ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 14/01/2022 ರಂದು ಬೆಳಿಗ್ಗೆ ಸುಮಾರು 11.30 ಗಂಟೆಗೆ ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ NH-66 ರ ಫ್ಲೈ-ಓವರ್ ಬಳಿಯ ಪೂರ್ವ ಬದಿಯ ಸರ್ವೀಸ್ ರಸ್ತೆಯಲ್ಲಿ ಪಿರ್ಯಾದಿದಾರರಾದ ಸುಭಾಶ್ ಆರ್(21) ತಂದೆ:ರಮೇಶ ವಾಸ:3/8 ಮುಖ್ಯರಸ್ತೆಯ ಬಳಿ ಬಾಳೇಕೊಪ್ಪ ಮುದ್ದನ ಹಳ್ಳಿ ಅಂಚೆ ಶಿಕಾರಪುರ ತಾಲೂಕು ಶಿವಮೊಗ್ಗ ರವರು KA-29 X-9389ನೇ ಹೋಂಡಾ ಡಿಯೋ ಸ್ಕೂಟರಿನಲ್ಲಿ ಸಂಬಂದಿಕರಾದ ಪ್ರಸನ್ನ(18), ಪವನ್(13) ರವರುಗಳನ್ನು ಸಹಸವಾರರಾಗಿ ಕುಳ್ಳಿರಿಸಿಕೊಂಡು ಕುಂದಾಪುರದ ಕಡೆಯಿಂದ ಹಾಲಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುವಾಗ ಹಾಲಾಡಿ ಕಡೆಯಿಂದ ಕೋಟೇಶ್ವರದ ಕಡೆಗೆ ಆಪಾದಿತ ಪ್ರಕಾಶ್.ಎಮ್ ರವರು KA-20 AA-9736 TATA ACE ಗೂಡ್ಸ್ ವಾಹನವನ್ನು ಅತಿವೇಗ ಮತ್ತು  ಅಜಾಗರೂಕತೆಯಿಂದ ಚಲಾಯಿಸಿ ದೂರುದಾರರ ಹೋಂಡಾ ಡಿಯೋ ಸ್ಕೂಟರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರರು ವಾಹನ ಸಮೇತ ರಸ್ತೆಗೆ ಬಿದ್ದಿದ್ದು   ದೂರುದಾರರಿಗೆ ಎಡಕಾಲಿಗೆ ಮೂಳೆ ಮುರಿತ,ಎಡಕೈಗೆ ತರಚಿದ ಗಾಯ ಉಂಟಾಗಿದ್ದು, ಪ್ರಸನ್ನನಿಗೆ ಎಡಕೈ ಮತ್ತು ಎಡಕಾಲಿಗೆ ತರಚಿದ ಗಾಯ ಉಂಟಾಗಿರುತ್ತದೆ.ಪವನನಿಗೆ ಯಾವುದೇ ಗಾಯ ಉಂಟಾಗಿರುವುದಿ ಲ್ಲ. ಗಾಯಾಳುಗಳು ಚಿಕಿತ್ಸೆಗೆ ಕೋಟೇಶ್ವರದ N.R. ಆಚಾರ್ಯ ಆಸ್ಪತ್ರೆಗೆ ದಾಖಲಾಗಿದ್ದು ದೂರುದಾರ ಸುಭಾಶ್.ಆರ್ ಒಳ ರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಸನ್ನನಿಗೆ ಚಿಕಿತ್ಸೆ ಕೊಡಿಸಿ ಬಿಡುಗಡೆ ಗೊಳಿಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦6/2022 ಕಲಂ; 279, 337, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 13/01/2022 ರಂದು 14;30 ಗಂಟೆಗೆ, ಕುಂದಾಪುರ ತಾಲೂಕು, ಭೀಜಾಡಿ ಗ್ರಾಮದ ರಾಯಲ್‌‌‌ ಎನ್‌‌ಫೀಲ್ಡ್‌ ‌ಶೋರೂಂ ಎದುರುಗಡೆ,  ಪಶ್ಚಿಮ ಬದಿಯ NH 66 ಪಶ್ಚಿಮ ಬದಿಯ ರಸ್ತೆಯಲ್ಲಿ, ಆಪಾದಿತ KA-19 MF-8782 ನೇ ಕಾರಿನ ಚಾಲಕ ಕಾರನ್ನು ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು,  ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ನವೀನ್‌ ‌ಕುಮಾರ್‌ (32) ತಂದೆ: ಪುಟ್ಟಯ್ಯ ಆಚಾರ್ಯ ವಾಸ:  ಯಡಬೆಟ್ಟು ಮೂಡಹಡು ಗ್ರಾಮ, ಸಾಸ್ತಾನ, ಬ್ರಹ್ಮಾವರ ತಾಲೂಕು ಇವರ ಮಾವ ಆನಂದ ಆಚಾರ್ಯ ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20 ED-3622 ನೇ ಮೋಟಾರು ಸೈಕಲ್ ಓವರ್‌ ‌‌ಟೇಕ್‌‌ ಮಾಡಿ ಮುಂದೆ ಹೋಗಿ ಯಾವುದೇ ಸೂಚನೆ ನೀಡದೇ ಒಮ್ಮಲೇ ರಸ್ತೆಯ ಎಡಕ್ಕೆ ಚಲಾಯಿಸಿದಾಗ,  ಆನಂದ ಆಚಾರ್ಯರವರ ಮೋಟಾರು ಸೈಕಲ್ಲ ಹಿಂಭಾಗಕ್ಕೆ ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿ ಆನಂದ ಆಚಾರ್ಯರವರ ಬಲಕಾಲಿಗೆ ಗಂಬೀರಗಾಯವಾಗಿ ಚಿಕಿತ್ಸೆ ಬಗ್ಗೆ ಕೋಟೇಶ್ವರ ಎನ್‌ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ ೦5/2022 ಕಲಂ; 279, 338 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಫಿರ್ಯಾದುದಾರರಾದ ಸಂಜೀವ ಕುಂದರ್‌, (68) ತಂದೆ:  ಕೊರಗ ಸಫಲಿಗ ವಾಸ:  'ಕುಸುಮನಿಲಯ', ಐದು ಸೆಂಟ್ಟ್‌ ದೊಡ್ಡಣಗುಡ್ಡೆ, ಬೆಳ್ಳಂಪಳ್ಳಿ ಗ್ರಾಮ, ಉಡುಪಿ ಇವರ ತಮ್ಮನಾದ ಮಹಾಬಲ ಸಫಲಿಗ (61) ರವರು ಸುಮಾರು 15 ವರ್ಷಗಳಿಂದ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದವರು ದಿನಾಂಕ 15/01/2022 ರಂದು ಬೆಳಿಗ್ಗೆ 06:00 ಗಂಟೆಯ ಸುಮಾರಿಗೆ ಕಿನ್ನಿಮೂಲ್ಕಿಯಿಂದ ಚಿಟ್ಪಾಡಿಗೆ ಹೋಟೆಲ್‌ ಕೆಲಸಕ್ಕೆಂದು ನಡೆದುಕೊಂಡು ಬರುವಾಗ ಜೋಡುಕಟ್ಟೆಯ ಬಳಿ ತೀವ್ರ ರೀತಿಯ ಎದೆನೋವಿನಿಂದ ಕುಸಿದುಬಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಿತ್ರ ಆಸ್ಪತ್ರೆಗೂ, ತದನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೂ  ಕರೆದುಕೊಂಡು ಹೋದಲ್ಲಿ, ಬೆಳಿಗ್ಗೆ07:50 ಗಂಟೆಯ ಸುಮಾರಿಗೆ ಪರೀಕ್ಷಿಸಿದ ವೈದ್ಯರು, ಮಹಾಬಲಸಫಲಿಗರವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 5/2022 ಕಲಂ; 174 ಸಿ.ಆರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ

ಕಳವು ಪ್ರಕರಣ

