ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕುಂದಾಪುರ: ದಿನಾಂಕ 15/04/2022 ಪಿರ್ಯಾದಿದಾರರಾಧ ನಿರಂಜನ ಗೌಡ ಬಿ.ಎಸ್‌‌., ಪೊಲೀಸ್ ಉಪ ನಿರೀಕ್ಷಕರು, L&O. ಕುಂದಾಪುರ ಗ್ರಾಮಾಂತರ ಪೊಲೀಸ್ ಇವರು ಇಲಾಖಾ ವಾಹನ KA-20 G-237 ನೇ ಯದರಲ್ಲಿ ಸಿಬ್ಬಂದಿ ಯವರೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್‌‌ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 10:00 ಗಂಟೆಗೆ  ಕಾವ್ರಾಡಿ ಗ್ರಾಮದ ದೂಪದಕಟ್ಟೆ ಬಸ್‌‌ ‌ತಂಗುದಾಣ ಬಳಿ ಓರ್ವ ವ್ಯಕ್ತಿಯು ಮದ್ಯದ ಪ್ಯಾಕೆಟ್‌‌, ನೀರಿನ ಪೆಟ್‌‌ಬಾಟಲಿ, ಹಾಗೂ ಒಂದು ಪ್ಲಾಸ್ಟಿಕ್‌‌ಲೋಟವನ್ನು ಮುಂದೆ ಇಟ್ಟುಕೊಂಡು ಮದ್ಯ ಸೇವನೆ ಮಾಡುತ್ತಿದ್ದುದು ಕಂಡು ಬಂದಿರುತ್ತದೆ. ಆರೋಪಿತನು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮದ್ಯ ಸೇವನೆ ಮಾಡುತಿದ್ದುದಾಗಿದ್ದು. ಸ್ಥಳದಲ್ಲಿ ಪಂಚಾಯತುದಾರ ಸಮಕ್ಷಮ ಆರೋಪಿತನ ವಶದಿಂದ MYSORE LANCER WHISKY ಎಂದು ಹೆಸರು ಇರುವ 90 ML ನ ಮದ್ಯ ತುಂಬಿದ ಪ್ಯಾಕೆಟ್‌‌-01, MYSORE LANCER WHISKY ಎಂದು ಹೆಸರು ಇರುವ 90 ML ನ ಮದ್ಯದ ಖಾಲಿ ಪ್ಯಾಕೆಟ್‌‌-01 Aqua Sowkya ಎಂಬ  ಹೆಸರಿನ ನೀರಿನ ½ ಲೀಟರ್ ಬಾಟಲಿ-01 ಹಾಗೂ ಪ್ಲಾಸ್ಟಿಕ್‌‌ ಲೋಟ--01 ನ್ನು ಮಹಜರು ಬರೆಯಿಸಿ ಸ್ವಾಧೀನಪಸಿಕೊಂಡಿರುವುದಾಗಿದೆ ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 19/2022 ಕಲಂ: 15(A) KE ACT ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾದ ರಕ್ಷಿತ್ (29) ತಂದೆ: ದಿ. ರಾಮಚಂದ್ರ ಸಾಲ್ಯಾನ್ ವಾಸ: ಗಂಗಾ ನಿವಾಸ ಕೈಪುಂಜಾಲು, ಉಳಿಯಾರಗೋಳಿ ಗ್ರಾಮ ಕಾಫು ಇವರು ದಿನಾಂಕ 14/04/2022 ರಂದು ರಾತ್ರಿ ತನ್ನ KA-47 Q-6072ನೇ ಸ್ಕೂಟರ್‌ನಲ್ಲಿ  ಕಾಫು ಪೇಟೆಯಿಂದ ತರಕಾರಿಯನ್ನು ತಂದು ರಾತ್ರಿ 9:00 ಗಂಟೆಯ ಸಮಯಕ್ಕೆ ಉಳಿಯಾರಗೋಳಿ ಗ್ರಾಮದ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಸರ್ವಿಸ್ ರಸ್ತೆಯ ಬದಿಯಲ್ಲಿ ಅಂಬಿಕಾ ಟಿಂಬರ್ಸ್ ಬಳಿ ನಿಲ್ಲಿಸಿ ಅಲ್ಲಿಯೇ ಸಮೀಪದಲ್ಲಿರುವ ಅಡುಗೆ ತಯಾರಿಸುವ ರೂಮ್‌ನಲ್ಲಿ ತರಕಾರಿಯನ್ನುಇಟ್ಟು ಕೆಲಸ ಮುಗಿಸಿ ವಾಪಾಸು ರಾತ್ರಿ 