ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ:  ದಿನಾಂಕ 15/02/2022 ರಂದು ಪಿರ್ಯಾದಿ ಆಯುಷ್‌ ಪೂಜಾರಿ (22), ತಂದೆ: ನವೀನ್‌ ಪೂಜಾರಿ , ವಾಸ: ಪಾಗರ ಮನೆ , ಹೇರೂರು , ಹೇರೂರು ಗ್ರಾಮ, ಬ್ರಹ್ಮಾವರ ಇವರು ಮೋಟಾರ್‌ ಸೈಕಲ್‌ನಲ್ಲಿ ಮನೆಯಿಂದ ಉಡುಪಿ ಅಂಬಲಪಾಡಿಗೆ ಹೋಗುವಾಗ ಸಮಯ ಸುಮಾರು ಬೆಳಿಗ್ಗೆ 10:45 ಗಂಟೆಗೆ ಹೇರೂರು ಮಧ್ಯ ಸೇತುವೆಯ ರಸ್ತೆಯಲ್ಲಿ ತಲುಪುವಾಗ ಹೇರೂರು ಕೊಳಂಬೆ ನಿವಾಸಿಯಾದ ಗುಂಡು ಆಚಾರಿ (ಪ್ರಾಯ 75 ವರ್ಷ) ಎಂಬವರು ಸೇತುವೆಯ ದಂಡೆ ಮೇಲೆ ಕುಳಿತು ಒಮ್ಮೇಲೆ ಹೊಳೆಗೆ ಜಿಗಿದಿದ್ದು, ಕೂಡಲೇ ಸಾರ್ವಜನಿಕರು ಅವರನ್ನು ರಕ್ಷಿಸಲು ರಸ್ತೆ ದಂಡೆಗೆ ಅಳವಡಿಸಿದ ಕೇಬಲನ್ನು ಹೊಳೆಗೆ ಹಾಕಿದ್ದು ಗುಂಡು ಆಚಾರಿಯವರು ಅದನ್ನು ಹಿಡಿಯದೇ ನೀರಿನಲ್ಲಿ ಮುಳಗಿ ಸ್ವಲ್ಪ ಹೊತ್ತಿನ ನಂತರ ಹೊಳೆಯಲ್ಲಿ ಮೃತ ಶರೀರ ತೇಲುವುದನ್ನು ನೋಡಿರುವುದಾಗಿದೆ. ಗುಂಡು ಆಚಾರಿಯವರು ಯಾವುದೋ ಕಾರಣಕ್ಕೊ ಅಥವಾ ಯಾವುದೋ ವಿಚಾರದಲ್ಲಿ ಮನನೊಂದು ಹೇರೂರು ಸೇತುವೆಯ ಮೇಲೆ ಬಂದು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ?ಅವರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್ ನಂ. 08/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  
 • ಮಲ್ಪೆ: ಪಿರ್ಯಾಧಿ ಶಿವಾಜಿ(52) ತಂದೆ:ವಿಠ್ಠಲ್ ರಾವ್ ಮೆತ್ರಿ ವಾಸ: ತಳಬೋಗ, ಮನೆ  ನಂಬ್ರ 44 ಬಸವಕಲ್ಯಾಣ ತಾಲೂಕು, ಬೀದರ್  ಇವರ  ಮಗನಾದ ಸಚಿನ್ (24 ವರ್ಷ) 2 ವರ್ಷಗಳಿಂದ  ಮಲ್ಪೆ ಯಲ್ಲಿ ಡ್ರೈವಿಂಗ್ ಕೆಲಸ ಮಾಡಿಕೊಂಡಿದ್ದು , ಬಾಪುತೋಟದಲ್ಲಿ  ರಮೇಶ, ಶರಣುಗೌಡ, ವಿರೇಶ, ಸುರೇಶ  ರವರೊಂದಿಗೆ ವಾಸಮಾಡಿಕೊಂಡಿರುತ್ತಾನೆ .  