ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಪ್ರಕಾಶ ದೇವಾಡಿಗ (49 ವರ್ಷ) ತಂದೆ: ದಿ. ಶೀನ ದೇವಾಡಿಗ, ವಾಸ: ಶಿವಗಣೇಶ ಕೃಪಾ, ಸಾಲ್ಮರ, ಉಪ್ಪೂರು ಗ್ರಾಮ ಇವರು ದಿನಾಂಕ: 14/03/2023 ರಂದು ಸ್ಕೂಟರ್ ನಲ್ಲಿ ಮನೆಗೆ ಹೋಗುವರೇ ಹಾವಂಜೆ ಕೊಳಲಗಿರಿ ರಸ್ತೆಯಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ರಾತ್ರಿ ಸುಮಾರು 7.00 ಗಂಟೆ ಸಮಯಕ್ಕೆ ಉಪ್ಪೂರು ಗ್ರಾಮದ ಸಾಲ್ಮರ ಎಂಬಲ್ಲಿ ತಲುಪುವಾಗ ಅವರ ಎದುರುಗಡೆಯಿಂದ ಅಂದರೆ ಉಪ್ಪೂರು ಕಡೆಗೆ ರಸ್ತೆಯ ಎಡಬದಿಯಲ್ಲಿ ಆರೋಪಿ ಪಿಯೂಸ್ ಡಿ’ಸೋಜ ರವರು ತನ್ನ ಬಾಬ್ತು ಕೆಎ 20 ಎಎ 3964 ನೇದರ ಪ್ಯಾಸೆಂಜರ್ ಆಟೋರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ, ರಸ್ತೆಯ ತೀರಾ ಬಲಕ್ಕೆ ಚಲಾಯಿಸಿ, ಆಟೋರಿಕ್ಷಾದ ಬಲಬದಿಯಲ್ಲಿ ಉಪ್ಪೂರು ಕಡೆಗೆ ವಿಠ್ಠಲ ದೇವಾಡಿಗರವರು ಸವಾರಿ ಮಾಡುತ್ತಿದ್ದ ಕೆಎ 20 ಇಎಸ್‌8753 ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿದ್ದು, ಪರಿಣಾಮ ವಿಠ್ಠಲ ದೇವಾಡಿಗರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಅವರ ತಲೆಗೆ ತೀವ್ರ ರಕ್ತಗಾಯವಾಗಿದ್ದು, ಸರಿಯಾಗಿ ಮಾತನಾಡುತ್ತಿರಲಿಲ್ಲ. ಅಲ್ಲದೇ ಸ್ಕೂಟರ್ ನ ಮುಂಭಾಗ ಜಖಂಗೊಂಡಿರುತ್ತದೆ. ಈ ಬಗ್ಗೆ  ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ  40/2023 : ಕಲಂ 279, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

    ಬ್ರಹ್ಮಾವರ: ಪಿರ್ಯಾದಿ: ಶೈಲಾ (31 ವರ್ಷ) ಗಂಡ: ಪ್ರವೀಣ ಆಚಾರ್ಯ ವಾಸ: ಗಾಂಧಿನಗರ, 4 ನೇ ಕ್ರಾಸ್, ಕೊಕ್ಕರ್ಣೆ, ಪೆಜಮಂಗೂರು ಗ್ರಾಮ, ಇವರ ಗಂಡನಾದ ಪ್ರವೀಣ್ ಆಚಾರ್ಯ ಎಂಬವರು ಅವರ ಬಾಬ್ತು ಕೆಎ 20 ಇಜಿ 5025 ನೇ ಮೋಟಾರು ಸೈಕಲ್‌ನಲ್ಲಿ ಕೊಕ್ಕರ್ಣೆ ಹೆಬ್ರಿ ಮುಖ್ಯರಸ್ತೆಯಲ್ಲಿ ಸವಾರಿ ಮಾಡಿಕೊಂಡು ಮನೆಗೆ ಹೋಗುತ್ತಾ ರಾತ್ರಿ ಸಮಯ 8.00 ಗಂಟೆ ಸುಮಾರಿಗೆ ಪೆಜಮಂಗೂರು  ಗ್ರಾಮದ ಕೊಕ್ಕರ್ಣೆ ಹಣಾರ್‌ಬೆಟ್ಟು ಎಂಬಲ್ಲಿ ತಲುಪುವಾಗ ಅವರ ಎದುರಿನಿಂದ ಅಂದರೆ ಪೇತ್ರಿ ಕಡೆಯಿಂದ ಕೊಕ್ಕರ್ಣೆ ಕಡೆಗೆ ಆರೋಪಿ ಸುರೇಶ ಎಂಬವರು ಅವರ ಬಾಬ್ತು ಕೆಎ 20 ಇಎಲ್ 6661 ನೇ ಮೋಟಾರು ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಆತನ ತೀರಾ ಬಲಭಾಗಕ್ಕೆ ಸವಾರಿ ಮಾಡಿ, ಪ್ರವೀಣ ಆಚಾರ್ಯ ರವರ ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಇಬ್ಬರೂ ಮೋಟಾರು ಸೈಕಲ್‌ಸಮೇತ ರಸ್ತೆ ಬದಿಯ ಮಣ್ಣು ರಸ್ತೆಗೆ ಬಿದ್ದು,  ಪ್ರವೀಣ ಆಚಾರ್ಯ ರವರ ಮುಖಕ್ಕೆ ತಲೆಗೆ ಪೆಟ್ಟಾಗಿದ್ದು, ಮೂಗಿನಲ್ಲಿ ರಕ್ತ ಸೀರುತ್ತಿದ್ದು ಮಾತಾನಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಹಾಗೂ ಆರೋಪಿಯ ಎಡಕಾಲಿಗೆ ಮುಖಕ್ಕೆ ಪೆಟ್ಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ . 41/2023 : ಕಲಂ 279,  338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

    ಉಡುಪಿ :ಪಿರ್ಯಾದಿ: ಶ್ರೀಮತಿ ಬೇಬಿ ಪ್ರಾಯ: 60 ವರ್ಷ ಗಂಡ: ಜನಾರ್ಧನ  ವಾಸ: ಭಾಸ್ಕರ ಮಾಸ್ಟರರ ಬಾಡಿಗೆ ಮನೆ, ಆಭರಣ ಮೋಟಾರ್ಸ್ ಎದುರು, ಇವರು ದಿನಾಂಕ 15/03/2023 ರಂದು ಮದ್ಯಾಹ್ನ ಸಮಯ ಸುಮಾರು 1:30 ಗಂಟೆಗೆ ಪುತ್ತೂರು ಗ್ರಾಮದ ಬಾಳಿಗಾ ಫಿಶ್ ನೆಟ್‌ಬಳಿ ರಾ.ಹೆ 66 ರಲ್ಲಿ  ಬಸ್ಸಿನಿಂದ ಇಳಿದು ರಸ್ತೆ ದಾಟಿ ಮನೆಗೆ ಹೋಗಲು ರಸ್ತೆ ಬದಿ ನಿಂತಿರುವಾಗ ಯಾವುದೋ ಅಪರಿಚಿತ ಕಪ್ಪು ಬಣ್ಣದ ಮೋಟಾರು ಸೈಕಲ್ ಸವಾರ ತನ್ನ ಮೋಟಾರು ಸೈಕಲನ್ನು ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲ ಕೈ ಮತ್ತು ಬಲ ಕಾಲಿಗೆ ಮೂಳೆಮುರಿತದ ಜಖಂ ಹಾಗೂ ತಲೆಯ ಹಿಂಬದಿಗೆ ರಕ್ತಗಾಯವಾಗಿರುತ್ತದೆ. ಮೋಟಾರು ಸೈಕಲ್ ಸವಾರನು ಸ್ಥಳದಲ್ಲಿ ಮೋಟಾರು ಸೈಕಲನ್ನು ನಿಲ್ಲಿಸದೇ, ಗಾಯಾಳುವನ್ನು ಉಪಚರಿಸದೇ, ಪೊಲೀಸ್ ಠಾಣೆಗೂ ಮಾಹಿತಿ ನೀಡದೇ ಮೋಟಾರು ಸೈಕಲ್ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ    ಅಪರಾಧ ಕ್ರಮಾಂಕ : 30/2023 ಕಲಂ 279 338     ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾಫು: ದಿನಾಂಕ 15/03/2023 ರಂದು 01:25 ರಿಂದ 03:30 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಯು .ವೀರೇಂದ್ರ ಹೆಗ್ಡೆ (49) ತಂದೆ: ದಿ. ವಾಸುದೇವ ಹೆಗ್ಡೆ ವಾಸ: ಮೇನೇಜಿಂಗ್ ಪಾರ್ಟ್ನ ರ್, ಜಯಲಕ್ಷ್ಮೀ ಬಟ್ಟೆ ಅಂಗಡಿ ಉದ್ಯಾವರ, ಉದ್ಯಾವರ ಇವರು ಮೇನೇಜಿಂಗ್ ಪಾರ್ಟ್ನರ್ ಆಗಿ ನಡೆಸಿಕೊಂಡಿರುವ  ಉದ್ಯಾವರ ಗ್ರಾಮದ ಉದ್ಯಾವರ ಜಯಲಕ್ಷ್ಮೀ ಬಟ್ಟೆ ಅಂಗಡಿಯ ನೆಲಮಹಡಿಯ ವಾಶ್ ರೂಂ ಗೆ ಅಳವಡಿಸಿದ ಎಕ್ಸಾಸ್ಟ್ ಫ್ಯಾನ್‌ನ್ನು ಕಿತ್ತು ಅದರ ಮೂಲಕ ಬಟ್ಟೆ ಅಂಗಡಿಗೆ ಒಳಪ್ರವೇಶಿಸಿ ಅಂಗಡಿಯ ನೆಲಮಹಡಿಯ ಕ್ಯಾಶ್ ಕೌಂಟರ್‌ಗೆ ಬಂದು ಅಲ್ಲಿರುವ ಚಿಲ್ಲರೆ ಹಣವನ್ನು ತೆಗೆದುಕೊಂಡು ಬಳಿಕ ಮಹಡಿಯ ಕಛೇರಿಗೆ ಬಂದು ಅಲ್ಲಿನ ಪಿಂಗರ್ ಪ್ರಿಂಟ್ ಇರುವ ಸೇಫ್ ಲಾಕರ್‌ನ ಕೀಯನ್ನು ತಂದು ಕಛೇರಿಯ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ ಹಣದ ಸೇಫ್ ಲಾಕರ್ ಕೀ ತೆಗೆದು ಅದರ ಮೂಲಕ ಹಣವಿಟ್ಟಿದ್ದ ಇನ್ನೊಂದು ಸೇಫ್ ಲಾಕರ್‌ನ್ನು ತೆರೆದು ಅದರಲ್ಲಿದ್ದ  60 ಲಕ್ಷ ರೂಪಾಯಿ ನಗದು ಹಣವನ್ನು  ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2023 ಕಲಂ 457 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  14/03/2023 ರಂದು ಸುಮಾರು 20:30 ಘಂಟೆಗೆ ಪಿರ್ಯಾದಿದಾರರಾದ ಧನಂಜಯ ಚಾತ್ರ (54)  ತಂದೆ, ಸುಬ್ರಾಯ  ಚಾತ್ರ  ವಾಸ, ಕಲ್ಸಂಕ   ಹಳ್ಳಿಹೊಳೆ ಗ್ರಾಮ ಬೈಂದೂರು ಇವರ  ಮನೆಯ  ಬಳಿ ಖಾಲಿ ಜಾಗದಲ್ಲಿ ಒಣಗಲು ಹಾಕಿದ  ಸುಮಾರು 12,000 ರೂಪಾಯಿ ಮೌಲ್ಯದ 16 ಕೆ.ಜಿ ಸಿಪ್ಪೆ ಅಡಿಕೆಯನ್ನು  ಆರೋಪಿಗಳು ಚೀಲದಲ್ಲಿ ಹಾಕಿ  ಕಳವು ಮಾಡಿಕೊಂಡು ಸಾಗಾಟ  ಮಾಡಲು  ಕೆಎ-20 ಇಕೆ- 3069 ನೇ ನಂಬ್ರದ ಸ್ಕೂಟಿಯಲ್ಲಿ ಇಟ್ಟಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 24/2023 ಕಲಂ:  379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿ: ಸಿದ್ದಲಿಂಗಪ್ಪ   ಪ್ರಾಯ: 63 ವರ್ಷ ತಂದೆ: ಪರಸಪ್ಪ್   ವಾಸ: ಮನೆ ನಂಬ್ರ ಕಾರಂತ್‌ ರೈಸ್‌ ಮಿಲ್‌ ಹತ್ತಿರ, ಹಂಗಳೂರ್ ಗ್ರಾಮ ಇವರು SSO KARNATAKA