ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ರಾಘವೇಂದ್ರ ಪೂಜಾರಿ  (40), ತಂದೆ: ಶೀನ ಪೂಜಾರಿ, ವಾಸ:ಸಸಿಹಿತ್ಲು , ಯಡ್ತರೆ  ಗ್ರಾಮ , ಬೈಂದೂರು ತಾಲೂಕು ಇವರು ದಿನಾಂಕ 12/12/2021 ರಂದು ರಾತ್ರಿ 08:15 ಗಂಟೆಗೆ ಯಡ್ತರೆ ಗ್ರಾಮದ ಜೆ.ಎನ್. ಆರ್ ಕಲಾಮಂದಿರದ ಬಳಿ ಪರಿಚಯದವರೊಂದಿಗೆ ಮಾತನಾಡುತ್ತಿರುವಾಗ ಬೈಂದೂರು ಕಡೆಯಿಂದ ಯಡ್ತರೆ ಕಡೆಗೆ ಸೈಕಲ್ ಸವಾರನೊಬ್ಬನು ಸೈಕಲ್ ಚಲಾಯಿಸಿಕೊಂಡು  ಬರುತ್ತಾ ಜೆ.ಎನ್ ಆರ್ ಕಲಾ ಮಂದಿರದ ಬಳಿ ತಲುಪಿದಾಗ  ಆತನ ಹಿಂದುಗಡೆಯಿಂದ ಅಂದರೆ ಬೈಂದೂರು ಕಡೆಯಿಂದ ಯಡ್ತರೆ ಕಡೆಗೆ KA-20- EK-6118 ನೇ ಡಿಸ್ಕವರಿ ಮೋಟಾರು ಸೈಕಲ್ ಸವಾರನು ತನ್ನ ಬೈಕ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ  ಬಂದು ಸೈಕಲ್ ಗೆ ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ ಸೈಕಲ್  ಸವಾರ ಮತ್ತು ಮೊಟಾರು ಸೈಕಲ್ ಸವಾರ ಇಬ್ಬರು ರಸ್ತೆಗೆ ಬಿದ್ದಿದ್ದು  ಈ ಅಪಘಾತದ ಪರಿಣಾಮ ಸೈಕಲ್ ಸವಾರ ನಾರಾಯಣ ಮೊಗವೀರ ರವರ ತಲೆಗೆ ತೀವ್ರ ರಕ್ತಗಾಯ ಮತ್ತು ಮುಖ, ಬಾಯಿ, ಕೈ ಕಾಲುಗಳಿಗೆ ತರಚಿದ ರಕ್ತ ಗಾಯ ಉಂಟಾಗಿದ್ದು  ಅವರನ್ನು ಚಿಕಿತ್ಸೆ ಬಗ್ಗೆ  ಬೈಂದೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ  ಕರೆ ತಂದಿದ್ದು ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಗೆ ಉಡುಪಿಗೆ ಹೋಗುವಂತೆ ಸೂಚಿಸಿದ ಮೇರೆಗೆ ಅವರನ್ನು ಮನೆಯವರ ಜೊತೆಯಲ್ಲಿ  108 ಅಂಬುಲೆನ್ಸ್ ವಾಹನದಲ್ಲಿ  ಉಡುಪಿ ಆದರ್ಶ ಅಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳಹಿಸಿದ್ದು ವೈದ್ಯರು ಪರೀಕ್ಷೀಸಿ  ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ  ಹಾಗೂ ಮೋಟಾರು ಸೈಕಲ್ ಸವಾರನಿಗೂ  ಸಣ್ಣ ಪುಟ್ಟ ತರಚಿದ ಗಾಯವಾಗಿದ್ದು  ಚಿಕಿತ್ಸೆ ಬಗ್ಗೆ  ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕಳುಹಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 203/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿರ್ಯಾದಿದಾರರಾದ ದಯಾನಂದ (47), ತಂದೆ: ದಿ. ಮುತ್ತು ಸಾಲಿಯಾನ್, ವಾಸ: ಸುವರ್ಣ ದೀಪ, ಕೆಮ್ತೂರು, ಕೊರಂಗ್ರಪ್ಪಾಡಿ ಗ್ರಾಮ ಉಡುಪಿ  ಇವರ ಅಣ್ಣ ಗಂಗಾಧರ ಎಂಬುವವರು ದಿನಾಂಕ 11/12/2021 ರಂದು 11:00 ಗಂಟೆಯ ಸಮಯದಲ್ಲಿ ಉದ್ಯಾವರ ಗ್ರಾಮದ ಬೊಳ್ಜೆ ಕ್ರಾಸ್ ಎಂಬಲ್ಲಿ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರ ಪೂರ್ವದ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA-19-MC-7676 ನೇ ಮಾರುತಿ ಸ್ವಿಫ್ಟ್‌ ಕಾರಿನ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಅಣ್ಣ ಗಂಗಾಧರ ರವರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಗಂಗಾಧರ ರವರು ರಸ್ತೆಗೆ ಬಿದ್ದು ಅವರ ತಲೆಗೆ, ಬಲಕೈ ಮತ್ತು ಬಲಕಾಲಿನ ಗಂಟಿಗೆ ಬೆನ್ನಿನ ಹಿಂಭಾಗದಲ್ಲಿ ರಕ್ತಗಾಯವಾಗಿದ್ದು  ಈ ಬಗ್ಗೆ ಗಂಗಾಧರ ರವರು ಉಡುಪಿ ಟಿಎಂಎ ಪೈ. ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ವಾಹನದ ಮಾಲಕರು ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದು ಈಗ  ಖರ್ಚನ್ನು ನೀಡಲು ನಿರಾಕರಿಸುತ್ತಿರುವುದರಿಂದ ಈ ದೂರನ್ನು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 183/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ದಿನಾಂಕ 12/12/2021 ರಂದು ಪಿರ್ಯಾದಿದಾರರಾದ ಅಕ್ಷಯ ಪೂಜಾರಿ (25), ತಂದೆ: ಶ್ರೀನಿವಾಸ ಪೂಜಾರಿ ವಾಸ: ಹಕ್ಲಾಡಿ ಮೇಲ್ಬೆಟ್ಟು ಮೇಲ್‌ ಮನೆ ಹಕ್ಲಾಡಿ ಅಂಚೆ ಮತ್ತು ಗ್ರಾಮ ಕುಂದಾಪುರ ತಾಲೂಕು ಇವರು ಕೆಲಸ ಮುಗಿಸಿ ಕುಂದಬಾರಂದಾಡಿ ಕಡೆಯಿಂದ ಕಂಡ್ಲೂರು ಕಡೆಗೆ ಬೈಕ್‌ ನಲ್ಲಿ ಕುಂದಬಾರಂದಾಡಿ ಗ್ರಾಮದ ಮಾಸ್ತಿಕಟ್ಟೆ ರೈಲ್ವೇ ಮೇಲ್‌ ಸೇತುವೆ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ   5:00 ಗಂಟೆಗೆ ಆಪಾದಿತ ಮಂಜುನಾಥ ಆಚಾರ್ಯ ರವರು ತನ್ನ KA-01-V-8654  ನೇ  ಮೋಟಾರ್‌ ಸೈಕಲ್‌ ನಲ್ಲಿ ರಾಮದಾಸ ಎಂಬುವವರನ್ನು ಸಹ ಸವಾರನಾಗಿ ಕುಳ್ಳಿರಿಸಿಕೊಂಡು ತನ್ನ ಮೋಟಾರ್ ಸೈಕಲ್‌ ಅನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಪಿರ್ಯಾದಿದಾರರ ಬೈಕ್‌ ಅನ್ನು ಹಿಂಬಾಲಿಸಿಕೊಂಡು ಬಂದು