ಪಿರ್ಯಾಧಿದಾರರಿಗೆ ದಿನಾಂಕ: 14-02-2022 ರಂದು ಮಲ್ಪೆ ಪೊಲೀಸ್ ರು  ಕರೆಮಾಡಿ  ಮಲ್ಪೆ ಪಡುಕೆರೆ ವೀರಾಂಜನೆಯ ಭಜನಾ ಮಂದಿರದ  ಹತ್ತಿರ ಸಮುದ್ರತೀರದಲ್ಲಿ ಸಚಿನ್ ಮೃತ ದೇಹವು ದೊರಕಿರುವುದಾಗಿ ತಿಳಿಸಿದಂತೆ  ಈ ದಿನ ದಿನಾಂಕ: 15-02-2022 ರಂದು ಉಡುಪಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಪಿರ್ಯಾಧಿದಾರರು ಸಚಿನ್ ಮೃತದೇಹವನ್ನು  ನೋಡಿ ಗುರುತಿಸಿರುತ್ತಾರೆ. ಪಿರ್ಯಾದಿದಾರರು ಸಚಿನ್ ರೂಮಿನಲ್ಲಿದ್ದವರಲ್ಲಿ  ವಿಚಾರಿಸಿದಾಗ  ದಿನಾಂಕ: 13-02-2022 ರಂದು ಕೆಲಸಕ್ಕೆ ಹೋಗುವುದಾಗಿ  ತಿಳಿಸಿ ಹೋಗಿರುವುದಾಗಿ ತಿಳಿಸಿರುತ್ತಾರೆ.ಪಿರ್ಯಾಧಿದಾರರ ಮಗ ಸಚಿನ್ ದಿನಾಂಕ: 13-02-2022 ರಂದು ರಾತ್ರಿ 08:00 ಗಂಟೆಯಿಂದ ದಿನಾಂಕ: 14-02-2022 ರಂದು ರಾತ್ರಿ 1:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ರೀತಿಯಲ್ಲಿ ಸಮುದ್ರ ನೀರಿಗೆ ಬಿದ್ದು ಮುಳುಗಿ  ಮೃತಪಟ್ಟಿರಬಹುದು, ಅಥವಾ ಇನ್ಯಾವುದೋ ಕಾರಣದಿಂದ ನೀರಿಗೆ  ಬಿದ್ದು ಮೃತಪಟ್ಟಿರಬಹುದು , ಮೃತನ ಮರಣದ ಬಗ್ಗೆ ಸ್ಪಷ್ಟ ಕಾರಣವನ್ನು ತಿಳಿಯಬೇಕು ಎನ್ನುವುದಾಗಿ ಪಿರ್ಯಾದಿದಾರರು ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣಾ ಯು.ಡಿ.ಆರ್ ನಂಬ್ರ  06 /2022  ಕಲಂ 174 (3)&(IV)ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಲಾಗಿದೆ.    

ಅಪಘಾತ ಪ್ರಕರಣ

 •  ಶಂಕರ ನಾರಾಯಣ:  ದಿನಾಂಕ 15/02/2022 ರಂದು ಬೆಳಿಗ್ಗೆ 07:30  ಗಂಟೆಗೆ ಕುಂದಾಪುರ ತಾಲೂಕು ಅಂಪಾರು  ಗ್ರಾಮದ ಮೂಡುಬಗೆ ಎಂಬಲ್ಲಿನ ವನದುರ್ಗಾ ದೇವಿ ದೇವಸ್ಥಾನದ ಹತ್ತಿರದ ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ KA20W4829 ನೇ  ನಂಬರಿನ ವಿಕಲಚೇತನರು ಓಡಿಸುವ ಸ್ಕೂಟಿ  ವಾಹನವನ್ನು   ಆರೋಪಿತ  ಕಿರ್ತೇಶ  ಸವಾರರು  ನಿರ್ಲಕ್ಷ್ಯತನದಿಂದ ಸವಾರಿ ಮಾಡಿ ತನ್ನ ಎದುರಿನಲ್ಲಿ ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ  ಖಾಸಗಿ ಬಸ್‌‌ನ್ನು ಹಿಂದಿಕ್ಕಿ ಮುಂದಕ್ಕೆ ಹೋಗುವ ಭರದಲ್ಲಿ ಎಕಾಎಕಿ  ಒಮ್ಮಲೆ ಬಲಕ್ಕೆ ತಿರುಗಿಸಿ ಸಿದ್ದಾಪುರ ಕಡೆಯಿಂದ ಕುಂದಾಪರ ಕಡೆಗೆ ಪಿರ್ಯಾದಿದಾರರು ಚಲಾಯಿಸಿಕೊಂಡು ಹೋಗುತ್ತಿದ್ದ  ಕೆಎಸ್‌‌ಆರ್‌ಟಿಸಿ ಬಸ್‌  ನಂಬ್ರ KA19F3552ಗೆ ಡಿಕ್ಕಿ ಹೊಡೆದಿರುವುದಾಗಿದೆ.   ಈ ಅಪಘಾತದಿಂದ ಮೊಟಾರು ಸೈಕ್‌ಲ್‌ ಸವಾರರ ಬಲ ಕಾಲಿಗೆ ರಕ್ತಗಾಯವಾಗಿರುವುದಾಗಿದೆ ಈ ಅಪಘಾತಕ್ಕೆ ಮೇಲ್ಕಾಣಿಸಿದ ವಾಹನ ಸವಾರರ ಅಜಾಗರೂಕತೆಯ ಸವಾರಿಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  22/2022  ಕಲಂ: 279,ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   
 • ಮಲ್ಪೆ: ಪಿರ್ಯಾದಿ ಗಣಪತ್ ಸೈತೋವಾಡೇಕರ್ತಂದೆ: ಗೋವಿಂದ ಸೈತೋವಾಡೇಕರ್‌ ವಾಸ:ಕಾರೂಲ್ ,ಬೋಯಿಪಾಡಿ , ಗುಹಾಗರ್  ತಾಲೂಕು,ರತ್ನಾಗಿರಿ ಇವರ ಮಗ ನಿತೀನ್ ಗಣಪತ್ ಸೈತೋವಾಡೇಕರ್ (34 ವರ್ಷ)  ರವರನ್ನು ಪಿರ್ಯಾಧಿದಾರರ ಸಂಬಂಧಿಯಾದ  ವಾಸುದೇನ್ ಬಾಗೋಜಿ ಪಾಟೇಕರ್  ಎಂಬವರು ಮುಂಬೈನ  ವಸಾಯಿಯಲ್ಲಿರುವ ಬ್ಲೂಫಿನ್ ಮರೈನ್  ನಲ್ಲಿ ಸೀಮ್ಯಾನ್ ಆಗಿ ಕೆಲಸಕ್ಕೆ  ಸೇರಿಸಿದ್ದು ಸುಮಾರು 1 ತಿಂಗಳು ಅಲ್ಲಿ ಕೆಲಸ ಮಾಡಿ ನಂತರ ಕರ್ನಾಟಕ ನಾಗರ್ಜುನ್  ನಲ್ಲಿ  ಮೆರೈನ್  ಕೆಲಸ  ಇರುವುದಾಗಿ  ದಿನಾಂಕ: 3-11-2022 ರಂದು ಅಲ್ಲಿಗೆ ಹೋಗಿದ್ದು, ದಿನಾಂಕ: 08-11-2021 ರಂದು ನಾಗಾರ್ಜುನ ಕಂಪೆನಿಯಲ್ಲಿ ಕೆಲಸದಲ್ಲಿರುವುದಾಗಿ ದೂರವಾಣಿ ಮುಖಾಂತರ ತಿಳಿಸಿರುತ್ತಾನೆ, ದಿನಾಂಕ: 13-02-2022 ರಂದು  ಪಿರ್ಯಾಧಿ ಸಂಬಂದಿ ವಾಸುದೇನ್ ಬಾಗೋಜಿ ಪಾಟೇಕರ್  ಪಿರ್ಯಾದಿದಾರರಿಗೆ ಪೋನ್ ಮಾಡಿ ನಾಗಾರ್ಜುನ ಕಂಪೆನಿಯಲ್ಲಿ ಕೆಲಸ ಮುಗಿದಿದ್ದು, ಮುಂದಿನ ಕೆಲಸಕ್ಕೆ ಲಕ್ಷದ್ವೀಪಕ್ಕೆ ಹೋಗಲು ಮಲ್ಪೆ ಬಂದರಿಗೆ  ಬಂದು ಟಗ್ಗ್  ಗೆ  ನೀರು  ಮತ್ತು ಡಿಸೇಲ್  ತುಂಬಿಸಿ ,  ಟಗ್ಗ ನ ಕಳಗೆ ನೀರಿನಲ್ಲಿ  ಇರುವ ಫ್ಯಾನ್ ಶಾಪ್ಪಿಂಗ್  ಗೆ ಹಗ್ಗ ಸಿಕ್ಕಿಹಾಕಿಕೊಂಡಿದ್ದನ್ನು ತೆಗೆಯಲು ವಾಸುದೇನ್ ಬಾಗೋಜಿ ಪಾಟೇಕರ್  , ವಸಂತ್ ಯಶವಂತ್ ಕರೋಕರ್ ಹಾಗೂ ಪಿರ್ಯಾಧಿದಾರರ ಮಗ ನೀರಿಗೆ ಇಳಿದು ಫ್ಯಾನ್ ಗೆ ಸಿಲುಕಿದ ಹಗ್ಗವನ್ನು  ತೆಗೆದು ವಾಸುದೇನ್ ಬಾಗೋಜಿ ಪಾಟೇಕರ್  , ವಸಂತ್ ಯಶವಂತ್ ಕರೋಕರ್ ರವರು ನೀರಿನಿಂದ ಮೇಲೆ ಬಂದಿದ್ದು , ಪಿರ್ಯಾಧುದಾರರ ಮಗ ನೀರಿನಿಂದ ಮೇಲಕ್ಕೆ ಬರದೆ ಕಾಣೆಯಾಗಿದ್ದು  ದಿನಾಂಕ: 14-02-2022 ರಂದು ಬೆಳಿಗ್ಗೆ  08:30 ಗಂಟೆಗೆ ಪಿರ್ಯಾದಿದಾರರ ಮಗ ನಿತೀನ್ ಗಣಪತ್ ಸೈತೋವಾಡೇಕರ್  ನ ಮೃತದೇಹ ಟಗ್ಗ್ ನ  ಸಮೀಪ್  ನೀರಿನಲ್ಲಿ ತೇಲುತ್ತಿದ್ದು , ಟಗ್ಗನ್ ಮಾಲಕರಾದ ದಿಲ್ದಾರ್ ಇಬ್ರಾಹಿಂ ಫೀರ್ ಖಾನ್  ಮತ್ತು  ಟಗ್ಗನ್  ಉಸ್ತುವಾರಿ ವಾಸುದೇನ್ ಬಾಗೋಜಿ ಪಾಟೇಕರ್   ರವರುಗಳು  ನೀರಿನಲ್ಲಿ  ಇಳಿದು ಕೆಲಸ ಮಾಡಲಿಕ್ಕೆ ಬೇಕಾಗುವ ಯಾವುದೇ ಜೀವ ರಕ್ಷಕ ಸಾಧನಗಳನ್ನು ಒದಗಿಸದೇ ನಿರ್ಲಕ್ಷ್ಯತನ ತೋರಿಸಿರುವುದರಿಂದ ಪಿರ್ಯಾದಿದಾರರ ಮಗ ನೀರಿನಲ್ಲಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ  ಕ್ರಮಾಂಕ  18/2022 ಕಲಂ 304(A), 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಶಂಕರನಾರಾಯಣ:  ದಿನಾಂಕ 15/02/2022 ರಂದು ಬೆಳಿಗ್ಗೆ 07:30  ಗಂಟೆಗೆ ಕುಂದಾಪುರ ತಾಲೂಕು ಅಂಪಾರು  ಗ್ರಾಮದ ಮೂಡುಬಗೆ ಎಂಬಲ್ಲಿನ ವನದುರ್ಗಾ ದೇವಿ ದೇವಸ್ಥಾನದ ಹತ್ತಿರದ ಕುಂದಾಪುರ ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ KA19F3552 ನೇ  ನಂಬರಿನ ಕೆಎಸ್‌‌ಆರ್‌ಟಿಸಿ ಬಸ್‌ ಚಾಲಕ ಆರೋಪಿತ ಫಯಾಜ್‌ ಅಹಮ್ಮದ್‌‌ ಎಂಬವರು‌   ತಾನು ಚಲಾಯಿಸುತ್ತಿದ್ದ  ಬಸ್ಸನ್ನು ಸಿದ್ದಾಪುರ ಕಡೆಯಿಂದ  ಕುಂದಾಪುರ ಕಡೆಗೆ ಅತೀ ವೇಗ  ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕುಂದಾಪುರ ಕಡೆಯಿಂದ  ಸಿದ್ದಾಪುರ  ಕಡೆಗೆ  ಹೋಗುತ್ತಿದ್ದ  ದುರ್ಗಾಂಬ ಬಸ್‌ನ  