ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಹೆಬ್ರಿ: ದಿನಾಂಕ 14/01/2022 ರಂದು ಮಧ್ಯಾಹ್ನ 2:30 ಗಂಟೆಗೆ ಉಡುಪಿ ತಾಲೂಕು ಪರ್ಕಳ 80 ಬಡಗುಬೆಟ್ಟು ಕೆಳಕಬ್ಯಾಡಿ ನಿವಾಸಿ ಜಯರಾಮ ಸೆಟ್ಟಿಗಾರ ಇವರು ಠಾಣೆಗೆ ಬಂದು ನನ್ನ ತಮ್ಮ ರವಿರಾಜ ಶೆಟ್ಟಿಗಾರ ರವರು ದಿನಾಂಕ 13/01/2022 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 14/01/2022 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ಎಂಬಲ್ಲಿರುವ ಅವರ ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ನೀರನ್ನು ತೆಗೆಯಲು ಬಕೇಟಿಗೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಎಳೆಯುವಾಗ ಅವರ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಇನ್ನೊಬ್ಬ ತಮ್ಮ ಶಂಕರನಾರಾಯಣ ರವರು ಮನೆಯ ಬಳಿಯ ಕೋಣೆಯ ಮಾಡನ್ನು ರವಿರಾಜ ಶೆಟ್ಟಿಗಾರ ರವರಿಗೆ ಹೇಳದೇ ಕಿತ್ತು ಹಾಕಿರುವುದಲ್ಲದೇ ಹಾಗೂ ಮೃತರ ತಲೆಯ ಹಿಂಬದಿ ರಕ್ತಗಾಯ ಇರುವುದರಿಂದ ಮೃತರ ಮರಣದಲ್ಲಿ ಸಂಶಯವಿರುತ್ತದೆ ಎಂಬಿತ್ಯಾದಿ ನೀಡಿದ ದೂರಿನಂತೆ ಠಾಣೆಯಲ್ಲಿ ಯು.ಡಿ.ಆರ್ 03/2022 ಕಲಂ: 174(ಸಿ) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿದ್ದು ಮೃತ ದೇಹದ ಶವ ತನಿಖಾ ಕಾಲದಲ್ಲಿ ಮೃತ ದೇಹದ ಮೈ ಮೇಲಿರುವ ಗಾಯಗಳನ್ನು ಪರಿಶೀಲಿಸಲಾಗಿ ಮೃತನ ಹಿಂದಲೆಯಲ್ಲಿ ಯಾವುದೋ ಹರಿತವಾದ ಆಯಧದಿಂದ ಯಾರೋ ಬಲವಾಗಿ ಕಡಿದ ಪರಿಣಾಮ ಉಂಟಾದ ರಕ್ತ ಗಾಯಗಳು ಕಂಡು ಬಂದಿರುತ್ತದೆ ಹಾಗೂ ಶವ ತನಿಖಾ ಕಾಲದಲ್ಲಿ ಹಾಜರಿದ್ದ ಪಂಚಾಯತುದಾರರು ಸಹ ಮೃತ ರವಿರಾಜ ಸೆಟ್ಟಿಗಾರ ಇವರನ್ನು ಯಾವುದೋ ಹರಿತವಾದ ಆಯಧದಿಂದ ಯಾರೋ ಬಲವಾಗಿ ಕಡಿದು ಬಾವಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ಸಂಶಯ ವ್ಯಕ್ತ ಪಡಿಸಿದ್ದು. ಮೃತನ ಅಣ್ಣ ಶಂಕರನಾರಾಯಣ ಸೆಟ್ಟಿಗಾರ ಹಾಗೂ ಮೃತರಿಗೆ ಮನೆಯ ಬಳಿ ಇರುವ ಕೋಣೆಯ ಮಾಡನ್ನು ಕಿತ್ತು ಹಾಕಿರುವ ವಿಚಾರದಲ್ಲಿ ವೈಮನಸ್ಸು ಇದ್ದು ಅದೇ ವಿಚಾರದಲ್ಲಿ ಶಂಕರನಾರಾಯಣ ಸೆಟ್ಟಿಗಾರ ಈತನು ರವಿರಾಜ ಸೆಟ್ಟಿಗಾರ ನನ್ನು ಕೊಲೆ ಮಾಡಿರುವ ಬಗ್ಗೆ ಸಂಶಯವಿರುತ್ತದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಸದ್ರಿ ಘಟನೆಯ ಬಗ್ಗೆ ಮಹೇಶ್ ಟಿ ಎಮ್ ಪಿಎಸ್‌ಐ ಹೆಬ್ರಿ ಪೊಲೀಸ್ ಠಾಣೆ ಇವರು ತಯಾರಿಸಿ  ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 05/2022  ಕಲಂ: 302 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 10/01/2022 ರಂದು ಬೆಳಗ್ಗೆ 08:00 ಗಂಟೆಯಿಂದ ದಿನಾಂಕ 14/01/2022 ರಂದು ರಾತ್ರಿ 07:45 ಗಂಟೆಯ ಮಧ್ಯೆ ಪಿರ್ಯಾದಿದಾರರಾಧ ವಿಜೇಂದ್ರ ನಾಯಕ್‌ (57) ತಂದೆ: ದಿವಂಗತ ಕೆ ಸುಬ್ರಾಯ ನಾಯಕ್‌ ವಾಸ: ಮನೆ ನಂಬ್ರ 4-184, ತಿರುಮಲ ಜಾರ್ಕಳ ಯರ್ಲಪಾಡಿ ಗ್ರಾಮ, ಕುಕ್ಕುಂದೂರು ಇವರ ವಾಸ್ತವ್ಯದ ಮನೆಯ ಮುಂದಿನ ಬಾಗಿಲಿನ ಚಿಲಕವನ್ನು ಯಾರೋ ಕಳ್ಳರು ಯಾವುದೋ ಸಾಧನದಿಂದ ಮುರಿದು ಮನೆಯ  ಒಳಪ್ರವೇಶಿಸಿ ಮನೆಯೊಳಗಿನ ಬೆಡ್ ರೂಮಿನ ಬಾಗಿಲಿನ ಬೀಗವನ್ನು ಮುರಿದು ಕೋಣೆಗೆ ಪ್ರವೇಶಿಸಿ ಕೋಣೆಯಲ್ಲಿರುವ ಕಪಾಟನ್ನು ತೆರೆದು ಕಪಾಟಿನಲ್ಲಿರಿಸಿದ್ದ ಸುಮಾರು 35,000/- ರೂಪಾಯಿ ಮೌಲ್ಯದ ಸುಮಾರು 850 ಗ್ರಾಂ ತೂಕದ ಬೆಳ್ಳಿ ಸೊತ್ತುಗಳನ್ನು ಹಾಗೂ ಕಪಾಟಿನಲ್ಲಿದ್ದ ಸುಮಾರು 5,000/- ರೂಪಾಯಿ ಮೌಲ್ಯದ ಕೈಗಡಿಯಾರವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 09/2022 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ವಿದ್ಯಾನಂದ ಕೆ ಶೆಟ್ಟಿ (40) ತಂದೆ:ಕಿಟ್ಟಣ್ಣ ಶೆಟ್ಟಿ ವಾಸ:ಸೀತಾ ನಿವಾಸ, ಕುಂಜೂರು, ಎಲ್ಲೂರು ಗ್ರಾಮ, ಕಾಪು ಇವರ ಅತ್ತೆಯ ಮಗ ರಾಜೇಶ್ ಶೆಟ್ಟಿ (39) ಎಂಬುವರು ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿಯ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರೂ ಸಮಯಕ್ಕೆ ಸರಿಯಾಗಿ ಮಾತ್ರೆಗಳನ್ನು ಸೇವಿಸುತ್ತಿರಲಿಲ್ಲ. ಮತ್ತು ಇತ್ತೀಚೆಗೆ ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದನು. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 14/01/2022 ರಂದು 12:00 ಗಂಟೆಯಿಂದ, 12:30 ಗಂಟೆಯ ಮದ್ಯಾವಧಿಯಲ್ಲಿ ಕಾಪು ತಾಲೂಕು ಎಲ್ಲೂರು ಗ್ರಾಮ ಕುಂಜೂರಿನ ಸೂರಿಬೆಟ್ಟು ಕುಟುಂಬದ ನಾಗಬನದಬಳಿ ರೈಲ್ವೆ ಹಳಿಗೆ ತನ್ನ ತಲೆ ಹಾಗೂ ದೇಹವನ್ನು ಇರಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಈ ವೇಳೆ ಉಡುಪಿ-ಮಂಗಳೂರು ಮಾರ್ಗದಲ್ಲಿ ಚಲಿಸುವ ಯಾವುದೋ ರೈಲು ಆತನ ಮೇಲೆ ಚಲಿಸಿದ ಪರಿಣಾಮ ರಾಜೇಶ್ ಶೆಟ್ಟಿ ರವರು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 01/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಹೆಬ್ರಿ: ಫಿರ್ಯಾದಿದಾರರಾಧ ಜಯರಾಮ್ ಶೆಟ್ಟಿಗಾರ (53) ತಂದೆ:ದಿ ಸುಕ್ರ ಶೆಟ್ಟಿಗಾರ ವಾಸ: ಕೆಳ ಕಬ್ಯಾಡಿ  ಪರ್ಕಳ 80 ಬಡಗುಬೆಟ್ಟು  ಅಂಚೆ ಪರ್ಕಳ ಗ್ರಾಮ ಉಡುಪಿ ಇವರ ತಮ್ಮಂದಿರಾದ ಶಂಕರನಾರಾಯಣ (44) ರವರು ಮದುವೆಯಾಗಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ಎಂಬಲ್ಲಿ ಅವರ ಸಂಸಾರ ಸಮೇತ ವಾಸ ಮಾಡಿಕೊಂಡಿರುತ್ತಾರೆ. ಇನ್ನೊಬ್ಬ ತಮ್ಮ ರವಿರಾಜ ಶೆಟ್ಟಿಗಾರ (43) ರವರು ಸಹ ಅವರ ಮನೆಯ ಪಕ್ಕದ ಇನ್ನೊಂದು ಮನೆಯಲ್ಲಿ ಒಬ್ಬರೆ ವಾಸ ಮಾಡಿಕೊಂಡಿದ್ದು ಅವರಿಗೆ ಮದುವೆಯಾಗಿರುವುದಿಲ್ಲ. ರವಿರಾಜ ಶೆಟ್ಟಿಗಾರ (43) ರವರು ಟೈಲರಿಂಗ್ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 12/01/2022 ರಂದು ಶಿವಪುರ ಗ್ರಾಮದ ಕಾಳಾಯಿ ಎಂಬಲ್ಲಿರುವ ಮನೆಯ ಬಳಿ ಇರುವ ಕೋಣೆಯ ಮಾಡನ್ನು ಶಂಕರನಾರಾಯಣರವರು ರವಿರಾಜ ಶೆಟ್ಟಿಗಾರ ರವರಲ್ಲಿ ಕೇಳದೇ ಕಿತ್ತು ಹಾಕಿರುತ್ತಾರೆ. ಈ ವಿಚಾರದಲ್ಲಿ ಅವರಿಬ್ಬರು ವೈಮನಸ್ಸಿನಲ್ಲಿದ್ದರು. ರವಿರಾಜ ಶೆಟ್ಟಿಗಾರ ರವರು ದಿನಾಂಕ 13/01/2022 ರಂದು ಬೆಳಿಗ್ಗೆ 08.00 ಗಂಟೆಯಿಂದ ದಿನಾಂಕ 14/01/2022 ರಂದು ಬೆಳಿಗ್ಗೆ 09:00 ಗಂಟೆಯ ಮಧ್ಯಾವಧಿಯಲ್ಲಿ ಶಿವಪುರ ಗ್ರಾಮದ ಕಾಳಾಯಿ ಮುಳ್ಳುಗುಡ್ಡೆ ಎಂಬಲ್ಲಿರುವ ಅವರ ಮನೆಯ ಹತ್ತಿರದ ಆವರಣವಿಲ್ಲದ ಬಾವಿಯಲ್ಲಿ ನೀರನ್ನು ತೆಗೆಯಲು ಬಕೇಟಿಗೆ ಹಗ್ಗ ಕಟ್ಟಿ ಬಾವಿಯಿಂದ ನೀರನ್ನು ಎಳೆಯುವಾಗ ಅವರ ಕಾಲು ಜಾರಿ ಬಾವಿಯ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಶಂಕರನಾರಾಯಣ ರವರು ಮನೆಯ ಬಳಿಯ ಕೋಣೆಯ ಮಾಡನ್ನು ರವಿರಾಜ ಶೆಟ್ಟಿಗಾರ ರವರಿಗೆ ಹೇಳದೇ ಕಿತ್ತು ಹಾಕಿರುವುದಲ್ಲದೇ ಹಾಗೂ ಮೃತರ ತಲೆಯ ಹಿಂಬದಿ ರಕ್ತಗಾಯ ಇರುವುದರಿಂದ ಮೃತರ ಮರಣದಲ್ಲಿ ಜಯರಾಮ್ ಶೆಟ್ಟಿಗಾರ  ರವರಿಗೆ ಸಂಶಯವಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2022 ಕಲಂ: 174 (ಸಿ) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 14/01/2022 ರಂದು ಸಮಯ 11:30 ಗಂಟೆಗೆ ಕಟ್‌ಬೆಲ್ತೂರು ಗ್ರಾಮ ಪಂಚಾಯತಿಯ 2021-22 ನೇ ಸಾಲಿನ ಪ್ರಥಮ ಗ್ರಾಮ ಸಭೆಯಲ್ಲಿ 2 ಸದಸ್ಯರು ಗೈರು ಹಾಜರಾದ ಕಾರಣ ಗ್ರಾಮಸ್ಥರು ಸಭೆಯನ್ನು ಮುಂದೂಡುವ ಬಗ್ಗೆ ಸಲಹೆ ನೀಡದ ಮೇರೆಗೆ ಸಭೆಯನ್ನು ದಿನಾಂಕ 19/01/2022 ಕ್ಕೆ ಮುಂದೂಡಿದ್ದು. ನಂತರ ಗ್ರಾಮ ಪಂಚಾಯತ್‌ಗೆ ಸಂಬಂಧಿಸದ ಆರೋಪಿತ ಮಹೇಶ್ ಖಾರ್ವಿ ಬಿನ್ ದಾಸ ಖಾರ್ವಿ ಕುಂದಾಪುರ ಎನ್ನಲಾದ ವ್ಯಕ್ತಿಯೊರ್ವರು ಗ್ರಾಮ ಪಂಚಾಯತ್‌ ಒಳಗೆ ಅಕ್ರಮ ಪ್ರವೇಶ ಮಾಡಿ  ಗ್ರಾಮ ಸಭೆಯನ್ನು ಯಾಕೆ ಮುಂದೂಡಿದ್ದು ಎಂದು ಸಭೆಯಲ್ಲಿದ್ದ ಗ್ರಾಮ ಪಂಚಾಯತ್‌ ಸದಸ್ಯರಾದ ಪಿರ್ಯಾದಿದಾರರಾಧ ಅಶೋಕ ಬಳೆಗಾರ (59) ತಂದೆ:ಶೇಷು ಬಳೆಗಾರ ವಾಸ:ಗಣೇಶ ನಿಲಯ ಕಟ್‌ಬೆಲ್ತೂರು ಗ್ರಾಮ ಕುಂದಾಪುರ ಇವರನ್ನು ತಡೆದು ನಿಲ್ಲಿಸಿ ಕಾಲರ್‌ಪಟ್ಟಿ ಹಿಡಿದು ದಮ್ಕಿ ಹಾಕಿ ಹಲ್ಲೆ ಮಾಡಲು ಯತ್ನಿಸಿ ಗ್ರಾಮ ಸಭೆಯನ್ನು ಪ್ರಾರಂಭಿಸಿ  ಇಲ್ಲವಾದಲ್ಲಿ ನಿಮ್ಮನ್ನು  ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿದೆ, ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ:  341,323,448,504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-01-2022 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080