ಮಾಸ್ತಿಕಟ್ಟೆ ರೈಲ್ವೇ ಮೇಲ್‌ ಸೇತುವೆ ರಸ್ತೆಯಲ್ಲಿ ವೇಗ ನಿಯಂತ್ರಿಸಲಾಗದೇ ಸ್ಕಿಡ್‌ ಆಗಿ ಮೋಟಾರ್‌ ಸೈಕಲ್‌ ಸವಾರ ಹಾಗೂ ಸಹಸವಾರ ರಸ್ತೆಗೆ ಬಿದ್ದ ಪರಿಣಾಮ ಸಹಸವಾರ ರಾಮದಾಸ ರವರಿಗೆ ತಲೆಗೆ ಗಂಭೀರ ಸ್ವರೂಪದ ರಕ್ತಗಾಯ, ಕೈಕಾಲುಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈಧ್ಯಾಧಿಕಾರಿಯವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲ ಕೆಎಂ.ಸಿ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ . ಆಪಾದಿತ ಮಂಜುನಾಥ ಆಚಾರ್ಯ ರವರಿಗೂ ಕೈಕಾಲುಗಳಿಗೆ ತರಚಿದ ಗಾಯಾವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬೈಂದೂರು: ಪಿರ್ಯಾದುದಾರರಾದ ಮಹಮ್ಮದ್ ಶಿನಾನ (30), ತಂದೆ: ಬಿ.ಇ ಮಹಮ್ಮದ್ ಅಲಿ, ವಾಸ:ಕೊಯನಗರ ನಾವುಂದ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 13/12/2021 ರಂದು ಬೆಳಿಗ್ಗೆ 05:45 ನಾವುಂದ ಗ್ರಾಮದ ಕೊಯಾನಗರ ಎಂಬಲ್ಲಿನ ವಾಸದ ಮನೆಯ ಅಂಗಳದಲ್ಲಿರುವಾಗ ಪಿರ್ಯಾದಿದಾರರ ತಂದೆಯವರು ಅವರ KA-47-S-6222 ನೇ ಸ್ಕೂಟರ್ ನಲ್ಲಿ  ಪಿರ್ಯದಿದಾರರ ಅಣ್ಣ ಇರ್ಷಾದ್ ರವರ ಮಗಳು ಆಯಿಶಾರಿದಾ ಮತ್ತು ಮತ್ತೊಬ್ಬ ಅಣ್ಣ ವಹಾಬ್ ರವರ ಮಗ ಮಹಮ್ಮದ್ ಶಾಯಾನ್ ರವರನ್ನು ಸ್ಕೂಟರ್ ನಲ್ಲಿ  ಹಿಂಬದಿ ಸಹ ಸವಾರರಾಗಿ ಕುಳ್ಳಿರಿಸಿಕೊಂಡು ಕಂತಿಹೊಂಡ ಕಡೆಯಿಂದ ಕೊಯಾನಗರದ ಪಳ್ಳಿಯ ಮದರಸಾಕ್ಕೆ ರಸ್ತೆಯ ಎಡಬದಿಯಲ್ಲಿ  ಚಲಾಯಿಸಿಕೊಂಡು ಹೋಗುತ್ತಾ ಪಿರ್ಯಾದುದಾರರ ಮನೆ ಎದುರು ತಲುಪಿದಾಗ ಆರೋಪಿ ಇಕ್ಬಾಲ್ ತನ್ನ ಟಿಪ್ಪರ್ ವಾಹನ KA-20-D-4319 ನೇ ದನ್ನು ಅರೆಹೊಳೆ ಕ್ರಾಸ್ ನಿಂದ ನಾವುಂದ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ಹೋಗುತ್ತಿದ್ದ  ದನ ಒಂದು ಒಮ್ಮೇಲೆ  ಓಡಿ ಬಂದಾಗ ಟಿಪ್ಪರ್ ಚಾಲಕನು ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಟಿಪ್ಪರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರ ತಂದೆಯವರು ಚಲಾಯಿಸಿಕೊಂಡು ಹೋಗುತ್ತಿದ್ದ ಸ್ಕೂಟರ್ ನ ಹಿಂಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ  ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ತಂದೆ ಬಿ .