ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಕೊಲ್ಲೂರು: ಪಿರ್ಯಾದಿ: ಶ್ರೀಮತಿ ಶೈಲಾ (35) ಗಂಡ:  ಚಂದ್ರ ಶೇಖರ ವಾಸ: ಬೈದ್ರಕಟ್ಟೆ ಶಂಕ ರ ನಾರಾಯಣ ಗ್ರಾಮ ಇವರ ಅಣ್ಣನಾದ ಮುಂಜುನಾಥ @ ಮಂಜು (40) ವರ್ಷ ರವರು ಕೊಲ್ಲೂರು ಗ್ರಾಮ ಪಂಚಾಯತ್ SRLM ಘಟಕದ ದಿನ ಕೂಲಿ ನೌಕರರಾಗಿದ್ದು ರಾತ್ರಿ ವೇಳೆ ಕೊಲ್ಲೂರು ಗ್ರಾಮದ ಪಂಚಾಯತ್ ಕಟ್ಟಡದಲ್ಲಿ ಉಳಿದುಕೊಳ್ಳುತ್ತಿದ್ದು  ದಿನಾಂಕ 14.02.2023 ರಂದು ರಾತ್ರಿ 11-00 ಗಂಟೆಗೆ ಸದ್ರಿ ಕಟ್ಟಡದಲ್ಲಿ  ಮಲಗಿಕೊಂಡಿದ್ದ ವೇಳೆ  ಎದೆ ನೋವು  ಕಾಣಿಸಿಕೊಂಡು ಉಸಿರಾಡಲು ಆಗದೇ ಅಸ್ವಸ್ಥರಾದವರನ್ನು ಅವರ ಜೊತೆಯಲ್ಲಿದ್ದ ಉದಯ್ ಮತ್ತು ಇತರರು ಅಂಬ್ಯುಲೆನ್ಸ್ ವಾಹನದಲ್ಲಿ ಚಿಕಿತ್ಸೆಗೆ ಕುಂದಾಪುರ  ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ದಿನಾಂಕ 15.02.2023 ರಂದು ಬೆಳಗಿನ ಜಾವ 00-25 ಗಂಟೆಗೆ   ಬಂದಾಗ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ಕರೆ ತರುವ ದಾರಿಯಲ್ಲಿ  ಮೃತಪಟ್ಟಿರುವುದಾಗಿ ದೃಢೀಕರಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ  UDR 04/2023 U/S: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ:  ಪಿರ್ಯಾದಿ: ಕಾರ್ತಿಕ್ ಶಣೈ ಪ್ರಾಯ: 17 ವರ್ಷ ತಂದೆ: ಕೃಷ್ಣಾನಂದ ಶೆಣೈ ವಾಸ: “ಚಿನ್ಮಯ”, 1-156 ಮೂಡು ಅಳೆವೂರು ಅಲೆವೂರು ಗ್ರಾಮ ಇವರ ತಂದೆಯಾದ ಕೃಷ್ಣಾನಂದ ಶೆಣೈ ಪ್ರಾಯ: 50 ವರ್ಷ ಇವರು 1999 ರಿಂದ ಎಮ್‌ಐಟಿ ಸೆಕ್ಯೂರಿಟಿ ವಿಭಾಗದಲ್ಲಿ ಅಟೆಂಡರ್‌ಆಗಿ ಕೆಲಸ ಮಾಡಿಕೊಂಡಿದ್ದು, ಕೆಲಸ ಮುಗಿಸಿ ಸಂಜೆ 6 ಗಂಟೆಗೆ ಮನೆಗೆ ಬರುತ್ತಿದರು 8 ತಿಂಗಳ ಹಿಂದೆ ಅವರ ಹೆಂಡತಿ ಮೃತಪಟ್ಟಿದ್ದು, ಆ ಬಳಿಕ ಕೃಷ್ಣಾನಂದ ಶೆಣೈ ರವರು  ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಈ ದಿನ ದಿನಾಂಕ: 14.02.2023 ರಂದು ಪಿರ್ಯಾದುದಾರರ ತಂದೆ ಕಲಸಕ್ಕೆ ಹೋದವರು ವಾಪಸು ಬಾರದೆ ಇದ್ದು ಈ ಬಗ್ಗೆ ಸಂಶಯಗೊಂಡು ಅವರು ಕೆಲಸ ಮಾಡುತ್ತಿದ್ದ ಎಮ್‌ಐಟಿಗೆ ತೆರಳಿ ಅಲ್ಲಿನ ಕಟ್ಟಡದ ಎಬಿ -1 ಬ್ಲಾಕ್‌ನ 2 ನೇ ಮಹಡಿ ರೂಂ 42 ರಲ್ಲಿ ನೋಡಲಾಗಿ ಪಿರ್ಯಾದುದಾರರ ತಂದೆಯವರು ನೈಲಾನ್‌ಹಗ್ಗದಲ್ಲಿ ಕುತ್ತಿಗೆಗೆ ನೇಣು ಬಿಗಿದು ಫ್ಯಾನಿಗೆ ಕಟ್ಟಿ ಆತ್ಮಹತ್ಯ ಮಾಡಿಕೊಂಡಿದ್ದು, ಅವರ ಹೆಂಡತಿ ತೀರಿಕೊಂಡ ವೇದನೆಯಲ್ಲಿ ಜೀವನದಲ್ಲಿ ಜೀಗುಪ್ಸೆಗೊಂಡ ದಿನಾಂಕ: 14.02.2023 ರಂದು ಮದ್ಯಾಹ್ನ ಸುಮಾರು 2:10 ಗಂಟೆಯಿಂದ ರಾತ್ರಿ 10:30 ಗಂಟೆಯ ನಡುವಿನ ಸಮಯ ಆತ್ಮಹತ್ಯೆ ಮಾಡಿಕೊಂಡಿರುದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 06/2023 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ಪಿರ್ಯಾದಿ: ಶ್ರೀಮತಿ ಜೇನುಕುರುಬರ ನಂದಿನಿ ಪ್ರಾಯ: 36 ವರ್ಷ ಗಂಡ: ಸುಬ್ರಹ್ಮಣ್ಯ  ವಾಸ: C/O ಐಮುಡಿಯಂಡ  ರಮೇಶರವರ ಬಾಬ್ತು ಕಾಫಿ ತೋಟದ ಲೈನ್ ಮನೆ, ಕೋಟೆ ಫಾಲ್ಸ್ ಹಟ್ಟಿ ಹೊಳೆ, ಸೋಮವಾರ ಪೇಟೆ   ಕೊಡಗು ಜಿಲ್ಲೆ ಇವರ ತಾಯಿಯಾದ ಗೌರಿ ಪ್ರಾಯ: ಸುಮಾರು 70 ವರ್ಷ ಇವರು ದಿನಾಂಕ: 04/12/2022 ರಿಂದ ಮಣಿಪಾಲದ Old Valley ಪ್ಲಾಟ ನಂ: 282 ರಲ್ಲಿ ಮನೆ ಕೆಲಸ ಮಾಡಿಕೊಂಡಿರುತ್ತಾರೆ, ಮೃತರು ದಿನಾಂಕ: 13.02.2023 ರಂದು ಸಂಜೆ ಸುಮಾರು 04:00 ಗಂಟೆಗೆ ತಾವು ಕೆಲಸ ಮಾಡುವ ಮನೆಯಿಂದ ಹೋಗಿ ದಿನಾಂಕ: 14.02.2023 ರಂದು ಬೆಳಿಗ್ಗೆ 08:30 ಗಂಟೆ ಸುಮಾರಿಗೆ ಮನೆಗೆ ಬಂದಿದ್ದು ಇದರಿಂದ  ಕೆಲಸದ ಮನೆಯವರು ನೀವು ಇದೇ ರೀತಿ ಮಾಡಿದರೇ ನಿಮ್ಮನ್ನು ವಾಪಾಸ್ಸು ಊರಿಗೆ ಕಳುಹಿಸುವುದಾಗಿ ತಿಳಿಸಿರುತ್ತಾರೆ ಹಾಗೂ ಮೃತರ ನಾಲ್ಕು ಮಕ್ಕಳಲ್ಲಿ ಮೊದಲನೇಯ ಮಗ ಸುರೇಶ ಮತ್ತು ಎರಡನೇಯ ಮಗಳು ರಾಜಮ್ಮ ಹಾಗೂ ಅವರ ಗಂಡ ದೇವು ರವರುಗಳು ಈಗಾಗಲೇ ಮರಣ ಹೊಂದಿದ್ದು ಹಾಗೂ ಮೃತರಿಗೆ ಯಾವುದೇ ಸ್ವಂತ ಮನೆ ಇಲ್ಲದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 14.02.2023 ರಂದು ಸುಮಾರು ಮಧ್ಯಾಹ್ನ 03:00 ಗಂಟೆಯ ಸಮಯಕ್ಕೆ ಅವರು ಕೆಲಸ ಮಾಡುವ ಮನೆಯ ಮೇಲಿನ ಟೇರಸ್ ನ ಕಬ್ಬಣದ ಕೊಂಡಿಗೆ ನೈಲನ್ ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡಿದ್ದು ನಂತರ ಸೀರೆ ತುಂಡಾಗಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್‌‌ನಂಬ್ರ 07/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ

 • ಕುಂದಾಪುರ:  ದಿನಾಂಕ 15/02/2023  ರಂದು ಬೆಳಿಗ್ಗೆ  ಸುಮಾರು 9:30   ಗಂಟೆಗೆ,  ಕುಂದಾಪುರ  ತಾಲೂಕಿನ,  ಬೀಜಾಡಿ  ಪೂಜಾ ಟೈಲ್ಸ್‌ಬಳಿ,  ಪೂರ್ವ ಬದಿಯ NH  66 ರಸ್ತೆಯಲ್ಲಿ, ಆಪಾದಿತ  ಕೆ. ಎಸ್‌. ಅಯೂಬ್‌ ಎಂಬವರು KA20-D-7393ನೇ  ಅಂಬುಲೆನ್ಸ್‌ವಾಹನದಲ್ಲಿ ಪಿರ್ಯಾದಿ ದಿನೇಶ ಶೆಟ್ಟಿ, ಸಿದ್ದಯ್ಯ ಹೆಗ್ಡೆ, ಉದಯ ಹೆಗ್ಡೆ ಹಾಗೂ ಸುಶೀಲ ಶೆಟ್ಟಿಯವರನ್ನು ಕುಳ್ಳಿರಿಸಿಕೊಂಡು ಕೊರ್ಗಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗವಾಗಿ ಚಲಾಯಿಸಿಕೊಂಡು ಬಂದು,  ಪೂರ್ವ ಬದಿಯ  ಸರ್ವಿಸ್‌ರಸ್ತೆಯಿಂದ ಪೂರ್ವ ಬದಿಯ  NH  66 ರಸ್ತೆಗೆ ನಿರ್ಲಕ್ಷ್ಯತನದಿಂದ ತಿರುಗಿಸಿ, ಬೈಂದೂರು ಕಡೆಯಿಂದ ಉಡುಪಿ ಕಡೆಗೆ ಪೂರ್ವ ಬದಿಯ  NH  66 ರಸ್ತೆಯಲ್ಲಿ ಶಿವದಾಸ್ ಎಂಬವರು  ಚಾಲನೆ ಮಾಡಿಕೊಂಡು ಹೋಗುತ್ತಿದ್ದ DD03-P-9794ನೇ ಲಾರಿಗೆ  ಅಪಘಾತಪಡಿಸಿದ ಪರಿಣಾಮ  ಅಂಬುಲೆನ್ಸ್‌ವಾಹನದಲ್ಲಿ ಪ್ರಯಾಣಿಸುತ್ತಿದ್ದ  ಸಿದ್ದಯ್ಯ ಹೆಗ್ಡೆ, ಉದಯ ಹೆಗ್ಡೆ ಹಾಗೂ ಸುಶೀಲ ಶೆಟ್ಟಿ ರವರು ಗಾಯಗೊಂಡು ಕೊಟೆಶ್ವರ  ಎನ್‌. ಆರ್‌‌ಆಚಾರ್ಯ   ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ  ದಾಖಲಾಗಿರುತ್ತಾರೆ. ಈ ಬಗ್ಗೆ ದಿನೇಶ ಶೆಟ್ಟಿ ಪ್ರಾಯ 40 ವರ್ಷ ತಂದೆ ಮಹಾಬಲ ಶೆಟ್ಟಿ ವಾಸ: ಚಾರುಕೊಟ್ಟಿಗೆ ಮೇಲ್ಮನೆ, ಕೊರ್ಗಿ ಗ್ರಾಮ ರವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 18/2023 ಕಲಂ 279, 337    IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 15-02-2023 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080