ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ

  • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹೇರಾಡಿ  ಗ್ರಾಮದ ಬಾರ್ಕೂರು ಡಿಗ್ರಿ ಕಾಲೇಜು ಎದುರು ಮೀರಾ ರಾವ್‌ ಎಂಬುವವರ ಬಾಡಿಗೆ ಜಾಗದಲ್ಲಿ  ಫಿರ್ಯಾದಿ: ದೀಲಿಪ್‌ ಕುಮಾರ್‌ (42 ವರ್ಷ) ತಂದೆ: ದೇವರಾಜ, ವಾಸ:ನಶಿಯ, ನಡುಬನ ಪಂಚಾಯತ್‌ ಕೊಲ್ಲಂ  ಕೇರಳ ಇವರು  ಸುಮಾರು ಒಂದು ತಿಂಗಳು ಹಿಂದೆ ಕೇರಳದಿಂದ ಬಂದು  ಇವರೊಂದಿಗೆ ಕೆಲಸಕ್ಕೆ ಸೇರಿಕೊಂಡಿರುವ ಶಿವನ್‌ ಕುಟ್ಟಿ(57)  ಇವರಿಗೆ ಸುಮಾರು 15 ದಿನಗಳ ಹಿಂದೆ  ನಾಯಿ ಕಚ್ಚಿದ್ದು ಅದರ  ಚಿಕಿತ್ಸೆ ಪಡೆಯುತ್ತಿರುವಾಗ ಶರಾಬು ಕುಡಿಯುವುದನ್ನು ನಿಲ್ಲಿಸಿದ್ದರಿಂದ ಕೆಲಸ ಮಾಡುವಾಗ  ಸ್ವಲ್ಪ ಮಾನಸಿಕನಂತೆ ವರ್ತಿಸುತ್ತಿದ್ದ  ಶಿವನ್‌ ಕುಟ್ಟಿಯವರು  ದಿನಾಂಕ 31/03/2023 ರಂದು  ಬೆಳಿಗ್ಗೆ 10.30 ಗಂಟೆಗೆ  ಬಾರ್ಕೂರಿನ ಅವರು ಕೆಲಸ ಮಾಡುವ ಸ್ಥಳದಿಂದ ಸುದೇವ್ ಎಂಬವನಲ್ಲಿ ತನ್ನ ಊರಾದ ಕೇರಳಕ್ಕೆ ಹೋಗುವುದಾಗಿ   ತಿಳಿಸಿ ಬಾರ್ಕೂರಿನಿಂದ ಹೋದವರು ಕೇರಳದ ಅವರ  ಮನೆಗೂ  ಹೋಗದೇ  ಇದುವರೆಗೆ ವಾಪಾಸು ಬಾರ್ಕೂರಿಗೂ ಬಾರದೇ ಕಾಣೆಯಾಗಿರುತ್ತಾರೆ. ಈ  ಬಗ್ಗೆ ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ 80/2023: ಕಲಂ ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ: ದೇವಿ, ಪ್ರಾಯ: 48 ವರ್ಷ, ಗಂಡ: ಕುಮಾರ, ವಾಸ: ಶಾಂತಿಪಲ್ಕೆ, ಯರ್ಲಪ್ಪಾಡಿ ಗ್ರಾಮ, ಇವರ ತಮ್ಮ  ದಿ. ಮಂಜುನಾಥ ಎಂಬವರ ಮಗ ಗಣೇಶ ಹೆಚ್ ಎಮ್ ಪ್ರಾಯ 20 ವರ್ಷ ಎಂಬಾತನಿಗೆ  ವಿಪರೀತ ಕುಡಿತದ ಚಟ ಇದ್ದು ಮೈಸೂರಿನಲ್ಲಿ  ಕೂಲಿ ಕೆಲಸ ಮಾಡಿಕೊಂಡಿದ್ದನು. ಆತನು 3 ದಿನದ ಹಿಂದೆ ಯರ್ಲಪಾಡಿ ಗ್ರಾಮದ ಶಾಂತಿಪಲ್ಕೆ ಎಂಬಲ್ಲಿರುವ ಫಿರ್ಯಾದುದಾರರ  ಮನೆಗೆ   ಬಂದಿದ್ದು ನಿನ್ನೆ  ದಿನಾಂಕ  14-04-2023 ರಂದು ಫಿರ್ಯಾದುದಾರರು ಗಣೇಶನಿಗೆ ಕೆಲಸ  ಮಾಡದೇ  ಮನೆಯಲ್ಲಿ ಇರಬೇಡ ಕೆಲಸಕ್ಕೆ  ಹೋಗು ಎಂದಿದ್ದು ಆತನು ಸಂಜೆ 18-00 ಗಂಟೆಗೆ  ಕೆಲಸಕ್ಕೆ   ಹೋಗುತ್ತೇನೆ ಎಂದು  