ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಭಾಕರ (35), ತಂದೆ: ನಾಗಪ್ಪ ಶೇರಿಗಾರ, ವಾಸ: ಸೋಡಿತಾರ ಮನೆ, ಪಡುವರಿ ಪೋಸ್ಟ್ & ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 13/02/2022 ರಂದು  ರಾತ್ರಿ 10:30 ಗಂಟೆಗೆ ಬೈಂದೂರು ಗ್ರಾಮದ ಅಡಿಗದ್ದೆ ಎಂಬಲ್ಲಿನ ಯಕ್ಷಗಾನ ನೋಡುವ ಸಲುವಾಗಿ ಅವರ ಮೋಟಾರು ಸೈಕಲ್ ನಲ್ಲಿ ಬೈಂದೂರು ಗ್ರಾಮದ  ಕಳವಾಡಿ ಕಾರಿಕಟ್ಟೆ ಮಹಾಬಲ ಶೆಟ್ಟಿ ರವರ ಮನೆಯ ಬಳಿ ರಸ್ತೆಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಮುಂದಿನಿಂದ  ಆರೋಪಿ ಶೇಷಯ್ಯ ಆತನ  KA-47-Q-2282 ನೇ ಮೋಟಾರು ಸೈಕಲ್ ನಲ್ಲಿ ಉಮೇಶ್ ಶೇರುಗಾರರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದು ನಾಯಿಯೊಂದು ಒಮ್ಮೆಲೇ ರಸ್ತೆಗೆ ಅಡ್ಡವಾಗಿ ಓಡಿ ಬಂದ ಕಾರಣ ಮೋಟಾರು ಸೈಕಲ್ ಸವಾರ ಒಮ್ಮೆಲೇ  ಬ್ರೇಕ್ ಹಾಕಿದ ಪರಿಣಾಮ ಮೋಟಾರು ಸೈಕಲ್ ಸವಾರನ ಹತೋಟಿ ತಪ್ಪಿ ಸ್ಕಿಡ್ ಆಗಿ ಮೋಟಾರು ಸೈಕಲ್ ಸವಾರ ಹಾಗೂ ಸಹ ಸವಾರ ರಸ್ತೆ ಬಿದ್ದಿದ್ದು  ಬೈಕ್ ಸವಾರನಿಗೆ ಕೈ ಕಾಲಿಗೆ ತರಚಿದ ಗಾಯವಾಗಿದ್ದು ಸಹ ಸವಾರ ಉಮೇಶ್ ರವರಿಗೆ ಸೊಂಟಕ್ಕೆ ಒಳ ಜಖಂ ಹಾಗೂ ಕೈ ಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 13/02/2022 ರಂದು ಧೀರಜ್ ಆರ್.ನಾಯಕ್  KA-20-EU-7436ನೇ ಮೋಟಾರು ಸೈಕಲ್ ನಲ್ಲಿ ಅಜ್ಮಾನ್ ರವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದು ರಾತ್ರಿ 11:50 ಗಂಟೆಗೆ ತ್ರಿವೇಣಿ ಜಂಕ್ಷನ್ ಬಳಿ ತನ್ನ ಮೋಟಾರು ಸೈಕಲ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿ ಸಂಸ್ಕೃತ ಕಾಲೇಜ್ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದ KA-20-EP-8263 ನೇ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಪ್ರಭಾತ್  ಶೀ ನು ಸ್ಕೂಟರ್  ಸಮೇತ ರಸ್ತೆಗೆ ಬಿದ್ದು, ,ಬಲ ಕಾಲಿನ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿ ಆದರ್ಶ ಆಸ್ಪತ್ರೆಗೆ ದಾಖಲಾಗಿದ್ದು, ಹಾಗೂ ಅಜ್ಮಾನ್ ರವರಿಗೆ  ಸಾದಾ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 279 ,337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 12/02/2022 ರಂದು ರಾತ್ರಿ 10:30 ಗಂಟೆಗೆ ಬ್ರಹ್ಮಾವರ ಕಡೆಯಿಂದ ಸಾಸ್ತಾನ ಕಡೆಗೆ ಹೋಗುತ್ತಿದ್ದ ಯಾವುದೋ ಅಪರಿಚಿತ ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪೂಜಾ ಹೋಟೆಲ್‌ ಕಡೆಯಿಂದ ಉಪ್ಪಿನಕೋಟೆ ಪೋರ್ಚುನ್‌‌ ಪ್ಲಾಜಾ ಹೋಟೆಲ್‌ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ಟಾರು ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂಜೀವ ಮೊಗವೀರ (46) ಎಂಬುವವರಿಗೆ ಡಿಕ್ಕಿ ಹೊಡೆದು ಹೋಗಿದ್ದು, ಅವರು ರಸ್ತೆ ಬದಿಯ ಮಣ್ಣು ರಸ್ತೆಯಲ್ಲಿ ಬಿದ್ದು ಮುಖ ಹಾಗೂ ತಲೆಗೆ ತೀವೃ ಗಾಯವಾಗಿ ಅಸ್ವಸ್ಥರಾಗಿದ್ದು, ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ  ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಸಂಜೀವ ಮೊಗವೀರನನ್ನು ಒಳರೋಗಿಯಾಗಿ ದಾಖಲಿಸಿಕೊಂಡಿರುವುದಾಗಿದೆ. ಅಪರಿಚಿತ ವಾಹನಚಾಲಕನು ಸಂಜೀವ ಮೊಗವೀರರವರಿಗೆ ಡಿಕ್ಕಿ ಹೊಡೆದು, ವಾಹನವನ್ನು ನಿಲ್ಲಿಸದೇ ಪರಾರಿಯಾಗಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ: 279, 338 ಐಪಿಸಿ ಮತ್ತು 134 (ಎ) &(ಬಿ) ಜೊತೆಗೆ 187 ಐಎಮ್ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಹರಿಪ್ರಸಾದ್ (29), ತಂದೆ: ದಿ. ಉಮೇಶ್ ಶೆಟ್ಟಿ, ವಾಸ: ನಿತ್ಯಾನಂದ ನಿಲಯ, ಬಳ್ಕುಂಜೆ ಗ್ರಾಮ, ಮಂಗಳೂರು ತಾಲೂಕು. ದ.ಕ. ಜಿಲ್ಲೆ ಇವರು ದಿನಾಂಕ 13/02/2022 ರಂದು ನಂದಿಕೂರು  ಅಡ್ವೆ  ಎಂಬಲ್ಲಿ ನಡೆಯುತ್ತಿದ್ದ ಕಂಬಳವನ್ನು ನೋಡಿ, ರಾತ್ರಿ ತಮ್ಮ  ರಿಕ್ಷಾದಲ್ಲಿ ವಾಪಾಸ್ಸು ಮನೆಗೆ ಹೋಗುತ್ತಿರುವಾಗ ಅವರ ಸಂಬಂಧಿ ಉಳೆಪಾಡಿ ಐಕಳ ನಿವಾಸಿ ರಾಜೇಶ್ ಶೆಟ್ಟಿ ಎಂಬುವವರು ಸಹ KA-19-EZ-4902 ನೇ ನಂಬ್ರದ ಮೋಟಾರ್‌ಸೈಕಲ್ಲಿನಲ್ಲಿ ಶ್ರೇಯಸ್ ಎಂಬುವವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ವಾಪಾಸ್ಸು ಅಡ್ವೆ ಕಡೆಯಿಂದ ಪಲಿಮಾರು ಕಡೆಗೆ ಹೋಗುತ್ತಿರುವ ಸಮಯ 23:30 ಗಂಟೆಯ ವೇಳೆಗೆ ಕಾಪು ತಾಲೂಕು ಪಲಿಮಾರು ಗ್ರಾಮದ  ಅಂಚೆ ಕಛೇರಿಯ ಎದುರು ತಲುಪುತ್ತಿದ್ದಂತೆ, ಎದುರಿನಿಂದ KA-19-EB-2363 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ಮೋಹನ್ ಸಾಲ್ಯಾನ್  ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ರಾಜೇಶ್‌ ‌ಶೆಟ್ಟಿಯವರ ಮೋಟಾರ್‌ಸೈಕಲ್ಲಿಗೆ ಡಿಕ್ಕಿ ಹೊಡೆದುದರಿಂದ ಎರಡೂ ಮೋಟಾರ್ ಸೈಕಲ್ ಸವಾರರು ಮೋಟಾರ್‌ಸೈಕಲ್ ಸಮೇತ ರಸ್ತೆಗೆ ಬಿದ್ದಿರುತ್ತಾರೆ. ಅಪಘಾತದಿಂದ ರಾಜೇಶ್ ರವರ ಬಲ ಭುಜಕ್ಕೆ ಮೂಳೆ ಮುರಿತದ ಗಾಯವಾಗಿದ್ದು, ಸುರತ್ಕಲ್‌‌ನ ಅಥರ್ವ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿದ್ದು, ಸಹ ಸವಾರ ಶ್ರೇಯಸ್‌‌ ರವರಿಗೆ ಗುದ್ದಿದ ಪೆಟ್ಟಾಗಿದ್ದು  ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಮತ್ತು ಮಂಗಳೂರಿನ ಎ.ಜೆ. ಆಸ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.  ಮೋಟಾರ್ ಸೈಕಲ್ ಸವಾರ ಮೋಹನ್ ಸಾಲ್ಯಾನ್ ರವರ ತಲೆ, ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ತಿಳಿದು ಬಂದಿರುತ್ತದೆ. ಅಪಘಾತದಿಂದ ಎರಡೂ ಮೋಟಾರ್‌‌ಸೈಕಲ್‌ಗಳು ಜಖಂಗೊಂಡಿರುತ್ತವೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 15/2022 ಕಲಂ: 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಶ್ರುತಿ (32), ಗಂಡ: ಜಗದೀಶ್ ವಿ, ವಾಸ: ಸತ್ಯದೇವಿ ಕೃಪಾ ತೆಳ್ಳಾರ್ ರೋಡ್ ಗುಡ್ಡೆಯಂಗಡಿ ಕಸಬಾ ಗ್ರಾಮ ಕಾರ್ಕಳ ತಾಲೂಕು ಇವರು ಸಹಸವಾರರಾಗಿ ಗಂಡ ಜಗದೀಶ ರವರೊಂದಿಗೆ KA-19-ET- 7194 ನೇ ಮೋಟಾರ್ ಸೈಕಲ್ ನಲ್ಲಿ ದಿನಾಂಕ 13/02/2022 ರಂದು ಸಂಜೆ ಜೋಡುರಸ್ತೆಯಿಂದ ತೆಳ್ಳಾರು ರಸ್ತೆಯ ತನ್ನ ಮನೆ ಕಡೆಗೆ ಬರುತ್ತಿರುವಾಗ  17:45 ಗಂಟೆಗೆ ಪೆರ್ವಾಜೆ ರಸ್ತೆಯಿಂದ ತೆಳ್ಳಾರ್ ರಸ್ತೆ ಕಡೇ ಹೋಗುವ ಗಂಗಾ ಪ್ಯಾರಡೇಸ್ ಬಳಿ ಸಾರ್ವಜನಿಕ ಡಾಮರು  ರಸ್ತೆಯಲ್ಲಿ ಏಕಾಏಕಿ ನಾಯಿಯೊಂದು ಮೋಟಾರ್ ಸೈಕಲಿಗೆ ಅಡ್ಡಬಂದ ಪರಿಣಾಮ ನಾಯಿಯನ್ನು ತಪ್ಪಿಸಲು ಮೋಟಾರ್ ಸೈಕಲ್ ಸವಾರ ಜಗದೀಶರವರು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಬಿದ್ದ ಪರಿಣಾಮ ಜಗದೀಶ್ ರವರಿಗೆ ತರಚಿದ ಗಾಯವಾಗಿದ್ದು, ಹಾಗೂ ಪಿರ್ಯಾದಿದಾರರ  ಬಲತೋಳಿಗೆ ಮುಳೆ ಮುರಿತ ಗಾಯ ವಾಗಿದ್ದು ಚಿಕಿತ್ಸೆ ಬಗ್ಗೆ ಪಿರ್ಯಾದಿದಾರರು  ಕಾರ್ಕಳ ನಿಟ್ಟೆ ಗಾಜ್ರಿಯಾ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ  ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ತೇಜಸ್ವಿನಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 279,337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಲಕ್ಷ್ಮಣ ಬಿ ಅಮಿನ್‌(63), ತಂದೆ: ದಿ. ಬಾಬು ಅಮಿನ್, ವಾಸ: ಮನೆ ಮ್ಯಾನೆಜಿಂಗ್‌ ಪಾರ್ಟ್‌ನರ್‌ಮೆ/ಎಸ್‌ಅಮಿನ್‌ಬೇರಿಂಗ್‌ಕಂಪೆನಿ (ರಿ) ಡೋರ್‌ನಂ.10-5-96, ಗವರ್ನಮೆಂಟ್‌ ಬಸ್‌ನಿಲ್ದಾಣದ ಎದುರು ಉಡುಪಿ ಇವರು ಉಡುಪಿ ತಾಲೂಕು ಅಮಿನ್ ಬೇರಿಂಗ್‌ಕಂಪೆನಿ (ರಿ)ನ ಪಾಲುದಾರರಾಗಿದ್ದು, ಮೂಡನಿಡಂಬೂರು ಗ್ರಾಮದ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಎದುರು ಡೋರ್‌ನಂ.10-5-96 ರಲ್ಲಿ ಕಛೇರಿಯನ್ನು ಹೊಂದಿರುತ್ತಾರೆ. ಆಪಾದಿತ ಚೇತನ್‌ ಕುಮಾರ್‌ ದಿನಾಂಕ 02/11/2008 ರಂದು ಸೇಲ್ಸ್‌ಮೆನ್‌ ಆಗಿ  ಸಂಸ್ಥೆಗೆ ಸೇರಿದ್ದು, ಪ್ರಸ್ತುತ ಸೇಲ್ಸ್‌ ಎಕ್ಸಿಕ್ಯುಟೀವ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ದಿನಾಂಕ 14/06/2021 ರಿಂದ ದಿನಾಂಕ 18/12/2021 ರ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರ ಸಂಸ್ಥೆಯ ಗ್ರಾಹಕರಿಂದ ಒಟ್ಟು ರೂಪಾಯಿ 8,57,336/- ಹಣವನ್ನು ಸಂಗ್ರಹಿಸಿ ಅದನ್ನು ಸಂಸ್ಥೆಗೆ ಪಾವತಿ ಮಾಡದೇ ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಪಿರ್ಯಾದಿದಾರರಿಗೆ ಮೋಸ ಹಾಗೂ ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2022, ಕಲಂ: 408,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 15-02-2022 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080