ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ದಿನಾಂಕ 14/03/2021 ರಂದು ಸಂಜೆ 7:20 ಗಂಟೆಗೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜಾರ್ಕಳ ಜಂಕ್ಷನ್‌ನಲ್ಲಿ ಹಾದು ಹೋಗುವ ಕಾರ್ಕಳ ಉಡುಪಿ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಬೈಲೂರು ಕಡೆಯಿಂದ-ಕಾರ್ಕಳ ಕಡೆಗೆ ಕಾರು ನಂಬ್ರ KA-19-AC-4774 ನೇಯದರ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯನ್ನು ದಾಟುತ್ತಿದ್ದ ಸದಾನಂದ ಪೂಜಾರಿಯವರಿಗೆ ಢಿಕ್ಕಿ ಹೊಡೆದ ಪರಿಣಾಮ ಸದಾನಂದ ಪೂಜಾರಿಯವರ ತಲೆಯ ಹಿಂಭಾಗ, ಬಲತೋಳಿಗೆ, ಬಲಕಾಲಿಗೆ ರಕ್ತ ಗಾಯ, ಸೊಂಟಕ್ಕೆ ಒಳ ಜಖಂ ಮತ್ತು ಕುತ್ತಿಗೆಗೆ ಗುದ್ದಿದ ರೀತಿಯ ನೋವಾಗಿರುತ್ತದೆ, ಎಂಬುದಾಗಿ ಮಹಮ್ಮದ್ ಮುಸ್ತಾಫ್, (33), ತಂದೆ: ಅಬೂಬಕ್ಕರ್, ವಾಸ: ಶಾಂತಿಪಲ್ಕೆ ಜಾರ್ಕಳ, ಯರ್ಲಪ್ಪಾಡಿ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಇವರು ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 32/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಪ್ರವೀಣ್ ಎಂ ವಿ (28) ತಂದೆ: ವಿಠಲ ಗಾಣಿಗ ವಾಸ: ಪ್ರಥ್ವಿ ನಿಲಯ ಸಾಸ್ತಾನ ಪೋಸ್ಟ ಗುಂಡ್ಮಿ ಗ್ರಾಮ ಕುಕ್ಕಿನ ಬೈಲು ಸಾಲಿಗ್ರಾಮ ಉಡುಪಿ ಇವರ ತಂದೆ ವಿಠಲ ಗಾಣಿಗರು ದಿನಾಂಕ  13/03/2021 ರಂದು ಸಂಜೆ ಸುಮಾರು 6.30 ಗಂಟೆಯ ಸಮಯಕ್ಕೆ ಕಾರ್ಕಡ ಶಾಲೆಯ ಬಳಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಬದಿಯಲ್ಲಿ ನಡೆದುಕೊಂಡು ಸಾಲಿಗ್ರಾಮ ಕಡೆಗೆ ಹೋಗುವಾಗ KA-20-EE-6520 ನೇ  ಪಲ್ಸರ್  ಬೈಕ್ ಸವಾರನು ತನ್ನ ಬೈಕನ್ನು ಕೊಟೇಶ್ವರ ಕಡೆಯಿಂದ ಸಾಸ್ತಾನ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ರಸ್ತೆಯಲ್ಲಿ ಬರುತ್ತಿದ್ದ ಪ್ರವೀಣ ರವರ ತಂದೆ ವಿಠಲ ಗಾಣಿಗರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ವಿಠಲ ಗಾಣಿಗರು ರಸ್ತೆಗೆ ಬಿದ್ದು  ಅವರ ಬಲ ಕಾಲಿಗೆ ತೀವೃ ತರಹದ ಪೆಟ್ಟಾಗಿ ಬಲ ಕಾಲು ನೇಲುತ್ತಿದ್ದು, ಅವರನ್ನುಕೂಡಲೇ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕರೆದುಕೊಂಡು ಹೋಗಿ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ, ಈ ಅಪಘಾತಕ್ಕೆ ಬೈಕ್ ಸವಾರ ಶ್ರೀಧರನ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಪಿರ್ಯಾದಿದಾರರು ತನ್ನ ತಂದೆಗೆ ಅಪಘಾತವನ್ನುಂಟು ಮಾಡಿದ ಬೈಕಿನ ಸವಾರ ಹಾಗೂ ಬೈಕಿನ ಬಗ್ಗೆ ಮಾಹಿತಿಯನ್ನು ಪಡೆದುಕೊಂಡು ದೂರು ನೀಡಲು ತಡವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 279, 338 ಐಪಿಸಿ 134 (A)(B)IMV ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರಶಾಂತ್ (27), ತಂದೆ: ದಿ: ಕೃಷ್ಣಯ್ಯ ಆಚಾರ್ಯ, ವಾಸ: ಹೊಸಬಡಾಕೆರೆ ಶಾಲೆಯ ಹತ್ತಿರ , ಕುಂಬ್ರಿ ಕೋಟೇಶ್ವರ, ಕುಂದಾಪುರ ತಾಲೂಕು, ಉಡುಪಿ ಇವರು ಬ್ರಹ್ಮಾವರ  ಮಹೇಶ  ಎಂಟರ್ ಪೈಸಸ್  ನಲ್ಲಿ ಟೆಕ್ನಿಶಿಯನ್ ಅಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 14/03/2021 ರಂದು  ಹೆಬ್ರಿ ಗೆ ಕೆಲಸದ ನಿಮಿತ್ತ ಹೋಗಿ ಅಲ್ಲಿಂದ ತನ್ನ ಕೆಎ-20-ಇಆರ್-8526 ನೇ ಮೋಟಾರ್ ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ರಾಷ್ಟ್ರೀಯ ಹೆದ್ದಾರಿ169(ಎ)  ರಲ್ಲಿ ಬರುತ್ತಾ  ಪೆರ್ಡೂರು ಗ್ರಾಮದ ಪೆರ್ಡೂರು ಮೇಲ್ಪೇಟೆ ಬಳಿ  ತಲುಪುವಾಗ ಸಮಯ ಸುಮಾರು ಸಂಜೆ 16:15 ಗಂಟೆಗೆ ಬೈರಂಪಳ್ಳಿ ಕಡೆಯ ಒಳ ರಸ್ತೆಯಿಂದ ಕೆಎ-20-ಎಬಿ-1080 ನೇ ಆಟೋ ರಿಕ್ಷಾ ಚಾಲಕನು ತನ್ನ ಆಟೋ ರಿಕ್ಷಾವನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಯಾವುದೇ ಸೂಚನೆಯನ್ನು ನೀಡದೇ ಮುಖ್ಯ ರಸ್ತೆಗೆ ಬಂದು ಪ್ರಶಾಂತ್‌ ರವರು ಸವಾರಿ ಮಾಡಿಕೊಂಡಿದ್ದ  ಮೋಟಾರ್ ಸೈಕಲ್ ಗೆ ಢಿಕ್ಕಿ ಹೊಡೆದು ಪರಿಣಾಮ ಪ್ರಶಾಂತ ರವರು ಮೋಟಾರ್ ಸೈಕಲ್ ಸಮೇತಾ ರಸ್ತೆಗೆ ಬಿದ್ದು  ಬಲಬುಜಕ್ಕೆ  ಗುದ್ದಿದ  ಒಳಜಖಂ, ಎಡಕಾಲಿನ ಕೋಲು ಕಾಲಿಗೆ  ರಕ್ತ ಗಾಯ ಹಾಗೂ ಎಡ ಕೈಯ ಉಂಗುರ ಬೆರಳಿಗೆ ತರಚಿದ ಗಾಯವಾಗಿರುತ್ತದೆ. ಆಟೋ ರಿಕ್ಷಾ ಚಾಲಕನು 108 ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಗಾಯಾಳುವನ್ನು ಮಣಿಪಾಲ ಆಸ್ಪತ್ರಗೆ ಕರೆದುಕೊಂಡು ಅಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಲಾಗಿದ್ದು ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿರುವುದಾಗಿದೆ. ಈ  ಅಪಘಾತಕ್ಕೆ ಕೆಎ-20-ಎಬಿ-1080 ನೇ ಆಟೋ ರಿಕ್ಷಾ ಚಾಲಕನ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 