ಇ ಮಹಮ್ಮದ್ ಅಲಿ ರವರ ತಲೆಗೆ, ಕಾಲು ಗಳಿಗೆ ಸೊಂಟಕ್ಕೆ ರಕ್ತಗಾಯವಾಗಿದ್ದು , ಆಯಿಶಾ ರಿದಾಳಿಗೆ ಬಲ ಕಾಲಿಗೆ, ಬಲ ಕೈ ಯ ಕಿರುಬೆರಳಿಗೆ ರಕ್ತಗಾಯ ಹಾಗೂ ಮಹಮ್ಮದ್ ಶಾಯಾನ್ ಗೆ ಒಳ ನೋವು ಉಂಟಾಗಿದ್ದು  ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆ ತಂದಿದ್ದು ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಬಿ.ಇ ಮಹಮ್ಮದ್ ಅಲಿ ಹಾಗೂ ಆಯಿಶಾರಿದಾ ಳನ್ನು ಒಳ ರೋಗಿಯಾಗಿ  ದಾಖಲಿಸಿಕೊಂಡಿದ್ದು ಮಹಮ್ಮದ್ ಶಾಯಾನ್ ಗೆ ಹೊರ ರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 204/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 11/12/2021 ರಂದು ಪಿರ್ಯಾದಿದಾರರಾದ ವೀಣಾ  ಎಸ್‌  ಉಪಾಧ್ಯಾಯ (45), ಗಂಡ: ಸುಬ್ರಹ್ಮಣ್ಯ ಉಪಾಧ್ಯಾಯ, ವಾಸ: ಮಲ್ಲಣ ಹಿತ್ಲು, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಇವರ ಸ್ಕೂಟಿ ನಂಬ್ರ KA-20-EM-8823 ನೇದನ್ನು ಸವಾರಿ ಮಾಡಿಕೊಂಡು ಕೋಟೇಶ್ವರ ಕಡೆಯಿಂದ ಸಾಲಿಗ್ರಾಮದ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರ ಕುಂದಾಪುರ-ಉಡುಪಿ ಏಕಮುಖ ಡಾಮಾರು  ರಸ್ತೆಯಲ್ಲಿ ಹೊರಟು ಮಧ್ಯಾಹ್ನ 13:30 ಗಂಟೆಗೆ ಕೋಟ ಜಂಕ್ಷನ್‌ ಬಳಿ ತಲುಪುಷ್ಟರಲ್ಲಿ ರಾಷ್ಟ್ರೀಯ ಹೆದ್ದಾರಿ .66 ರ ಪೂರ್ವ ಬದಿಯ ಸರ್ವಿಸ್‌ ರಸ್ತೆಯಿಂದ ಟಿ.ವಿ.ಎಸ್‌. ಕಂಪನಿ ಜ್ಯೂಪಿಟರ್‌ ಸ್ಕೂಟಿ ನಂಬ್ರ KA-20-EU-6074 ನೇದನ್ನು ಅದರ ಸವಾರ ಸಹೂದ ಬಸ್ರೂರ ಅತೀವೇಗ ಹಾಗೂ  ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದಿದಾರರು ಸ್ಕೂಟಿ ಸಮೇತ ರಸ್ತೆಗೆ ಬಿದ್ದು ಅವರ ಹಣೆಗೆ ಪೆಟ್ಟಾಗಿದ್ದು, ತುಟಿಗೆ ಗಾಯವಗಿದ್ದು, ಎದುರಿನ ಎರಡು ಹಲ್ಲುಗಳಿಗೂ  ಪೆಟ್ಟಾಗಿರುತ್ತದೆ. ಗಾಯಗೊಂಡಿದ್ದ ಪಿರ್ಯಾದಿದಾರರನ್ನು ಸ್ಥಳೀಯರು ಚಿಕಿತ್ಸೆಗೆ N.R. Acharya Hospital ಗೆ  ದಾಖಲಿಸಿರುತ್ತಾರೆ. ದಿನಾಂಕ 13/12/2021 ರಂದು ಪಿರ್ಯಾದಿದಾರರು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿ  ವಿಶ್ರಾಂತಿ  ಪಡೆಯುತ್ತಿರುವುದಾಗಿದೆ.          