ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹಿರಿಯಡ್ಕ: ಪಿರ್ಯಾದಿದಾರರಾದ ಗುಣಕರ ಹೆಗ್ಡೆ(56), ತಂದೆ: ಶ್ಯಾಮರಾಯ ಶೆಟ್ಟಿ, ವಾಸ: ಸುಧಾ ನಿಲಯ, ಸಣ್ಣಬೀಡು, ಕುಕ್ಕೆಹಳ್ಳಿ ಗ್ರಾಮ ಇವರು ದಿನಾಂಕ 14/04/2021 ರಂದು ಮಧ್ಯಾಹ್ನ 3:00 ಗಂಟೆಗೆ ಮನೆಯ ಅಂಗಳದಲ್ಲಿ ಕುಳಿತುಕೊಂಡಿದ್ದಾಗ ಪಕ್ಕದಲ್ಲಿ  ಹಾದು ಹೋದ ಹಿರಿಯಡ್ಕ - ಕುಕ್ಕೆಹಳ್ಳಿ ರಸ್ತೆಯಲ್ಲಿ ಹಿರಿಯಡ್ಕ ಕಡೆಯಿಂದ ಕುಕ್ಕೆಹಳ್ಳಿ ಕಡೆಗೆ ಓರ್ವ ಟಿಪ್ಪರ್ ಲಾರಿ ಚಾಲಕನು ತನ್ನ ವಾಹನವನ್ನು ತಿರುವಾದ ರಸ್ತೆಯಲ್ಲಿ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗದಲ್ಲಿ  ಚಲಾಯಿಸಿಕೊಂಡು ಬರುತ್ತಿದ್ದು , ಆ ಸಮಯ ಅದೇ ರಸ್ತೆಯಲ್ಲಿ ಕುಕ್ಕೆಹಳ್ಳಿ ಕಡೆಯಿಂದ ಹಿರಿಯಡ್ಕ ಕಡೆಗೆ ಬರುತ್ತಿದ್ದ ಓರ್ವ ಮೋಟಾರ್ ಸೈಕಲ್  ಸವಾರನು ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಟಿಪ್ಪರ್ ನ್ನು ನೋಡಿ ತನ್ನ ಮೋಟಾರ್ ಸೈಕಲ್ ನ್ನು ಬಲ ಬದಿಗೆ ಚಲಾಯಿಸಿದ್ದು ಆಗ  ಟಿಪ್ಪರ್ ಚಾಲಕನು ಏಕಾ ಏಕಿ ಒಮ್ಮಲೇ  ಟಿಪ್ಪರ್ ತೀರಾ ಎಡಬದಿಗೆ ಚಲಾಯಿಸಿ ಸದ್ರಿ ಮೋಟಾರ್  ಸೈಕಲ್ ಗೆ ಢಿಕ್ಕಿ ಹೊಡೆದ ಪರಿಣಾಮ  ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದಾಗ ಟಿಪ್ಪರ್ ಆತನ ಮೇಲೆ ಹರಿದಿದ್ದು, ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾನೆ. ಕೂಡಲೇ   ಪಿರ್ಯಾದಿದಾರರು ಹಾಗೂ ಅವರ ಅಣ್ಣ  ಸುಧಾಕರ ಹೆಗ್ಡೆ  ರವರು ರಸ್ತೆಗೆ ಬಂದು ನೋಡಿದಾಗ  ರಸ್ತೆಯಲ್ಲಿ ಮೋಟಾರ್ ಸೈಕಲ್ ಬಿದ್ದುಕೊಂಡಿದ್ದು, ರಸ್ತೆಯ ಪಶ್ಷಿಮದ ಅಂಚಿನಲ್ಲಿ ಅದರ ಸವಾರನು ಬಿದ್ದುಕೊಂಡಿದ್ದು ನೋಡಲಾಗಿ ಆತನ ತಲೆಗೆ ತೀವ್ರ ತರಹವಾದ  ಜಖಂ ಆಗಿ   ತಲೆಯಿಂದ ಮೆದುಳು ಹೊರಬಂದು  