ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ದಿನಾಂಕ 12/04/2022 ರಂದು ಬೆಳಿಗ್ಗೆ 8:30 ಗಂಟೆಗೆ ಫಿರ್ಯಾದಿದಾರರಾದ ಜನಾರ್ಧನ ಆಚಾರಿ (42) ತಂದೆ:ಹೆರಿಯಣ್ಣ ಆಚಾರಿ ವಾಸ: ರಾಮ ನಗರ ನಾಡಾ ಗ್ರಾಮ ಬೈಂದೂರು ತಾಲೂಕು ರವರು,  ಪ್ರಸನ್ನ ಆಚಾರಿ ಎಂಬವರೊಂದಿಗೆ TVS NTORQ ಸ್ಕೂಟರ್ ನಂಬ್ರ  KA-20 EV-3683  ನೇದರಲ್ಲಿ ಸಹಸವಾರರಾಗಿ ಹಿಂಬದಿಯಲ್ಲಿ ಕುಳಿತುಕೊಂಡು ನಾಡದಿಂದ ಬಡಾಕೆರೆಗೆ ಬರುತ್ತಿದ್ದು  ನಾವುಂದ ಗ್ರಾಮದ ಬಡಾಕೆರೆ ಬಸ್ ನಿಲ್ದಾಣ ತಲುಪಿದಾಗ ಬೀದಿ ನಾಯಿಯೊಂದು ಒಮ್ಮೇಲೆ ರಸ್ತೆಗೆ ಅಡ್ಡ ಓಡಿ ಬಂದಾಗ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಚಲಾಯಿಸುತ್ತಿದ್ದ ಆರೋಪಿ ಪ್ರಸನ್ನ ಆಚಾರಿರವರು ಒಮ್ಮೇಲೆ ಸ್ಕೂಟರ್ ಗೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನ ಹತೋಟಿ ತಪ್ಪಿ ಸವಾರ ಹಾಗೂ ಸಹ ಸವಾರರಾದ ಜನಾರ್ಧನ ಆಚಾರಿ ರವರು ಸ್ಕೂಟರ್ ನೊಂದಿಗೆ ರಸ್ತೆಗೆ ಬಿದ್ದ  ಪರಿಣಾಮ ಜನಾರ್ಧನ ಆಚಾರಿ ರವರಿಗೆ ಎರಡೂ ಕಾಲುಗಳು ಹಾಗೂ  ಬೆನ್ನು ಮೂಳೆ  ಜಖಂ ಆಗಿದ್ದು ಸವಾರ ಪ್ರಸನ್ನ ಆಚಾರಿಯವರಿಗೆ ಕೈಗೆ  ಮತ್ತು ಕಾಲಿಗೆ ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು ಸ್ಕೂಟರ್ ಸವಾರ ಹಾಗೂ ಜನಾರ್ಧನ ಆಚಾರಿ ರವರನ್ನು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆದುಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷೀಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಜನಾರ್ಧನ ಆಚಾರಿ ರವರಿಗೆ ಚಿಕಿತ್ಸೆಯ ವೆಚ್ಚ  ನೀಡುವುದಾಗಿ  ಆರೋಪಿ ತಿಳಿಸಿದ್ದು  ಆದರೆ ಚಿಕಿತ್ಸೆಯ ವೆಚ್ಚ  ದೊಡ್ಡ ಮೊತ್ತ ಆಗಿರುವುದರಿಂದ  ಮೊತ್ತವನ್ನು ಕೊಡಲು ಆರೋಪಿ ನಿರಾಕರಿಸಿದ ಕಾರಣ ದೂರು ನೀಡಲು ವಿಳಂಭವಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ 279,  337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಫುರ: ದಿನಾಂಕ 14/04/2022  ರಂದು ರಾತ್ರಿ ಸುಮಾರು 7:30 ಗಂಟೆಗೆ, ಕುಂದಾಪುರ ತಾಲೂಕಿನ, ಕಟ್‌ ‌ಬೇಲ್ತೂರು ಗ್ರಾಮದ ಹರೇಗೋಡು ಕ್ರಾಸ್‌ಬಳಿ,  ಎನ್‌‌. ಹೆಚ್‌ 66 ರಸ್ತೆಯಲ್ಲಿ, ಆಪಾದಿತ ಹರ್ಷಿತ್‌ ಎಂಬವರು KA-05 JX-1705 ನೇ ಬೈಕನ್ನು ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು, ಚಾರ್ಲಿ ಮೆಂಡೋನ್ಸಾ ಎಂಬವರು ತಲ್ಲೂರು ಕಡೆಯಿಂದ  ಹರೇಗೋಡು ಎಂಬಲ್ಲಿಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್‌ಗೆ ಎದುರುಗಡೆ ಯಿಂದ ಡಿಕ್ಕಿ ಹೊಡೆದ ಪರಿಣಾಮ,  ಚಾರ್ಲಿ ಮೆಂಡೋನ್ಸಾ  ರವರ ತಲೆಗೆ, ಸೊಂಟಕ್ಕೆ, ಎದೆಗೆ, ಹೊಟ್ಟೆಗೆ ಹಾಗೂ ಕೈಕಾಲುಗಳಿಗೆ ಒಳಜಖಂ ಗಾಯ ಹಾಗೂ ರಕ್ತಗಾಯವಾಗಿ, ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು   ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ. ಎಂ.