ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಘವೇಂದ್ರ ಎನ್ ಜಿ (40), ತಂದೆ: ಗೋಪಾಲ, ವಾಸ: ನಂದನವನ ಗ್ರಾಮ ಕೆರ್ಗಾಲು ಅಂಚೆ, ಬೈಂದೂರು ತಾಲೂಕು ಇವರು ದಿನಾಂಕ 14/03/2022 ರಂದು  ಬೆಳಿಗ್ಗೆ 11:30 ಗಂಟೆಗೆ ಕಂಬದಕೋಣೆ ಜಂಕ್ಷನ್  ಬಳಿಯ  ಕಂಪ್ಯೂಟರ್ ಸೆಂಟರ್ ಗೆ ಹೋಗಿರುವ ಸಮಯ  ಪಿರ್ಯಾದಿದಾರರ ಪರಿಚಯದ ಪಾರ್ವತಿ ಎಂಬುವವರು  ಕಂಬದಕೋಣೆ   ಗ್ರಾಮದ ಶ್ರೀ ರಾಮ ಕೋ.ಆಪರೇಟಿವ್ ಸೊಸೈಟಿಯ  ಪಕ್ಕದಲ್ಲಿರುವ  ಜೆರಾಕ್ಸ್   ಅಂಗಡಿಯ ಬಳಿಯ ಎಡ ಬದಿಯ ಮಣ್ಣು  ರಸ್ತೆಯಲ್ಲಿ ನಿಂತುಕೊಂಡಿರುವಾಗ ಆರೋಪಿ  ಗಿರೀಶ್ ಅವಭ್ರತ KA-20-EM-4988  ನೇ ಮೋಟಾರು  ಸೈಕಲ್ ನ್ನು ಕಂಬದಕೋಣೆ ಜಂಕ್ಷನ್ ನಿಂದ  ರೈತರ ಸೇವಾ ಸಹಕಾರಿ ಬ್ಯಾಂಕ್ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿಕೊಂಡು ಬಂದು ಜೆರಾಕ್ಸ್ ಅಂಗಡಿಯ ಬಳಿಯ ಎಡ ಬದಿಯ  ಮಣ್ಣು ರಸ್ತೆಯಲ್ಲಿ ನಿಂತುಕೊಂಡಿದ್ದ ಪಾರ್ವತಿ ರವರಿಗೆ  ಡಿಕ್ಕಿ ಹೊಡೆದ ಪರಿಣಾಮ  ಪಾರ್ವತಿ ರವರು ನೆಲಕ್ಕೆ ಬಿದ್ದು  ತಲೆಯ ಹಿಂಬಾಗಕ್ಕೆ ತೀವ್ರ ತರಹದ ರಕ್ತ ಗಾಯವಾದವರನ್ನು  ಚಿಕಿತ್ಸೆ  ಬಗ್ಗೆ ಕಿರಿಮಂಜೇಶ್ವರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು  ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ  ಆಸ್ಪತ್ರೆ  ಅಜ್ಜರಕಾಡಿಗೆ  ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಪಾರ್ವತಿ ರವರನ್ನು ಜಿಲ್ಲಾ  ಆಸ್ಪತ್ರೆ  ಅಜ್ಜರಕಾಡಿಗೆ  ಕರೆದುಕೊಂಡು ಹೋಗಿ  ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 14/03/2022  ರಂದು  ಸಂಜೆ 06:30 ಗಂಟೆಗೆ, ಕುಂದಾಪುರ ತಾಲೂಕು, ಕಟ್‌ಬೇಲ್ತೂರು ಗ್ರಾಮದ ದಯಾಸಾಗರ ಸರ್ವಿಸ್‌‌‌ಸ್ಟೇಶನ್‌‌‌/ ಗ್ಯಾರೇಜ್‌‌‌ ಬಳಿ ರಸ್ತೆಯಲ್ಲಿ,  ಆಪಾದಿತ  ಕಿಶನ್‌‌‌ಪೂಜಾರಿ   KA-20-EG-5360 ನೇ ಬೈಕಿನಲ್ಲಿ ಪಿರ್ಯಾದಿದಾರರಾದ  ಪ್ರಭು ಹಡಗಲಿ(20), ತಂದೆ:ಹನುಮಂತಪ್ಪ ಹಡಗಲಿ, ವಾಸ:ಹದಳಿ ಗ್ರಾಮ ಮತ್ತು ಅಂಚೆ ನ್ರಗುಂದ ತಾಲೂಕು ಗದಗ ಜಿಲ್ಲೆ ಇವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಹೆಮ್ಮಾಡಿ  ಕಡೆಯಿಂದ  ಕಟ್‌ಬೇಲ್ತೂರು ಕಡೆಗೆ ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಸವಾರಿ ಮಾಡಿಕೊಂಡು ಬಂದು, ಯಾವುದೇ  ಸೂಚನೆ  ನೀಡದೇ  ರಸ್ತೆಯ ಬಲಬದಿಯ ದಯಾಸಾಗರ ಸರ್ವಿಸ್‌‌‌ಸ್ಟೇಶನ್‌‌‌/ ಗ್ಯಾರೇಜ್‌‌‌ಗೆ  ತಿರುಗಿಸಿ  ಬೈಕಿನ ಹಿಂಬದಿಯಲ್ಲಿ  ಅದೇ ದಿಕ್ಕಿನಲ್ಲಿ ಹಂಜ ಸಾಹೇಬ್‌‌ ಎಂಬುವವರು KA-20-X-0760ನೇ ಬೈಕಿನಲ್ಲಿ ಲೋಹಿತ್‌ ಎಂಬುವವರನ್ನು ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ  ಬೈಕ್‌ ‌ಆಪಾದಿತನ ಬೈಕಿಗೆ ತಾಗಿ ಅಪಘಾತಕ್ಕೆ ಒಳಗಾಗಿ ವಾಹನಗಳ ಸಮೇತ  ರಸ್ತೆಗೆ ಬಿದ್ದು,  ಕಿಶನ್‌ ‌‌ಪೂಜಾರಿ, ಪ್ರಭು  ಹಡಗಲಿ ಹಾಗೂ   ಲೋಹಿತ್‌ ರವರು ಗಾಯಗೊಂಡು ಕುಂದಾಪುರ ಚಿನ್ಮಯಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದಿದ್ದು, ಗಂಭೀರ ಗಾಯಗೊಂಡ  ಲೋಹಿತ್‌ರವರು  ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

 • ಬ್ರಹ್ಮಾವರ: ದಿನಾಂಕ 12/03/2022 ರಂದು ಬೆಳಿಗ್ಗೆ 10:00 ಗಂಟೆಯ ಸಮಯದಲ್ಲಿ ಬ್ರಹ್ಮಾವರ ತಾಲೂಕು ಕಛೇರಿಯ ಹಿಂಭಾಗದ ಆವರಣದೊಳಗೆ ಇದ್ದ ಜನರೇಟರ್‌ ನ್ನು ಆನ್‌ ಮಾಡುವ ಬಗ್ಗೆ ಕಛೇರಿಯವರು ಹೋದಾಗ ಜನರೇಟರ್‌ಗೆ ಅಳವಡಿಸಿದ್ದ ರೂಪಾಯಿ 12,000/- ಮೌಲ್ಯದ ಬ್ಯಾಟರಿಯನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 40/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀ ಪ್ರಶಾಂತ ಹೆಗ್ಡೆ (30 ), ತಂದೆ : ಜಯರಾಮ ಹೆಗ್ಡೆ, ವಾಸ: ವೈಲಂಗಡಿ ಮನೆ ಹರಿಖಂಡಿಗೆ ಅಂಚೆ ಬೈರಂಪಳ್ಳಿ ಗ್ರಾಮ  ಉಡುಪಿ ತಾಲೂಕು ಇವರು  ದಿನಾಂಕ 14/03/2022 ರಂದು ತನ್ನ ಸ್ನೇಹಿತ ಪ್ರವೀಣ ಶೆಟ್ಟಿ ಯವರೊಂದಿಗೆ ಪ್ರವೀಣ ಶೆಟ್ಟಿ ಯವರ  ಕಾರಿನಲ್ಲಿ ಪ್ರವೀಣ ಶೆಟ್ಟಿ ಯವರ ಸಂಬಂದಿಕರ ವೈಕುಂಟ ಕಾರ್ಯಕ್ರಮಕ್ಕೆ ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪಕ್ಕೆ ಹೋಗುತ್ತಿದ್ದ ಸಮಯ 12:45 ಗಂಟೆಗೆ ಸಾಂತ್ಯಾರು ಪಂಚಾಯತ್ ಕಛೇರಿಯ ಎದುರಿನಲ್ಲಿ ಪಿರ್ಯಾದಿದಾರರ ಪರಿಚಯದ ದಿನೇಶ್  ಹೆಗ್ಡೆಯವರು ಅವರ ಸ್ವಿಪ್ಟ್ ಕಾರಿನಲ್ಲಿ ಬಂದು ಪಿರ್ಯಾದಿದಾರರ ಕಾರನ್ನು ಅಡ್ಡ ಹಾಕಿ ಪಿರ್ಯಾದಿದಾರರನ್ನು ಉದ್ದೇಶಿಸಿ ನೀನು ನನಗೆ ಕೊಡಬೇಕಾದ 50,000 ರೂಪಾಯಿಯನ್ನು ಯಾವಾಗ ಕೊಡುತ್ತೀಯಾ ಎಂದು ಕೇಳಿ ಏಕಾ ಏಕಿ ಪಿರ್ಯಾದಿದಾರರನ್ನು ವಾಹನದಿಂದ ಕೆಳಗೆ ಎಳೆದು ಕೈ ಯಿಂದ ಹೊಡೆದು ಕಾಲಿನಿಂದ ತುಳಿದು ಅವರು ಹಾಕಿದಂತಹ ಟೀಶರ್ಟನ್ನು ಹರಿದು ಹಾಕಿ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅವರು ಹಲ್ಲೆ ಮಾಡಿರುವುದರಿಂದ ಪಿರ್ಯಾದಿದಾರರಿಗೆ ನೋವು ಉಂಟಾಗಿದ್ದು ಅವರು ಚಿಕಿತ್ಸೆ ಬಗ್ಗೆ  ಉಡುಪಿಯ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 11/2022 ಕಲಂ : 341, 323, 504  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಶಂಕರನಾರಾಯಣ: ದಿನಾಂಕ  16/11/2021  ರಂದು  12:00  ಗಂಟೆಗೆ  ಪಿರ್ಯಾದಿದಾರರಾದ ಶ್ರೀಕಾಂತ  ಕುಲಾಲ್(33),  ತಂದೆ: ಮಹಾಲಿಂಗ, ವಾಸ:  ಆಜ್ರಿ ಗ್ರಾಮ ಕುಂದಾಪುರ ತಾಲೂಕು ಇವರ   ವಾಸ್ತವ್ಯದ  ಮನೆಗೆ ಆರೋಪಿಗಳಾದ 1. ಸಂಜೀವ ಕುಲಾಲ್ (63), ತಂದೆ: ಮಾಹಾಲಿಂಗ  ಕುಲಾಲ್, ವಾಸ: ಮೂಡಬಗ್ಗೆ ಅಂಪಾರು ಗ್ರಾಮ ಕುಂದಾಪುರ  ತಾಲೂಕು, 2. ಗುಲಾಬಿ (50),  ಗಂಡ:ಸಂಜೀವ  ಕುಲಾಲ್,  ವಾಸ: ಬೀಡಿಕಡು ಮನೆ ಹಾಲು  ಡೈರಿಯಬಳಿ  ಕೊರ್ಗಿ ಗ್ರಾಮ ಕುಂದಾಪುರ  ತಾಲೂಕು, 3. ನರಸಿಂಹ (70), ತಂದೆ: ಮಹಾಲಿಂಗ, ವಾಸ: ಮುಡಬಗ್ಗೆ ಅಂಪಾರು ಗ್ರಾಮ ಕುಂದಾಪುರ  ತಾಲೂಕು, 4. ಶಂಕರ ಕುಲಾಲ್ (55), ತಂದೆ: ಮಹಾಲಿಂಗ ವಾಸ, ಮೂಡ ಬಗ್ಗೆ ಅಂಪಾರು  ಗ್ರಾಮ ಕುಂದಾಪುರ  ತಾಲೂಕು , 5, ಅಶ್ವಿನಿ ಎಮ್‌ಎಸ್,  ಗಂಡ:   ಶ್ರೀಕಾಂತ  ವಾಸ, ಬೀಡಿಕಡು ಮನೆ ಹಾಲು  ಡೈರಿಯಬಳಿ  ಕೊರ್ಗಿ ಗ್ರಾಮ ಕುಂದಾಪುರ    ತಾಲೂಕು ಇವರು  ಅಕ್ರಮ ಪ್ರವೇಶ  ಮಾಡಿ  ಅವಾಚ್ಯ ಶಬ್ದದಿಂದ  ಬೈದು   ಮರದ  ದೊಣ್ಣೆ  ಹಾಗೂ ಕೈಯಿಂದ ಹಲ್ಲೆ  ಮಾಡಿ ಬೆದರಿಕೆ  ಹಾಕಿ  ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022  ಕಲಂ:   447, 323, 506(2) ಜೊತೆಗೆ  34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      