CITIZEN CENTRIC PORTAL APPLICATION ನಲ್ಲಿ ದಾಖಲಿಸಿದಂತೆ ಪಿರ್ಯಾದುದಾರರರು ಹೊಂಡಾ ಶೈನ್‌ ಕಂಪನಿಯ KA 20 EU 0378 ನೇ   ಮೋಟಾರ್‌ ಸೈಕಲ್‌ ವಾಹನದ ನೊಂದಣಿ ಮಾಲೀಕರಾಗಿದ್ದು ಸದ್ರಿ ವಾಹನವನ್ನು  ದಿನಾಂಕ 09/03/2023 ರಂದು ಪಿರ್ಯಾದುದಾರರು ಸಂಜೆ 18:20 ರ ಸುಮಾರಿಗೆ ಕುಂದಾಪುರ ತಾಲೂಕಿನ ಕಸಬಾ ಗ್ರಾಮದ ನಾಯಕ್‌ ಸ್ಟೋರ್ಸ ಅಂಗಡಿಯ ಬಳಿ  ತಮ್ಮ ಮೋಟಾರು ಸೈಕಲನ್ನು ನಿಲ್ಲಿಸಿ ಕೆಲಸಕ್ಕೆ ಹೋದವರು   ಸಂಜೆ 18:30 ಗಂಡೆಗೆ  ವಾಪಸ್ಸು ಬಂದು  ಮೋಟಾರು ಸೈಕಲನ್ನು  ನಿಲ್ಲಿಸಿದ ಸ್ಥಳದಲ್ಲಿ ನೋಡಿದಾಗ  ವಾಹನವು ಸದ್ರಿ ಸ್ಥಳದಲ್ಲಿ ಇರದೆ ಇದ್ದು ನಂತರದಲ್ಲಿ ಮೋಟಾರು ಸೈಕಲನ್ನು ನಿಲ್ಲಿಸಿದ ಸ್ಥಳದ ಸುತ್ತ ಮುತ್ತಲು ಮತ್ತು ಎಲ್ಲಾಕಡೆಯು ಹುಡುಕಾಡಿದರು ಪತ್ತೆಯಾಗಿರುವುದಿಲ್ಲ.  ಸದ್ರಿ ಮೋಟಾರು ಸೈಕಲನ್ನು ಯಾರೊ ಕಳ್ಳರು ಕಳುವು ಮಾಡಿಕೊಂಡು  ಹೊಗಿರುವ ಸಾದ್ಯತೆ ಇದ್ದು ಅದರ ಮೌಲ್ಯ 40,000/- ರೂಪಾಯಿ ಈ ಬಗ್ಗೆ ಕುಂದಾಪುರ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 33/2023  ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

 ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವ: ಪಿರ್ಯಾದಿ: ರಮೇಶ್ ನಾಯಕ್   (42) ತಂದೆ: ದಿ: ಉಪೇಂದ್ರ ನಾಯಕ್ ,ವಾಸ: ಕಲೊಟ್ಟುಮನೆ ನಾಗ ಬನದ ಹತ್ತಿರ ಶಿರ್ವ ಗ್ರಾಮ ಇವರ ತಮ್ಮ ರವೀಂದ್ರ ನಾಯಕ್ (38)  ರವರು ದಿನಾಂಕ 14.03.2023 ರಂದು ಸಂಜೆ 4:00 ಗಂಟೆಯಿಂದ ರಾತ್ರಿ  21:00 ಗಂಟೆಯ ನಡುವಿನ ಅವಧಿಯಲ್ಲಿ ಕಾಪು ತಾಲೂಕು ಶಿರ್ವ  ಗ್ರಾಮದ ಕಲ್ಲೊಟ್ಟು ಮನೆ ನಾಗ ಬನದ ಹತ್ತಿರ ವಾಸ್ತವ್ಯದ  ಮನೆಯ ಬಳಿಯ ಗದ್ದೆಯ  ಬದಿ ಬಿದ್ದು ಮೃತ ಪಟ್ಟಿರುವುದಾಗಿದೆ. ಮೃತರಿಗೆ ಕುಡಿತದ ಚಟವಿದ್ದು ಗದ್ದೆಯಲ್ಲಿ ನಡೆದಾಡುವಾಗ ಆಕಸ್ಮಿಕವಾಗಿ  ಬಿದ್ದು   ಅಥವಾ ಇನ್ನಾವುದೋ ಕಾರಣದಿದಂದ ಮೃತ ಪಟ್ಟಿರಬಹುದಾಗಿದ್ದು ಮರಣದ ಬಗ್ಗೆ ಸಂಶಯವಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  UDR NO 06/2023  U/S 174 (3) CRPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹೆಬ್ರಿ: ಪಿರ್ಯಾದಿ: ಜಯಲಕ್ಷ್ಮಿ ಪ್ರಾಯ: 57 ಗಂಡ: ದಿ/ ಶಂಕರ ಶೆಟ್ಟಿ ವಾಸ: ಕುಂಭ ಕಂಟಿನಿ ಗರಡಿಬೆಟ್ಟು ಕುಚ್ಚೂರು ಗ್ರಾಮ ಇವರ ತಮ್ಮ ನಿತ್ಯಾನಂದ ಶೆಟ್ಟಿ (49 ವರ್ಷ) ಈತನು ಕೂಲಿ ಕೆಲಸ ಮಾಡಿಕೊಂಡಿದ್ದು. ನಿತ್ಯಾನಂದ ಶೆಟ್ಟಿ ಇವರಿಗೆ ಸುಮಾರು ವರ್ಷಗಳಿಂದ ಪಿಟ್ಸ್ ಕಾಯಿಲೆ ಇದ್ದು. ಈ ಬಗ್ಗೆ ಮಣಿಪಾಲ ಅಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮಾಡಿಸಿದ್ದು. ಈಗಲೂ ಮೆಡಿಷಿನ್ (ಟ್ಯಾಬ್ಲೇಟ್) ಇರುತ್ತದೆ. ನಿನ್ನೆ ದಿನ ದಿನಾಂಕ; 14/03/2023 ರಂದು ನಿತ್ಯಾನಂದ ಶೆಟ್ಟಿ ರವರು ಹೆಬ್ರಿ ಗ್ರಾಮದ ಲಯನ್ಸ್ ಸರ್ಕಲ್ ಬಳಿ ಶ್ರೀಧರ ಪೂಜಾರಿ ರವರು ವಹಿಸಿಕೊಂಡಿರುವ ಕಟ್ಟಡದಲ್ಲಿ ಒಂದನೆ ಮಹಡಿಯಲ್ಲಿ ಪ್ಲಾಸ್ಟರಿಂಗ್ ಕೆಲಸದ ಬಗ್ಗೆ ಮೇಸ್ತಿಯವರಿಗೆ ಹೆಲ್ಪರ್ ಅಗಿ ಕೆಲಸ ಮಾಡಿ ಒಂದನೆ ಮಹಡಿಯಿಂದ ಕೆಳಗೆ ಇಳಿದು ಬಂದು ಕೆಳಗೆ ಬಿದ್ದ ಸಿಮೆಂಟ್ ಪುಡಿಯನ್ನು ತೆಗೆಯುತ್ತಿರುವಾಗ ಅವರಿಗೆ ಸಮಯ ಸುಮಾರು ಸಂಜೆ 3-00 ಗಂಟೆಗೆ ಪಿಟ್ಸ್ ಕಾಯಿಲೆ ಉಂಟಾಗಿ ಅಲ್ಲಿಯೇ ನೆಲದ ಮೇಲೆ ಬಿದ್ದ ಪರಿಣಾಮ ಅವರಿಗೆ ಕುತ್ತಿಗೆಯ ಬಳಿ ಒಳನೋವು ಉಂಟಾಗಿರುವುದಲ್ಲದೇ ಬಲಕಾಲಿನ ಗಂಟಿನ ಬಳಿ ಗಾಯವಾಗಿದ್ದು. ಅವರು ಮಾತನಾಡುತ್ತಿರದ ಕಾರಣ ಅವರನ್ನು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಕರೆ ತಂದು ದಾಖಲು ಮಾಡಿದ್ದು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ 7-40 ಗಂಟೆಗೆ ಮೃತ ಪಟ್ಟಿರುವುದಾಗಿದೆ. ನಿತ್ಯಾನಂದ ಶೆಟ್ಟಿಯು ಕೆಲಸ ಮಾಡುತ್ತಿರುವಾಗ ಅತನಿಗೆ ಪಿಟ್ಸ್ ಕಾಯಿಲೆವುಂಟಾಗಿ ಕೆಳಗೆ ಬಿದ್ದು ಅವರ ಕುತ್ತಿಗೆಯ ಬಳಿ ಒಳ ನೋವು ಉಂಟಾಗಿ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ  ಹೆಬ್ರಿ ಪೊಲೀಸ್ ಠಾಣೆ UDR NO 08/2023 U/s 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.



ಇತ್ತೀಚಿನ ನವೀಕರಣ​ : 15-03-2023 06:12 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080