ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 12/03/2023 ರಂದು ರಾತ್ರಿ 11:15 ಗಂಟೆಗೆ ಮೂಡನಿಡಂಬೂರು ಗ್ರಾಮದ ಬನ್ನಂಜೆ ಸ್ವಾಧೀಷ್ಟ ಹೋಟೆಲ್ ಎದುರುಗಡೆ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ-169A ನೇ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ಆರೋಪಿ KA-19-AB-3312ನೇ ಕಾರಿನ ಚಾಲಕನು ತಾನು ಚಲಾಯಿಸುತ್ತಿದ್ದ ಕಾರನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅಲ್ಲಿಯೇ ಡಿವೈಡರ್ ಬಳಿ ಪಿರ್ಯಾದಿದಾರರಾದ ಅನೀಶ್ (34),ತಂದೆ: ಅನಿಲ್ ಶೆಟ್ಟಿ, ವಾಸ: ಓಂ ಸಾಯಿ ಕೃಪಾ, ಕಡೆಕಾರು ಅಂಚೆ, ಕನ್ನರಪಾಡಿ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು KA-20-EZ-2810 ನೇ ಮೋಟಾರ್ ಸೈಕಲಿನಲ್ಲಿ ಸುನಿಲ್ ರವರನ್ನು ಹಿಂಬದಿ ಸವಾರನ್ನಾಗಿ ಕುಳ್ಳಿರಿಸಿಕೊಂಡು ಕರಾವಳಿಯಿಂದ ಉಡುಪಿ ಕಡೆಗೆ ಹೋಗುವ ರಸ್ತೆಗೆ ತಿರುಗಿಸಲು ಸೂಚನೆಯನ್ನು ನೀಡಿ ನಿಂತುಕೊಂಡಿದ್ದವರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹ ಸವಾರ ಸುನಿಲ್ ರವರು ಬೈಕ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕಾಲಿನ ಗಂಟಿಗೆ ಮತ್ತು ಎಡಕಾಲಿನ ಹೆಬ್ಬರಳಿಗೆ ಜಖಂ ಮತ್ತು ಬಲಕೈಗೆ ತರಚಿದ ರಕ್ತಗಾಯವಾಗಿರುತ್ತದೆ. ಸುನಿಲ್ ರವರ ಬಾಯಿಗೆ ರಕ್ತಗಾಯ ಹಾಗೂ ಮುಂಭಾಗದ ಒಂದು ಹಲ್ಲು ಮುರಿದಿದ್ದು ಅಲ್ಲದೇ ಎಡಕಾಲಿನ ಪಾದದ ಬಳಿ ಒಳಜಖಂ ಆಗಿರುತ್ತದೆ. ಅಫಘಾತಪಡಿಸಿದ ಕಾರಿನ ಚಾಲಕನು ಗಾಯಾಳುಗಳನ್ನು ಹಾಗೂ ಸ್ಥಳೀಯ ಪೊಲೀಸ್ ಠಾಣೆಗೆ ಯಾವುದೇ ಮಾಹಿತಿ ನೀಡದೇ ಸ್ಥಳದಿಂದ ಪರಾರಿಯಾಗಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರು ಮತ್ತು ಸಹ ಸವಾರ ಸುನಿಲ್ ರವರು ಚಿಕಿತ್ಸೆಯ ಬಗ್ಗೆ ಉಡುಪಿ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ: 279, 337, 338 ಐಪಿಸಿ ಮತ್ತು 134(a) &  (b)ಜೊತೆಗೆ 187 ಐಎಮ್ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಹರ್ಷನ್ ಶೆಟ್ಟಿ (21),  ತಂದೆ: ಕೃಷ್ಣ ಶೆಟ್ಟಿ, ವಾಸ: ಮನೆ ನಂ 2ಬಿ, 94ಎ, ಇಂದಿರಾನಗರ 76ನೇ ಬಡಗುಬೆಟ್ಟು, ಕುಕ್ಕಿಕಟ್ಟೆ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 12/03/2023 ರಂದು KA-20-EQ-8334ನೇ ಮೋಟಾರು ಸೈಕಲ್ ನಲ್ಲಿ  ತನ್ನ ದೊಡ್ಡಮ್ಮ ಮಗ ಶಿವಾನಂದ ಹೆಗ್ಡೆ ರವರೊಂದಿಗೆ  ಮೋಟಾರ್ ಸೈಕಲ್ ನಲ್ಲಿ ಹಿಂದಿನಿಂದ  ಸಹ ಸವಾರನಾಗಿ ಕುಳಿತುಕೊಂಡು ತನ್ನ ಅಜ್ಜಿ ಮನೆಯಾದ 92 ಹೇರೂರಿನಿಂದ ದೊಡ್ಡಮ್ಮನ ಮನೆಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಾಸು ಬರುವಾಗ ಬಂಟಕಲ್ಲು-ಹೇರೂರು ಮಾರ್ಗದಲ್ಲಿನ ಮೈದಾನ 2 ನೇ ಅಡ್ಡ ರಸ್ತೆ ಬಳಿ ಸಾರ್ವಜನಿಕ ಕಾಂಕ್ರೀಟ್ ರಸ್ತೆಯಲ್ಲಿ ರಾತ್ರಿ 11:00 ಗಂಟೆಗೆ ತಲುಪುವಾಗ ಶಿವಾನಂದ ಹೆಗ್ಡೆ  ಮೋಟಾರು ಸೈಕಲ್ ನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್  ಹಾಕಿದ್ದರಿಂದ ಬೈಕ್ ನಿಯಂತ್ರಣ ತಪ್ಪಿ  ಇಬ್ಬರೂ  ಬೈಕ್ ಸಮೇತ  ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡಕೈ ಮೊಣಗಂಟಿಗೆ ತೀವ್ರ ಒಳಜಖಂ ಆಗಿದ್ದು ಎಡಭಾಗದ ಎದೆಗೆ ತರಚಿದ ಗಾಯವಾಗಿರುತ್ತದೆ. ಮೋಟಾರು ಸೈಕಲ್ ಸವಾರ ಶಿವಾನಂದ ಹೆಗ್ಡೆಯವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ.  ಮೋಟಾರು ಸೈಕಲ್ ಜಖಂ ಗೊಂಡಿರುತ್ತದೆ. ನಂತರ ಚಿಕಿತ್ಸೆ ಬಗ್ಗೆ  ಉಡುಪಿಯ ಲೊಂಬಾರ್ಡ ಅಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಯ ಸಿಟಿ ಆಸ್ಪತ್ರೆಗೆ ದಾಖಲಿಸಿ ಅಲ್ಲಿನ ವೈದ್ಯಾದಿಕಾರಿಯವರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ದಿನಾಂಕ 13/03/2023 ರಂದು 19:45 ಗಂಟೆಗೆ ಪಿರ್ಯಾದಿದಾರರಾದ ದಿವಾಕರ ಶೆಟ್ಟಿ (46), ತಂದೆ:ಕರಿಯಣ್ಣ ಶೆಟ್ಟಿ, ವಾಸ:ಮೂಕಾಂಬಿಕಾ ಪ್ರಸಾದ ಬೆಳ್ಳಾಲ ಗ್ರಾಮ ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು  ತನ್ನ ಚಿಕ್ಕಪ್ಪ ಶಂಕರ ಶೆಟ್ಟಿಯವರೊಂದಿಗೆ ಅವರ KA-20-EE-7140  ಮೋಟಾರು ಸೈಕಲ್‌ನಲ್ಲಿ ಹಿಂಬದಿ ಸಹಸವಾರರಾಗಿ ಕುಳಿತು ಕಾಲ್ತೋಡು ಕಡೆಯಿಂದ ಬೆಳ್ಳಾಲ ಕಡೆಗೆ ಚಪ್ಪರಮಕ್ಕಿ - ಬೆಳ್ಳಾಲ ರಸ್ತೆಯಲ್ಲಿ ಹೋಗುತ್ತಿದಾಗ ಶಂಕರ ಶೆಟ್ಟಿಯವರು ಮೋಟಾರು ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೆರಾಡಿ ಗ್ರಾಮದ ಹಾಲಾಡಿ ಮದಗದ  ಕೆರೆ ಸಮೀಪ ಮೋಟಾರು ಸೈಕಲ್‌ನ  ವೇಗವನ್ನು ನಿಯಂತ್ರಿಸಲಾಗದೇ ಹತೋಟಿ ತಪ್ಪಿ  ಸ್ಕಿಡ್‌ ಆಗಿ ಮೋಟಾರು ಸೈಕಲ್‌ಸಮೇತ ರಸ್ತೆಗೆ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕಾಲಿನ ಪಾದದ ಮೂಳೆ ಮುರಿತವಾಗಿ ಎಡ  ಕೈ ಬೆರಳಿಗೆ ,ಅಂಗೈಗೆ,  ಬಲ ಕೈಯ  ಮಣೆಗಂಟಿನ ಬಳಿ ರಕ್ತಗಾಯವಾಗಿರುತ್ತದೆ. ಆರೋಪಿಗೂ ಎಡ ಕೈ ಮೊಣಗಂಟಿನ  ಗುದ್ದಿದ ಒಳನೋವು  ಉಂಟಾಗಿರುತ್ತದೆ. ಗಾಯಳುಗಳು ಕುಂದಾಪುರ  ಮಂಜುನಾಥ  ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಪುನೀತ್ ವಸಂತ್ ಹೆಗ್ಡೆ (69), ಗಂಡ: ವಸಂತ್ ಕುಮಾರ್ ಎಸ್ ಹೆಗ್ಡೆ,  ವಾಸ: ಕೇಂಜಾ ಹೊಸ ಮನೆ ಕುತ್ಯಾರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ದಿನಾಂಕ  14/03/2023 ರಂದು ತಮ್ಮ ಕುಟುಂಬದೊಂದಿಗೆ ಮುಂಬಿಯಿಗೆ ಹೋಗಲು ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲು ನಂಬ್ರ 12134 ರಲ್ಲಿ S -3 ಕೋಚ್ ನಲ್ಲಿ ಸೀಟ್ ನಂಬ್ರ 33, 36 ಮತ್ತು 21 ನೇ ಟಿಕೆಟ್ ಬುಕ್ ಮಾಡಿದ್ದು, ಅದರಂತೆ ಮಧ್ಯಾಹ್ನ 03:35 ಗಂಟೆಗೆ ಇಂದ್ರಾಳಿ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತಿದ್ದು, ಪಿರ್ಯಾದಿದಾರರು ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ  ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದು, ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಿದ್ದು ಸೀಟ್ ನಲ್ಲಿ ಕುಳಿತಾಗ ಪಿರ್ಯಾದಿದಾರರ ವ್ಯಾನಿಟಿ ಬ್ಯಾಗ್ ಝಿಫ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನ ಓಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಕಾಣಿಯಾಗಿರುತ್ತದೆ, ಪಿರ್ಯಾದಿದಾರರು ದಿನಾಂಕ 14/03/2023 ರಂದು ಮಧ್ಯಾಹ್ನ 03:35 ಗಂಟೆಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ಪಿರ್ಯಾದಿದಾರರ ವ್ಯಾನಿಟಿ ಬ್ಯಾಗ್ ಝಿಫ್ ನ್ನು ತೆರೆದು ಬ್ಯಾಗ್ ನಲ್ಲಿದ್ದ  ಬಂಗಾರದ ಒಡವೆಗಳನ್ನು ಹಾಗೂ ವ್ಯಾಚ್ ನ್ನು ಕಳವು ಮಾಡಿರುವುದಾಗಿದೆ, ಕಳುವಾದ ಚಿನ್ನಾಭರಣಗಳ ಅಂದಾಜು ತೂಕ 100 ಗ್ರಾಂ  ಆಗಿದ್ದು, ಅಂದಾಜು ಮೌಲ್ಯ 4,00,000/- ಆಗಿರುತ್ತದೆ, ಹಾಗೂ ಕಳುವಾದ ವ್ಯಾಚ್ ನ ಅಂದಾಜು ಬೆಲೆ 3000/-  ಆಗಿರುತ್ತದೆ, ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ 4,03,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ: 379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತರ ಪ್ರಕರಣ

