ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಮಹೇಂದ್ರನ್ ರಂಗರಾಜ್ (32), ತಂದೆ:ದಿ. ರಂಗರಾಜ್, ವಾಸ:ಕಾಳಿಯಣ್ಣನ್ ಕೌಂಡರ್, ಸ್ಟೀಟ್, ಗೊಬಿಚೆಟ್ಟಿ ಪಾಳ್ಯಂ ತಾಲೂಕು, ಈರೋಡ್ ಜಿಲ್ಲೆ, ತಮಿಳುನಾಡು ರಾಜ್ಯ ಇವರು  ಕೋಳಿಗಳನ್ನು ಸಾಗಾಟ ಮಾಡುವ TN-36-P-5052 ಟೆಂಪೋ ಚಾಲಕನಾಗಿದ್ದು, ಯುವರಾಜ ಇವರು ಟೆಂಪೋದಲ್ಲಿ ಸಹಾಯಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ದಿನಾಂಕ 14/02/2023 ರಂದು TN-36-P-5052 ಟೆಂಪೋದಲ್ಲಿ ಮಣಿಪಾಲಕ್ಕೆ ಹೋಗಿ ಅಲ್ಲಿ ಕೋಳಿಗಳನ್ನು ಇಳಿಸಿ ಅಲ್ಲಿಂದ ವಾಪಾಸ್ಸು ಮಂಗಳೂರು ಕಡೆಗೆ  ಹೋಗಲು  ಟೆಂಪೋವನ್ನು ಚಲಾಯಿಸಿಕೊಂಡು ಉಡುಪಿಯಿಂದ ಮಂಗಳೂರು ಕಡೆಗೆ ಹೋಗುತ್ತಾ  ಪಡುಬಿದ್ರಿ ಕಾರ್ಕಳ ಜಂಕ್ಷನ್ ಬಳಿ ತಲುಪಿದಾಗ ಮದ್ಯಾಹ್ನ 1:30 ಗಂಟೆಗೆ ಆರೋಪಿ KA-19-A 648  ನೇ ನಂಬ್ರದ  ಲಾರಿಯನ್ನು ಉಡುಪಿ ಕಡೆಯಿಂದ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಟೆಂಪೋ ಹಿಂಭಾಗಕ್ಕೆ ಡಿಕ್ಕಿ ಹೊಡೆದಾಗ ಟೆಂಪೋ ಎಡಕ್ಕೆ ಚಲಿಸಿದ್ದು, ಬಲಕ್ಕೆ ಸ್ವಲ್ಪ ಚಲಿಸಿದ ಲಾರಿ ಅದರ ಎದುರಿನಲ್ಲಿ ಮಂಗಳೂರು ಕಡೆಗೆ ಹೋಗುತ್ತಿದ್ದ KA-19-ES-6141 ಸ್ಕೂಟಿಗೆ  ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಎಡಕ್ಕೆ ಚಲಿಸಿ ಸ್ಕೂಟರ್ ನೊಂದಿಗೆ ಅದರ  ಸವಾರ ಲೋಕ್ ಬಹದ್ದೂರು ಕಡ್ಕ ಹಾಗೂ ಅವರ ಹೆಂಡತಿ ಮೀನಾ ಕಡ್ಕ ಟೆಂಪೊದ ಅಡಿ ಭಾಗಕ್ಕೆ ಬಿದ್ದು, ಗಾಯಾಗೊಂಡವರನ್ನು ಪಡುಬಿದ್ರಿ ಸಿದ್ದಿವಿನಾಯಕ ಆಸ್ಪತ್ರೆಗೆ ಸಾಗಿಸಿದ್ದು, ಗಂಭೀರ ಗಾಯಗೊಂಡ ಲೋಕ್ ಬಹದ್ದೂರು ಕಡ್ಕ ರವರನ್ನು ಹೆಚ್ಚಿನ  ಚಿಕಿತ್ಸೆಗೆ  ಮಂಗಳೂರು ಎ ಜೆ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಮದ್ಯಾಹ್ನ 2:08 ಗಂಟೆಗೆ ವೈದ್ಯರು ಪರೀಕ್ಷಿಸುವ ವೇಳೆ ಮೃತಪಟ್ಟಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರ ತಲೆಯು ಹಿಂಬದಿಗೆ, ಬಲ ಕೈ ಹಿಂಬಾಗಕ್ಕೆ ಗಾಯವಾಗಿರುವುದಲ್ಲದೇ ಯುವರಾಜ ರವರಿಗೆ ಮೂಗಿಗೆ ಮತ್ತು ಬಲ ಕೈಗೆ ಗುದ್ದಿದ ಒಳನೋವು ಉಂಟಾಗಿದ್ದು ಇವರು  ಪಡುಬಿದ್ರಿ ಸಿದ್ದಿ ವಿನಾಯಕ ಅಸ್ಪತ್ರೆಯಲ್ಲಿ ಹೊರ ಚಿಕಿತ್ಸೆ ಪಡೆದಿರುತ್ತಾರೆ. ಗಾಯಗೊಂಡ ಮೀನಾ ಕಡ್ಕ ರವರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023, ಕಲಂ: 279, 337,304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ಪಿರ್ಯಾದಿದಾರರಾದ ಉಮ್ಮರ್‌ ಫಾರೂಕ್ (32), ತಂದೆ:ಉಸ್ಮಾನ್‌, ವಾಸ: ಜನತಾ ಕಾಲೋನಿ, ಪಾದೂರು ಗ್ರಾಮ & ಅಂಚೆ ಕಾಪು  ತಾಲೂಕು, ಉಡುಪಿ ಜಿಲ್ಲೆ ಇವರ ಸ್ನೇಹಿತ ಅಹಮ್ಮದ್‌ ಕಬೀರ್‌ ರವರು ದಿನಾಂಕ 13/02/2023 ರಂದು ತನ್ನ KA-20-ER-2174 ನೇ ಅಪಾಚೆ ಮೋಟಾರ್‌ ಸೈಕಲ್‌ ನಲ್ಲಿ ಕಾಪು ಕಡೆಯಿಂದ ಶಿರ್ವಾ ಕಡೆಗೆ ಕಾಪು-ಶಿರ್ವಾ ಸಂಪರ್ಕ ರಸ್ತೆಯಲ್ಲಿ ಹೋಗುತ್ತಾ 19:30 ಗಂಟೆಗೆ ಉಡುಪಿ ಜಿಲ್ಲೆ, ಕಾಪು ತಾಲೂಕು, ಮಜೂರು ಗ್ರಾಮದ ಮಜೂರು ಗ್ರಾಮ ಪಂಚಾಯತ್‌ ಕಛೇರಿಯನ್ನು ದಾಟಿ ಸ್ವಲ್ಪ ಮುಂದೆ ಹೋಗುತ್ತಿರುವಾಗ KA-20-AB-6456 ನೇ ಆಟೋ ರಿಕ್ಷಾ ಚಾಲಕ ಅಬ್ದುಲ್‌ ರಶೀದ್‌ ರವರು ತನ್ನ ರಿಕ್ಷಾವನ್ನು ಕಾಪು-ಶಿರ್ವಾ ಮುಖ್ಯ ರಸ್ತೆಯ ಎಡಬದಿಯಲ್ಲಿವ ಕಾಂಕ್ರೀಟ್‌ ರಸ್ತೆ ಕಡೆಯಿಂದ ಮುಖ್ಯ ರಸ್ತೆಗೆ, ಮುಖ್ಯ ರಸ್ತೆಯಿಂದ ಬರುವ ವಾಹನಗಳನ್ನು ಗಮನಿಸದೆ ಓಮ್ಮೇಲೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಅಹಮ್ಮದ್‌ ಕಬೀರ್‌ ರವರು ತನ್ನ KA-20-ER-2174 ನೇ  ಮೋಟಾರ್‌ ಸೈಕಲ್‌ ನ್ನು ನಿಯಂತ್ರಿಸಲಾಗದೆ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದಿದ್ದು,ಇದರಿಂದ ಅವರ ಎಡಗಾಲಿನ ಪಾದದ ಬಳಿ ಊದಿಕೊಂಡಿದ್ದು, ಬೆನ್ನಿನ ಭಾಗಕ್ಕೆ ಗುದ್ದಿದ ಒಳ ನೋವು ಆಗಿರುತ್ತದೆ. ಪಿರ್ಯಾದಿದಾರರು ಅವರನ್ನು ಚಿಕಿತ್ಸೆಯ ಬಗ್ಗೆ ಒಂದು ಕಾರಿನಲ್ಲಿ ಕರೆದುಕೊಂಡು ಹೋಗಿ ಉಡುಪಿಯ ಹೈಟೆಕ್‌ ಆಸ್ಪತ್ರೆಗೆ ದಾಖಲಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಪ್ರವೀಣ್ (22), ತಂದೆ:ರಾಮ ದೇವಾಡಿಗ,  ವಾಸ: ಅಪ್ಪಿ ಮನೆ , ಕಾವೇರಿ ಮಾರ್ಗ ಬಂಕೇಶ್ವರ, ಯಡ್ತರೆ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 14/02/2023 ರಂದು ಬಾಡಿಗೆ ನಿಮಿತ್ತ ಬೈಂದೂರು ರೈಲ್ವೆ ಸ್ಟೇಷನ್ ಗೆ ಬಾಡಿಗೆದಾರರನ್ನು  ಬಿಟ್ಟು  ವಾಪಾಸ್ಸು  ಮನೆಗೆ ಬರಲು ರಾಷ್ಟ್ರೀಯ  ಹೆದ್ದಾರಿ 66 ರ ಸರ್ವಿಸ್ ರಸ್ತೆಯಲ್ಲಿ ಯಡ್ತರೆ ಗ್ರಾಮದ ಮಯೂರ ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮುಂದೆ ಜಗನ್ನಾಥ ಶೆಟ್ಟಿ ರವರ ಮನೆಯ ಎದುರುಗಡೆ ಹೋಗುತ್ತಿರುವಾಗ ಸಮಯ ರಾತ್ರಿ  8:15 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವ ಬದಿಯ ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ಅವರ ಪರಿಚಯದ  ಮಾಸ್ತಿ (45)  ರವರು ಬೈಂದೂರು ಬಸ್ ನಿಲ್ದಾಣದ  ಕಡೆಯಿಂದ ಅವರ  ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ  ಶಿರೂರು ಕಡೆಯಿಂದ  ಕುಂದಾಪುರ ಕಡೆಗೆ KA-20-MB-0755 ನೇ ಕಾರು ಚಾಲಕನು ಆತನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾಸ್ತಿ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ ಮಾಸ್ತಿ ರವರು ರಸ್ತೆಗೆ ಬಿದ್ದಿದ್ದು  ಅವರ ಎಡ ಗೈ,ಎಡ ಕಾಲಿಗೆ ಮತ್ತು ತಲೆಯ ಹಿಂಬದಿಗೆ ತೀವ್ರ ತರಹದ ರಕ್ತಗಾಯವಾಗಿರುತ್ತದೆ.  ಗಾಯಗೊಂಡ  ಮಾಸ್ತಿ ರವರನ್ನು ಪಿರ್ಯಾದಿದಾರರು  ಹಾಗೂ ಸ್ಥಳೀಯರು  ಎತ್ತಿ ಉಪಚರಿಸಿ   ಚಿಕಿತ್ಸೆ  ಬಗ್ಗೆ  108 ಅಂಬುಲೆನ್ಸ್ ವಾಹನದಲ್ಲಿ ಅಂಜಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಅಲ್ಲಿ  ಪರೀಕ್ಷೀಸಿದ ವೈದ್ಯಾಧಿಕಾರಿಯವರು ಮಾಸ್ತಿ ರವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ   ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಲ್ಲಿ  ವೈದ್ಯಾಧಿಕಾರಿಯವರು ಪರೀಕ್ಷೀಸಿ   ಮಾಸ್ತಿ ರವರು  ಮೃತಪಟ್ಟಿರುವುದಾಗಿ ರಾತ್ರಿ 8:45 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ:279, 304 (A ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ : ಪಿರ್ಯಾದಿದಾರರಾದ ಮನೋಹರ ಪೂಜಾರಿ (41), ತಂದೆ: ಸೀನ ಪೂಜಾರಿ, ವಾಸ: ಸ್ವಾಮಿ ಅನುಗ್ರಹ, ಬಾರಿಕೆರೆ, ಕಲ್ಮಾಡಿ ರಸ್ತೆ, ಕೋಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 14/02/2023 ರಂದು ಮಂದಾರ್ತಿ ಜಾತ್ರೆಗೆ ಹೋದವರು ರಾತ್ರಿ 9:30 ಗಂಟೆಗೆ ಸೈಬ್ರಕಟ್ಟೆ - ಕೋಟ ಮೂರು ಕೈ ರಸ್ತೆಯಲ್ಲಿ ಕೋಟ ಮೂರುಕೈ ತಲುಪುವಾಗ, ಅವರ ಮುಂದೆ ರಸ್ತೆಯಲ್ಲಿ ಮಂದಾರ್ತಿ ಜಾತ್ರೆ ಬಂದೋಬಸ್ತ್‌ಕರ್ತವ್ಯ ಮುಗಿಸಿ ಸೈಬ್ರಕಟ್ಟೆ ಕಡೆಯಿಂದ ಹೋಗುತ್ತಿದ್ದ ಕೋಟ ಠಾಣೆಯ ಮಹಿಳಾ ಪೊಲೀಸ್‌ಸಿಬ್ಬಂದಿ ಫರ್ಜಾನಾ ಇವರು ಕೋಟ ಮೂರುಕೈ ಜಂಕ್ಷನ್‌ ತಲುಪಿದಾಗ ತನ್ನ KA-20-EY-5992 ನೇ ಸ್ಕೂಟಿಗೆ ಬಲಬದಿಗೆ ತಿರುಗುವ ಇಂಡಿಕೇಟರ್‌ ಕೊಟ್ಟು ನಿಧಾನವಾಗಿ ಕೋಟ ಕಡೆಗೆ ಸ್ಕೂಟಿಯನ್ನು ಚಲಾಯಿಸುವಾಗ ರಾಷ್ಟ್ರೀಯ ಹೆದ್ದಾರಿ  66 ಕುಂದಾಪುರ - ಉಡುಪಿ ಮುಖ್ಯರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದ KA-28-AA-4533 ನೇ ಬೊಲೆರೋ ಪಿಕ್‌ಅಪ್‌ ವಾಹನವನ್ನು ಅದರ ಚಾಲಕ ಮಾಳಪ್ಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಜಂಕ್ಷನ್‌ರಸ್ತೆ ಹಾಗೂ ವಾಹನ ನಿಧಾನಿಸಲು ಬ್ಯಾರಿಕೇಡ್‌ ಹಾಕಿದ್ದರೂ ತನ್ನ ವಾಹನವನ್ನು ನಿಧಾನಿಸದೇ ರಸ್ತೆ ದಾಟುತ್ತಿದ್ದ ಸ್ಕೂಟಿ ಸವಾರಳಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರಿಣಿ ಫರ್ಜಾನಾ ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಬಲಗಾಲಿಗೆ ತೀವ್ರ ಸ್ವರೂಪದ ಮೂಳೆ ಮುರಿತದ ರಕ್ತಗಾಯಗೊಂಡಿರುತ್ತಾರೆ. ಗಾಯಾಳು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ.  ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಶರ್ಮಿಳಾ ಪ್ರಕಾಶ್‌ ಬಂಗೇರ (54), ಗಂಡ: ಪ್ರಕಾಶ್‌ ಬಂಗೇರ, ವಾಸ: ಮನೆ ನಂ. 3-71ಬಿ, ಗೋಪಿ ನಿವಾಸ,ಪೆರ್ಣಂಕಿಲ ಅಂಚೆ ಮತ್ತು ಗ್ರಾಮ, ಉಡುಪಿ  ಜಿಲ್ಲೆ ಇವರ  ಗಂಡ  ಪ್ರಕಾಶ್‌ ಬಂಗೇರ (57) ರವರು  ವಿಪರೀತವಾಗಿ  ಕುಡಿತದ ಚಟವನ್ನು ಹೊಂದಿದ್ದು,  ಹಾಗೂ ಬಿ.ಪಿ. ಶುಗರ್ ಖಾಯಿಲೆಯಿಂದ  ಬಳಲುತ್ತಿದ್ದು, ಇದೇ  ಕಾರಣದಿಂದ  ಮನನೊಂದು  ದಿನಾಂಕ  14/02/2023  ರಂದು  ಬೆಳಿಗ್ಗೆ 7:00 ಗಂಟೆಯಿಂದ  ಸಂಜೆ  5:00  ಗಂಟೆಯ ನಡುವಿನ  ಅವಧಿಯಲ್ಲಿ ಶಿರ್ವ ಗ್ರಾಮದ ಕೋಡು ಕಂಚಿಕಂಡ ಎಂಬಲ್ಲಿ ರತ್ನಾಕರ ಶೆಟ್ಟಿರವರಿಗೆ  ಸಂಬಂಧಿಸಿದ ಹಾಡಿ ಪ್ರದೇಶದಲ್ಲಿದ್ದ ಕಾಟು ಮರದ ಗೆಲ್ಲಿಗೆ ನೈಲಾನ್‌ ಹಗ್ಗವನ್ನು ಬಿಗಿದು  ಇನ್ನೊಂದು ತುದಿಯನ್ನು ಕುತ್ತಿಗೆಗೆ ಬಿಗಿದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/2023 ಕಲಂ: 174  CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಸುರೇಶ (51),  ತಂದೆ: ದಿ.