ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಉಮೇಶ್ ಗೊಂಡ (30), ತಂದೆ:ಶುಕ್ರ ಗೊಂಡ, ವಾಸ: ಸಿದ್ದಿವಿನಾಯಕ ನಿಲಯ , ಕಡ್ಕೆ ,ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 13/12/2022 ರಂದು ಮಧ್ಯಾಹ್ನ 12:30  ಗಂಟೆಗೆ ಶಿರೂರಿನಲ್ಲಿ  ವೆಲ್ಡಿಂಗ್ ಕೆಲಸ ಮುಗಿಸಿ  ಶಿರೂರಿನಿಂದ ತೂದಳ್ಳಿ ಮನೆಯ ಕಡೆಗೆ ಅವರ ಮೋಟಾರು ಸೈಕಲ್ ನಲ್ಲಿ ಬರುತ್ತಾ ಯಡ್ತರೆ  ಗ್ರಾಮದ ಹಡವಿನಗದ್ದೆ ಕ್ರಾಸ್ ರಸ್ತೆ ಬಳಿ ತಲುಪಿದಾಗ ಪಿರ್ಯಾದಿದಾರರ ಮುಂದಿನಿಂದ  KA-20-EX-4271  ನೇ ಮೋಟಾರು ಸೈಕಲ್ ನಲ್ಲಿ ಪಿರ್ಯಾದಿದಾರರ ಪರಿಚಯದ ಹರೀಶ್ ರವರು ದೇವೇಂದ್ರ ಎಂಬುವವರನ್ನು ಸಹ ಸವರರಾಗಿ ಕುಳ್ಳಿರಿಸಿಕೊಂಡು ಶಿರೂರಿನಿಂದ ತೂದಳ್ಳಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು  ಆ ಸಮಯ ಹಡವಿನಗದ್ದೆ ಕ್ರಾಸ್ ಡಾಮಾರು ರಸ್ತೆಯ ಬಳಿ KA-47-U-4472 ನೇ ಮೋಟಾರು ಸೈಕಲ್ ಸವಾರ  ವಾಸು ಎಂಬವರು  ರಾಘವೇಂದ್ರ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತೂದಳ್ಳಿ  ಕಡೆಯಿಂದ ಶಿರೂರು ಕಡೆಗೆ ಅತೀ ವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು  ಮುಂದಿನಿಂದ  ಹೋಗುತ್ತಿದ್ದ  ಟಿಪ್ಪರ್ ನ್ನು ಓವರಟೇಕ್ ಮಾಡಿ ರಸ್ತೆಯ ತೀರ ಬಲಬದಿಗೆ ಚಲಾಯಿಸಿ ಶಿರೂರಿನಿಂದ ತೂದಳ್ಳಿ ಕಡೆಗೆ  ಹೋಗುತ್ತಿದ್ದ KA-20-EX-4271  ನೇ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ ಹೊಡೆದ  ಪರಿಣಾಮ ಎರಡೂ ಮೋಟಾರು ಸೈಕಲ್ ಸವಾರರು ಹಾಗೂ ಸಹ ಸವಾರರು ರಸ್ತೆಗೆ ಬಿದ್ದವರನ್ನು ಪಿರ್ಯಾದಿದಾರರು ಹಾಗೂ ಸಾರ್ವಜನಿಕರು ಸೇರಿ ಎತ್ತಿ ಉಪಚರಿಸಿದ್ದು ಅಪಘಾತದ ಪರಿಣಾಮ ರಾಘವೇಂದ್ರ ರವರಿಗೆ ತಲೆಗೆ ಹಾಗೂ ಹೊಟ್ಟೆಗೆ ರಕ್ತಗಾಯ , ದೇವೇಂದ್ರ ಎಂಬವರಿಗೆ  ಕುತ್ತಿಗೆ ಮತ್ತು ತಲೆಗೆರಕ್ತಗಾಯ, ಹರೀಶ ಎಂಬವರಿಗೆ ತಲೆಗೆ  ಹಾಗೂ ದೇಹದ ಇತರ ಭಾಗಗಳಿಗೆ ರಕ್ತಗಾಯವಾಗಿದ್ದು, ಆರೋಪಿ ಮೋಟಾರು ಸೈಕಲ್ ಸವಾರ ವಾಸು ಎಂಬವರಿಗೂ ಒಳ ನೋವು ಆಗಿರುತ್ತದೆ.   ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ  ಕರೆದುಕೊಂದು ಬಂದಲ್ಲಿ ಅಲ್ಲಿನ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆ  ಬಗ್ಗೆ  ಬೇರೆ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ  ಸೂಚಿಸಿದ ಮೇರೆಗೆ ಗಾಯಾಳುಗಳನ್ನು  ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 242/2022 ಕಲಂ:279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ವಿಘ್ನೇಶ್ ಕುಲಾಲ್ (25), ತಂದೆ: ನಾರಾಯಣ ಕುಲಾಲ್, ವಾಸ: ಸಾಮಿನ್ ಕೊಡ್ಲು , ಪಡುವರಿ ಗ್ರಾಮ , ಬೈಂದೂರು ತಾಲೂಕು ಇವರು ಕೃಷಿಕರಾಗಿದ್ದು, ಕೃಷಿ ಕೆಲಸದ ಬಗ್ಗೆ ಮನೆಯಲ್ಲಿ ದನಗಳನ್ನು ಸಾಕಿಕೊಂಡಿದ್ದು, ಅವುಗಳನ್ನು ಪ್ರತಿದಿನ ಮನೆಯ ಬಳಿ ಮೇಯಲು ಬಿಡುತ್ತಿದ್ದು, ಸಂಜೆಯ ವೇಳೆ  ದನಗಳು ಮನೆಗೆ ವಾಪಾಸ್ಸು ಬರುತ್ತಿದ್ದವು. ಅದರಂತೆ ಪಿರ್ಯಾದಿದಾರರು ದಿನಾಂಕ 10/12/2022 ರಂದು ಬೆಳಿಗ್ಗೆ ಮನೆಯ ಮೂರು ದನಗಳನ್ನು ಮೇಯಲು ಬಿಟ್ಟಿದ್ದು, ಸಂಜೆ ಸಮಯ 2 ದನಗಳು ಮಾತ್ರ ವಾಪಾಸ್ಸು ಮನೆಗೆ ಬಂದಿದ್ದು, ಕಂದು ಬಣ್ಣದ ದನವು ವಾಪಾಸ್ಸು ಬಂದಿರುವುದಿಲ್ಲ. ಪಿರ್ಯಾದಿದಾರರು ಹಾಗೂ ಅವರ ತಂದೆ ಮನೆಯ ಆಸುಪಾಸಿನಲ್ಲಿ ಹತ್ತಿರದ ಕಾಡಿನಲ್ಲಿ ದನವನ್ನು ಹುಡುಕಾಡಿದ್ದು, ಎಲ್ಲಿಯೂ ಸಿಕ್ಕಿರುವುದಿಲ್ಲ.  ದನವನ್ನು ಹುಡುಕಾಡುತ್ತಿರುವಾಗ ದಿನಾಂಕ 13/12/2022 ರಂದು ಸಂಜೆ 5:30 ಗಂಟೆಗೆ ಮದ್ದೋಡಿ ಕಡೆಯಿಂದ ಜೋಗೂರು ಕಡೆಗೆ ಹೋಗುವ ರಸ್ತೆಯಲ್ಲಿ ಪಾಲಿಥಿನ್ ಚೀಲದಲ್ಲಿ ದನದ ತಲೆ ಹಾಗೂ ಚರ್ಮವು ತುಂಬಿಸಿರುವ ರೀತಿಯಲ್ಲಿ ಸಿಕ್ಕಿರುವ ಮಾಹಿತಿ ತಿಳಿದು ಫಿರ್ಯಾದಿದಾರರು ಅಲ್ಲಿಗೆ ಹೋಗಿ ನೋಡಿದಾಗ ಒಂದು ಪಾಲಿಥಿನ್ ಚೀಲದಲ್ಲಿ ದನದ ಚರ್ಮ ಹಾಗೂ ತಲೆಯು ಕೊಳೆತ ಸ್ಥಿತಿಯಲ್ಲಿ ಇರುವುದು ಕಂಡು ಬಂದಿರುತ್ತದೆ. ಆ ದನವನ್ನು ಯಾರೋ ದುರ್ಷರ್ಮಿಗಳು ಎಲ್ಲಿಯೋ ವಧೆ ಮಾಡಿ ಚರ್ಮ ಹಾಗೂ ತಲೆಯನ್ನು ಪಾಲಿಥೀನ್ ಚೀಲದಲ್ಲಿ ತುಂಬಿಸಿ ಬಿಸಾಡಿದ್ದನ್ನು ನಾಯಿಗಳು ಎಳೆದಾಡಿ ಕೊಂಡು ರಸ್ತೆಗೆ ತಂದು