10/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಪಿರ್ಯಾದಿದಾರರಾಧ ಪವಿತ್ರ  ಪ್ರಾಯ: 30 ವರ್ಷ  ಗಂಡ: ಪ್ರವೀಣ್ ಶೆಟ್ಟಿ ವಾಸ: ಮಾರಾಳಿ ಬೈಲು ಮನೆ  ನಾಲ್ಕೂ ರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ ಗೋಪಾಲ ಶೆಟ್ಟಿ (65) ರವರು ಸುಮಾರು 3 ವರ್ಷಗಳ ಹಿಂದೆ ಬಾಂಬೆಯಲ್ಲಿ ಕೆಲಸ ಮಾಡುವಾಗ ಯಾವುದೋ ಗಲಾಟೆಯಲ್ಲಿ ಅವರ ಕುತ್ತಿಗೆ ಭಾಗಕ್ಕೆ ಪೆಟ್ಟಾಗಿ ನರಗಳ ಸಮಸ್ಯೆ ಹಾಗೂ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದೇ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಯಿಂದ ದಿನಾಂಕ 14/03/2021 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ 15/03/2021 ರಂದು ಬೆಳಿಗ್ಗೆ 06:00 ಗಂಟೆಯ ಮಧ್ಯಾವಧಿಯಲ್ಲಿ ನಾಲ್ಕೂರು ಗ್ರಾಮದ  ಮಾರಾಳಿಬೈಲು ಎಂಬಲ್ಲಿರುವ ವಾಸದ ಮನೆಯ ಮಲಗುವ ಕೋಣೆಯಲ್ಲಿರುವ ಜಂತಿಗೆ  ನೈಲಾನ್ ಹಗ್ಗ ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಮೃತರ ಮರಣದಲ್ಲಿ ಬೇರಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾಧ ಸುದರ್ಶನ (18), ತಂದೆ: ರುಕ್ಮಯ್ಯ ಗೌಡ, ವಾಸ: ಜಯಲಕ್ಷ್ಮಿರವರ ಬಾಡಿಗೆ ಮನೆ ನಿರಂಜನ ನಿಲಯ, ರಾಜೀವನಗರ ಕೊಳಂಬೆ,  52 ನೇ ಹೇರೂರು ಗ್ರಾಮ, ಬ್ರಹ್ಮಾವರ ಇವರ ತಂದೆಯಾದ ರುಕ್ಮಯ್ಯ ಗೌಡ (55) ಎಂಬವರು ಬೈಕಾಡಿ ಜೀವನ್‌ ಶೆಟ್ಟಿಯವರ ಟಿಪ್ಪರ್‌ ಲಾರಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ದಿನಾಂಕ 14/03/2021 ರಂದು ಟಿಪ್ಪರ್ ಲಾರಿಯಲ್ಲಿ ಕೆಲಸ ಮುಗಿಸಿ ಸಂಜೆ 7:15 ಗಂಟೆಗೆ ಬೈಕಾಡಿ ಗ್ರಾಮದ ಭದ್ರಗಿರಿ ಬಳಿ ಇರುವ ಶೆಡ್ಡಿನಲ್ಲಿ ಲಾರಿಯನ್ನು ತೊಳೆಯುತ್ತಿರುವ ಸಮಯ ಒಮ್ಮೇಲೆ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಚಿಕಿತ್ಸೆ ಬಗ್ಗೆ  ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಸಂಜೆ 7:30 ಗಂಟೆಗೆ  ಕರೆ ತಂದಾಗ ವೈಧ್ಯರು ಪರೀಕ್ಷಿಸಿ ರುಕ್ಮಯ್ಯ ಗೌಡ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ರುಕ್ಮಯ್ಯ ಗೌಡ ರವರು ಹೃದಯಾಘಾತದಿಂದ ಅಥವಾ ಇತರ ಯಾವೋದೋ ದೈಹಿಕ ತೊಂದರೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-03-2021 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080