ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ದಿನಾಂಕ 14/03/2022 ರಂದು 15:00 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಹೆನ್ನಾಬೈಲು ಎಂಬಲ್ಲಿನ ಚೀನಾ ಬೇರು ಎಂಬಲ್ಲಿನ ಬಸ್‌ನಿಲ್ದಾಣದ ಬಳಿ ಕುಂದಾಪುರ ಶಿವಮೊಗ್ಗ  ರಾಜ್ಯ  ಹೆದ್ದಾರಿಯಲ್ಲಿ ಆರೋಪಿ ಬಸ್‌ ಚಾಲಕ ಮಂಜುನಾಥ  ತಾನು ಚಲಾಯಿಸುತ್ತಿದ್ದ ಬಸ್‌ ನಂಬ್ರ KA-51-AA-6446 ನ್ನು ಹೊಸಂಗಡಿ ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಸಿದ್ದಾಪುರ ಕಡೆಯಿಂದ ಹೊಸಂಗಡಿ ಕಡೆಗೆ  ಮೊಟಾರು ಸೈಕಲ್‌ನಂಬ್ರ KA-20-EQ-5192 ನೇದರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ  ತನ್ವೀರ್‌ ಕೆ.ಎ (27)  ಇವರಿಗೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದಿಂದ ತನ್ವಿರ್‌ ‌ಕೆ.ಎ. ಬಲ ಕಾಲಿನ ಮೊಣ ಗಂಟಿನ ಬಳಿ, ಬಲ ತೊಡೆಯ ಬಳಿ, ಎದೆಯ ಬಲ ಭಾಗಕ್ಕೆ, ತಲೆಗೆ ಹಾಗೂ ಮೈ ಗೆ ಕೈಗೆ ತೀವೃ ಸ್ವರೂಪದ ರಕ್ತ ಗಾಯ ಮತ್ತು ಗುದ್ದಿನ ಒಳ ಗಾಯದಿಂದ ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿ್ತ್ಸೆಗೆ ಹೋಗುವಾಗಲೇ ಮೃತ ಪಟ್ಟಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2022   ಕಲಂ:  279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಸ್ವಾಭಾವಿಕ ಮರಣ ಪ್ರಕರಣ
  • ಗಂಗೊಳ್ಳಿ: ಪಿರ್ಯಾದಿದಾರರಾದ  ನವೀನ (37), ತಂದೆ: ರಾಮ, ವಾಸ: ಟಿ.ಟಿ ರಸ್ತೆ, ವಡೇರ ಹೋಬಳಿ, ಕುಂದಾಪುರ ಇವರ ಮಾವ ಬಸವ (49) ರವರು ಇಲೆಕ್ಡ್ರಿಕ್ ಕಂಬದ ಕೆಲಸ ಮಾಡಿಕೊಂಡಿದ್ದು,  ದಿನಾಂಕ 14/03/2022 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದು ಪಿರ್ಯಾದಿದಾರರು ಸಂಜೆ 6:30 ಗಂಟೆಗೆ ಕೋಟೇಶ್ವರದಲ್ಲಿ ಇರುವಾಗ ಸ್ನೇಹಿತರೊಬ್ಬರು ಫೋನ್ ಮಾಡಿ ಬಸವರವರಿಗೆ ಹುಷಾರಿಲ್ಲವೆಂಬುದಾಗಿ ಹೇಳಿದ್ದು  ಪಿರ್ಯಾದಿದಾರರು ಮಾವ ಬಸವರವರ ಮೊಬೈಲ್ ಗೆ ಕಾಲ್ ಮಾಡಿದಾಗ ಸ್ವೀಕರಿಸದೇ ಇದ್ದು ಪುನಃ ಕರೆ ಮಾಡಿದಾಗ ಬಸವರವರ ಜೊತೆ ಕೆಲಸ ಮಾಡುವ ಮೇಸ್ತ್ರಿಯವರು ಫೋನ್ ಸ್ವೀಕರಿಸಿ ಬಸವರವರಿಗೆ ಸೀರಿಯಸ್ ಇದೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಬರುವಂತೆ ತಿಳಿಸಿದಂತೆ ಕೂಡಲೇ  ಹೊರಟು ಆಸ್ಪತ್ರೆಗೆ ಬಂದು ಬಸವರವರ ಜೊತೆ ಕೆಲಸ ಮಾಡುವವರಲ್ಲಿ ವಿಚಾರಿಸಲಾಗಿ ಈ ದಿನ ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿಬಲೆ ಎಂಬಲ್ಲಿ ವಿದ್ಯುತ್ ಕಂಬ ಹಾಗೂ ಲೈನ್ ವರ್ಕ್ ಕೆಲಸ ಮುಗಿಸಿ ಹಾರೆ ಮತ್ತು ಹಾರ್ ಗೋಲನ್ನು ತೊಳೆಯುತ್ತಿರುವಾಗ ಸಂಜೆ 5:45 ಗಂಟೆಗೆ ಬಸವವರು ಅಲ್ಲಿಯೇ ಕುಸಿದು ಬಿದ್ದಿದ್ದು ಕೂಡಲೇ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ನಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಂಜೆ 6:10 ಗಂಟೆಗೆ ವೈದ್ಯರು ಪರೀಕ್ಷಿಸಿ ದಾರಿಯಲ್ಲಿಯೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ .  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 05/2022 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಣಿಪಾಲ: ದಿನಾಂಕ 13/03/2022 ರಂದು 16:30 ಗಂಟೆಗೆ ಪಿರ್ಯಾದಿದಾರರಾದ ಗಿರೀಶ ಕುಮಾರ ನಾಯ್ಕ (40), ತಂದೆ: ದಿ. ಪುತ್ತು ನಾಯ್ಕ, ವಾಸ: ನೋಳೆ ಲಚ್ಚಿಲ್‌, ಮೂಡು ಸಗ್ರಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ತಾಯಿ ಮನೆಯ ಹತ್ತಿರ ಪಿರ್ಯಾದಿದಾರರ ಅಣ್ಣಂದಿರಾದ ರಮೇಶ ಮತ್ತು ಗಣೇಶ ಕಾಯಿ ಕೊಯ್ಯವ ವಿಚಾರದಲ್ಲಿ ಗಲಾಟೆ ಮಾಡುವುದನ್ನು ನೋಡಿ ಪಿರ್ಯಾದಿದಾರರು ರಮೇಶನ ಹತ್ತಿರ ಜಗಳವಾಡಬೇಡ ಎಂದು ಕೈ ಹಿಡಿದು ಕರೆದುಕೊಂಡು ಬರುವಾಗ ಆರೋಪಿ ಜಗದೀಶನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದು ಕೋಲಿನಿಂದ ಪಿರ್ಯಾದಿದಾರರ ತಲೆಯ ಹಿಂಬದಿಗೆ ಹೊಡೆದು ಅಲ್ಲಿಯೇ ಇದ್ದ ಇನ್ನೊಬ್ಬ ಆರೋಪಿ ಗಣೇಶನು ಇನ್ನೊಂದು ಕೋಲಿನಿಂದ ಪಿರ್ಯಾದಿದಾರರ ಬೆನ್ನಿಗೆ ಮತ್ತು ಕೈಗಳಿಗೆ ಹೊಡೆದು, ಬಳಿಕ ಆರೋಪಿಗಳಿಬ್ಬರೂ ಸೇರಿ ಪಿರ್ಯಾದಿದಾರರನ್ನು ತಳ್ಳಿ ಕೆಳಗೆ ಬೀಳಿಸಿದರು. ನಂತರ ಆರೋಪಿ ಜಗದೀಶನ ಹೆಂಡತಿ ಅಮೃತ ಮತ್ತು ಇನ್ನೊಬ್ಬ ಆರೋಪಿ ಗಣೇಶನ ಹೆಂಡತಿ ಶ್ಯಾಮಲ ರವರುಗಳು ಕೆಳಗೆ ಬಿದ್ದಿದ್ದ ಪಿರ್ಯಾದಿದಾರರಿಗೆ  ಕೈಗಳಿಂದ ಹೊಡೆಯುವುದನ್ನು ನೋಡಿ ಪಿರ್ಯಾದಿದಾರರ ಹೆಂಡತಿ ಸವಿತ, ಅಣ್ಣ ರಮೇಶ ಹಾಗೂ ಅತ್ತಿಗೆ ರೇವತಿ ರವರುಗಳು ಆರೋಪಿಗಳಿಂದ ತಪ್ಪಿಸಿರುತ್ತಾರೆ. ಆರೋಪಿಗಳಿಬ್ಬರೂ ಪಿರ್ಯಾದಿದಾರರಿಗೆ ಇನ್ನು ಮುಂದಕ್ಕೆ ಜಾಗದ ಪಾಲಿನ ವಿಚಾರದಲ್ಲಿ ತಕರಾರು ಮಾಡಿದರೆ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿದಾರರಿಗೆ ಆರೋಪಿತರು ಹೊಡೆದ ಪರಿಣಾಮ ತಲೆಯ ಹಿಂಬದಿಗೆ ರಕ್ತ ಗಾಯ ಹಾಗೂ ಬಲಕಾಲಿನ ಮೊಣಗಂಟಿನ ಬಳಿ ತರಚಿದ ಗಾಯ ಮತ್ತು ಬೆನ್ನು, ಮೈ ಕೈಗೆ ಒಳ ನೋವಾಗಿರುತ್ತದೆ. ಈ ಬಗ್ಗೆ ಪಿರ್ಯಾದಿದಾರರು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2022, ಕಲಂ; 