ಅಪಘಾತದಿಂದ ಆದ ಗಾಯದ ಚಿಕಿತ್ಸಾ  ವೆಚ್ಚವನ್ನು ಆರೋಪಿಯು  ಭರಿಸುವುದಾಗಿ  ತಿಳಿಸಿ, ಅನಂತರ ಭರಿಸದೆ  ಇದ್ದು, ದೂರು  ನೀಡಲು  ವಿಳಂಬವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 210 /2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಹಿರಿಯಡ್ಕ: ಪಿರ್ಯಾದಿದಾರರಾದ ಶ್ರೀಮತಿ ಲಲಿತ ಆಚಾರ್ಯ (65), ತಂದೆ: ದಿ. ಪದ್ಮನಾಭ ಆಚಾರ್ಯ, ವಾಸ:ಕೊಪ್ಪಳ ಮನೆ, ಪೆರ್ಡೂರು, ಪೆರ್ಡೂರು ಅಂಚೆ, ಉಡುಪಿ ತಾಲೂಕು ಇವರಿಗೆ 4 ಜನ ಮಕ್ಕಳಿದ್ದು, ಅದರಲ್ಲಿ ಕೊನೆಯ ಮಗಳಾದ ಮಾಲತಿ ಯವರಿಗೆ ದಿನಾಂಕ 18/01/2021 ರಂದು ಕೋಟ ಸಾಲಿಗ್ರಾಮದ ರಾಘವೇಂದ್ರ ಎಂಬುವವರೊಂದಿಗೆ ಅಂಬಾಗಿಲು ಉಡುಪಿಯ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದಲ್ಲಿ ಮದುವೆ ಮಾಡಿ ಕೊಟ್ಟಿರುತ್ತಾರೆ. ಮಾಲತಿ ಯವರು ದಿನಾಂಕ 12/12/2021 ರಂದು ಪಿರ್ಯಾದಿದಾರರ ನಾದಿನಿಯ ವೈಕುಂಟ ಕಾರ್ಯಕ್ರಮಕ್ಕೆ ತವರು ಮನೆಗೆ ಬಂದಿರುತ್ತಾರೆ. ಮಾಲತಿ ಯವರು ಮಕ್ಕಳಾಗದೇ ಇರುವ ಬಗ್ಗೆ ವೈಧ್ಯರಲ್ಲಿ ಪರೀಕ್ಷಿಸಬೇಕು ಎಂದು ಹೇಳುತ್ತಿದ್ದು, ಆಕೆಗೆ ಈ ಹಿಂದೆ ಗರ್ಭಪಾತವಾಗಿರುತ್ತದೆ. ಅವರು ಪಿರ್ಯಾದಿದಾರರ ಬಳಿ ಮಾತನಾಡದೆ ಮೌನವಾಗಿರುತ್ತಿದ್ದರು. 13/12/2021 ರಂದು  ಮದ್ಯಾಹ್ನ ಮನೆಯಲ್ಲಿ ಊಟ ಮಾಡಿ ಒಳಗೆ ಮಲಗಿದ್ದವರು ಎದ್ದು ಬಂದು ಮನೆಯ ಜಗುಳಿಯ ಮೇಲೆ ಕುಳಿತುಕೊಂಡು ಏನೋ ಬರೆಯುತ್ತಿರುವುದನ್ನು ಪಿರ್ಯಾದಿದಾರರು ಗಮನಿಸಿರುತ್ತಾರೆ. ಸಂಜೆ 3:45 ಗಂಟೆ ಸಮಯಕ್ಕೆ ಪಿರ್ಯಾದಿದಾರರು ಹೊರಗೆ ಬಂದು ನೋಡಿದಾಗ ಮಾಲತಿಯವರು ಇಲ್ಲದೇ ಇರುವುದನ್ನು ಕಂಡು ಆಚೆ ಈಚೆ ಮನೆಯವರ ಬಳಿ ಪಿರ್ಯಾದಿದಾರರು ಮಾಲತಿಯ ಬಗ್ಗೆ ವಿಚಾರಿಸಿದ್ದು ಬಳಿಕ ಬಾವಿಯ ಬಳಿ ಹೋಗಿ ನೋಡಿದಾಗ ಬಾವಿಯ ದಂಡೆಯ ಮೇಲೆ ಒಂದು ಹಾಳೆ ಹಾಗೂ ಮೊಬೈಲ್ ಇರುವುದು ಕಂಡು ಬಂತು. ಬಾವಿಯ ಒಳಗೆ ನೋಡಿದಾಗ ಏನೂ ಕಾಣಲಿಲ್ಲ. ಬಳಿಕ ಅಲ್ಲಿ ಕೆಲಸ ಮಡುತ್ತಿದ್ದವರು ಬಾವಿಯ ಬಳಿ ಬಂದು ನೋಡಿದಾಗ ಬಾವಿಯ ಒಳಗೆ ಅಸ್ಪಷ್ಟವಾಗಿ ಎರಡು ಕೈಗಳು ಕಾಣುತ್ತಿದ್ದವು.  