  • ಶಂಕರನಾರಾಯಣ: ಆರೋಪಿ  ಮಹಾಬಲ ಕುಲಾಲ್ (41), ತಂದೆ: ಶೀನ ಕುಲಾಲ್, ವಾಸ: ಅಂಗಡಿ ಹಕ್ಲು ಶಾಲೆಯ ಬಳಿ ಕಕ್ಕುಂಜೆ ಗ್ರಾಮ ಬ್ರಹ್ಮಾವರ ತಾಲೂಕು ಎಂಬಾತ ದಿನಾಂಕ 14/03/2023 ರಂದು 16:10  ಗಂಟೆಗೆ   ಕುಂದಾಪುರ  ತಾಲೂಕಿನ  28  ಹಾಲಾಡಿ ಗ್ರಾಮದ  ಚೋರಾಡಿ  ತಂಗೊಡ್ಲು  ಎಂಬಲ್ಲಿ ಸಾರ್ವಜನಿಕ ರಸ್ತೆಯ ಬದಿಯ ಸೇತುವೆಯ  ಮೇಲೆ ಸಾರ್ವಜನಿಕ  ಸ್ಥಳದಲ್ಲಿ   ಕುಳಿಕೊಂಡು  ಅಕ್ರಮವಾಗಿ ಶರಾಬು ಸೇವನೆ ಮಾಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ : 15 (ಎ) ಕರ್ನಾಟಕ  ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 14/03/2023 ರಂದು ಈರಯ್ಯ ಡಿ ಎನ್, ಪೊಲೀಸ್‌ ಉಪನಿರೀಕ್ಷಕರು (ಕಾ & ಸು), ಕುಂದಾಪುರ ಪೊಲೀಸ್ ಠಾಣೆ ಇವರು ಸಿಬ್ಬಂದಿಯೊಂದಿಗೆ ರೌಂಡ್ಸನಲ್ಲಿ ಇರುವಾಗ  ಕುಂದಾಪುರ ತಾಲೂಕು ಕಸಬಾ ಗ್ರಾಮದ ಫೆರಿ ರಸ್ತೆಯ ಪ್ರಭಾಕರ ಟೈಲ್ಸ ಬಳಿ ಜಂಕ್ಷನ್ ಬಳಿ  ಸಾರ್ವಜನಿಕ ಜಾಗದಲ್ಲಿ  ಇಬ್ಬರು ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದಾಗಿ ಬಂದ  ಮಾಹಿತಿ  ಮೇರೆಗೆ  ಫೆರಿ ರಸ್ತೆಯ ಪ್ರಭಾಕರ ಟೈಲ್ಸ  ಬಳಿ ತಲುಪಿ 1) ರಂಜಿತ್‌ (30), ತಂದೆ:ದಾಸ ಖಾರ್ವಿ,  ವಾಸ:ಮದ್ದುಗುಡ್ಡೆ ಕಸಬಾ ಗ್ರಾಮ ಕುಂದಾಪುರ ತಾಲೂಕು, 2)ಆದಿತ್ಯ(23), ತಂದೆ: ರಾಮ ಖಾರ್ವಿ, ವಾಸ: ಮದ್ದುಗುಡ್ಡೆ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕುಳಿತುಕೊಂಡು ಗ್ಲಾಸಿನಲ್ಲಿ ಮದ್ಯಪಾನವನ್ನು ಹಾಕಿಕೊಂಡು ಕುಡಿಯುತ್ತಿರುವುದು ಕಂಡು ಬಂದು ನೋಡುವಾಗ  ಅವರ ಬಳಿ ಹೋದಾಗ  ಅಲ್ಲಿ 350 ML ನ ಯು ಬಿ ಲೈಟ್‌ ಬೀಯರ್‌ -6 ಹಾಗೂ ಒಂದು  ಪ್ಲಾಸ್ಟಿಕ್ ಗ್ಲಾಸ್‌ ಇರುವುದು ಕಂಡುಬಂದಿರುತ್ತದೆ.   ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 31/2023 ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 14/03/2023 ರಂದು ಪ್ರಸಾದ್‌ ಕುಮಾರ್‌ ಕೆ ಪಿ, ಪೊಲೀಸ್‌ ಉಪನಿರೀಕ್ಷಕರು (ತನಿಖೆ), ಕುಂದಾಪುರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯೊಂದಿಗೆ ಕೊಟೇಶ್ವರ ಕಡೆ ರೌಂಡ್ಸನಲ್ಲಿ ಇರುವಾಗ   ಕುಂದಾಪುರ ತಾಲೂಕು ಬೀಜಾಡಿ ಗ್ರಾಮದ ಸಮುದ್ರ ಕಿನಾರೆ ಬಳಿ  ಸಾರ್ವಜನಿಕ ಜಾಗದಲ್ಲಿ  ಇಬ್ಬರು ಕುಳಿತುಕೊಂಡು ಮದ್ಯಪಾನ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವುದಾಗಿ ಬಂದ  ಮಾಹಿತಿ ಮೇರೆಗೆ  ಬೀಜಾಡಿ ಗ್ರಾಮದ ಸಮುದ್ರ  ಕಿನಾರೆ ಬಳಿ ತಲುಪಿ 1)ನಾರಾಯಣ (34), ತಂದೆ:ಲಕ್ಷ್ಮಣ ಮೊಗವೀರ, ವಾಸ:ಪೂರ್ಣ ದೀಪ ನಿಲಯ, ಕಾಂತೇಶ್ವರಿ ರಸ್ತೆ ಗೋಪಾಡಿ ಪಡು, ಗೋಪಾಡಿ ಗ್ರಾಮ ಕುಂದಾಪುರ ತಾಲೂಕು , 2) ಉದಯ (38), ತಂದೆ: ದಿ. ಕುಷ್ಠ , ವಾಸ: ತೀರ್ಥರೂಪ ನಿಲಯ ಕಾಂತೇಶ್ವರಿ ರಸ್ತೆ ಗೋಪಾಡಿ ಪಡು, ಗೋಪಾಡಿ ಗ್ರಾಮ, ಕುಂದಾಪುರ ತಾಲೂಕು ಇವರು ಕುಳಿತುಕೊಂಡು ಗ್ಲಾಸಿನಲ್ಲಿ ಮದ್ಯಪಾನವನ್ನು ಹಾಕಿಕೊಂಡು ಕುಡಿಯುತ್ತಿರುವುದು ಕಂಡು ಬಂದಿದ್ದು ಅಲ್ಲಿ 650 ML ನ ರಾಯಲ್‌ ಚಾಲೆಂಜ್‌ ಬೀಯರ್‌ ಬಾಟಲಿ -3 ಹಾಗೂ 2  ಪ್ಲಾಸ್ಟಿಕ್ ಗ್ಲಾಸ್‌ಇರುವುದು ಕಂಡುಬಂದಿರುತ್ತದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 32/2023 ಕಲಂ: 15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು:  ದಿನಾಂಕ 14/03/2023 ರಂದು ನಿರಂಜನ ಗೌಡ ಬಿ ಎಸ್,  ಪೊಲೀಸ್ ಉಪ ನಿರೀಕ್ಷಕರು, ಬೈಂದೂರು ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುತ್ತಾ ಶಿರೂರಿನಿಂದ ಬೈಂದೂರು ಕಡೆಗೆ ಬರುತ್ತಿರುವಾಗ  ಯಡ್ತರೆ ಗ್ರಾಮದ ಬೈಂದೂರು ಹೊಸ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಒಬ್ಬ ವ್ಯಕ್ತಿಯು ಮದ್ಯಪಾನ ಮಾಡುತ್ತಿರುವುದಾಗಿ ಮಾಹಿತಿ ನೀಡಿದ ಮೇರೆಗೆ ಹೊಸ ಬಸ್ ನಿಲ್ದಾಣಕ್ಕೆ ಹೋದಾಗ ಬಸ್ ನಿಲ್ದಾಣದ ಪ್ರಯಾಣಿಕರು ಕುಳಿತುಕೊಳ್ಳುವ ತಂಗುದಾಣದ ಕಟ್ಟಡ ಒಳಗೆ ಓರ್ವ ವ್ಯಕ್ತಿಯು ಮದ್ಯಪಾನ ಮಾಡುತ್ತಾ ಕುಳಿತುಕೊಂಡಿದ್ದು,  ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲಾಗಿ ಆತನು ತನ್ನ ಹೆಸರು ರಾಮ ಪೂಜಾರಿ (49), ತಂದೆ: ಮುಡೂರ ಪೂಜಾರಿ, ವಾಸ: ಬೇಡುಮನೆ ಕರಾವಳಿ ಶಿರೂರು ಗ್ರಾಮ ಬೈಂದೂರು ತಾಲೂಕು ಎಂಬುದಾಗಿ ತಿಳಿಸಿದ್ದು, ಆತನು ಕುಳಿತುಕೊಂಡಿದ್ದ ಸ್ಥಳವನ್ನು ಪರಿಶೀಲಿಸಿದಾಗ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳದಲ್ಲಿ 90 ML ನ HYWARDS CHEERS WHISKY ಖಾಲಿಯಾದ ಟೆಟ್ರಾ ಪ್ಯಾಕ್ -1 ಹಾಗೂ 90 ML ನ HYWARDS CHEERS WHISKY ತುಂಬಿರುವ ಟೆಟ್ರಾ ಪ್ಯಾಕ್ -1 ಹಾಗೂ ಮದ್ಯ ಇರುವ ಪ್ಲಾಸ್ಟಿಕ್ ಲೋಟ  ಮತ್ತು ನೀರಿನ ಬಾಟಲಿ -1 ಇರುವುದು ಕಂಡು ಬಂದಿರುತ್ತದೆ.  ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 42/2023 ಕಲಂ:15(ಎ) ಕರ್ನಾಟಕ ಅಬಕಾರಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕುಂದಾಪುರ: ದಿನಾಂಕ 14/03/2023 ರಂದು ಪವನ್ ನಾಯಕ್,  ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಠಾಣೆ ಇವರು  ರೌಂಡ್ಸ್‌ನಲ್ಲಿರುವಾಗ ಠಾಣಾ ವ್ಯಾಪ್ತಿಯ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ವಾಲ್ತೂರು –ಮುಂಬಾರು ಶಾಲೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಓರ್ವ ವ್ಯಕ್ತಿ ಮದ್ಯ ಮಾರಾಟ ಮಾಡುತ್ತಿರುವುದಾಗಿ   ದೊರೆತ  ಮಾಹಿತಿಯ ಮೇರೆಗೆ ನೋಡಲಾಗಿ ಶಾಲೆ ಮುಂದೆ ತನ್ನಲ್ಲಿದ್ದ ಪ್ಲಾಸ್ಟಿಕ್ ತೊಟ್ಟೆಯಲ್ಲಿದ್ದ ಮದ್ಯದ ಪ್ಯಾಕೆಟ್‌ಗಳನ್ನು ಸ್ಥಳದಲ್ಲಿ ಸೇರಿದವರಿಗೆ ನೀಡಿ ಅವರಿಂದ ಹಣ ಪಡೆಯುತ್ತಿದ್ದ ಆರೋಪಿತ ನಾಗರಾಜ ಶೆಟ್ಟಿ (58),  ತಂದೆ: ಮುತ್ತಯ್ಯ ಶೆಟ್ಟಿ, ವಾಸ:ಕಾವ್ರಾಡಿ ವಾಲ್ತೂರು ಕಾವ್ರಾಡಿ ಗ್ರಾಮ ಕುಂದಾಪುರ ತಾಲೂಕು ಎಂಬಾತನನ್ನು  ಹಿಡಿದು ವಿಚಾರಿಸಿದಲ್ಲಿ ಆತ ತಾನು ಮದ್ಯವನ್ನು  ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವುದಾಗಿ ತಿಳಿಸಿದ ಮೇರೆಗೆ ಆತನಲ್ಲಿದ್ದ ಪ್ಲಾಸ್ಟಿಕ್‌‌ಕೈ ಚೀಲ ಹಾಗೂ ಅದರಲ್ಲಿದ್ದ  Original Choice ನ 90 ML ನ 22 ಟೆಟ್ರಾ ಪ್ಯಾಕೆಟ್‌‌‌‌‌‌‌‌ಮತ್ತು MYSORE LANCER 90 ML ನ 6 ಟೆಟ್ರಾ ಪ್ಯಾಕ್  (ಒಟ್ಟು 2520 ML ಮದ್ಯ  ಮೌಲ್ಯ ರೂಪಾಯಿ 980/-) ಹಾಗೂ ಆರೋಪಿಯು  ಮದ್ಯ ಮಾರಾಟದಿಂದ ಸಂಗ್ರಹಿಸಿದ ಹಣ ಎಂಬುದಾಗಿ ತಿಳಿಸಿ ಹಾಜರು  ಪಡಿಸಿದ - 480/- ರೂಪಾಯಿ  ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023 ಕಲಂ: 32, 34 KE ACT ರಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 15-03-2023 10:13 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080