 • ಕಾಪು: ಪಿರ್ಯಾದಿದಾರರಾದ ಸುರೇಂದ್ರ  (38) ತಂದೆ:  ರಾಮ ಮೂಲ್ಯ  ವಾಸ :  ಜನತಾ ಕಾಲೋನಿ ಚಂದ್ರನಗರ, ಪಾದೂರು ಗ್ರಾಮ ಮತ್ತು ಅಂಚೆ ಕಾಪು ತಾಲೂಕು ಉಡುಪಿ ಇವರು ಕೋಟೆ ಗ್ರಾಮದ ಕಲ್ಲಾಪುವಿನಲ್ಲಿ ಉಡುಪಿ ಮೋಟಾರ್ಸ್‌ಎಂಬ ದ್ವಿಚಕ್ರ ವಾಹನಗಳ ರಿಪೇರಿಗೆ ಗ್ಯಾರೇಜ್ ಅಂಗಡಿಯನ್ನು ನಡೆಸಿಕೊಂಡಿದ್ದು, ಉದ್ಯಾವರ ಗ್ರಾಮದ ರಾಜೇಶ ಗಾಣಿಗ ರವರ KA-20 EG-0881 ನೇ ನಂಬ್ರದ ಹಿರೋ ಮ್ಯಾಯಿಸ್ಟ್ರೋ ಸ್ಕೂಟರ್‌ನ್ನು ಸುಮಾರು ಒಂದು ತಿಂಗಳ ಹಿಂದೆ ರಿಪೇರಿ ಬಗ್ಗೆ ಸುರೇಂದ್ರ ರವರ ಗ್ಯಾರೇಜ್‌ನಲ್ಲಿಟ್ಟಿದ್ದು, ಪಿರ್ಯಾದಿದಾರರು  ಸದ್ರಿ ಸ್ಕೂಟರ್‌‌ನ್ನು ರಿಪೇರಿ ಮಾಡಿ ಸದ್ರಿ ಸ್ಕೂಟರ್‌‌ನ್ನು ಕೀ ಸಮೇತ  ಗ್ಯಾರೇಜ್‌ನ  ಎದುರು ಇಟ್ಟಿದ್ದು,   ದಿನಾಂಕ 12/01/2022 ರಂದು ಮಧ್ಯಾಹ್ನ ಸುಮಾರು ಸಮಯ 1:00 ಗಂಟೆಗೆ ಇವರು ಹೊರಗೆ ಹೋಗಿ ವಾಪಾಸ್ಸು ಬಂದು ಎಂದಿನಂತೆ ಕೆಲಸ ಮಾಡಿಕೊಂಡಿದ್ದು ಸುರೇಂದ್ರ ರವರು ಸಂಜೆ ಹೋತ್ತು ಗ್ಯಾರೇಜ್‌ನ ಮುಚ್ಚುವ ಸಮಯ ಸ್ಕೂಟರ್‌‌ನ್ನು ನೋಡುವಾಗ ಸದ್ರಿ  ಸ್ಕೂಟರ್‌‌ನ್ನು ಕಾಣದೇ ಇದ್ದು ಅಕ್ಕ ಪಕ್ಕದಲ್ಲಿ ಹುಡುಕಾಡಿದಲ್ಲಿ ಸಿಗದೇ ಇರುವುದರಿಂದ ಈ ಬಗ್ಗೆ ಹತ್ತಿರದ ಅಂಗಡಿಯವರಲ್ಲಿ ಹಾಗೂ ಅವರ ಸಿ.ಸಿ. ಕ್ಯಾಮೇರಾವನ್ನು ಪರೀಶಿಲಿಸಿದಾಗ ಯಾರೋ ಅಪರಿಚಿತರು ಸದ್ರಿ ಸ್ಕೂಟರ್‌‌ನ್ನು  ಅಲ್ಲಿದ್ದ ಹೆಲ್ಮೆಟ್ ಸಮೇತ ಕಳ್ಳತನ ಮಾಡಿಕೊಂಡು ಕಟಪಾಡಿ ಕಡೆಗೆ ಹೋಗಿರುವುದಾಗಿದೆ. ಸ್ಕೂಟರ್‌ನ ಅಂದಾಜು ಮೌಲ್ಯ 15,000/- ಹಾಗೂ ಹೆಲ್ಮೆಟ್‌ನ ಅಂದಾಜು ಮೌಲ್ಯ 500/- ಆಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 05/2022  ಕಲಂ: 379  ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದುದಾರರಾದ ಶ್ರೀಮತಿ ಲಕ್ಷ್ಮಿ, (54) ಗಂಡ: ಸತೀಶ್‌ ರಾವ್‌ ವಾಸ: ವೆಂಕಟಾದ್ರಿ, ಈಸ್ಟ್‌ ಬ್ಲಾಕ್‌ ರಸ್ತೆ, ವಿ.ಎಲ್‌.ಎಲೇಔಟ್‌, ಕುಂದಾಪುರ ,ಉಡುಪಿ ಜಿಲ್ಲೆ ಇವರು ಸಂಬಂಧಿಕರ ಜೊತೆ ದಿನಾಂಕ 14/01/2022 ರಂದು ಕುಂದಾಪುರದಿಂದ ಉಡುಪಿಕೃಷ್ಣ ಮಠಕ್ಕೆ ಬಂದಿದ್ದು, ಮಧ್ಯಾಹ್ನ 12:45 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಕೃಷ್ಣ ಮಠದ ಶ್ರೀಅನಂತೇಶ್ವರ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು ತೀರ್ಥ ಪಡೆಯುವಾಗ 3 ಜನ ದಡೂತಿ ದೇಹದ ಮಹಿಳೆಯರು ಹಾಗೂ ಇಬ್ಬರು ಗಂಡಸರು ಸೇರಿ ಪಿರ್ಯಾದುದಾರರ ಬಟ್ಟೆಯ ಕೈ ಚೀಲದ ಒಂದು ಬದಿಯನ್ನು ಯಾವುದೋ ಹರಿತವಾದ ಆಯುಧದಿಂದ ಹರಿದು ಚೀಲದಲ್ಲಿದ್ದ ಸಣ್ಣ ಪರ್ಸ್‌ನ್ನು ಕಳವುಮಾಡಿದ್ದು, ಪರ್ಸ್‌ನಲ್ಲಿ ರೂ. 