11:00 ಗಂಟೆ ಸಮಯಕ್ಕೆ ರಕ್ಷಿತ್‌ ರವರು ಸ್ಕೂಟರನ್ನು ಇಟ್ಟ ಸ್ಥಳಕ್ಕೆ ಬಂದಾಗ ಸ್ಥಳದಲ್ಲಿ ಸ್ಕೂಟರ್ ಇಲ್ಲದೇ ಇದ್ದು ಇವರು ಸಮೀಪದಲ್ಲಿ ಎಲ್ಲಾ ಕಡೆ ಹುಡುಕಾಡಿದಲ್ಲಿ ಎಲ್ಲಿಯೂ ಕಂಡುಬಂದಿರುವುದಿಲ್ಲ. ಸದ್ರಿ ಸ್ಕೂಟರನ್ನು ಯಾರೋ ಕಳ್ಳರು ದಿನಾಂಕ 14/04/2022 ರಂದು 21:00 ಗಂಟೆಯಿಂದ 23:00 ಗಂಟೆಯ ಮಧ್ಯಾವಧಿಯಲ್ಲಿ ಕಳವುಮಾಡಿಕೊಂಡು ಹೋಗಿದ್ದು ಕಳವಾದ ಸ್ಕೂಟರಿನ ಅಂದಾಜು ಮೌಲ್ಯ 22,000/- ರೂಪಾಯಿ ಆಗಿರುತ್ತದೆ. ಸದ್ರಿ ಸ್ಕೂಟರ್‌‌ನ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ದೂರು ನೀಡಲು ವಿಳಂಬವಾಗಿರುವುದಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಆಶೋಕ್ ನಾಯ್ಕ್(44) ತಂದೆ: ವಾಸುದೇವ ನಾಯ್ಕ ವಾಸ: ಮೂರ್ಸೆ ಕಾಸನಮಕ್ಕಿ ನಾಡ್ಪಾಲು ಗ್ರಾಮ ಹೆಬ್ರಿ ಇವರ ಮಾವ ಶ್ರೀನಿವಾಸ ನಾಯ್ಕ್ (60) ಇವರು ಸುಮಾರು ವರ್ಷಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು. ಈ ಬಗ್ಗೆ ಅವರಿಗೆ ಹೆಬ್ರಿ ರಾಘುವೇಂದ್ರ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಲಾಗಿದೆ. ದಿನಾಂಕ 14/04/2022 ರಂದು ಶ್ರೀನಿವಾಸ ನಾಯ್ಕ್ ಇವರು ನಾಡ್ಪಾಲು ಗ್ರಾಮದ ಮೂರ್ಸೆ ಕಾಸನಮಕ್ಕಿ ಎಂಬಲ್ಲಿ ತನ್ನ ಮನೆಯಲ್ಲಿರುವಾಗ ರಾತ್ರಿ 10:00 ಗಂಟೆಗೆ ಅವರಿಗೆ ಎದೆನೋವು ಜಾಸ್ತಿ ಯಾದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಹೆಬ್ರಿ ರಾಘವೇಂದ್ರ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿ ಅವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ 108 ಅಂಬುಲೈನ್ಸ್ ವಾಹನದಲ್ಲಿ ಅಪರಾತ್ರಿ ಅಂದರೆ ದಿನಾಂಕ 15/04/2022 ರಂದು ಮುಂಜಾನೆ 01:50 ಗಂಟೆಗೆ ಮಣಿಪಾಲ ಕೆ.ಎಂ.ಸಿ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ದಾರಿ ಮದ್ಯೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ.ಮೃತರು ಹೃದಯ ಸಂಬಂಧಿ ಕಾಯಿಲೆಯಿಂದ ಮೃತ ಪಟ್ಟಿದ್ದು. ಮೃತರ ಮರಣದಲ್ಲಿ ಬೇರೆ ಯಾವುದೇ ಸಂದೇಹ ಇರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 15-04-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080