ಹೇಳಿ  ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೋಗಿದ್ದು ದಿನಾಂಕ  15-04-2023 ರಂದು  ಬೆಳಿಗ್ಗೆ 07-30 ಗಂಟೆಗೆ ಯರ್ಲಪಾಡಿ ಗ್ರಾಮದ ಶಾಂತಿಪಲ್ಕೆ  ಎಂಬಲ್ಲಿ  ಅಣ್ಣು  ಶೆಟ್ಟಿ ಎಂಬವರ  ಮನೆಯಬಳಿ ಹಾಡಿಯಲ್ಲಿ   ಮರಕ್ಕೆ   ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 15/2023ಕಲಂ 174 ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಅಜೆಕಾರು : ಪಿರ್ಯಾದಿ: ಜಗದೀಶ ಆಚಾರಿ (33) ತಂದೆ : ಸಾಂಬ್ರಾಯ ಆಚಾರಿ  ವಾಸ: ಆಯಾರಬೆಟ್ಟು ಮನೆ ಕೆರ್ವಾಶೆ ಗ್ರಾಮ ಇವರ ಭಾವ ಮುದ್ದು ಆಚಾರಿ (47 ವರ್ಷ) ಎಂಬವರು ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮ ನೆಕ್ಕರೆ ಪಲ್ಕೆ ಎಂಬಲ್ಲಿ ವಾಸವಾಗಿದ್ದು, ದಿನಾಂಕ: 15/04/2023 ರಂದು ಪಿರ್ಯಾದಿದಾರರು ಬೆಳಿಗ್ಗೆ 9:00 ಗಂಟೆಗೆ ಅಜೆಕಾರಿನಲ್ಲಿರುವಾಗ ಮುದ್ದು ಪೂಜಾರಿ ರವರ ಮನೆ ಹತ್ತಿರದಲ್ಲಿರುವ ಅವರ ತಮ್ಮ ವಸಂತ ಆಚಾರಿಯವರು ಪಿರ್ಯಾದಿದಾರರಿಗೆ ಪೋನ್‌ ಮಾಡಿ ಮುದ್ದು ಪೂಜಾರಿರವರು ಅವರ ಮನೆಯ ಅಂಗಳದಲ್ಲಿ ಬಿದ್ದು ಕೊಂಡಿರುವುದಾಗಿ ತಿಳಿಸಿದ್ದು ಕೂಡಲೇ ಪಿರ್ಯಾದಿದಾರರು ಅವರ ಮನೆಗೆ ಹೋಗಿ ನೋಡುವಾಗ ಮುದ್ದು ಆಚಾರಿಯವರು ಮನೆಯ ಅಂಗಳದಲ್ಲಿ ಮೃತ ಪಟ್ಟಿದ್ದು ಅವರ ಪಕ್ಕದಲ್ಲಿಯೇ ಮಧ್ಯದ ಪ್ಯಾಕೇಟ್‌ ಮತ್ತು ಯಾವುದೋ ಕೀಟನಾಶಕದ ಪ್ಲಾಸ್ಟಿಕ್‌ ಬಾಟಲಿ ಬಿದ್ದು ಕೊಂಡಿರುವುದು ಕಂಡು ಬಂದಿದ್ದು ಅವರು ವಿಪರೀತ ಮದ್ಯಪಾನ ಮಾಡುವ ಚಟವಿದ್ದು ಆಗಾಗ್ಗೆ ಪಿರ್ಯಾದಿದಾರಲ್ಲಿ ಸಾಯುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದು ಅವರು ಮದ್ಯಪಾನದ ಚಟದಿಂದ ಜೀವನದಲ್ಲಿ ಜಿಗುಪ್ಸೆ ಗೊಂಡು ನಿನ್ನೆ ದಿನಾಂಕ:14/04/2023ರ ರ ರಾತ್ರಿ 08:00 ಗಂಟೆಯಿಂದ ದಿನಾಂಕ: 15/04/2023 ರ ಬೆಳಿಗ್ಗೆ 9:00 ಗಂಟೆಯ ಮದ್ಯಾವಧಿಯಲ್ಲಿ.ಯಾವುದೋ ಕೀಟನಾಶಕ ಸೇವಿಸಿ   ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ  ಠಾಣಾ  UDR No: 13/2023 U/s 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ: ಪಿರ್ಯಾದಿ: ಜಗದೀಶ್   ಪ್ರಾಯ: 45 ವರ್ಷ ತಂದೆ: ಸುಬ್ರಹ್ಮಣ್ಯ  ವಾಸ: ಕೊಣಂದೂರು, ಎಮ್‌ ಜಿ ರೋಡ್‌, ಕೊಣಂದೂರು ಗ್ರಾಮ, ತೀರ್ಥಹಳ್ಳಿ ತಾಲೂಕು ಇವರು  ತನ್ನ ಸಂಸಾರದೊಂದಿಗೆ  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಗ್ರಾಮದ ಕೊಣಂದೂರು ಗ್ರಾಮದಲ್ಲಿ ವಾಸಮಾಡಿಕೊಂಡಿದ್ದು, ಪಿರ್ಯಾದಿ ದಾರರ ಮಗನಾದ ತಿಲಕ್‌ ಕೆ ಜಿ ರವರು ಕುಂದಾಪುರ ಮೂಡ್ಲಕಟ್ಟೆ ಇಂಜಿನಿಯರಿಂಗ್‌ ಕಾಲೇಜ್‌ ನಲ್ಲಿ ಕಳೆದ ಆರು ತಿಂಗಳಿನಿಂದ ವ್ಯಾಸಂಗ ಮಾಡಿಕೊಂಡಿದ್ದು, ದಿನಾಂಕ 14/04/2023 ರಂದು ಪಿರ್ಯಾದಿದಾರರು ಮಗನಿಗೆ ದೂರವಾಣಿ ಕರೆ ಮಾಡಿದಾಗ , ಆತನ ಸ್ನೇಹಿತರು ಕರೆಯನ್ನು ಸ್ವೀಕರಿಸಿ ತಿಲಕ್‌ ಕೆ ಜಿ ಹಾಗೂ ನಾವೆಲ್ಲರೂ ಸೇರಿ ಕುಂದಾಪುರ ತಾಲೂಕಿನ ಕೊಣಿ ಗ್ರಾಮದ ಕೇಳಕೇರಿ ಹೊಳೆಯಲ್ಲಿ  ಸಂಜೆ 05:30 ಗಂಟೆಗೆ ಈಜಲೂ ಹೋದವರಲ್ಲಿ ತಿಲಕನೂ ಮುಳುಗಿ ಕಾಣೆಯಾಗಿದ್ದು ಹುಡುಕಾಡುತ್ತಿರುವುದಾಗಿ ತಿಳಿಸಿದ್ದು ನಂತರ ಪಿರ್ಯಾದಿದುದಾರರು ಸದ್ರಿ ಸ್ಥಳಕ್ಕೆ ರಾತ್ರಿ ಸುಮಾರು 10:30 ಗಂಟೆಗೆ ಬಂದು ನೋಡಿದ್ದು ಅದಾಗಲೆ ಪೊಲೀಸರೂ, ಅಗ್ನಿ ಶಾಮಕ ದಳದವರು ಹಾಗೂ ಕಾಲೇಜಿಗೆ ಸಂಬಂದ ಪಟ್ಟವರು  ಹುಡುಕುತ್ತಿದ್ದು,  ದಿನಾಂಕ 15/04/2023 ರಂದು ಬೆಳಿಗ್ಗೆ 06:30 ಗಂಟೆಗೆ ಸದ್ರಿ ಹೊಳೆಯಲ್ಲಿ ಪಿರ್ಯಾದಿದಾರರ ಮಗನಾದ ತಿಲಕ್‌ ಕೆ ಜಿ ರವರ ಮೃತ ದೇಹಕಂಡು ಬಂದಿದ್ದು ಮೃತ ದೇಹದ ಮೇಲೆ ಕಣ್ಣಿನ ಬಳಿ, ತುಟಿ ಹಾಗೂ ಕಿವಿಯನ್ನು ಜಲಚರಗಳು ಕಚ್ಚಿರುತ್ತದೆ. ಪಿರ್ಯಾದಿದಾರರ ಮಗನು ತನ್ನ ಸ್ನೇಹಿತರೊಂದಿಗೆ ಈಜಾಡಲು ಹೋಗಿ ಆಯತಪ್ಪಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ   UDR No 18/2023 ಕಲಂ: 174 CrPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಗಂಗೊಳ್ಳಿ: ಪಿರ್ಯಾದಿ: ಗೋಪಾಲ ಪ್ರಾಯ 56 ವಷ ತಂದೆ:ದಿ||ಮಂಜುನಾಥ ವಾಸ: ಜಾನಿಬಾಯ್‌ ಕಂಪೌಂಡು, ಚಿಕನ್‌ಸಾಲ್‌ ರಸ್ತೆ, ಕುಂದಾಪುರಇವರ  ತಮ್ಮ ಕೃಷ್ಣ ಪ್ರಾಯ 40 ವರ್ಷ ಇವರು ಸುಮಾರು 14 