10,000/- ನಗದು, ಮನೆಯ ಬೀಗದ ಗೊಂಚಲು ಹಾಗೂ ಕೆಲವು ಬಿಲ್‌ಗಳು ಇರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2022  ಕಲಂ: 379 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಮಾರಾಟ ಯತ್ನ ಪ್ರಕರಣ

 • ಮಣಿಪಾಲ: ದಿನಾಂಕ 15/01/2022 ರಂದು ಬೆಳಿಗ್ಗೆ 10:00 ಗಂಟೆಗೆ ಪಿ.ಎಸ್‌.ಐ ಸುಧಾಕರ್‌ ತೋನ್ಸೆ ರವರು ಠಾಣೆಯಲ್ಲಿದ್ದಾಗ ಮಣಿಪಾಲ RTO ಕಛೇರಿ ಸಮೀಪದ ಸರ್ಕಲ ಬಳಿ ಇಬ್ಬರು ಯುವಕರು KA-20-Z 0566 ನೇ ಕಾರಿನಲ್ಲಿ ಗಾಂಜಾ ಖರೀದಿ ಮತ್ತು ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾರೆ ಕೂಡಲೇ ದಾಳಿ ಮಾಡದೇ ಹೋದರೆ ಅವರು ತಪ್ಪಿಸಿ ಕೊಳ್ಳುವ ಸಾಧ್ಯತೆಇ ರುತ್ತದೆ. ಎಂದು ಬಾತ್ಮಿದಾರರು ಮಾಹಿತಿ ನೀಡಿದ ಮೇರೆಗೆ ಸದರಿ ಮಾಹಿತಿಯನ್ನುಪಿ.ಎಸ್‌.ಐರವರು ಡಿ.ವೈ.ಎಸ್.ಪಿಉಡುಪಿ, ಅಡಿಶನಲ್ ಎಸ್.ಪಿ ಉಡುಪಿ, ಮತ್ತು ಎಸ್.ಪಿ ಉಡುಪಿರವರಿಗೆ ದೂರವಾಣಿ ಮುಖಾಂತರ ತಿಳಿಸಿ, ಅವರ ಅನುಮತಿ ಪಡೆದು ನಂತರ ಪತ್ರಾಂಕಿತ ಅಧಿಕಾರಿಯಾದ ಡಾ.ವಾಸುದೇವ, ಪಂಚರೊಂದಿಗೆ ಸ್ಥಳಕ್ಕೆ ತೆರಳಿ ಆಪಾದಿತರಾದ ರೈಡನ್‌ ರೋಲಂಡ್‌ ‌‌‌ರೋಡ್ರಿಗಸ್‌ ಮತ್ತು ಮೈತ್ರೇಯಾ ಶರ್ಮಾ, ಎಂಬವರನ್ನು ವಶಕ್ಕೆ ಪಡೆದು ರೈಡನ್‌ ರೋಲಂಡ್‌ ‌‌‌ರೋಡ್ರಿಗಸ್‌ ಎಂಬಾತನವಶದಲ್ಲಿದ್ದ 338 ಗ್ರಾಂ ಮಾದಕ ವಸ್ತು ಗಾಂಜಾ ಮತ್ತು ಮೈತ್ರೇಯಾ ಶರ್ಮಾ ಎಂಬಾತನ ವಶದಲ್ಲಿದ್ದ 295 ಗ್ರಾಂ ಮಾದಕ ವಸ್ತು ಗಾಂಜಾ ಮತ್ತು ಆರೋಪಿಗಳವಶದಲ್ಲಿದ್ದ 2 ಮೊಬೈಲ್ಫೋನ್, ಮತ್ತು ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿರುತ್ತದೆ. ಸ್ವಾಧೀನಪಡಿಸಿಕೊಳ್ಳಲಾಗಿರುವ ಸ್ವತ್ತುಗಳ ಒಟ್ಟು ಮೌಲ್ಯ  2,51,000/- ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2022 ಕಲಂ:8c, 20(b), (II)(a) NDPS Act ರಂತೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 15-01-2022 07:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080