ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ವಿಠಲ ಸಿದ್ದಪ್ಪ ಡಬಾಜ (28), ತಂದೆ:ಸಿದ್ದಪ್ಪ ಡಬಾಜ, ವಾಸ: ಪಾಮಲ ದಿನ್ನಿ ಗ್ರಾಮ, ಗೋಕಾಕ ತಾಲೂಕು, ಬೆಳಗಾಂ ಜಿಲ್ಲೆ ಇವರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ಅವರು ಕೆಲಸ ಮಾಡಿಕೊಂಡಿದ್ದ ಮಾಲಿಕರಾದ ಆರ್. ಕರುಣಾಕರ ಶೆಟ್ಟಿ ರವರ  ರಂಗನಕೆರೆಯಲ್ಲಿರುವ ಮನೆಗೆ ಮನೆ ಕೆಲಸಕ್ಕೆಂದು ಬೆಳಗಾಂ ಜಿಲ್ಲೆಯ ಸವದತ್ತಿ ತಾಲೂಕಿನ ಕುಟ್ಟ್ರಹಟ್ಟಿ ಗ್ರಾಮದ ಮಲ್ಲೇಶ್ ಜಡಗಪ್ಪಗಳ ಹಾಗೂ ಅವರ ಹೆಂಡತಿ ಮತ್ತು ಮಕ್ಕಳನ್ನು ಪಿರ್ಯಾದಿದಾರರು ಜೊತೆ ಕರೆದುಕೊಂಡು ದಿನಾಂಕ 13/02/2021 ರಂದು ರಾತ್ರಿ ಬೆಳಗಾಂನಿಂದ ಬಸ್ಸ್ ನಲ್ಲಿ ಹೊರಟು ದಿನಾಂಕ 14/02/2021 ರಂದು ಬೆಳಗ್ಗೆ 06:05 ಗಂಟೆಗೆ ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್‌ನಲ್ಲಿ ಬಸ್ಸಿನಿಂದ ಇಳಿದು ರಂಗನಕೆರೆಗೆ ಹೋಗಲು ಒಂದು ರಿಕ್ಷಾದಲ್ಲಿ ಕುಳಿತು ಬಾರ್ಕೂರು ರಸ್ತೆಯಲ್ಲಿ ಹೋಗುತ್ತಿರುವಾಗ ಹಂದಾಡಿ ಗ್ರಾಮದ ಆಕಾಶವಾಣಿ ಹತ್ತಿರ ಇರುವ ಹೊಟೇಲ್ ದುರ್ಗಾದ ಎದುರುಗಡೆ ರಿಕ್ಷಾವನ್ನು ನಿಲ್ಲಿಸಿ ಪಿರ್ಯಾದಿದಾರರು ಹಾಗೂ ಮಲ್ಲೇಶ್ ರಿಕ್ಷಾದಿಂದ ಇಳಿದು ಚಾ ಕುಡಿದು ರಸ್ತೆಯನ್ನು ದಾಟಿ ರಿಕ್ಷಾದ ಕಡೆಗೆ ಬಂದು, ರಿಕ್ಷಾದಲ್ಲಿ ಕುಳಿತಿದ್ದ ಮಲ್ಲೇಶನ ಹೆಂಡತಿ ಮತ್ತು ಮಕ್ಕಳಿಗೆ ಚಾ ಕುಡಿಸಿ ಚಾ ಗ್ಲಾಸ್‌ನ್ನು ವಾಪಾಸ್ಸು ಕೊಡಲು ಮಲ್ಲೇಶನು ರಿಕ್ಷಾದ ಮುಂದಿನಿಂದ ಒಮ್ಮೇಲೆ ರಸ್ತೆ ದಾಟಲು ಹೋದಾಗ ಸಮಯ ಬೆಳಿಗ್ಗೆ 06:20 ಗಂಟೆಯ ಸಮಯಕ್ಕೆ ಆಕಾಶವಾಣಿ ಜಂಕ್ಷನ್‌ ಕಡೆಯಿಂದ ಆರೋಪಿ ಅಜಿತ್ ತನ್ನ KA-20-EL-1733 ನೇ ನಂಬ್ರದ HONDA ACTIVE ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ರಸ್ತೆ ದಾಟಲು ನಿಂತಿರುವುದನ್ನು ನೋಡಿಯುವ ಸಹಾ ತನ್ನ ವಾಹನವನ್ನು ನಿಧಾನಿಸದೇ ರಭಸವಾಗಿ ಮಲ್ಲೇಶನಿಗೆ ಡಿಕ್ಕಿ ಹೊಡೆದು ಸ್ಕೂಟರ್ ಸಮೇತ ರಸ್ತೆಯ ಬಲ ಭಾಗಕ್ಕೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಮಲ್ಲೇಶನು ರಸ್ತೆಗೆ ಬಿದ್ದು ಅವನ ತಲೆಯ ಹಿಂಭಾಗದ ಬಲಭಾಗಕ್ಕೆ ರಕ್ತಗಾಯವಾಗಿದ್ದು, ಎಡಕಾಲಿನ ಮುಂಗಂಟಿಗೆ , ಬಲಕೈಗೆ ಅಲ್ಲಲ್ಲಿ ತರಚಿದ ಗಾಯ, ಸೊಂಟದ ಹಿಂಭಾಗಕ್ಕೆ ತರಚಿದ ಒಳನೋವು ಆಗಿರುತ್ತದೆ. ಅಲ್ಲದೇ ಆರೋಪಿಗೂ ಕೂಡ ಬಲಕೈ, ಬಲ ಕಣ್ಣು, ಹಣೆಗೆ, ರಕ್ತ ಗಾಯವಾಗಿರುತ್ತದೆ. ಗಾಯಾಳು ಮಲ್ಲೇಶ್‌ ರವರನ್ನು ಚಿಕಿತ್ ಸೆಬಗ್ಗೆ ಬ್ರಹ್ಮಾವರ ಪ್ರಣವ್‌ ‌ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 21/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ನಿತಿನ್ ನಾಯ್ಕ (15), ತಂದೆ: ನವೀನ್ ನಾಯ್ಕ , ವಾಸ: ಉದ್ಧಳ್ಕ, ಹೊಸೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತಂದೆ ನವೀನ್ ನಾಯ್ಕ (43), ತಾಯಿ ಜ್ಯೋತಿ ಹಾಗೂ ತಮ್ಮಂದಿರಾದ ಕೀರ್ತನ್ ಮತ್ತು ಮಹೇಶ್ ಜೊತೆಯಲ್ಲಿ  ವಾಸವಾಗಿದ್ದು, ದಿನಾಂಕ 14/02/2021 ರಂದು ರಾತ್ರಿ ಪಿರ್ಯಾದಿದಾರರು ಅವರ ತಾಯಿ ಹಾಗೂ ತಮ್ಮ ಮಹೇಶನನ್ನು ಬೈಕಿನಲ್ಲಿ ಅವರ ಸ್ನೇಹಿತ ಮಹೇಶನ ಹುಟ್ಟು ಹಬ್ಬದ ಕಾರ್ಯಕ್ರಮದ ಬಗ್ಗೆ ಅವರ ಮನೆಗೆ ಬಿಟ್ಟು ರಾತ್ರಿ 8:15 ಗಂಟೆಗೆ ವಾಪಾಸ್ಸು ಮನೆಗೆ ಬಂದಾಗ ಅವರ ತಂದೆ ನವೀನ್ ನಾಯ್ಕ ರವರು ಮನೆಯಲ್ಲಿ ಟಿವಿ ನೋಡುತ್ತಿದ್ದರು.   ಪಿರ್ಯಾದಿದಾರರು ಕೀರ್ತನನ್ನು ಬೈಕಿನಲ್ಲಿ ಕರೆದುಕೊಂಡು ಮಹೇಶನ ಮನೆಗೆ ಹೋಗಿದ್ದು, ಊಟ ಮುಗಿಸಿ ತಾಯಿ, ತಮ್ಮಂದಿರು ಹಾಗೂ ಸ್ನೇಹಿತ  ಮಹೇಶನ ತಂದೆ ಮಂಜುನಾಥ ರವರ ಜೊತೆಯಲ್ಲಿ ರಾತ್ರಿ 10:00 ಗಂಟೆಗೆ ವಾಪಾಸ್ಸು ಮನೆಗೆ ಬಂದಾಗ ಪಿರ್ಯಾದಿದಾರರ ತಂದೆ ನವೀನ್ ನಾಯ್ಕ ರವರು ಮುಖ, ತಲೆಯಲ್ಲಿ ರಕ್ತಗಾಯವಾಗಿ ಮನೆಯ ಅಂಗಳದಲ್ಲಿ ಅಂಗಾತನೇ ಬಿದ್ದಿದ್ದು, ಕರೆದು ಮಾತನಾಡಿಸಿದಾಗ ಮಾತನಾಡಿರುವುದಿಲ್ಲ. ಮಂಜುನಾಥ ರವರು ನೆರೆಮನೆಯ ನಾರಾಯಣ ನಾಯ್ಕ ರವರನ್ನು ಕರೆದು ಸರಿಯಾಗಿ ನೋಡಿದಾಗ ನವೀನ್ ನಾಯ್ಕ ರವರು ಮೃತಪಟ್ಟಿರುತ್ತಾರೆ.  ಪಿರ್ಯಾದಿದಾರರು ತಮ್ಮ ಕೀರ್ತನನನ್ನು ಬೈಕಿನಲ್ಲಿ ಮಹೇಶನ ಮನೆಗೆ ಕರೆದು ಕೊಂಡು ಹೋಗುವಾಗ ಮನೆಯ ಬಳಿ ರಸ್ತೆಯಲ್ಲಿ ಒಂದು ಕಾರು ನಿಂತಿದ್ದು, ಪಿರ್ಯಾದಿದಾರರ ಬೈಕ್‌ನ್ನು ಹಿಂಬಾಲಿಸಿಕೊಂಡು ಬಂದು ಪಿರ್ಯಾದಿದಾರರು ಮೈನ್‌ ರೋಡ್‌ನಿಂದ ಒಳರಸ್ತೆಗೆ ತಿರುಗಿದ ನಂತರ ಕಾರು ಮುಂದೆ ಹೋಗಿ ನಿಂತಿರುತ್ತದೆ. ಪಿರ್ಯಾದಿದಾರರ ಮನೆಯ ಹತ್ತಿರ ಸರಸ್ವತಿ ಮತ್ತು ಅವರ ಮಗ ಶರತ್‌ ಎಂಬುವವರು ವಾಸವಾಗಿದ್ದು, ಸರಸ್ವತಿ ಯವರ ಮನೆಗೆ ಮಲ್ಪೆ ಕಡೆಯ ಗಂಡಸೊಬ್ಬರು ಬರುತ್ತಿದ್ದು, 15 ದಿನಗಳ ಹಿಂದೆ  ಸರಸ್ವತಿ ಮತ್ತು ಆ ಗಂಡಸು ಗುಡ್ಡೆಯಂಗಡಿ ಕ್ರಾಸ್ ಬಳಿ ಜೊತೆಯಲ್ಲಿದ್ದಾಗ ನವೀನ್ ನಾಯ್ಕ ರವರು ಆ  ವ್ಯಕ್ತಿಯ ಬಳಿ ನೀನು ಯಾಕೆ ಸರಸ್ವತಿ ಮನೆಗೆ ಆಗಾಗ ಬರುತ್ತಿದ್ದಿ ಎಂದು ಕೇಳಿದ್ದು, ನವೀನ್ ನಾಯ್ಕ ರವರಿಗೂ ಆ ಗಂಡಸಿಗೂ ಗಲಾಟೆ ಆಗಿ ನವೀನ್ ನಾಯ್ಕ ರವರನ್ನು ಕೊಂದು ಮುಗಿಸುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಸರಸ್ವತಿಯವರ ಮನೆಗೆ ಬರುತ್ತಿದ್ದ ವ್ಯಕ್ತಿಯ ಹೆಸರು ಗೌತಮ್ ಎಂಬುದಾಗಿಯೂ  ಆತ ಸರಸ್ವತಿಯವರನ್ನು  ಮದುವೆ ಆಗುವುದಾಗಿಯೂ ಇವರ ವಿಚಾರದಲ್ಲಿ ನವೀನ್ ನಾಯ್ಕ ರವರು ಗಲಾಟೆ ಮಾಡಿದರೆ ಗೌತಮರವರು ಕೊಲೆ ಮಾಡಲು ಹೇಸುವುವರಲ್ಲ  ಎಂದು ಸರಸ್ವತಿ ಯವರಿಂದ ಪಿರ್ಯಾದಿದಾರರ ತಾಯಿಗೆ ತಿಳಿದಿರುವುದಾಗಿದೆ. ದಿನಾಂಕ 14/02/2021 ರಾತ್ರಿ 8:30 ಗಂಟೆಯಿಂದ ರಾತ್ರಿ 10:00 ಗಂಟೆಯ ಮಧ್ಯಾವಧಿಯಲ್ಲಿ ಗೌತಮ ಇತರರೊಂದಿಗೆ ಕಾರಿನಲ್ಲಿ ಪಿರ್ಯಾದಿದಾರರ ಮನೆಗೆ ಬಂದು ನವೀನ್‌ ನಾಯ್ಕ ರವರನ್ನು ಕೊಲೆ ಮಾಡುವ ಉದ್ದೇಶದಿಂದ ಯಾವುದೋ ವಸ್ತುವಿನಿಂದ ಎದೆಗೆ, ಮುಖಕ್ಕೆ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2021 ಕಲಂ: 447, 302 ಜೊತೆಗೆ 34 ಐಪಿಸಿ & 3 (2)(V) SC &  ST (POA) ACT 1989 ರಂತೆ ಪ್ರಕರಣ ದಾಖಲಾಗಿರುತ್ತದೆ.  
        

ಇತ್ತೀಚಿನ ನವೀಕರಣ​ : 15-02-2021 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080