ಇದೇ ದಿಕ್ಕಿನ ಕಡೆಗೆ  ವಿಕಲಚೇತನರು ನಡೆಸುವ ವಾಹನ  ಮೊಟಾರು ಸೈಕಲ್‌ ನಂಬ್ರ KA20W4829 ರಲ್ಲಿ (ಸ್ಕೂಟಿ) ಸವಾರಿ  ಮಾಡಿಕೊಂಡು  ಹೋಗುತ್ತಿದ್ದ ಸವಾರ ಕಿರ್ತೇಶ (15) ಎಂಬವರಿಗೆ  ಡಿಕ್ಕಿ ಹೊಡೆದ ಪರಿಣಾಮ ಕಿರ್ತೇಶರವರ  ಬಲ ಕಾಲಿಗೆ ಮೂಳೆ ಮುರಿತದ ರಕ್ತಗಾಯವಾಗಿರುವುದಾಗಿದೆ,  ಈ ಅಪಘಾತಕ್ಕೆ ಮೇಲ್ಕಾಣಿಸಿದ ವಾಹನ ಬಸ್‌ ಚಾಲಕರ ಅತೀ ವೇಗ ಮತ್ತು  ಅಜಾಗರೂಕತೆಯ  ಚಾಲನೆಯೇ ಕಾರಣವಾಗಿರುತ್ತದೆ . ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ   23/2022  ಕಲಂ: 279,ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.    

ಕಳವು ಪ್ರಕರಣ

 • ಕಾರ್ಕಳ:ದಿನಾಂಕ 15/02/2022 ರಂದು ಬೆಳಿಗ್ಗೆ 03:30 ಗಂಟೆಯಿಂದ 05:45 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಪೊಸ್ರಾಲ್ ಮುಲ್ಲಗುಡ್ಡೆ ಹೌಸ್ ಎಂಬಲ್ಲಿ ಇರುವ ಪಿರ್ಯಾದಿ ಶ್ರೀ ಶ್ರೀಧರ್ ಸನಿಲ್ ಪ್ರಾಯ: 69 ವರ್ಷ ತಂದೆ: ಗೋಪು ಪೂಜಾರಿ ವಾಸ:ಶ್ರೀ ಗುರುಕ್ರಪಾ ಮುಲ್ಲಗುಡ್ಡೆ ಹೌಸ್, ಪೊಸ್ರಾಲ್, ಸಚ್ಚರಿಪೇಟೆ ಅಂಚೆ ಮುಂಡ್ಕೂರು ಇವರ ಶ್ರೀ ಗುರುಕ್ರಪಾ ಎಂಬ ಮನೆಯ ಅಡುಗೆ ಕೋಣೆಯ ಕಿಟಕಿಯ ಬಾಗಿಲಿಗೆ ಹಾಕಿದ ಕಬ್ಬಿಣದ ಕೊಂಡಿಯನ್ನು ಯಾವುದೋ ಸಾಧನದಿಂದ ಬಲಾತ್ಕಾರವಾಗಿ ಮೀಟಿ ಬಳಿಕ ಯಾವುದೋ ಆಯುಧದಿಂದ ಹಿಂಬದಿ ಬಾಗಿಲಿಮ ಚಿಲಕವನ್ನು ಜಾರಿಸಿ ಒಳಪ್ರವೇಶಿಸಿ ಮನೆಯ ಕೊಠಡಿಯಲ್ಲಿನ ಕಪಾಟಿನಲ್ಲಿ ಇರಿಸಿದ್ದ 35000/- ರೂ ನಗದನ್ನು ಕಳುವು ಮಾಡಿಕೊಂಡು ಹೋಗಿರುವುದಾಗಿದೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ  ಕ್ರಮಾಂಕ 17/2022 ಕಲಂ: 457, 380 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.    

   

ಇತ್ತೀಚಿನ ನವೀಕರಣ​ : 15-02-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080