ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 14/02/2021  ರಂದು ಸಂಜೆ 6:15  ಗಂಟೆಗೆ ಕುಂದಾಪುರ  ತಾಲೂಕಿನ ಕೋಣಿ  ಗ್ರಾಮದ ಕಟ್ಗೇರಿಬೈಲು ಬಳಿ ರಸ್ತೆಯಲ್ಲಿ ಆಪಾದಿತ ಸುರೇಂದ್ರ ಶೆಟ್ಟಿ KA-05-MD-6082ನೇ ಸ್ಯಾಂಟ್ರೋ  ಕಾರನ್ನು ಕಾಳಾವರ ಕಡೆಯಿಂದ  ಕೊಟೇಶ್ವರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ರಸ್ತೆಯ  ಬಲಬದಿಗೆ ಚಲಾಯಿಸಿ, ಕೊಟೇಶ್ವರ ಕಡೆಯಿಂದ ಕಾಳಾವರ  ಕಡೆಗೆ  ಅಣ್ಣಪ್ಪ  ಎಂಬುವವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-EQ-2833ನೇ  ಸ್ಕೂಟರ್‌ ಗೆ    ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಅಣ್ಣಪ್ಪ ರವರ ತಲೆಗೆ, ಕುತ್ತಿಗೆಗೆ, ಸೊಂಟಕ್ಕೆ, ಬಲ ಕೈ  ಒಳಜಖಂ  ಉಂಟಾದ  ಗಾಯ  ಮತ್ತು ಮೈ ಕೈಗೆ  ತರಚಿದ  ಗಾಯವಾಗಿ ಕೊಟೇಶ್ವರ  ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ  ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ  ಚಿಕಿತ್ಸೆ ಬಗ್ಗೆ ಮಣಿಪಾಲದ KMC ಆಸ್ಪತ್ರೆಯಲ್ಲಿ  ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 27/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಡಾ|| ಧನಲಕ್ಷ್ಮಿ ಹೆಚ್. ಅರ್ (37), ಸೈಕಾಜಿಸ್ಟ್ ಜಿಲ್ಲಾ ಅಸ್ಪತ್ರೆ ಉಡುಪಿ ಇವರು ವಾಸವಿರುವ ಬಾಡಿಗೆ ಮನೆಯಾದ ಲಕ್ಷ್ಮಣ್ ಶೇಟ್, ಕಂಪೌಂಡ್ ಬನ್ನಂಜೆ ಯಿಂದ ದಿನಾಂಕ 12/02/2021 ರಂದು ರಾತ್ರಿ 9:00 ಗಂಟೆಗೆ  ಮೈಸೂರಿಗೆ ಹೊರಟಿದ್ದು ದಿನಾಂಕ 15/02/2021 ರಂದು ಬೆಳಿಗ್ಗೆ 5:45 ಗಂಟೆಗೆ ವಾಪಾಸು  ಮನೆಗೆ ಬಂದು ನೋಡಲಾಗಿ ಮನೆಯ ಎದುರಿನ ಬಾಗಿಲಿನ ಬೀಗ ಒಡೆದಿದ್ದು ಬಾಗಿಲು ತೆರೆದಿರುವುದು ಕಂಡು ಬಂದಿದ್ದು ಒಳಗೆ ಹೋಗಿ ನೋಡಲಾಗಿ ಮಲಗುವ ಕೋಣೆಯಲ್ಲಿದ್ದ  ಮಾಂಗಲ್ಯ ಸರ , ಓಲೆ, ಒಟ್ಟು 29 ಗ್ರಾಂ  ಚಿನ್ನ  ಮೌಲ್ಯ 1,16,000 ರೂಪಾಯಿ ಹಾಗೂ ನಗದು ಹಣ 25,000/- ರೂಪಾಯಿ  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2021 