 • ಬೈಂದೂರು: ಪಿರ್ಯಾದಿದಾರರಾದ ಪ್ರಶಾಂತ್ ಪೂಜಾರಿ (36),  ತಂದೆ: ನಾರಾಯಣ ಪೂಜಾರಿ, ವಾಸ: ಕರಾವಳಿ  ಕರೀನ ಹಿತ್ಲು , ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ಯಡ್ತರೆ  ಗ್ರಾಮದ ಸರ್ವೆ ನಂಬ್ರ 224/16  3.07 ಎಕ್ರೆ ಸ್ಥಳದಲ್ಲಿ ಅಡಿಕೆ  ಗಿಡಗಳನ್ನು ನೆಟ್ಟು  ಕೃಷಿ ಮಾಡಿದ್ದು, ದಿನಾಂಕ 13/03/2022 ರಂದು 17:00 ಗಂಟೆಗೆ  ಆರೋಪಿರಾದ ದುರ್ಗಯ್ಯ ಪೂಜಾರಿ,  ಕಿಶೋರ ಪೂಜಾರಿ,ಕಿರಣ್ ಪೂಜಾರಿ, ದುರ್ಗಿ ಪೂಜಾರ್ತಿ , ಈರಪ್ಪ ಪೂಜಾರಿ, ಕೃಷ್ಣಿ ಪೂಜಾರ್ತಿ , ರಾಘು ಪೂಜಾರಿ,  ಪವಿತ್ರ ಪೂಜಾರ್ತಿ , ಚಂದ್ರ ಪೂಜಾರಿ, ಪ್ರವೀಣ್ ಪೂಜಾರಿ, ಅಣ್ಣಪ್ಪ ಪೂಜಾರಿ, ಸುಜಾತ ಪೂಜಾರಿ,ಸಚಿನ್ ಪೂಜಾರಿ, ನಿತಿನ ಪೂಜಾರಿ, ಚಿಕ್ಕಯ್ಯ ಪೂಜಾರಿ, ಪಾರ್ವತಿ  ಪೂಜಾರ್ತಿ, ಪ್ರದೀಪ ಪೂಜಾರಿ, ಶಂಕರ ಪೂಜಾರಿ, ಲಕ್ಷೀ ಪೂಜಾರ್ತಿ, ಸುರೇಶ್ ಪೂಜಾರಿ ಹಾಗೂ ಇತರ 5 ಜನರು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿ ಪಿರ್ಯಾದಿದಾರರ ಜಾಗಕ್ಕೆ  ಅಕ್ರಮ ಪ್ರವೇಶ ಮಾಡಿ ದುರ್ಗಯ್ಯ  ಪೂಜಾರಿ, ಅಣ್ಣಪ್ಪ ಪೂಜಾರಿ ಚಂದ್ರ ಪೂಜಾರಿ, ಪ್ರದೀಪ ಪೂಜಾರಿ, ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡು ಬಂದು ದುರ್ಗಯ್ಯ  ಪೂಜಾರಿಯು ಅಡಿಕೆ ಸಸಿಗಳನ್ನು ಕೀಳಿ ಎಂದು ಹೇಳಿದ್ದು  ಎಲ್ಲರೂ  ಒಟ್ಟಾಗಿ 30 ಅಡಿಕೆ ಸಸಿಗಳನ್ನು ಕಿತ್ತು ರಾಶಿ  ಹಾಕಿದ್ದು  ಆಗ ಚಂದ್ರ ಪೂಜಾರಿಯು ಅಡಿಕೆ ಗಿಡಗಳನ್ನು ಇಲ್ಲೆ ಇಟ್ಟರೆ ಪುನ:  ನೆಡುತ್ತಾರೆ ಎಂಬುದಾಗಿ  ಪ್ರಚೋದಿಸಿದ್ದು  ಆಗ 30 ಅಡಿಕೆ ಸಸಿಗಳನ್ನು ಅಲ್ಲಿಂದ ತೆಗೆದುಕೊಂಡು ಹೋಗಿದ್ದು ಆಗ ಪಿರ್ಯಾದಿದಾರರು ವಿರೋದಿಸಿದ್ದಕ್ಕೆ  ಕತ್ತಿಯನ್ನು  ತೋರಿಸಿ  ಜೀವ ಬೆದರಿಕೆ ಹಾಕಿ  ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2022 ಕಲಂ: 143, 147, 148, 447, 504, 506, 109, 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-03-2022 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080