ಕೃಷ್ಣ ಪೂಜಾರಿ, ವಾಸ: ಗುರುನಿಧಿ, ಕಡೇಕಾರ ಪೊಸ್ಟ್, ಕಡೇಕಾರ ಉಡುಪಿ ಇವರ  ಅಣ್ಣ ಮುರಳಿ (54) ಇವರು  1 ವರ್ಷದಿಂದ ಜಾಂಡಿಸ್ ಖಾಯಿಲೆಯಿಂದ ಬಳಲುತಿದ್ದು ಈ ಬಗ್ಗೆ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿರುತ್ತಾರೆ. ಇತ್ತೀಚಿಗೆ ಹೊಟ್ಟೆ ನೋವು ಇದ್ದ ಕಾರಣ ಒಂದು ವಾರದಿಂದ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಬಂದಿರುತ್ತಾರೆ. ದಿನಾಂಕ 14/02/2023 ರಂದು 15:00 ಗಂಟೆಗೆ ಮುರಳಿ ರವರು ಮನೆಯಲ್ಲಿದ್ದು ಹೊಟ್ಟೆ ನೋವು ಎಂದು ಹೇಳುತಿದ್ದು ಸಂಜೆ 15:45 ಗಂಟೆಗೆ ಮುರಳಿರವರು ಅವರ ಮನೆ ಸಮೀಪದ ಬೋಜ ಶೆಟ್ಟಿರವರ ಜಾಗದಲ್ಲಿರುವ ಕಡೆಕಾರು ಗ್ರಾಮ ಪಂಚಾಯತ್ ಗೆ ಸೇರಿದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿರುತ್ತದೆ. ಮೃತರು ಜೊಂಡಿಸ್ ಖಾಯಿಲೆಯಿಂದ ಬಳಲುತಿದ್ದು ಇದೆ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 14/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಮಲ್ಪೆ: ದಿನಾಂಕ 13/02/2023 ರಂದು ಗುರುನಾಥ ಬಿ ಹಾದಿಮನಿ, ಪೊಲೀಸ್‌ ಉಪನಿರೀಕ್ಷಕರು, ಮಲ್ಪೆ ಪೊಲೀಸ್‌  ಠಾಣೆ ಇವರು ರೌಂಡ್ಸ ಕರ್ತವ್ಯದಲ್ಲಿರುವಾಗ ತೆಂಕನಿಡಿಯೂರು ಗ್ರಾಮದ ಗರಡಿ ಮಜಲಿನಲ್ಲಿ ಇರುವ ಈಶ್ವರ ದೇವಸ್ಥಾನದ ಬಳಿ ಇರುವ ಸಾರ್ವಜನಿಕ ಹಾಡಿಯಲ್ಲಿ ಒಬ್ಬ ವ್ಯಕ್ತಿ ಅಮಲುಭರಿತನಾಗಿ ತೂಗಾಡುವಂತೆ ಕಂಡು ಬರುತ್ತಿದ್ದು ಅವನ ಬಳಿ ಹೋಗಿ ಅವನ ಹೆಸರು ಕೇಳಿದಾಗ ಅವನು ತೊದಲುತ್ತಾ ಯೋಗೀಶ (21) ಎಂದು ತಿಳಿಸಿದ್ದು. ಅವನ  ಬಾಯಿಯಿಂದ ಗಾಂಜಾದಂತಹ ವಾಸನೆ ಬಂದಿರುತ್ತದೆ. ಆತನನ್ನು ವೈದ್ಯಕೀಯ ತಪಾಸಣೆ ಬಗ್ಗೆ ಪ್ರೊಫೆಸರ್ ಅಂಡ್ ಹೆಡ್ ಕೆಎಂಸಿ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದ್ದು, ಪರೀಕ್ಷಿಸಿದ ವೈದ್ಯರು  ಗಾಂಜಾ ಸೇವಿಸಿರುವ ಬಗ್ಗೆ ದಿನಾಂಕ 15/02/2023 ರಂದು ದೃಢ ಪತ್ರ ನೀಡಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 15-02-2023 09:42 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080