ವರ್ಷದ ಹಿಂದೆ ನೂಜಾಡಿ ಗ್ರಾಮದ ಬಗ್ವಾಡಿಯ ಗೀತಾ ಎಂಬುವವರೊಂದಿಗೆ ಮದುವೆಯಾಗಿದ್ದು, ಅವರಿಗೆ  ಇಬ್ಬರು ಮಕ್ಕಳಿದ್ದು,  ಅವರ ದಾಂಪತ್ಯದಲ್ಲಿ ವಿರಸ ಉಂಟಾಗಿ ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಮೃತ ಕೃಷ್ಣನು ಬೆಂಗಳೂರಿನಲ್ಲಿ ಹೊಟೆಲ್‌ ನಲ್ಲಿ ಕೆಲಸ ಮಾಡಿಕೊಂಡಿದ್ದು, ಈಗ್ಯೆ ಸುಮಾರು 15 ದಿನಗಳ ಹಿಂದೆ ಊರಿಗೆ ಬಂದಿರುತ್ತಾನೆ. ಆತನು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು ದಿನಾಂಕ:14/04/2023 ರಂದು ರಾತ್ರಿ ಸುಮಾರು 11:00 ಗಂಟೆಗೆ ಗೀತಾಳ ಮನಗೆ ಹೋಗಿ ಗಲಾಟೆ ಮಾಡಿ ಹೋದವರು ವಾಪಾಸು ಅಲ್ಲಿಗೆ ಹೋಗದೇ ದಿನಾಂಕ:15/04/2023 ರಂದು ಬೆಳಗ್ಗೆ 07:45 ಗಂಟೆಗೆ ನೂಜಾಡಿ ಗ್ರಾಮದ ಬಗ್ವಾಡಿ ಕೆಳಕಳಿಯ ಬಸವರಾಜ ಎಂಬುವವರ ಮನೆಯ ಮುಖ್ಯ ದ್ವಾರದ ಎದುರು ಬಿದ್ದು ಮೃತಪಟ್ಟಿರುವುದು ಕಂಡು ಬಂದಿದ್ದು, ಮೃತ ಕೃಷ್ಣನ ದಾಂಪತ್ಯ ಜೀವನದಲ್ಲಿ ವಿರಸ ಉಂಟಾಗಿದ್ದು ಇದೇ ವೇದನೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಯಾವುದೋ ಅಮಲು ಪದಾರ್ಥ ಸೇವನೆ ಮಾಡಿ ಮೃತಪಟ್ಟಿದ್ದು, ಆತನ ಮರಣದ ಬಗ್ಗೆ ಸಂಶಯವಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಯು.ಡಿ.ಆರ್‌ನಂಬ್ರ 08/2023 ಕಲಂ:174 (C) ಸಿ.ಆರ್‌.ಪಿ.ಸಿ ಯಂತೆ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾಪು: ಪಿರ್ಯಾದಿ: ಪಿ ಜಮೀರ್ (53) ತಂದೆ: ದಿ. ಕೆ ಎಸ್ ಯಾಕೂಬ್ ಸಾಹೇಬ್‌ಪ್ಲಾಟ್‌ನಂಬ್ರ-202, ಕೃಷ್ಣ ಎಮರಾಲ್ಡ್‌‌ಪ್ಲಾಟ್‌ಉದ್ಯಾವರ ಇವರ ಹೆಂಡತಿಯ ತಂದೆ ದಿಲ್‌ಶಾದ್ ಹಸನ್‌‌(71) ರವರು ಪಿರ್ಯಾದಿದಾರರು ವಾಸಮಾಡಿಕೊಂಡಿರುವ ಪ್ಲಾಟ್‌‌ನ ರೂ ನಂಬ್ರ 204 ರಲ್ಲಿ ತನ್ನ ಸೊಸೆಯರೊಂದಿಗೆ  ವಾಸಮಾಡಿಕೊಂಡಿದ್ದು ಅವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು,  ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ದಿನ ದಿನಾಂಕ 15.04.2023 ರಂದು ಬೆಳಿಗ್ಗೆ 9:00 ಗಂಟೆ ಸಮಯಕ್ಕೆ ಮೃತರ ಸೊಸೆ ಇಷಪ್ ಬಾನುರವರು ದಿಲ್‌ಶಾದ್ ಹಸನ್‌‌ರವರನ್ನು ಎಬ್ಬಿಸಲು ಹೋದಾಗ ಅವರು ಮಾತಾನಾಡದೇ ಇದ್ದು ಕೂಡಲೇ ಅವರನ್ನು ಒಂದು ವಾಹನದಲ್ಲಿ ಉಡುಪಿ ಟಿ ಎಂ ಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪರೀಕ್ಷಿಸಿ  ಈ ದಿನ 11:30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ಮಾವ  ದಿಲ್‌ಶಾದ್ ಹಸನ್‌‌(71) ರವರು ಹೃದಯ ಸಂಬಂಧಿ ಖಾಯಿಲೆ ಅಥವಾ ಇನ್ಯಾವುದೇ ಖಾಯಿಲೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಠಾಣಾ ಯು.ಡಿ.ಆರ್. ನಂಬ್ರ 09/2023 ಕಲಂ 174 ಸಿಆರ್‌‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿ: ಜಯಶ್ರೀ ಹುನ್ನೂರ ಪಿ.ಎಸ್‌.ಐ (ತನಿಖೆ) ಗಂಗೊಳ್ಳಿ ಪೊಲೀಸ್ ಠಾಣೆ ಇವರಿಗೆ ದಿನಾಂಕ:14/04/2023 ಕುಂದಾಪುರ ತಾಲೂಕು, ಹರ್ಕೂರು  ಗ್ರಾಮದ  ನಾರ್ಕಳಿಯ ನಡುಬೆಟ್ಟು ಎಂಬಲ್ಲಿನ ಹಾಡಿಯಲ್ಲಿ ಸಾರ್ವಜನಿಕ  ಸ್ಥಳದಲ್ಲಿ ಕೋಳಿ ಅಂಕ ಜುಗಾರಿ ಆಟ ಆಡುತ್ತಿದ್ದ ಬಗ್ಗೆ  ಮಾನ್ಯ ಪೊಲೀಸ್ ಉಪಾಧೀಕ್ಷಕರು ಕುಂದಾಪುರ ಉಪವಿಭಾಗ ರವರು  ನೀಡಿದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ ಸಿಬ್ಬಂದಿಯವರಾದ ಸಿಬ್ಬಂದಿಗಳಾದ  ಹೆಚ್.ಸಿ 100 ನೇ ಸಂತೋಷ, ಸಿ.ಪಿ.ಸಿ 85 ನೇ ರಮೇಶ ಹಾಗೂ ಸಿ.ಪಿ.ಸಿ 389 ನೇ ಶರಣಪ್ಪ  ನೇಯವರೊಂದಿಗೆ 16-45 ಗಂಟೆಗೆ ಧಾಳಿ  ನೆಡೆಸಿ 1) ರಾಘವೇಂದ್ರ ನಾಯ್ಕ್ 2) ಸತೀಶ್ ಪೂಜಾರಿ3) ಅನಿಲ್ ಶೆಟ್ಟಿ ರವರನ್ನು ವಶಕ್ಕೆ ಪಡೆದು ಕೋಳಿ ಜುಗಾರಿ  ಆಟಕ್ಕೆ ಉಪಯೋಗಿಸಿದ ಬಳಸಿದ ಕತ್ತಿ -2 (ಕೋಳಿಬಾಳು) ಹಾಗೂ ಕೋಳಿಯ ಕಾಲಿಗೆ ಕೋಳಿ ಬಾಳನ್ನು ಕಟ್ಟಲು ಉಪಯೋಗಿಸಿದ ಹಗ್ಗ -2 ಹಾಗೂ ಕೋಳಿಗಳ ಮೇಲೆ  ಹಣವನ್ನು ಪಣವಾಗಿ ಕಟ್ಟಿದ್ದು ನಗದು ಹಣ 800/- ರೂಪಾಯಿಯನ್ನು  ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 45/2023  ಕಲಂ 87/93 ಕೆ.ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 15-04-2023 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080