ತೀವೃ ರಕ್ತಸ್ರಾವ ಆಗಿರುತ್ತದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಅಫಘಾತ ಮಾಡಿದ ಟಿಪ್ಪರ್ ಚಾಲನಾ ಸ್ಥಿತಿಯಲ್ಲಿ ನಿಂತಿದ್ದು, ಅದರ ನಂಬ್ರ ನೋಡಲಾಗಿ KA-19-AB-7133 ಆಗಿರುತ್ತದೆ. ಪಿರ್ಯಾದಿದಾರರು    ಟಿಪ್ಪರ್ ಬಳಿ ಹೋಗುತ್ತಿದ್ದಂತೆಯೇ ಟಿಪ್ಪರ್ ಚಾಲಕನು ಟಿಪ್ಪರ್ ನ್ನು ಚಲಾಯಿಸಿಕೊಂಡು ಪರಾರಿ ಆಗಿರುತ್ತಾನೆ. ನಂತರ ಪಿರ್ಯಾದಿದಾರರು  ಗಾಯಾಳು ಸವಾರನ ಬಳಿ ಬಂದಾಗ ಆತನು ಮಾತಾನಾಡದೇ ಗಾಯದ ತೀವ್ರಕ್ಕೆ ಸ್ಥಳದಲ್ಲೇ ಮೃತಪಟ್ಟಿದ್ದು, ಮೃತನು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ನಂಬ್ರ   ನೋಡಲಾಗಿ KA-18-J-5834  ಹೀರೋ ಹೊಂಡಾ  ಆಗಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 279,  304(ಎ)   ಐಪಿಸಿ ಜೊತೆಗೆ 134(ಎ)(ಬಿ), 187  ಐ ಎಮ್ ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಬೈಂದೂರು: ದಿನಾಂಕ 13/04/2021 ರಂದು ಮದ್ಯಾಹ್ನ 16:10 ಗಂಟೆಗೆ ಪಿರ್ಯಾದಿದಾರರಾದ ಸಂದೀಪ್ ಕೆ (32), ತಂದೆ:ಕೃಷ್ಣ ಶೇರುಗಾರ್, ವಾಸ:  ಕೋಟೆಮನೆ,ಪಡುವರಿ ಗ್ರಾಮ ಬೈಂದೂರು ತಾಲೂಕು ಇವರ ಅಣ್ಣ ಸುರೇಂದ್ರನಿಗೆ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯಲ್ಲಿ ಅಂಬಿಕಾ ಹೋಟೇಲ್ ನ ಎದುರುಗಡೆ ರಸ್ತೆ ಅಪಘಾತವಾಗಿ ಕುಂದಾಪುರ ನ್ಯೂ ಮೆಡಿಕಲ್ ಸೆಂಟರ್ ನಲ್ಲಿ ಚಿಕಿತ್ಸೆಗೆ ದಾಖಲಿಸಿದ್ದು ಪಿರ್ಯಾದಿದಾರರು ಅಣ್ಣನನ್ನು ನೋಡಲು ಆಸ್ಪತ್ರೆಗೆ ಹೋಗಿದ್ದು ಆತನಲ್ಲಿ ಅಪಘಾತದ ಬಗ್ಗೆ ವಿಚಾರಿಸಿದಲ್ಲಿ ಸಹ ಸವಾರನನ್ನಾಗಿ ನಾಗೇಶನನ್ನು ಕುಳ್ಳಿರಿಸಿಕೊಂಡು ಬೈಂದೂರು ಕಡೆಯಿಂದ ಯಡ್ತರೆ ಕಡೆಗೆ ಬರುತ್ತಿರುವಾಗ ಬೈಕ್ ಸ್ಕಿಡ್ ಆಗಿ ಅವರಿಬ್ಬರು ರಸ್ತೆಯ ಬದಿಗೆ ಮೋಟಾರ್ ಸೈಕಲ್ ಸಮೇತ ಬಿದ್ದಿದ್ದು ಅದರ ಪರಿಣಾಮ ಪಿರ್ಯಾದಿದಾರರ ಅಣ್ಣನಿಗೆ ತಲೆಗೆ,ಕಣ್ಣಿನ ಬಳಿ ,ಬಾಯಿ ಬಲ ಕಾಲಿಗೆ ರಕ್ತಗಾಯವಾಗಿದ್ದು ಸಹ ಸವಾರನಿಗೆ ಬಲ ಕೈಗೆ ,ತಲೆ ಮತ್ತು ಕಣ್ಣಿನ ಕೆಳಭಾಗಕ್ಕೆ ರಕ್ತ ಗಾಯವಾಗಿರುತ್ತದೆ. ಈ ಅಪಘಾತಕ್ಕೆ ಪಿರ್ಯಾದಿದಾರರ ಅಣ್ಣ ಸುರೇಂದ್ರನು ಆತನ ಮೋಟಾರ್ ಸೈಕಲ್ ನಂಬ್ರ KA-47-J-9175 ನೇದರಲ್ಲಿ ಸಹ ಸವಾರನಾಗಿ ನಾಗೇಶನನ್ನು ಕುಳ್ಳಿರಿಸಿಕೊಂಡು ಬೈಂದೂರಿನಿಂದ ಯಡ್ತರೆ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿ ರಾಷ್ಟ್ರೀಯ ಹೆದ್ದಾರಿ-66 ರ ಪೂರ್ವ ಬದಿಯ ರಸ್ತೆಯ ನಾಕಟ್ಟೆ ಎಂಬಲ್ಲಿ ಅಂಬಿಕಾ ಹೋಟೆಲ್ ನ ಎದುರುಗಡೆ ರಸ್ತೆಯ ತೀರ ಎಡ ಬದಿಗೆ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ಸ್ಕಿಡ್ ಆಗಿ ಮಣ್ಣು ರಸ್ತೆಗೆ ಬೈಕ್ ಸಮೇತ ಅವರಿಬ್ಬರೂ ಬಿದ್ದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ; ಪಿರ್ಯಾದಿದಾರರಾದ ಮಹಮ್ಮದ್ ಸಲೀಂ (38), ತಂದೆ: ದಿ, ಶೇಖ್ ಶಂಶುದ್ದೀನ್, ವಾಸ: ಪೊಲ್ಯ ಹೌಸ್, ಉಚ್ಚಿಲ ಅಂಚೆ, ಬಡಾ ಗ್ರಾಮ, ಕಾಪು ತಾಲೂಕು. ಉಡುಪಿ ಇವರ ಅಣ್ಣ  ಮಹಮದ್ ಆರೀಫ್ ಎಂಬುವವರು ಟೆಂಪೋ ಚಾಲಕ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/04/2021 ರಂದು 13:00 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲ ಬಸ್ಸು ನಿಲ್ದಾಣದ ಬಳಿಯ ಸರ್ವಿಸ್ ರಸ್ತೆಯ ಬದಿಯಲ್ಲಿ ನಿಂತಿರುವ ಸಮಯ KA-20-D-7886 ನೇ ನಂಬ್ರದ ಬಸ್ಸು ಚಾಲಕ ಅಬ್ದುಲ್ ಮುನಾಫ್ ಬಸ್ಸನ್ನು ರಾಷ್ಟ್ರೀಯ ಹೆದ್ದಾರಿ-66 ರ ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಸರ್ವೀಸ್ ರಸ್ತೆಗೆ ಹೋಗಲು ರಸ್ತೆಯ ತೀರಾ ಎಡ ಅಂಚಿಗೆ ಬಸ್ಸನ್ನು ಚಲಾಯಿಸಿ ರಸ್ತೆಯ ಬದಿಯಲ್ಲಿ ನಿಂತಿದ್ದ ಮಹಮ್ಮದ್ ಆರೀಫ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಮ್ಮದ್ ಆರೀಫ್ ರವರು ರಸ್ತೆಗೆ ಬಿದ್ದು, ಅವರ ಎಡ ಭುಜದ ಮೂಳೆ ಮುರಿತದ ಗಾಯವಾಗಿರುತ್ತದೆ, ನಂತರ ಗಾಯಾಳುವನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 14/04/2021 ರಂದು ಮಧ್ಯಾಹ್ನ 1:30 ಗಂಟೆಗೆ ಪಿರ್ಯಾದಿದಾರರಾದ ಶೋಧನ ಖಾರ್ವಿ, ತಂದೆ: ನಾಗೇಶ ಖಾರ್ವಿ, ವಾಸ: ದಾಕುಹಿತ್ಲು, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಹಾಗೂ ಅವರ ಚಿಕ್ಕಪ್ಪ ತಿಮ್ಮಪ್ಪ ಖಾರ್ವಿ ಎಂಬುವವರು ಬೆಣ್ಗೆರೆಯ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಪೂಜಾ ಕಾರ್ಯಕ್ರಮದ ಬಗ್ಗೆ ಗಂಗೊಳ್ಳಿಯ ರಾಮ ಮಂದಿರದ ಎದುರಿನ ರಸ್ತೆಯಲ್ಲಿ ಫೂಟ್‌ಪಾತ್‌ ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಎದುರಿನಿಂದ ತ್ರಾಸಿ ಕಡೆಯಿಂದ ಗಂಗೊಳ್ಳಿ ಕಡೆಗೆ KA-19-HC-4754 ನೇ ಮೋಟಾರ್ ಸೈಕಲನ್ನು ಅದರ ಸವಾರ ಗ್ಲೆನ್ ಕ್ರಿಸ್ತ ಡಿಸೋಜ ಎಂಬುವವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲ ಬದಿಗೆ ಬಂದು ಪಿರ್ಯಾದಿದಾರರ ಚಿಕ್ಕಪ್ಪ ತಿಮ್ಮಪ್ಪ ಖಾರ್ವಿ ಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಅವರ ಎಡ ಕಾಲಿಗೆ ಹಾಗೂ ಸೊಂಟಕ್ಕೆ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಾಧವ. ಕೆ. ಅಸ್ನೋಟಿಕರ್ (62), ತಂದೆ: ದಿ ಕಮಲಾಕರ ಅಸ್ನೋಟಿಕರ್, ವಾಸ: ಕಮಲಾಕರ ಹೌಸ್ ಪದ್ಮನಾಭ ನಗರ ನಂದನಗದ್ದ ಬಾಡಾ ಗ್ರಾಮ ಮತ್ತು ತಾಲೂಕು ಉತ್ತರಕನ್ನಡ ಜಿಲ್ಲೆ ಇವರು ರಾಷ್ಟ್ರೀಯ ಹೆದ್ದಾರಿ 66 ನೇಯದಕ್ಕೆ ಸಂಬಂಧಪಟ್ಟಂತೆ ಅಗತ್ಯ ಇರುವ ಮಣ್ಣನ್ನು ರಾಮಕೃಷ್ಣ ಭಟ್ಟ ರವರ ಜಾಗದಿಂದ ಪಡೆದುಕೊಳ್ಳುವ ಬಗ್ಗೆ ಆಪಾದಿತ ರಾಮಕೃಷ್ಣ ಭಟ್ಟ  ಹಾಗೂ ಆತನ ಮಗ ರಾಮನಾಥ ಭಟ್ಟ ರವರಲ್ಲಿ ಮಾತುಕತೆ ನಡೆಸಿ ದಿನಾಂಕ 13/08/2014 ರಂದು ಮುಂಗಡವಾಗಿ ರಾಮಕೃಷ್ಣ ರವರು ನೀಡಿದ ಅವರ ಮಗನಾದ ರಾಮನಾಥ ಭಟ್ಟ ನ ಸಿಂಡಿಕೆಟ್ ಬ್ಯಾಂಕ್ ಶಿರೂರು ಖಾತೆಗೆ ಕಾರವಾರ ಸಿಂಡಿಕೇಟ್ ಬ್ಯಾಂಕ್ ಮೂಲಕ ರೂಪಾಯಿ 5 ಲಕ್ಷ ಹಣವನ್ನು ಜಮೆ ಮಾಡಿದ್ದು, ದಿನಾಂಕ 14/08/2014 ರಂದು ಈ ವ್ಯವಹಾರದ ಬಗ್ಗೆ ಕರಾರು ಪತ್ರವನ್ನು ಮಾಡಿಕೊಂಡಿದ್ದು, ನಂತರದ ದಿನಗಳಲ್ಲಿ ಆಪಾದಿತರು ಪಿರ್ಯಾದಿದಾರರಿಗೆ ಮಣ್ಣನ್ನು ನೀಡದೇ ಬೇರೆಯವರಿಗೆ ಮಣ್ಣನ್ನು ಮಾರಾಟ ಮಾಡಿದ್ದು, ಪಿರ್ಯಾದಿದಾರರು ಹಣವನ್ನು ವಾಪಾಸು ಕೇಳಿದಾಗ ಮುಂದಕ್ಕೆ ಕೊಡುವುದಾಗಿ ಹೇಳುತ್ತಾ ಬಂದಿದ್ದು, ಪಿರ್ಯಾದಿದಾರರು ಸ್ನೇಹಿತರೊಂದಿಗೆ ದಿನಾಂಕ 14/04/2021 ರಂದು ಹಣದ ಬಗ್ಗ ವಿಚಾರಿಸಲು ಮಧ್ಯಾಹ್ನ ಸಮಯ ಸುಮಾರು 12:00 ಗಂಟೆಗೆ ರಾಮಕೃಷ್ಣ ಭಟ್ಟ ರವರ ಮನೆಗೆ ಹೋಗುವ ದಾರಿಯಲ್ಲಿ ಕಾರಿನಲ್ಲಿ ಹೋಗುತ್ತಾ ಕ್ರಾಸ್ ರಸ್ತೆ ಬಳಿ ರಾಮಕೃಷ್ಣ ಭಟ್ಟ ಹಾಗೂ ಅವರೊಂದಿಗೆ ಇನ್ನೊಬ್ಬ ವ್ಯಕ್ತಿ ಬರುವುದನ್ನು ನೋಡಿ ಪಿರ್ಯಾದಿದಾರರು ಕಾರಿನಿಂದ ಇಳಿದು ಹೋಗಿ ವಿಚಾರಿಸಿದ್ದಕ್ಕೆ ಆರೋಪಿತರಿಬ್ಬರು ಪಿರ್ಯಾದಿದಾರರನ್ನುಅವಾಚ್ಯವಾಗಿ ಬೈದು ಜೀವ ಬೆದರಿಕೆ ಹಾಕಿ ಕೈಯಿಂದ ಕೆನ್ನಗೆ ಬೆನ್ನಿಗೆ ಹೊಡೆದು ಹಲ್ಲೆ ಮಾಡಿದ್ದು, ಪಿರ್ಯಾದಿದಾರರ ಸ್ನೇಹಿತರು ಹಲ್ಲೆಯನ್ನು ತಪ್ಪಿಸಿದ್ದು, ಇದರಿಂದಾಗಿ ಪಿರ್ಯಾದಿರರಿಗೆ ಮೈಕೈಗೆ ಕೆನ್ನಗೆ ಒಳನೋವು ಆಗಿದ್ದು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 341, 504, 417, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಮಲ್ಪೆ: ದಿನಾಂಕ 13/04/2021 ರಂದು