವರನ್ನು  ಉಡುಪಿ ಆದರ್ಶ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದ ಮೋಹನ ಮರಾಠಿಯವರು  ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 14/04/2023 ರಂದು ಸಂಜೆ 5:45 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 21/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಮಣಿಪಾಲ: ದಿನಾಂಕ 14/04/2023 ರಂದು ದೇವರಾಜ್‌ ಟಿ.ವಿ, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ ಬಂದ ಮಾಹಿತಿಯಂತೆ ಉಡುಪಿ ತಾಲೂಕು ಹೆರ್ಗಾ ಗ್ರಾಮದ  ಈಶ್ವರ ನಗರ ಎಂಬಲ್ಲಿರುವ OPULENCE Recidency ಯ 2ನೇ ಮಹಡಿಯಲ್ಲಿರುವ ರೂಮ್‌ ನಂಬರ್‌ 207 ರಲ್ಲಿ  ಓರ್ವ ವ್ಯಕ್ತಿ ಮಾರಾಟ ಮಾಡುವ ಉದ್ದೇಶದಿಂದ ಮಾದಕ ವಸ್ತುವನ್ನು ಇಟ್ಟಿರುವ  ಸ್ಥಳಕ್ಕೆ ದಾಳಿ ನಡೆಸಿ ಆಪಾದಿತ ಪ್ರಾಂಜಲ್‌ (22),  ತಂದೆ: ಕುಮಾರ್‌ ಸಂಜೀವ,  ಖಾಯಂ ವಾಸ ಪ್ಲಾಟ್‌ ನಂಬರ್‌ 10/D, 18,HO-CHI-MINH, SARANI, SARSUNA, SOUTH -24 PARGANAS WET BENGAL-700061 ಹಾಲಿ ವಾಸ:  ರೂಮ್‌ ನಂಬರ್‌ 207,  2ನೇ ಮಹಡಿ, OPULENCE Recidency ಈಶ್ವರ ನಗರ ಹೆರ್ಗಾ ಗ್ರಾಮ ಉಡುಪಿ ತಾಲೂಕು ಎಂಬಾತನ ರೂಂನ ಕಬ್ಬಿಣದ ಕಪಾಟಿ ನಲ್ಲಿದ್ದ 123 ಗ್ರಾಂ ತೂಕ ಗ್ರಾಂ ಗಾಂಜಾ (ಪ್ಲಾಸ್ಟಿಕ್ ಕವರ್‌ಸಮೇತ)‌,  ಮತ್ತು ಆತನ ವಶದಲ್ಲಿದ್ದ ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಿಕೊಂಡಿದ್ದು, ಸ್ವಾಧೀನಪಡಿಸಿಕೊಂಡ ಗಾಂಜಾ ಸ್ವತ್ತಿನ ಮೌಲ್ಯ ರೂಪಾಯಿ 6250/-  ಆಗಿರುತ್ತದೆ.  ಮಾದಕ ವಸ್ತುವನ್ನು ಅಕ್ಷಯ್ , ವಾಸ: ರೂಮ್ ನಂಬರ್ 6 ಜನತಾ ಟವರ್ಸ ಈಶ್ವರನಗರ  ಎಂಬಾತನು ಆಪಾದಿತ ಪ್ರಾಂಜಲ್‌ ಪ್ರಾಯಸ್ ನಿಗೆ ಮಾರಾಟ ಮಾಡಲು ನೀಡಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2023 ಕಲಂ:8(c) 20(b)(II)(A) NDPS ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 15-04-2023 10:06 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080