ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ದಿನಾಂಕ 13/03/2021 ರಂದು 13:30 ಗಂಟೆಗೆ ಪಿರ್ಯಾದಿದಾರರಾದ  ಸಿ ರವಿರಾಜ್ ಶೆಟ್ಟಿ (50), ತಂದೆ:ಹೆರಿಯಣ್ಣ ಶೆಟ್ಟಿ,  ವಾಸ: ಹಳಗೆರಿ ಕಂಬದಕೋಣೆ ಗ್ರಾಮ ಬೈಂದೂರು ತಾಲೂಕು ಇವರು ತನ್ನ ಸ್ನೇಹಿತ ಪ್ರಭಾಕರ ಶೆಟ್ಟಿಯವರ ಮೋಟಾರ್ ಸೈಕಲಿನಲ್ಲಿ ಹಳಗೇರಿಯಿಂದ ನಾಗೂರು ಕಡೆಗೆ ಪ್ರಯಾಣಿಸುತ್ತಾ ಮಧ್ಯಾಹ್ನ 1:30 ಗಂಟೆಗೆ ಹಳಗೇರಿ ಸಿದ್ದಿ ವಿನಾಯಕ ಗೇರು ಬೀಜ ಪ್ಯಾಕ್ಟರಿ ಸಮೀಪ ತಲುಪಿದಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ಎದುರು ಮೋಟಾರ್ ಸೈಕಲ್ KA-20-EJ-5139ನೇದು ಹೋಗುತ್ತಿದ್ದು ಮೋಟಾರ್ ಸೈಕಲ್ KA-20-EE-1303 ನೇದರ ಸವಾರನು ತನ್ನ ಮೋಟಾರ್ ಸೈಕಲನ್ನು ಹಳಗೇರಿಯಿಂದ ನಾಗೂರು ಕಡೆಗೆ ಅತೀ ವೆಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಓವರ್ ಟೇಕ್ ಮಾಡಿ ರಸ್ತೆಯ ಎಡ ಬದಿಗೆ ಚಲಾಯಿಸಿ KA-20-EJ-5139ನೇದಕ್ಕೆ ಡಿಕ್ಕಿ ಹೊಡೆದ ಪರಿಣಾಮ KA-20-EJ-5139ನೇದರ ಸವಾರನು ರಸ್ತೆಗೆ ಬಿದ್ದಿದ್ದು ಪಿರ್ಯಾದಿದಾರರು ಮೋಟಾರ್ ಸೈಕಲ್ ನಿಲ್ಲಿಸಿ ಹತ್ತಿರ ಹೋಗಿ ನೋಡಲಾಗಿ ಮೋಟಾರ್ ಸೈಕಲ್ ಸವಾರನು ಪರಿಚಯದ ಸುಧಾಕರ ಎಂಬುವವರಾಗಿದ್ದು ಅವರಿಗೆ ಬಲ ಕೈಗೆ ಗಾಯವಾಗಿ ಮೈ ಕೈಗೆ ತರಚಿದ ಗಾಯವಾಗಿದ್ದು ಗಾಯಾಳುವನ್ನು ಪಿರ್ಯಾದಿದಾರರು ಕುಂದಾಪುರ ವಿವೇಕ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಅಲ್ಲಿ ಒಳರೋಗಿಯಾಗಿ ದಾಖಲಾಗಿದ್ದು , ಆರೋಪಿ ಮೋಟಾರ್ ಸೈಕಲ್ KA-20-EE-1303ನೇದರ ಸವಾರನ ಹೆಸರು ಸದಾಶಿವ ನಾಯರಿ  ಎಂಬುದಾಗಿ ತಿಳಿಯಿತು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಅಜೆಕಾರು: ಪಿರ್ಯಾದಿದಾರರಾದ ಕುಸುಮ (35), ಗಂಡ: ವಾಸುದೇವ ನಾಯಕ್, ವಾಸ: ಓಂ ನಿವಾಸ, ತೆಂಕಬೆಟ್ಟು, ಹೆರ್ಮುಂಡೆ ಗ್ರಾಮ, ಕಾರ್ಕಳ ತಾಲೂಕು ಇವರ ತಂದೆ ಸದಾನಂದ ನಾಯಕ್ (75) ಎಂಬುವವರು ಕಾರ್ಕಳ ತಾಲೂಕು ಹೆರ್ಮುಂಡೆ ಗ್ರಾಮದ ತೆಂಕಬೆಟ್ಟು ಓಂಸಾಯಿ ನಿವಾಸ ಮನೆಯಿಂದ ದಿನಾಂಕ 13/03/2021 ರಂದು 19:00 ಗಂಟೆಗೆ ಯಕ್ಷಗಾನಕ್ಕೆ ಹೋಗುವುದಾಗಿ ಹೇಳಿ ಹೋದವರು ಬೆಳಿಗ್ಗೆಯಾದರೂ ಬಾರದೇ ಇದ್ದುದರಿಂದ ದಿನಾಂಕ 14/03/2021 ರಂದು ಮಧ್ಯಾಹ್ನದ ವರೆಗೆ ಸುತ್ತಮುತ್ತಲಿನ ಪರಿಸರಗಳಲ್ಲಿ ಹುಡುಕಾಡಿದಾಗ ಮನೆಯ ಸ್ವಲ್ಪ ದೂರದಲ್ಲಿರುವ ಬಾವಿಯಲ್ಲಿ ಸದಾನಂದ ನಾಯಕ್ ರವರ ಮೃತದೇಹ ಮತ್ತು ಅವರು ಬಳಸುತ್ತಿದ್ದ ಚಪ್ಪಲಿ, ಬೈರಾಸುಗಳು ಬಾವಿನೀರಿನಲ್ಲಿ ಕಂಡುಬಂದಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 01/2021 ಕಲಂ: 174(C) CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಜುಗಾರಿ ಪ್ರಕರಣಗಳು

 • ಹಿರಿಯಡ್ಕ: ದಿನಾಂಕ 14/03/2021 ರಂದು ಈರಣ್ಣ  ಶಿರಗುಂಪಿ, ಪೊಲೀಸ್ ಉಪನಿರೀಕ್ಷಕರು, ಹಿರಿಯಡ್ಕ ಪೊಲೀಸ್ ಠಾಣೆ ಇವರಿಗೆ ಪೆರ್ಡೂರು  ಗ್ರಾಮದ ಕುಬೇರಾ ಬಾರ್ ನ ಎದುರು  ಹೆರ್ಡೆ  ಕಾಡಿನ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿಕೊಂಡು ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ಮಾಡಿ ಇಸ್ಪೀಟು ಎಲೆಗಳಿಂದ  ಜೂಜಾಟ  ಆಡುತ್ತಿದ್ದವರನ್ನು ವಶಕ್ಕೆ  ತೆಗೆದುಕೊಂಡು ವಿಚಾರಿಸಲಾಗಿ 1. ಸುಕಲ (36),  ತಂದೆ: ನಾಥು ಮೇರ, ವಾಸ: ಸುಕಾಲ ಕುಂದಾಲಿಕೆ ಮನೆ, ಅಂಡಾರು, ವರಂಗ, ಹೆಬ್ರಿ ತಾಲೂಕು, 2.ಮಂಜುನಾಥ ಕುಲಾಲ್ (38), ತಂದೆ: ಗೋಪಾಲ ಕುಲಾಲ, ವಾಸ: ರಾಮ ಕುಲಾಲ್ ರವರ ಬಾಡಿಗೆ ಮನೆಯಲ್ಲಿ ಪಕ್ಕಾಲ್ , ಪೆರ್ಡೂರು ಗ್ರಾಮ, ಖಾಯಂ ವಿಳಾಸ: ಮೂಡು ತಂಗಾಣ, ಕುಕ್ಕೆಹಳ್ಳಿ ಗ್ರಾಮ, ಉಡುಪಿ ತಾಲೂಕು, 3. ಅಪ್ಪು (39), ತಂದೆ: ಬೊಗ್ರ, ವಾಸ: ಬುಕ್ಕಿಗುಡ್ಡೆ, ಪೆರ್ಡೂರು, ಉಡುಪಿ ತಾಲೂಕು, 4. ರಾಜು ಶೆಟ್ಟಿ (64), ತಂದೆ: ಕೊರಗ ಶೆಟ್ಟಿ,ವಾಸ: ಪಾಡಿಗಾರ ದೇವಸ, ಬನ್ನಂಪಳ್ಳಿ, ಪೆರ್ಡೂರು, ಉಡುಪಿ ತಾಲೂಕು , 5) ರಾಘವೇಂದ್ರ (38) ತಂದೆ: ಸಾಧು, ವಾಸ: ಶಿವ ಪುರ, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ, 6) ಶೇಖರ್(42), ತಂದೆ: ತನಿಯಾ, ವಾಸ: ದೇವಸ್ಥಾನ ಬೆಟ್ಟು, ಬೆಳ್ಳರ್ಪಾಡಿ, ಉಡುಪಿ ತಾಲೂಕು, 7) ರಾಜು (45), ತಂದೆ: ಗೋಪಾಲ ಬೋಗಿ, ವಾಸ: ಕುಂಟಲಕಟ್ಟೆ ಮನೆ, ಭೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು, 8) ರಾಜು ಮೆಹ್ರ (34), ತಂದೆ: ಶಂಕರ , ವಾಸ: ಸಾಂತ್ಯಾರು, ಭೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು ಇವರಿಂದ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 4710/- ಹಾಗೂ ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ಹಳೆಯ ರಟ್ಟು, 52 ಇಸ್ಪೀಟು ಎಲೆ, ಆಪಾದಿತರ ಮೋಟಾರು ಸೈಕಲ್ ನಂಬ್ರ 1) KA-20-EL-6052, 2) KA-20-EE-2112, 3) KA-20-EU-8068, 4) KA-20-U-7273, 5) KA-20-R- 0688, ಮೋಟಾರು ಸೈಕಲ್ ಗಳ ಒಟ್ಟು ಬೆಲೆ 1,50,000 ರೂಪಾಯಿ ಆಗಿರುತ್ತದೆ. ಅಲ್ಲದೇ ಆಪಾದಿತರಿಗೆ ಸಂಬಂಧಿಸಿದ 1) ಮೊಬಿಸ್ಟಾರ್ ಕಂಪನಿಗೆ ಸೇರಿದ ಮೊಬೈಲ್, 2) ವಿವೋ ಸ್ಕ್ರೀನ್ ಟಚ್ ಮೊಬೈಲ್, 3) ಲಾವ ಮೊಬೈಲ್, 4) ಸೆಲ್ಯೂಲರ್ ಕೀ ಪ್ಯಾಡ್ ಮೊಬೈಲ್, 5) ನೊಕಿಯಾ ಕೀ ಪ್ಯಾಡ್ ಮೊಬೈಲ್, 6) ಮೈಕ್ರೋಮ್ಯಾಕ್ಸ್ ಕೀಪ್ಯಾಡ್ ಮೊಬೈಲ್,  ಒಟ್ಟು ಮೊಬೈಲ್ ಗಳ ಬೆಲೆ 6800 ರೂಪಾಯಿ ವಶ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2021 ಕಲ: 87  ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕುಂದಾಪುರ: ದಿನಾಂಕ 14/03/2021 ರಂದು ರಾಜ್ ಕುಮಾರ್, ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಹೆಸ್ಕತ್ತೂರು ಗ್ರಾಮದ ಕಮಲ ಕಿಶೋರ ಕ್ರಶ್ಯರ್ ಬಳಿಯ ಹಾಡಿ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ಕೆಲವು ಮಂದಿ ಇಸ್ವೀಟ್ ಕಾರ್ಡ್ ಸಹಾಯದಿಂದ ಆಕ್ರಮ ಜೂಜಾಟ ಆಟವಾಡುತ್ತಿದ್ದಾರೆ ಎಂಬ ಬಗ್ಗೆ ದೊರೆತ ವರ್ತಮಾನದ ಮೇರೆಗೆ ದಾಳಿ ನೆಡೆಸಿ ಆರೋತರಾದ 1] ದರ್ಶನ್ (26), ತಂದೆ: ಗೋಪಾಲ್ ,ವಾಸ:ಯಕ್ಷಲಹರಿ  ಹೆಸ್ಕತ್ತೂರು ಶಾಲೆ ಬಳಿ ಹೆಸ್ಕತ್ತೂರು ಗ್ರಾಮ, 2] ಅರುಣ್ (32), ತಂದೆ: ಬಚ್ಚು ಶೆಟ್ಟಿ,ವಾಸ: ಯಕ್ಷೆಮನೆ ಹತ್ತಿರ, ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು, 3) ಪುಷ್ಪರಾಜ್ (39), ತಂದೆ: ಚಲುವರಾಜ್ ,  ವಾಸ:  5 ಸೆಂಟ್ಸ್  ಕ್ಯಾಂಪ್ , ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು, 4) ಸಂತೋಷ (32), ತಂದೆ: ಚಂದ್ರ ಶೇಖರ, ವಾಸ: ಹೆಸ್ಕತ್ತೂರು  ಶಾಲೆ ಬಳಿ ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು, 5) ಗಣೇಶ (31), ತಂದೆ: ಮಹಾಬಲ, ವಾಸ: ಹೆಸ್ಕತ್ತೂರು  ಶಾಲೆ ಬಳಿ ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು, 6) ಮಂಜು (31), ತಂದೆ: ಬಸವ  ವಾಸ ಹೆಸ್ಕತ್ತೂರು  ಶಾಲೆ ಬಳಿ ಹೆಸ್ಕತ್ತೂರು ಗ್ರಾಮ ಕುಂದಾಪುರ ತಾಲೂಕು ಇವರ  ವಶದಲ್ಲಿದ್ದ   ನಗದು ರೂಪಾಯಿ  4,850/-, ಇಸ್ಪೀಟ್ ಕಾರ್ಡ -52 , ಹಳೆ ದಿನ ಪತ್ರಿಕೆ-1 ನ್ನು  ವಶಕ್ಕೆ ಪಡೆದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021, ಕಲಂ:87 ಕರ್ನಾಟಕ ಪೊಲೀಸ್ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.  


ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಅನಿಲ್ (29), ತಂದೆ: ಕೃಷ್ಣ ಪೂಜಾರಿ, ವಾಸ: ಶ್ರೀದೇವಿ ಪ್ರಸಾದ್ ಹೌಸ್ ಪರಪ್ಪಾಡಿ ಅಂಚೆ ನಿಟ್ಟೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರಿಗೂ ಆರೋಪಿತರಾದ ಸುನಿಲ್, ಸುಧೀರ್, ಪ್ರಸಾದ್, ಶರತ್, ಜಗದೀಶ್ ಪೂಜಾರಿ ಇವರುಗಳಿಗೂ ಪರಪ್ಪಾಡಿ ಶಾಲೆಯ ಬಳಿಯ ಸರಕಾರಿ ರಸ್ತೆಯ ವಿಚಾರದಲ್ಲಿ ತಕರಾರು ಇದ್ದು ಇದೇ ಕಾರಣಕ್ಕೆ ಈ ಹಿಂದೆ ಅವರುಗಳ ನಡುವೆ ಸಣ್ಣಪುಟ್ಟ ಜಗಳ ಕೂಡಾ ಆಗಿದ್ದು ಅದೇ ದ್ವೇಷದಿಂದ ಆರೋಪಿತರುಗಳು ದಿನಾಂಕ 14/03/2021 ರಂದು 22:30 ಗಂಟೆಗೆ ಸೇರಿಕೊಂಡು ಮಾರಕಾಯುಧಗಳಾದ ತಲವಾರು ಹಾಗೂ ಮರದ ಸೊಂಟೆಯಿಂದ KA-19-MB-8469 ನೇ ನಂಬ್ರದ ಕಾರಿನಲ್ಲಿ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಪರಪ್ಪಾಡಿ ಎಂಬಲ್ಲಿ ಇರುವ ಪಿರ್ಯಾದಿದಾರರ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರ ಹೆಸರನ್ನು ಕೂಗಿ ಕರೆದಿದ್ದು ಪಿರ್ಯಾದಿದಾರರು ಹೊರಗೆ ಹೋದಾಗ ಆರೋಪಿತರುಗಳು ಅವಾಚ್ಯ ಶಬ್ದಗಳಿಂದ ಬೈದು ತಲವಾರಿನಿಂದ ಬೀಸಿದ್ದು ಆ ಸಮಯ ಪಿರ್ಯಾದಿದಾರರು ಹೆದರಿ ಒಳಗೆ ಓಡಿ ಹೋದಾಗ ಆರೋಪಿತರುಗಳು ಮನೆಗೆ ಅಕ್ರಮ ಪ್ರವೇಶ ಮಾಡಿದ್ದು ಆ ಸಮಯ ಪಿರ್ಯಾದಿದಾರರ ತಾಯಿ ಶ್ರೀಮತಿ ಸುಗುಣ, ತಂದೆ ಕ್ರಷ್ಣಪ್ಪ ಪೂಜಾರಿ, ಹಾಗೂ ಅಕ್ಕ ಶ್ರೀಮತಿ ಸುಪ್ರೀಯಾ ತಡೆಯಲು ಬಂದಾಗ ಆರೋಪಿ ಸುನಿಲನು ಪಿರ್ಯಾದಿದಾರರ ತಾಯಿ ಸುಗುಣರವರನ್ನು ಕೈಯಿಂದ ದೂಡಿ ಕಾಲಿನಿಂದ ತುಳಿದಿದ್ದು, ಆ ಸಮಯ ಅವರ ನಡುವೆ ಉರುಳಾಟವಾಗಿದ್ದು ಸುಧೀರ್ ಮತ್ತು ಸುನಿಲ್ ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ತಲವಾರಿನಿಂದ ತಲೆಗೆ ಹಲ್ಲೆ ಮಾಡಿದ್ದು, ಉಳಿದವರು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದಿದ್ದು ಸುಧೀರನು ಪಿರ್ಯಾದಿದಾರರ ಮುಖಕ್ಕೆ ಹೊಡೆದಿದ್ದು ಆ ಸಮಯ ಪಿರ್ಯಾದಿದಾರರ ಮುಂಭಾಗದ ಹಲ್ಲು ತುಂಡಾಗಿದ್ದು ಮನೆಯವರೆಲ್ಲಾ ಬೊಬ್ಬೆ ಹೊಡೆದಾಗ ಆರೋಪಿತರುಗಳು ಬೈದು ಬೆದರಿಕೆ ಹಾಕಿ ಹೊರಟು ಹೋಗಿದ್ದು ಪಿರ್ಯಾದಿದಾರರನ್ನು ಹಾಗೂ ಅವರ ತಾಯಿಯನ್ನು ಅವರ ಮನೆಯವರು ಹಾಗೂ ಪಿರ್ಯಾದಿದಾರರ ಸ್ನೇಹಿತರು ಚಿಕಿತ್ಸೆ ಬಗ್ಗೆ ಒಂದು ವಾಹನದಲ್ಲಿ  ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ 31/2021 ಕಲಂ: 143,144,147,148, 447, 448, 504, 506, 323, 307, 354(B), 452 ಜೊಗೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-03-2021 10:10 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080