ಸಿ ಆಸ್ಪತ್ರೆಗೆ ಹೋದವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 9:40 ಗಂಟೆಗೆ ಮೃತಪಟ್ಟಿರುತ್ತಾರೆ  ಹಾಗೂ ಆಪಾದಿತ ಹರ್ಷಿತ್‌ರವರು ಸಹ ಗಾಯಗೊಂಡು ಕುಂದಾಪುರ ಆದರ್ಶ  ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ, ಎಂಬುದಾಗಿ ರೋಶನ್‌ ಬೆರೆಟ್ಟೋ (31) ತಂದೆ: ಕಾಮಿಲ್‌‌ಬೆರೆಟ್ಟೋ ಪಿಯೂಸ್‌‌ನಗರ, ಚರ್ಚ ರಸ್ತೆ, ಹಂಗಳೂರು  ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 279, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸತ್ಯಜಿತ್ (24) ತಂದೆ:ಕರುಣಾಕರ ಶೆಟ್ಟಿ ವಾಸ: 3/215 ಬಾಳೆಗದ್ದೆ, ಸಿದ್ದಾಪುರ, ಆಜ್ರಿ ಗ್ರಾಮ, ಕುಂದಾಪುರ ತಾಲೂಕು ಇವರ ಮಾಲಕತ್ವದ ಟಿವಿಎಸ್‌ ಕಂಪೆನಿಯ ಸ್ಕೂಟರ್ ನಂಬ್ರ KA-20 EV-4502 ಇದನ್ನು ಉಡುಪಿ ತಾಲೂಕು ಪುತ್ತೂರು ಗ್ರಾಮದ ಅಂಬಾಗಿಲಿನ ಸುಜಾತ ಕಾಂಪ್ಲೆಕ್ಸ್‌ನ ಎದುರು ನಿಲ್ಲಿಸಿದ್ದು, ದಿನಾಂಕ 14/04/2022 ರಂದು ಬೆಳಿಗ್ಗೆ 09:30 ರ ಸಮಯ ನಿಲ್ಲಿಸಿ ಹೋಗಿದ್ದು, ವಾಪಾಸು ಬೆಳಿಗ್ಗೆ 10:00 ಗಂಟೆಗೆ ಬಂದು ನೋಡಿದಾಗ ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿ ಇಲ್ಲದೇ ಇದ್ದು, ದಿನಾಂಕ 14/04/2022 ರಂದು ಬೆಳಿಗ್ಗೆ 09:30 ಗಂಟೆಯಿಂದ 10:00 ಗಂಟೆಯ ನಡುವಿನ ಸಮಯದಲ್ಲಿ ಸ್ಕೂಟರ್‌ನ್ನು ನಿಲ್ಲಿಸಿದ ಜಾಗದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್ ನ ಅಂದಾಜು ಮೌಲ್ಯ ರೂಪಾಯಿ. 50,000/- ಆಗಬಹುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಗಂಗೊಳ್ಳಿ: ಪಿರ್ಯಾದಿದಾರರಾದ ನಂಜಾನಾಯ್ಕ್ ಎನ್ ಪೊಲೀಸ್ ಉಪನಿರೀಕ್ಷಕರು ಗಂಗೊಳ್ಳಿ ಪೊಲೀಸ್ ಠಾಣೆ ರವರು ದಿನಾಂಕ 14/04/2022 ರಂದು ಇಲಾಖಾ ಜೀಪ್ ನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ  ಮರವಂತೆ ಪರಿಸರದಲ್ಲಿ ಇಬ್ಬರು ಅನುಮಾನಾಸ್ಪದ ವ್ಯಕ್ತಿಗಳು ಮೋಟಾರ್ ಸೈಕಲ್  ನಲ್ಲಿ ತಿರುಗಾಡುತ್ತಿದ್ದು ತ್ರಾಸಿ ಕಡೆಗೆ ಬರುತ್ತಿರುವುದಾಗಿ ಮಾಹಿತಿ ಬಂದಂತೆ ಇವರು ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ತ್ರಾಸಿ ಜಂಕ್ಷನ್ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ  ಸಿಬ್ಬಂದಿಗಳೊಂದಿಗೆ ಸಮವಸ್ತ್ರದಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11:45 ಗಂಟೆಗೆ ಮರವಂತೆ ಕಡೆಯಿಂದ ಕುಂದಾಪುರ ಕಡೆಗೆ KA-19 EQ-4468ನೇ ಕೆ.ಟಿ.ಎಮ್. ಮೋಟಾರ್ ಸೈಕಲ್  ನ್ನು  ಅದರ ಸವಾರನು ಸಹ ಸವಾರನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬರುತ್ತಿರುವುದನ್ನು ನೋಡಿ ನಂಜಾನಾಯ್ಕ್ ಎನ್ ಪೊಲೀಸ್ ಉಪನಿರೀಕ್ಷಕರು ಇವರು ಹಾಗೂ ಸಿಬ್ಬಂದಿಯವರು ಮೋಟಾರ್ ಸೈಕಲ್ ನ್ನು ನಿಲ್ಲಿಸುವಂತೆ ಸೂಚನೆ ನೀಡಿದರೂ ಅದರ ಸವಾರನು ಮೋಟಾರ್ ಸೈಕಲ್ ನ್ನು ನಿಲ್ಲಿಸದೇ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 33/2022 ಕಲಂ: 279 ಐಪಿಸಿ  & Rule 119 r/w 177 ಐ.ಎಂ.ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-04-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080