ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ವಸಂತ ಜೋಗಿ (46), ಗಂಡ: ಸುನಂದ ಜೋಗಿ, ವಾಸ:ಖ್ರೆನ್ ಸೆರನಿಟಿ ಪ್ಲಾಟ್ ನಂ: 104, ಮಿಷನ್ ಕಂಪೌಂಡ್ ಬಳಿ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಾಯಿ ಶ್ರೀಮತಿ ಸುನಂದ ಜೋಗಿ (70) ರವರು  ದಿನಾಂಕ 13/12/2022ರಂದು ಉಡುಪಿ ಡಾ.ಟಿ.ಎಮ್.ಎ ಪೈ ಆಸ್ಪತ್ರೆಯ ಬಳಿ ಮನೆ ಬರಲು ರಸ್ತೆಯ ಬದಿಯಲ್ಲಿ ನಿಂತಿಕೊಂಡಿರುವಾಗ ಮಧ್ಯಾಹ್ನ 13:15 ಗಂಟೆಗೆ ಜೋಡುಕಟ್ಟೆ ಕಡೆಯಿಂದ ಲಯನ್ಸ್ ಸರ್ಕಲ್ ಕಡೆಗೆ KA-20-EH-3858ನೇ ಸ್ಕೂಟರ್ ಸವಾರ ವಿಕಾಸ್  ತನ್ನ ಸ್ಕೂಟರನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡ ಬದಿಗೆ ಸವಾರಿ ಮಾಡಿಕೊಂಡು ಬಂದು ರಸ್ತೆ ದಾಟಲು ರಸ್ತೆಯ ಎಡಬದಿಯಲ್ಲಿ ನಿಂತಿದ್ದ  ಪಿರ್ಯಾದಿದಾರರ ತಾಯಿಗೆ ಡಿಕ್ಕಿ ಹೊಡೆದ ಪರಿಣಾಮ ಎಡಕಾಲಿನ ಪಾದದ ಬಳಿ ಗಂಭೀರ ಸ್ವರೂಪದ ಮೂಳೆ ಮುರಿತ ಜಖಂ, ತಲೆಗೆ ಗುದ್ದಿ ಒಳಜಖಂ ಆಗಿ ಚಿಕಿತ್ಸೆಯ ಬಗ್ಗೆ  ಡಾ.ಟಿ.ಎಮ್.ಎ ಪೈ ಆಸ್ಪತ್ರೆಗೆ ದಾಖಲಿಸಿದ್ದು, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ದಿನಾಂಕ 14/12/2022 ರಂದು ಪಿರ್ಯಾದಿದಾರರಾದ ದಿನೇಶ್ ಪೂಜಾರಿ (58), ತಂದೆ: ಹೆಂಕುರ ಪೂಜಾರಿ, ವಿಳಾಸ: : 2-128, ಗರಡಿಮನೆ, ಅಲಂಗಾರು, ಪೆರ್ಡೂರು,  ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಸಿ ಸಾಮಾನು ಖರೀದಿ ಮಾಡುವ ಬಗ್ಗೆ ಪೆರ್ಡೂರು ಮೇಲ್ಪೇಟೆಯಲ್ಲಿನ   ದಿನಸಿ  ಅಂಗಡಿಗೆ ಬಂದಿದ್ದು  ಬೆಳಿಗ್ಗೆ  9:45  ಪೆರ್ಡೂರು ಮೇಲ್ಪೇಟೆಯಲ್ಲಿನ  ಅನಂತಪದ್ಮನಾಭ ಟಯರ್ಸ್  ಪಂಕ್ಚರ್ ಶಾಪ್‌‌ಗೆ  ಪಂಕ್ಚರ್‌ ಹಾಕಲು  ಬಂದಿದ್ದ  ಲಾರಿಯನ್ನು  ಅದರ ಚಾಲಕನು ಕಚ್ಚಾ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಾಚಾರಿಯ ಕಡೆಗೆ ಗಮನ ಹರಿಸದೇ ನಿರ್ಲಕ್ಷತನದಿಂದ ಒಮ್ಮೆಲೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಾ.ಹೆ 169(ಎ)  ಕಡೆಗೆ ಚಲಾಯಿಸಿದ ಕಾರಣ  ಸದರಿ ಲಾರಿಯು  ಕಚ್ಚಾ ಮಣ್ಣು  ರಸ್ತೆಯಲ್ಲಿ  ಪೆರ್ಡೂರು ಕಡೆಗೆ  ನಡೆದುಕೊಂಡು  ಹೋಗುತ್ತಿದ್ದ  ಪಿರ್ಯಾದಿದಾರರ  ಪರಿಚಯದ  ದೊಡ್ಡಮನೆ ನಿವಾಸಿಯಾದ ಮಂಜಯ್ಯ ಶೆಟ್ಟಿ, ರವರಿಗೆ  ಡಿಕ್ಕಿ ಹೊಡೆದು ನಂತರ .  ಮಂಜಯ್ಯ ಶೆಟ್ಟಿ,ರವರನ್ನು ರಾ.ಹೆ 169(ಎ)  ರಸ್ತೆಗೆ ತಳ್ಳಿಕೊಂಡು ಹೋಗಿ, ಲಾರಿಯ ಚಕ್ರಗಳು ಮಂಜಯ್ಯ ಶೆಟ್ಟಿ ರವರ ಮೇಲೆ ಹರಿದು ಮಂಜಯ್ಯ  ಶೆಟ್ಟಿರವರ ತಲೆ, ಎದೆ, ಕೈ ಗಳು ಜಖಂಗೊಂಡಿದ್ದು,  ಪಿರ್ಯಾದಿದಾರು ಹಾಗೂ  ರಾಜ್‌ ಕುಮಾರ್ ಶೆಟ್ಟಿ,  ಆಶೀತ್ ಶೆಟ್ಟಿ, ದಿನೇಶ್‌ ಶೆಟ್ಟಿ ಹಾಗೂ ಇತರರು ಹತ್ತಿರ ಹೋಗಿ ನೋಡಲಾಗಿ ಮಂಜಯ್ಯ ಶೆಟ್ಟಿರವರು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಅಪಘಾತಗೊಳಿಸಿದ ವಾಹನ ನಂಬ್ರ ನೋಡಲಾಗಿ KA-20-C-819 ನೇ  ಟಿಪ್ಪರ್  ಲಾರಿ ಆಗಿದ್ದು ಅದರ ಚಾಲಕ ರಾಘವೇಂದ್ರ ಎಂಬುದಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಗುರುವಪ್ಪ (62), ತಂದೆ: ನಾಣು ಪೂಜಾರಿ, ಖಾಯಂ ವಾಸ: ಕಳಸ, ಕಳಸೇಶ್ವರ ನಗರ, ಮೂಡಿಗೆರೆ ತಾಲೂಕು  ಪ್ರಸ್ತುತ: ರಾಮಮಂದಿರ, ಕುಂಜಿಬೆಟ್ಟು ಅಂಚೆ, ಇಂದ್ರಾಳಿ-ಮಣಿಪಾಲ ರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ ಉಡುಪಿ ಇವರು ತಾಲೂಕು ಶಿವಳ್ಳಿ ಗ್ರಾಮದ ರಾಮಮಂದಿರ, ಕುಂಜಿಬೆಟ್ಟು ಅಂಚೆ, ಇಂದ್ರಾಳಿ-ಮಣಿಪಾಲ ರಸ್ತೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಹೆಂಡತಿ ಮಂಜುಳ (50) ಎಂಬುವವರೊಂದಿಗೆ ವಾಸ್ತವ್ಯವಿದ್ದು, ಪಿರ್ಯಾದಿದಾರರ ಹೆಂಡತಿ ಕ್ಯಾನ್ಸರ್‌ ಖಾಯಿಲೆಯಿಂದ ಬಳಲುತ್ತಿದ್ದು ಅದೇ ನೋವಿನಿಂದ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು, ದಿನಾಂಕ 