ಸಂಜೆ  5:15 ಗಂಟೆಗೆ ಪಿರ್ಯಾದಿದಾರರಾದ ಜೋಯಲ್ ಪ್ರೀತಮ್ (21), ತಂದೆ: ಜೋನ್ಸನ್ ಜಯ ಪ್ರಕಾಶ್‌, ವಾಸ: ಸುನೀತ ವಿಲ್ಲಾ, ಈಶ್ವರ ನಗರ,ತೆಂಕನಿಡಿಯೂರು, ಕೊಡವೂರು ಪೋಸ್ಟ್‌‌‌, ಉಡುಪಿ ಇವರು ಮನೆಯಲ್ಲಿರುವ ಸಮಯ  ಅವರ ನೆರೆಕೆರೆಯ  ಸುಕೇಶ ಆಚಾರ್ಯ , ಸ್ಟಿಫನ್,  ಇತರ ಮೂರು  ಜನರು ಅಕ್ರಮ ಕೂಟ  ಸೇರಿಕೊಂಡು  ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪವೇಶ ಮಾಡಿ  ಆ ಪೈಕಿ ಸುಕೇಶ ಆಚಾರ್ಯನು ಏಕಾಏಕಿಯಾಗಿ ಪಿರ್ಯಾದಿದಾರರ  ಬಟ್ಟೆಯ ಕ್ವಾಲರ ಹಿಡಿದು  ಅವಾಚ್ಯ ಶಬ್ದಗಳಿಂದ ಬೈದಿದ್ದು ಆ ಸಮಯ  ಪಿರ್ಯಾದಿದಾರರು ಸಹ ಆತನಿಗೆ ಬೈದಿದ್ದು , ಸುಕೇಶನ ಜೊತೆ ಬಂದಿದ್ದ ಒಬ್ಬನು ಆತನ ಕೈಯಲ್ಲಿದ್ದ ಸೋಡಾದ ಬಾಟಲಿಯಲ್ಲಿ  ಪಿರ್ಯಾದಿದಾರರ ತಲೆಗೆ ಹಾಗೂ  ಕುತ್ತಿಗೆಗೆ ಹೊಡೆದಿದ್ದು, ಅಲ್ಲದೆ ಸ್ಟಿಪನ್ ಇತನು ಸೋಡಾದ ಬಾಟಲಿ ಚೂರಿನಿಂದ ಪಿರ್ಯಾದಿದಾರರ  ಬೆನ್ನಿಗೆ ಚುಚ್ಚಿದ್ದು ಅಲ್ಲದೆ ಅವರಲ್ಲಿ ಒಬ್ಬನು ಸೋಡಾದ ಬಾಟಲಿಯಿಂದ ಹೊಡೆಯುವಾಗ ಇತರ ನಾಲ್ಕು ಜನರು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಅಲ್ಲದೆ  ಸುಕೇಶ,ಸ್ಟಿಫನ್ ಹಾಗೂ ಇನ್ನಿಬ್ಬರೂ ಕೈ ಮುಷ್ಠಿಯಿಂದ ಪಿರ್ಯಾದಿದಾರರ ಮುಖಕ್ಕೆ  ಹೊಡೆದಿರುತ್ತಾರೆ,ಅಲ್ಲದೆ ಇನ್ನೊಬ್ಬನು ಪಿರ್ಯಾದಿದಾರರ ಬಲ ಕೈಗೆ ಸೋಡಾದ ಬಾಟಲಿಯಿಂದ ಗೀರಿದ್ದು ರಕ್ತ ಗಾಯವಾಗಿರುತ್ತದೆ, ಗಲಾಟೆ ಶಬ್ದ ಕೇಳಿ ಪಿರ್ಯಾದಿದಾರರ  ನೆರೆಕೆರೆಯ ಅವರ  ಸಂಬಂಧಿ  ಸಬಾಸ್ಟಿನ್  ಜತ್ತನ್ನ  ಇವರು ಅಲ್ಲಿಗೆ  ಬಂದಾಗ ಆರೋಪಿತರು ಪಿರ್ಯಾದಿದಾರರಿಗೆ  ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 33/2021 ಕಲಂ:  143, 147, 148, 447., 323, 324, 506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ದಿನಾಂಕ  