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಕುಷ್ಠ ಕುಲಾಲ (70), ತಂದೆ:ವೆಂಕಟ ಕುಲಾಲ, ವಾಸ: ರಾಘವೇಂದ್ರ ನಿಲಯ ಉದ್ದಿನ ಕೆರೆ ವಡ್ಡರ್ಸೆ ಗ್ರಾಮ ಬ್ರಹ್ಮಾವರ ತಾಲೂಕು ಇವರ ಮಗ ನರಸಿಂಹ ಕುಲಾಲ @ ಶಿವರಾಜ ಕುಲಾಲ (50) ರವರು ಮೊದಲು ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದವರು ಮದುವೆಯ ನಂತರ ಹೆಂಡತಿಯ ಮನೆಯಾದ ಹೈಕಾಡಿಯಲ್ಲಿ ವಾಸ ಮಾಡಿಕೊಂಡಿದ್ದು ವಿಪರೀತ ಮದ್ಯಪಾನ ಮಾಡುವ ಚಟವಿದ್ದು ಜೊತೆಗೆ ಸಕ್ಕರೆ ಖಾಯಿಲೆ ಕೂಡ ಇರುತ್ತದೆ. ಕಳೆದ ಒಂದು ವರ್ಷದ ಹಿಂದೆ ಬಲಗಾಲಿಗೆ ಗಾಯವಾಗಿ ಸಕ್ಕರೆ ಖಾಯಿಲೆ ಇದ್ದುದರಿಂದ ಗಾಯ ವಾಸಿಯಾಗದೇ ಇದ್ದು ಬಲ ಗಾಲಿನ ಹೆಬ್ಬೆರಳನ್ನು  ಕತ್ತರಿಸಿ  ತೆಗೆದಿರುತ್ತಾರೆ. ಆದರು ನರಸಿಂಹ ಕುಲಾಲ @ ಶಿವರಾಜ ಕುಲಾಲ ರವರು ಕುಡಿತದ ಚಟವನ್ನು ಮುಂದುವರಿಸಿದ್ದು , ಸಕ್ಕರೆ ಖಾಯಿಲೆ ಹೆಚ್ಚಾಗಿ  ಚಿಕಿತ್ಸೆಯ ಬಗ್ಗೆ ವೈದ್ಯರಲ್ಲಿ ಹೋದಾಗ ಪುನಃ ಎರಡು ಹೆಬ್ಬೆರಳನ್ನು  ಕತ್ತಿರಿಸಿರುತ್ತಾರೆ. ಆ ನಂತರದಲ್ಲಿಯೂಕುಡಿತದ ಚಟವನ್ನು ಮುಂದುವರಿಸಿದ್ದು, ಇದರಿಂದ ಬೇಸತ್ತ  ಅವರ ಹೆಂಡತಿ ಆರೈಕೆಯನ್ನು ನೋಡಿಕೊಳ್ಳಲಾಗದೇ ಕಳೆದ ಆರು ತಿಂಗಳ ಹಿಂದೆ ಆತನನ್ನು ಬಿಟ್ಟು ತಾಯಿಯ ಮನೆಗೆ ಹೋಗಿರುವುದಾಗಿದೆ. ನರಸಿಂಹ ಕುಲಾಲ @ ಶಿವರಾಜ ಕುಲಾಲ ಆತನಿಗೆ ಬಲಗಾಲಿಗೆ ಗಾಯವಾಗಿದ್ದು ವಾಸಿಯಾಗದೇ ಇದ್ದು ಜೊತೆಗೆ ಸಕ್ಕರೆ ಖಾಯಿಲೆ ಕೂಡ ಇದ್ದುದರಿಂದ ಇದೇ ಚಿಂತೆಯಿಂದ ಕೆಲಸಕ್ಕೆ ಹೋಗಲಾರದೇ  ಮದ್ಯಪಾನ ಮಾಡಿ ಮನೆಯಲ್ಲಿಯೇ ಇರುತ್ತಿದ್ದು, ದಿನಾಂಕ 14/02/2021 ರಂದು ರಾತ್ರಿ 8:00 ಗಂಟೆಗೆ ಮನೆಯವರೊಂದಿಗೆ ಊಟ ಮಾಡಿ  ಕೋಣೆಯಲ್ಲಿ ಮಲಗಿದ್ದವರು ದಿನಾಂಕ 15/02/2021 ಮುಂಜಾನೆ 06:00 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಶೌಚಾಲಯದ ಕೋಣೆಯ ಪಕ್ಕಾಸಿಗೆ ನೈಲಾನ್ ಹಗ್ಗಿದಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 05/2021 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-02-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080