14/12/2022 ರಂದು ಬೆಳಿಗ್ಗೆ 03:00 ಗಂಟೆಯಿಂದ ಬೆಳಿಗ್ಗೆ 06:40 ಗಂಟೆ ನಡುವಿನ ಸಮಯದಲ್ಲಿ ಪಿರ್ಯಾದಿದಾರರ ನೆರೆಮನೆಯ ದಾಮೋದರ ರವರ ಮನೆಯ ಬಾವಿಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 47/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ಪಿರ್ಯಾದಿದಾರರಾದ ಅಶೋಕ (37), ತಂದೆ: ರಾಮ ಮರಕಾಲ, ವಾಸ: ಬಲಾಡಿ ಚಾತ್ರುಟಿ, ಅಂಪಾರು ಗ್ರಾಮ ಕುಂದಾಪುರ ತಾಲೂಕು ಇವರ ಅಣ್ಣ ಸುರೇಶ (42) ಮುಳ್ಳುಗುಡ್ಡೆಯ ಸೌಪರ್ಣಿಕ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಇದ್ದು, ಕೆಲಸಕ್ಕೆ ರಜೆ ಮಾಡಿ ಕೆಲಸದ ಸಂಬಳ ಹಣ ತರಲು ಹೋಗಿದ್ದು  ಸಂಜೆ ಮನೆಗೆ ಬಂದು ಸಂಬಳದ ಹಣ ಕಳೆದು ಹೋಯಿತು ಎಂದು ಚಿಂತೆಯಿಂದ ಮನೆಯಲ್ಲಿ ಬೇಸರ ಪಡುತ್ತಿದ್ದು, ಅಲ್ಲದೆ ಬೇರೆ ಸಮಯದಲ್ಲಿ ಕೂಡ ಹೆಚ್ಚಾಗಿ ಕಿನ್ನತೆಯಿಂದ ಇರುತ್ತಿದ್ದು ದಿನಾಂಕ 13/12/2022 ರಂದು 20:15 ಗಂಟೆಗೆ ಕುಂದಾಪುರ ತಾಲೂಕು ಅಂಪಾರು ಗ್ರಾಮದ ಬಲಾಡಿ ಚಾತ್ರುಟಿ ಎಂಬಲ್ಲಿ ಮನೆಯ ಸಮೀಪದ ಬಾವಿಗೆ ಹಾರಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 40/2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿ  ರಮೇಶ ತಿಪ್ಪಣ್ಣ ಮನಿಕಟ್ಟಿ(34) ತಂದೆ: ತಿಪ್ಪಣ್ಣ ಮನಿಕಟ್ಟ ವಾಸ: ಲಕ್ಷ್ಮೀಶ್ವರ ತಾಲೂಕು, ಗದಗ ಜಿಲ್ಲೆಇವರ  ತಮ್ಮ ಜಯಪ್ರಕಾಶ(24 ವರ್ಷ) ರವರು ಚಿಕ್ಕಂದಿನಿಂದಲೂ  ಪಿಯಾರ್ಧಿದಾರರೊಂದಿಗೆ  ವಾಸ ಮಾಡಿಕೊಂಡಿದ್ದು,  ಸುಮಾರು 1 ವರ್ಷಗಳಿಂದ ಮಲ್ಪೆ ಕೊಳ   ಹನುಮಾನ ವಿಠೋಭ ಭಜನಾ  ಮಂದಿರದ ಹತ್ತಿರ  ಬೀಚ್  ಸೈಡ್ ನಲ್ಲಿ  ಗೂಡಂಗಡಿ ಮಾಡಿಕೊಂಡಿರುತ್ತಾನೆ. ,  ಇತ್ತಿಚಿಗೆ  ಸುಮಾರು 1.5 ತಿಂಗಳಿಂದ ಅಂಗಡಿಯನ್ನು ಸರಿಯಾಗಿ ಅಂಗಡಿ ತೆರೆಯದೆ ಇದ್ದು , ಅಂಗಡಿ ವ್ಯಾಪಾರದಲ್ಲಿ ನಷ್ಟ  ಉಂಟಾಗಿರುವುದಾಗಿ ಪಿರ್ಯಾದಿದಾರರಿಗೆ ತಿಳಿಸಿರುತ್ತಾನೆ.  