14/04/2021 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಅನಸ್ತಲ್ ಡಿ’ಸೋಜ (72), ಗಂಡ: ದಿ. ರೈಮಂಡ್‌ ದಿ’ಸೋಜ, ವಾಸ: ಡಿವೈನ್‌ ಮರ್ಸಿ, ಪೌಂಜಿಗುಡ್ಡೆ, ಬಡಾನಿಡಿಯೂರು, ಉಡುಪಿ ತಾಲೂಕು ಇವರ ಸೊಸೆ ಶ್ರೀಮತಿ ಸೋನಿಯಾ  ರವರು  ಬಟ್ಟೆ ಒಗೆಯುವ  ಕಲ್ಲಿನ ಹತ್ತಿರ ಇರುವ ಗೊಬ್ಬರದ ಗಿಡ ಕಿತ್ತ ವಿಷಯದಲ್ಲಿ ಪಾವಂಜಿಗುಡ್ಡೆ  ನಿವಾಸಿಗಳಾದ  ರೋಜರಿಯೋ , ಅವರ ಮಗ ಉರ್ಬನ್ , ಹಾಗೂ ಅವರ ಹೆಂಡತಿ  ವೈಲೆಟ್  ಇವರುಗಳು ಪಿರ್ಯಾದಿದಾರರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ  ಪಿರ್ಯಾದಿದಾರರ ಜೊತೆ  ಜಗಳ ಮಾಡಿ ಉರ್ಬನ್  ಪಿರ್ಯಾದಿದಾರರ ಸೊಸೆ ಸೋನಿಯಾ ಇವರ ಬೆನ್ನಿಗೆ ಹೊಡೆದಿದ್ದು ಆ ಸಮಯ  ರೋಜರಿಯೋ ರವರು ಸೋನಿಯಾ ರವರ ಕೈಯ  ರಟ್ಟೆ ಹಿಡಿದುಕೊಂಡಿದ್ದು , ಪಿರ್ಯಾದಿದಾರರು ಅವರ ಸೊಸೆಯನ್ನು   ಆರೋಪಿತರಿಂದ ಬಿಡಿಸಲು ಬಂದಾಗ ಉರ್ಬನ್ ಏಕಾಏಕಿ ಯಾಗಿ ಪಿರ್ಯಾದಿದಾರರ ಬಲಕೈ ಯನ್ನು ಬಲವಾಗಿ ತಿರುಚಿದ್ದು ಅಲ್ಲದೆ ಪಿರ್ಯಾದಿದಾರರು  ಆತನಿಂದ ತಪ್ಪಿಸಿಕೊಂಡಾಗ  ಅಲ್ಲೆ ಇದ್ದ  ಹಂಚಿನ  ತುಂಡಿನಿಂದ ಆತನು ಪಿರ್ಯಾದಿದಾರರಿಗೆ ಬಿಸಾಡಿದ್ದು , ಹಂಚಿನ ತುಂಡು ಪಿರ್ಯಾದಿದಾರರ  ಕಾಲಿಗೆ ತಾಗಿ ರಕ್ತ ಗಾಯವಾಗಿರುತ್ತದೆ. ಈ ಗಲಾಟೆಯನ್ನು ನೋಡಿ ಪಿರ್ಯಾದಿದಾರರ ತಂಗಿಯ ಅಳಿಯ ಜೇಮ್ಸ್  ರೋಡ್ರಿಗ್ರಸ್  ಬಂದಾಗ ಆರೋಪಿತರು ಬೆದರಿಕೆ ಹಾಕಿ ಹೋಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ:  447,354, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
       
     

ಇತ್ತೀಚಿನ ನವೀಕರಣ​ : 15-04-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080