ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 14/01/2023  ರಂದು ಸಂಜೆ  6:45  ಗಂಟೆಗೆ, ಕುಂದಾಪುರ ತಾಲೂಕು,  ಕೋಣಿ   ಗ್ರಾಮದ ಕಟ್ಕೇರಿಯ  ಶಂಕರ ಮಡಿವಾಳರ  ಹೊಟೇಲ್‌ ‌ಬಳಿ ರಸ್ತೆಯಲ್ಲಿ, ಆಪಾದಿತ ಪ್ರದೀಪ್‌ KA-20-EX-7017ನೇ  ಬೈಕನ್ನು ಕೊಟೇಶ್ವರ ಕಡೆಯಿಂದ ಹಾಲಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಲಾಯಿಸಿಕೊಂಡು ಬಂದು, ರಸ್ತೆಯ  ಉತ್ತರ ಬದಿಯಲ್ಲಿ  ನಡೆದುಕೊಂಡು ಹೋಗುತ್ತಿದ್ದ  ಚಂದ್ರ ಕುಮಾರ್‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಚಂದ್ರ ಕುಮಾರ್‌ರವರ ತಲೆಗೆ, ಕೈ ಕಾಲುಗಳಿಗೆ ಗಂಭೀರ ರಕ್ತ ಗಾಯ ಹಾಗೂ ಒಳಪೆಟ್ಟು  ಆಗಿದ್ದು,  ಆಪಾದಿತನ  ತಲೆಗೆ, ಹೊಟ್ಟೆಗೆ, ಕೈ ಕಾಲುಗಳಿಗೆ  ರಕ್ತಗಾಯವಾಗಿ ಕೊಟೇಶ್ವರ  ಎನ್. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು   ಹೆಚ್ಚಿನ ಚಿಕಿತ್ಸೆ ಬಗ್ಗೆ  ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಆಸ್ಪತ್ರೆಯ  ವೈದ್ಯರು  ಚಂದ್ರ ಕುಮಾರ್‌ರವರನ್ನು ಪರೀಕ್ಷಿಸಿ  ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ ಹಾಗೂ ಆಪಾದಿತ ಪ್ರದೀಪ್‌ ಸಹ   ಮಣಿಪಾಲ   ಕೆ.ಎಂ.ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023 ಕಲಂ: 279, 304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ತ್ರಿಷಿಲ್ಲಾ ಮೆಂಡೋನ್ಸಾ (60), ತಂದೆ: ದಿ. ಜಾರ್ಲಿ ಮೆಂಡೋನ್ಸಾ, ವಾಸ: ಹರೆಗೋಡು, ಕಟ್‌ಬೆಲ್ತೂರು ಗ್ರಾಮ, ಕುಂದಾಪುರ ತಾಲೂಕು ಇವರ ಗಂಡ ಚಾರ್ಲಿ ಮೆಂಡೋನ್ಸಾ ಇವರು ಸುಮಾರು 22 ವರ್ಷದ ಹಿಂದೆ GL 190/1 ರಂತೆ SBML ಕೋವಿ ಪರವಾನಿಗೆಯನ್ನು ಹೊಂದಿದ್ದು, ದಿನಾಂಕ 31/12/2026 ರ ವರೆಗೆ ಚಾಲ್ತಿಯಲ್ಲಿರುತ್ತದೆ.  ದಿನಾಂಕ 14/04/2022 ರಂದು ಪಿರ್ಯಾದಿದಾರರ ಗಂಡ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ತದನಂತರ ಪಿರ್ಯಾದಿದಾರರು ಕೋವಿಯನ್ನು ಕುಂದಾಪುರ ತಹಶೀಲ್ದಾರರ ಕಛೇರಿಗೆ ಜಮಾ ಮಾಡಲು ಹೋದಾಗ ತಹಶೀಲ್ದಾರರ ಕಛೇರಿಯಲ್ಲಿ ಮೂಲ ಕೋವಿ ಲೈಸನ್ಸ್‌ತೆಗೆದುಕೊಂಡು ಬರುವಂತೆ ತಿಳಿಸಿದ್ದ ಮೇರೆಗೆ ದಿನಾಂಕ 25/08/2022 ರಂದು ಪಿರ್ಯಾದಿದಾರರು ಕೋವಿಯನ್ನು ತಾವು ಗಂಡ ಜೀವಂತವಾಗಿರುವಾಗ ವಾಸವಿದ್ದ ಕಟ್‌ಬೆಲ್ತೂರು ಗ್ರಾಮದ ಹರೆಗೋಡು ಮನೆಯ ಕೋಣೆಯಲ್ಲಿ ಭದ್ರವಾಗಿರಿಸಿರುತ್ತಾರೆ. ತದನಂತರ ದಿನಾಂಕ 15/12/2022 ರಂದು 10:30 ಪಿರ್ಯಾದಿದಾರರಿಗೆ ತಮ್ಮ ಗಂಡನ ಮೂಲ ಕೋವಿ ಲೈಸನ್ಸ್‌ ಸಿಕ್ಕಿದ್ದು ಅದರಂತೆ ಕೋವಿಯನ್ನು ತಹಶೀಲ್ದಾರರ ಕಛೇರಿಗೆ ಸರಂಡರ್‌ಮಾಡಲು ಹರೆಗೋಡುವಿನಲ್ಲಿರುವ ಮನೆಗೆ ಬಂದು ಕೋವಿಯನ್ನು ಹುಡುಕಾಡಿದಾಗ ಕೋವಿಯು ಇಟ್ಟ ಸ್ಥಳದಲ್ಲಿ ಇಲ್ಲದೇ ಇದ್ದು ಮನೆಯನ್ನು ಕೂಲಂಕುಷವಾಗಿ ನೋಡಿದಾಗ ಮನೆಯ ಎದುರಿನ ಮರದ ಕಿಟಕಿಯ ಕಂಬಿಗಳು ತುಂಡಾಗಿರುವುದು ಕಂಡು ಬಂದಿರುತ್ತದೆ. ಯಾರೋ ಕಳ್ಳರು ದಿನಾಂಕ 25/08/2022 ರಿಂದ ದಿನಾಂಕ 15/12/2022 ರಂದು 10:30 ಗಂಟೆಯ ನಡುವಿನ ಅವಧಿಯಲ್ಲಿ ಪಿರ್ಯಾದಿದಾರರು ಈ ಹಿಂದೆ ವಾಸವಿದ್ದ ಮನೆಯ ಮರದ ಕಿಟಕಿಯ ಕಂಬಿಗಳನ್ನು ಮುರಿದು ಒಳಪ್ರವೇಶಿಸಿ ಮನೆಯ ಕೋಣೆಯಲ್ಲಿ ಭದ್ರವಾಗಿರಿಸಿದ್ದ ಕೋವಿಯನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಪಿರ್ಯಾದಿದಾರರಿಗೆ ಕಾನೂನಿನ ಅರಿವು ಇಲ್ಲದ ಕಾರಣ ದೂರು ನೀಡುವರೇ ವಿಳಂಬವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2023, ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 14/01/2023 ರಂದು ಪವನ್‌ ನಾಯಕ್‌, ಪೊಲೀಸ್ ಉಪ ನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಗುಲ್ವಾಡಿ ಗ್ರಾಮದ ಕುದ್ರು ಎಂಬಲ್ಲಿ ಅಬ್ದುಲ್‌ಸಮದ್‌ ರವರ ಮನೆಯ ಪಕ್ಕದಲ್ಲಿ ಗೋವುಗಳನ್ನು ಅಕ್ರಮವಾಗಿ ವದೇ ಮಾಡಿ ಮಾಂಸ ತಯಾರಿಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ಮಾಡಿದಾಗ  3 ಜನರು ಓಡಿ ಹೋಗಿದ್ದು ಆಗ ಆರೋಪಿ ಮೊಹಮ್ಮದ್‌ ಯೂಸುಬ್‌ನನ್ನು ಹಿಡಿದು ವಾಪಾಸು ಸ್ಥಳಕ್ಕೆ ಬಂದು ಪರಿಶೀಲಿಸಲಾಗಿ ಸ್ಥಳದಲ್ಲಿ ಗೋವಿನ ತುಂಡರಿಸಿದ ಮಾಂಸದ ಪೀಸ್‌ಗಳು, ಗೋವಿನ 2 ತಲೆ ಹಾಗೂ 8 ಗೋವಿನ ಕಾಲುಗಳು ಮತ್ತಿತ್ತರ ತ್ಯಾಜ್ಯಗಳು ಶೆಡ್‌ನಲ್ಲಿ ಹರಡಿಕೊಂಡಿದ್ದು ಅದರ ಪಕ್ಕದಲ್ಲಿ ಒಂದು ಜೀವಂತ ಗೋವನ್ನು ಹಗ್ಗದಿಂದ ಕಟ್ಟಿ ಹಾಕಿದ್ದು, ಅದರ ಪಕ್ಕದಲ್ಲಿ ಮಾಂಸ ತಯಾರಿಸಲು ಬಳಸಿದ ರಕ್ತ ಮೆತ್ತಿಕೊಂಡಿರುವ ಮಚ್ಚು, ಕತ್ತಿ, ಮೆಟ್‌ಕತ್ತಿ, ಮರದ ತುಂಡು ಹಾಗೂ ಮಾಂಸವನ್ನು ಹಾಕಲು ಒಂದು ಕ್ರೇಟ್‌, ಪ್ಲಾಸ್ಟಿಕ್‌ ಬುಟ್ಟಿ ಮತ್ತು ಬಕೇಟ್‌ ಇರುವುದು ಕಂಡು ಬಂದಿರುತ್ತದೆ. ನಂತರ  ಮೊಹಮ್ಮದ್‌ ಯೂಸುಬ್‌ನ ಬಳಿ  ವಿಚಾರಿಸಿದಾಗ ಗೋವುಗಳನ್ನು ವಧೇ ಮಾಡಿ ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ನಾನು, ಮೊಯ್ದಿನ್‌ ಹಾಗೂ ನಾಸೀರ್‌ಆಲಿ ಸೇರಿ ಈ ದಿನ ಬೆಳಗ್ಗಿನ ಜಾವ ಗುಲ್ವಾಡಿ ಬೊಳುಕಟ್ಟೆ ಎಂಬಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ 3 ಗೋವುಗಳನ್ನು ಕಳವು ಮಾಡಿಕೊಂಡು ಬಂದು ಈಗ ವದೇ ಮಾಡಿ ಮಾಂಸ ಮಾಡುತ್ತಿರುವುದಾಗಿ ತಿಳಿಸಿರುತ್ತಾನೆ. ನಂತರ ಆತನಲ್ಲಿ ಓಡಿ ಹೋದ ವ್ಯಕ್ತಿಗಳ ಬಗ್ಗೆ ವಿಚಾರಿಸಿದಾಗ ಬೆಳಗ್ಗಿನ ಜಾವ ಗೋವುಗಳನ್ನು ಕಳವು ಮಾಡಿದ್ದ ಮೊಯ್ದಿನ್‌ ಮತ್ತು ನಾಸೀರ್‌ಆಲಿ ಎಂಬುದಾಗಿ ತಿಳಿಸಿರುತ್ತಾನೆ. ನಂತರ ಸ್ಥಳದಲ್ಲಿದ್ದ 73 ಕೆ.ಜಿ ಗೋವಿನ ಮಾಂಸ  ಮೌಲ್ಯ 15,000/- ರೂಪಾಯಿ,  ಮಾಂಸ ತುಂಡು ಮಾಡಲು ಬಳಸುವ ಮರದ ತುಂಡು -, ಮೆಟ್‌ಕತ್ತಿ-2, ಕಬ್ಬಿಣದ ಮಚ್ಚು – 2, ಮರದ ಹಿಡಿಯಿರುವ ಕತ್ತಿ -1, ಸ್ಟಿಲ್‌ಚಾಕು -1, ನೀಲಿ ಬಣ್ಣದ ಪ್ಲಾಸ್ಟಿಕ್‌ಕ್ರೇಟ್‌ -1, ಪ್ಲಾಸ್ಟಿಕ್‌ಬುಟ್ಟಿ -1, ಮತ್ತು ಬಿಳಿ ಬಣ್ಣದ ಬಕೇಟ್‌ಹಾಗೂ ಜೀವಂತ ಇರುವ ಕಂದು ಬಣ್ಣದ ಗೋವು 1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪು ಗ್ರಾಂಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023, ಕಲಂ: 379, 429 ಜೊತೆಗೆ 34 ಐಪಿಸಿ ಮತ್ತು ಕಲಂ 4, 7, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ರಂತೆ ಪ್ರಕರಣ  ದಾಖಲಾಗಿರುತ್ತದೆ.      

ಇತ್ತೀಚಿನ ನವೀಕರಣ​ : 15-01-2023 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080