504, 323, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 13/03/2022 ರಂದು 15:00 ಗಂಟೆಗೆ ಪಿರ್ಯಾದಿದಾರರಾದ ಜಗದೀಶ (36), ತಂದೆ: ದಿ. ಪುತ್ತು ನಾಯ್ಕ, ವಾಸ: ನೋಳೆ ಲಚ್ಚಿಲ್‌, ಮೂಡು ಸಗ್ರಿ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರ ಮೂಲ ಮನೆಯ ಹತ್ತಿರ ಇರುವ ತೆಂಗಿನ ಮರದಿಂದ ತೆಂಗಿನ ಕಾಯಿ ಕೊಯ್ಯವ ವಿಚಾರದಲ್ಲಿ ಆರೋಪಿ ರಮೇಶ್‌ ನಾಯ್ಕ ಆತನ ಮಗ ರತನ್‌ ಮತ್ತು  ಆರೋಪಿ ಗಿರೀಶ್‌ ಕುಮಾರ್‌ ರವರುಗಳು ಪಿರ್ಯಾದಿದಾರರಿಗೆ ಅವಾಚ್ಯ ಶಬ್ಧಗಳಿಂದ ಬೈದು  ಹೊಡೆದಿರುತ್ತಾರೆ. ನಂತರ ತಡೆಯಲು ಬಂದ ತಾಯಿಯ ಕೈಯಲ್ಲಿದ್ದ ಊರುಗೋಲನ್ನು ಎಳೆದು ಹಿಡಿದುಕೊಂಡು ಆರೋಪಿ ಗಿರೀಶ್‌ ಕುಮಾರ್‌ ಪಿರ್ಯಾದಿದಾರರಿಗೆ ಹೊಡೆದು ಕೆಳಗೆ ಬೀಳಿಸಿ  ದೈಹಿಕ ಹಲ್ಲೆ ಮಾಡಿರುತ್ತಾನೆ. ಆ ಸಮಯದಲ್ಲಿ ತಡೆಯಲು ಬಂದ ಪಿರ್ಯಾದಿದಾರರ ಅಣ್ಣ ಗಣೇಶ್‌ನಾಯ್ಕ ರವರಿಗೂ ಹೊಡೆದು  ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಬೈಯುತ್ತಾ  ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ;  504, 323, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಪಿರ್ಯಾದಿದಾರರಾದ ಪ್ರಮೋದಾ ಕುಲಾಲ್ (42), ಗಂಡ: ಪದ್ಮನಾಭ, ವಾಸ: ಈಶ್ವರ ನಗರ ಬಲ್ಲಾಡಿ ಮುದ್ರಾಡಿ ಗ್ರಾಮ ಹೆಬ್ರಿ ತಾಲೂಕು ಇವರು ಬಲ್ಲಾಡಿ ಗೇರು ಬೀಜ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು ಅವರ ಪರಿಚಯದ ಬಲರಾಮ ಎಂಬುವವರು ಯಾವುದೋ ವಿಚಾರದಲ್ಲಿ ಪಿರ್ಯಾದಿದಾರರ ಮೇಲೆ ಕೋಪಗೊಂಡು ದಿನಾಂಕ 14/03/2022 ರಂದು ಮಧ್ಯಾಹ್ನ 01:00 ಗಂಟೆಗೆ ಮುದ್ರಾಡಿ ಗ್ರಾಮದ ಈಶ್ವರ ನಗರ ಬಲ್ಲಾಡಿ ಎಂಬಲ್ಲಿರುವ ಮನೆಗೆ  ಪ್ರಮೋದಾ ಕುಲಾಲ ರವರು ಮನೆಯ ಹತ್ತಿರದ ರಸ್ತೆಯಲ್ಲಿ ಊಟಕ್ಕೆ ನಡೆದುಕೊಂಡು ಬರುತ್ತಿರುವಾಗ ಅವರನ್ನು ಆಪಾದಿತ ಬಲರಾಮನು ಅಡ್ಡಗಟ್ಟಿ ನಿಲ್ಲಿಸಿ ಅವಾಚ್ಯ ಶಬ್ದದಿಂದ ಬೈದು ಕೈಯಿಂದ ಎಳೆದು ಆತನ ಇನ್ನೊಂದು ಕೈಯಲ್ಲಿದ್ದ ಕತ್ತಿಯಿಂದ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ  ಎಡ ಕುತ್ತಿಗೆಯ ಬಳಿ ಕಡಿದ ಪರಿಣಾಮ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 10/2022 ಕಲಂ: 341, 504, 354(B), 326, 307 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 15-03-2022 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080