ಹಾಕಿರುತ್ತವೆ. ಪಿರ್ಯಾದಿದಾರರ ಮನೆಯ ದನದಂತೆ ಅವರ ಅಕ್ಕಪಕ್ಕದ ಮನೆಯ ದನಗಳು ಕಾಣೆಯಾಗಿದ್ದು, ಅವುಗಳನ್ನು ಯಾರೋ ಕಳವು ಮಾಡಿ ತೆಗೆದುಕೊಂಡು ಹೋಗಿರಬಹುದು. ಅವುಗಳಲ್ಲಿ ಒಂದು ದನವನ್ನು ವಧೆ ಮಾಡಿ, ಅದರ ಅವಶೇಷಗಳನ್ನು ಬಿಸಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 243/2022 ಕಲಂ: 379 ಐಪಿಸಿ, ಕಲಂ:4, 7,12  ಕರ್ನಾಟಕ ಜಾನುವಾರು  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಕಾರ್ತಿಕೇಯ ಭಟ್‌‌‌‌‌(36),  ಕಂದಾಯ  ನಿರೀಕ್ಷಕರು,   ಕೋಟ,  ಬ್ರಹ್ಮಾವರ  ತಾಲೂಕು ಇವರು  ದಿನಾಂಕ  13/12/2022  ರಂದು  ಮಧ್ಯಾಹ್ನ  2:15  ಗಂಟೆ  ಸಮಯಕ್ಕೆ  ಗಣೇಶ್‌ ‌‌‌‌ಗ್ರಾಂಡ್‌ ‌‌‌‌ಹೋಟೇಲ್‌‌‌ನಲ್ಲಿ  ಊಟ  ಮಾಡಿ  ಹೊರಬರುವಾಗ  ಕುಂದಾಪುರ  ಕಡೆಯಿಂದ  ಉಡುಪಿಗೆ  ಬರುತ್ತಿದ್ದ  KA-20-5072 ಲಾರಿ ಚಾಲಕನು  ಲಾರಿಯನ್ನು  ಕುಂದಾಪುರ-ಉಡುಪಿ  ರಾಷ್ಟ್ರೀಯ ಹೆದ್ದಾರಿ .  66  ರ  ಪೂರ್ವ  ಬದಿಯಲ್ಲಿ  ಉಡುಪಿ  ಕಡೆಗೆ  ಮುಖ ಮಾಡಿ  ನಿಲ್ಲಿಸಿ ಊಟಕ್ಕೆ  ರಸ್ತೆ  ದಾಟಿ  ಬರುತ್ತಿದ್ದು,    ಲಾರಿಯಲ್ಲಿ  ನೋಡಿದಾಗ  ಮರಳು  ತುಂಬಿಕೊಂಡಿದ್ದು,  ಚಾಲಕನಲ್ಲಿ  ಪರ್ಮಿಟ್‌‌ ‌‌‌‌ಬಗ್ಗೆ   ಕೇಳಿದಾಗ  ಇರುವುದಿಲ್ಲವಾಗಿ  ತಿಳಿಸಿದ್ದು,  ಆತನ  ಹೆಸರು  ಕೇಳಲಾಗಿ  ಫಕೀರಪ್ಪ ಹೊಸಮನಿ  ಎಂಬುದಾಗಿ  ತಿಳಿಸಿದನು.  ಲಾರಿಯಲ್ಲಿ  2 ಯುನಿಟ್‌ ‌‌‌‌‌‌‌‌ಮರಳನ್ನು  ಯಾವುದೇ ಪರ್ಮಿಟ್‌ ‌‌‌‌ಇಲ್ಲದೆ  ಕಳವು  ಮಾಡಿಕೊಂಡು ಹೋಗುವುದಾಗಿ  ಕಂಡು ಬಂದಿರುತ್ತದೆ.   ಆತನಲ್ಲಿ  ಮರಳಿನ  ಬಗ್ಗೆ  ವಿಚಾರಿಸಲಾಗಿ ಮರಳನ್ನು  ಗಂಗೊಳ್ಳಿ  ಮೊವ್ವಾಡಿಯ ದಕ್ಕೆಯಿಂದ  ತಂದುದಾಗಿ  ತಿಳಿಸಿರುತ್ತಾರೆ.  ಮರಳಿನ  ಮೌಲ್ಯ  ರೂಪಾಯಿ 10,000/-  ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 222/2022 ಕಲಂ: 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ

ಇತ್ತೀಚಿನ ನವೀಕರಣ​ : 14-12-2022 09:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080