ಅಲ್ಲದೆ  ಪಿರ್ಯಾದಿದಾರರ ತಮ್ಮ ಸುಮಾರು 6 ತಿಂಗಳ ಹಿಂದೆ ಶ್ರೀರಾಮ  ಪೈನಾನ್ಸ್  ನಲ್ಲಿ ಸಾಲ ಮಾಡಿ ಸ್ಕೂಟರ್  ನ್ನು ತೆಗೆದುಕೊಂಡಿದ್ದು, ಸ್ಕೂಟರ್ ನ ಸಾಲವನ್ನು ಕಟ್ಟದೆ ಇರುವುದರಿಂದ  ದಿನಾಂಕ: 10-12-2022 ರಂದು  ಪೈನಾನ್ಸ್  ನವರು ಸ್ಕೂಟರನ್ನು   ಸೀಜ್ ಮಾಡಿ ತೆಗೆದುಕೊಂಡು ಹೋಗಿರುತ್ತಾರೆ.ಪಿರ್ಯಾದಿದಾರರ ತಮ್ಮ  ಇತ್ತೀಚಿಗೆ ಆರ್ಥಿಕ ಅಡೆಚಣೆ ಇರುವುದಾಗಿ ಹೇಳಿ  ಪಿರ್ಯಾದಿದಾರರಿಂದ ಖರ್ಚಿಗೆ  ಹಣವನ್ನು   ಪಡೆದುಕೊಳ್ಳುತ್ತಿದ್ದನು . ದಿನಾಂಕ: 13-12-2022 ರಂದು  ರಾತ್ರಿ  9:00 ಗಂಟೆಯ ಸಮಯಕ್ಕೆ  ಪಿರ್ಯಾದಿದಾರರ ಸ್ನೇಹಿತರಾದ ಶಂಕರ ರವರಲ್ಲಿ  ಖರ್ಚಿಗೆ ಹಣ ಕೇಳಿ  ರೂಮಿಗೆ  ಬಂದಿದ್ದು, ಈ ದಿನ ದಿನಾಂಕ: 14-12-2022 ರಂದು ಬೆಳಿಗ್ಗೆ 8:30 ಗಂಟೆಗೆ ಸ್ನೇಹಿತ ಕಾರ್ತಿಕ ಜಯಪ್ರಕಾಶನ ರೂಮಿನ ಬಾಗಿಲು ತೆರೆಯದೆ ಇರುವುದನ್ನು  ನೋಡಿ  ರೂಮಿನ ಬಾಗಿಲನ್ನು ತೆರೆದು ನೋಡಿದಾಗ ಪಿರ್ಯಾದಿದಾರರ  ತಮ್ಮ ಜಯಪ್ರಕಾಶ ರೂಮಿನಲ್ಲಿ ಮರದ ಜಂತಿಗೆ  ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು  ಕಂಡುಬಂದಿರುತ್ತದೆ. ಈ ಬಗ್ಗೆ ಮಲ್ಪೆ  ಠಾಣಾ ಯುಡಿಆರ್ ನಂಬ್ರ 72/2022 . ಕಲಂ: - 174   ಸಿಆರ್ ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ .   
  • ಕಾರ್ಕಳ ಗ್ರಾಮಾಂತರ : ಕಾರ್ಕಳ ತಾಲೂಕು ದುರ್ಗಾ ಗ್ರಾಮದ ದೆಯಲ್ ಬೆಟ್ಟು  ನಿವಾಸಿ ಪಿರ್ಯಾದಿಶಶಿಕಾಂತ್ ಮೂಲ್ಯ(36), ತಂದೆ: ಭೋಜ ಮೂಲ್ಯ , ವಾಸ: ಶ್ರೀ ದುರ್ಗಾ ದೆಯಲ್ ಬೆಟ್ಟು ಹೌಸ್ ತೆಳ್ಳಾರು  ಅಂಚೆ  ದುರ್ಗಾ ಗ್ರಾಮ  ಇವರ  ತಮ್ಮ ದಯಾನಂದ ಮೂಲ್ಯ ಪ್ರಾಯ 34 ವರ್ಷ ಇವರು ಅವಿವಾಹಿತರಾಗಿದ್ದು ಇಲೆಕ್ರ್ಟೀಶಿಯನ್ ಕೆಲಸ ಮಾಡಿಕೊಂಡಿದ್ದು, ಮಂದ ಸ್ವಭಾವ ಹೊಂದಿದ್ದು, ಪಿರ್ಯಾದಿದಾರರು ತಮ್ಮಂದಿರೊಂದಿಗೆ ಸೇರಿ 4-5 ವರ್ಷಗಳ ಹಿಂದೆ ಹೊಸದಾಗಿ ಮನೆ ಕಟ್ಟಿದ್ದು ಇದಕ್ಕೆ 2  ವರ್ಷಗಳ ಹಿಂದೆ ಸೋಲಾರ್ ಹಾಕುವಾಗ ದಯಾನಂದನು ಸಾಲ ಮಾಡಿದ್ದು, ಇತ್ತೀಚಿಗೆ ಆತನಿಗೆ ಸರಿಯಾಗಿ ಕೆಲಸ ಇಲ್ಲದೇ ಇದ್ದುದ್ದರಿಂದ ಸಾಲವನ್ನು ಮರುಪಾವತಿ ಮಾಡಲು  ಆಗದ ಕಾರಣ ಮನನೊಂದು ಈ ದಿನ ದಿನಾಂಕ 14/12/2022 ರಂದು ಬೆಳಿಗ್ಗೆ 10:00 ಗಂಟೆಯಿಂದ ಮದ್ಯಾಹ್ನ 13:00 ಗಂಟೆಯ ಮಧ್ಯಾವಧಿಯಲ್ಲಿ  ಪಿರ್ಯಾದಿದಾರರ ಮನೆಯ ಬಳಿ ಇರುವ ದೊಡ್ಡಪ್ಪನ ಮಗ ವಸಂತ ಮೂಲ್ಯರವರ  ಮನೆಯ ಒಳಗೆ ಕೊಠಡಿಯಲ್ಲಿ ಪಕ್ಕಾಸಿಗೆ ನೈಲಾನ್ ಹಗ್ಗದಿಂದ  ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 42/2022 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಮಣಿಪಾಲ: ದಿನಾಂಕ 04/12/2022 ರಂದು ಬೆಳಗಿನ ಜಾವ 1:00 ಗಂಟೆಗೆ  ಪಿರ್ಯಾದಿದಾರರಾದ ಆನಿಸ್ (21), ತಂದೆ: ಅಬು ಅಹಮ್ಮದ್, ವಾಸ: ಮನೆ ನಂ: 10-216/1 ಅನ್ಸಿಲ್ ಮಂಜಿಲ್, ಗುಜ್ಜರಬೆಟ್ಟು ತೊನ್ಸೆ ಪಶ್ಚಿಮ ಪಡುತೊನ್ಸೆ ಗ್ರಾಮ. ಉಡುಪಿ ಜಿಲ್ಲೆ ಇವರು ತನ್ನ KA-20-EY-5402  ನೇ ಮೋಟಾರ್ ಸೈಕಲ್ ನ್ನು  ಓಶನ್‌ವಿವ್‌ ಅಪಾರ್ಟ್ ಮೆಂಟ್‌ ಹತ್ತಿರ ನಿಲ್ಲಿಸಿದ್ದು ಫುಡ್‌ಡೆಲಿವರಿ ಕೆಲಸ ಮುಗಿಸಿಕೊಂಡು ವಾಪಾಸ್‌ 2:00 ಗಂಟೆಗೆ ಬಂದು ನೋಡಿದಾಗ ನಿಲ್ಲಿಸಿದ ಮೋಟಾರ್ ಸೈಕಲ್ ಇಲ್ಲದೇ ಇದ್ದು ದಿನಾಂಕ  04/12/2022 ರ ಬೆಳಗಿನ ಜಾವ 1:00 ಗಂಟೆಯಿಂದ 2:00 ಗಂಟೆಯ ಮಧ್ಯಾವಧಿಯಲ್ಲಿ   ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ಸೈಕಲ್‌ನ  ಬೆಲೆ 1,00,000/- ಆಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 214/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತ್ತೀಚಿನ ನವೀಕರಣ​ : 14-12-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080