ಬಳಿಕ ಮುಳುಗು ತಜ್ಞರನ್ನು ಕರೆಯಿಸಿ ಮಾಲತಿಯವರ ಮೃತ ದೇಹವನ್ನು ಬಾವಿಯಿಂದ ಮೇಲೆ ತೆಗೆಯಲಾಯ್ತು. ಬಾವಿಯ ಕಟ್ಟೆಯ ಮೇಲೆ ಇದ್ದ ಹಾಳೆಯನ್ನು ನೋಡಲಾಗಿ ಅದರಲ್ಲಿ ಮಾಲತಿಯು “ ನನಗೆ ಗರ್ಭಕೋಶದಲ್ಲಿ ಗಡ್ಡೆಯಿದೆ. ಇದರಿಂದ ಮಕ್ಕಳಾಗಲು ಕಷ್ಟ ಸಾಧ್ಯ. ಹಾಗೆಯೇ ಅಪ್ಪ ಅತ್ತೆ ತುಂಬಾ ನೆನಪಾಗುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆಗೊಂಡು ನಾನು ಸಾಯಲು ನಿರ್ಧರಿಸಿದ್ದೇನೆ.  ನನ್ನ ಸಾವಿಗೆ ನಾನೇ ಕಾರಣ. ಯಾರನ್ನೂ ದೂಷಿಸಬೇಡಿ. ಎಲ್ಲರಿಗೂ SORRY. ಕ್ಷಮಿಸಿ ನನ್ನನ್ನು” ಎಂದು ಬರೆದಿರುತ್ತಾರೆ”. ಮೃತೆ ಮಾಲತಿಯವರು ಮಕ್ಕಳಾಗದೇ ಇರುವ ಕಾರಣದಿಂದ ಹಾಗೂ ಇನ್ನು ಮುಂದಕ್ಕೆ ಮಕ್ಕಳೇ ಆಗುವುದಿಲ್ಲ  ಎಂದು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 27/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ದಿವ್ಯ (29), ಗಂಡ: ಪ್ರೀತೇಶ್‌ ಅಮೀನ್‌, ವಾಸ: ಅನುಪ್ರೀತ್‌ ನಿಲಯ, ಮನೆ ನಂಬ್ರ: 1-4-64E, ಬಂಡಿಬಾಕ್ಯಾರು, ಗುಂಡಿಬೈಲು, ಶಿವಳ್ಳಿ ಗ್ರಾಮ, ಉಡುಪಿ ತಾಲೂಕು ಇವರು ಉಡುಪಿ ಕುಂಜಿಬೆಟ್ಟುವಿನಲ್ಲಿ ಸಾಫ್ಟ್‌ವೇರ್‌ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಎಂದಿನಂತೆ ದಿನಾಂಕ 13/12/2021 ರಂದು 19:00 ಗಂಟೆಗೆ ಕರ್ತವ್ಯ ಮುಗಿಸಿಕೊಂಡು ರಾಜೇಶ್ವರಿ ಎಂಬುವವರೊಂದಿಗೆ ಕಲ್ಸಂಕದವರೆಗೆ ಅವರ ಸ್ಕೂಟಿಯಲ್ಲಿ ಬಂದಿದ್ದು, ಕಲ್ಸಂಕದಿಂದ ಮನೆ ಕಡೆಗೆ ನಡೆದುಕೊಂಡು ಹೋಗುವಾಗ 19:09 ಗಂಟೆಗೆ ಬಂಡಿಬಾಕ್ಯಾರು ಎಂಬಲ್ಲಿ ಪಿರ್ಯಾದಿದಾರರ ಮನೆಯಿಂದ  200 ಮೀಟರ್ ದೂರದಲ್ಲಿ  30 ರಿಂದ 35 ವರ್ಷ ಪ್ರಾಯದ ಓರ್ವ ವ್ಯಕ್ತಿ ಎದುರಿನಿಂದ ಒಂದು ಸ್ಕೂಟರ್‌ನಲ್ಲಿ ಬಂದು ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಕರಿಮಣಿ ಸರಕ್ಕೆ ಕೈ ಹಾಕಿ ಸುಲಿಗೆ ಮಾಡಲು ಪ್ರಯತ್ನಿಸಿದ್ದು, ಪಿರ್ಯಾದಿದಾರರು ಬೊಬ್ಬೆ ಹೊಡೆದಾಗ ಆರೋಪಿತನು ಅಲ್ಲಿಂದ ಸ್ಕೂಟರ್‌ ಸಮೇತ ಪರಾರಿಯಾಗಿರುತ್ತಾನೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 186/2021 ಕಲಂ: 392, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
 • ಕುಂದಾಪುರ: ಪಿಯಾದಿದಾರರಾದ ಬಿ ವಾಸುದೇವ ಶ್ಯಾನುಭಾಗ (47), ತಾಯಿ: ಬಿ ಸುಮತಿ ಬಾಯಿ, ವಾಸ: ಬೇಳೂರು ಶ್ಯಾನುಭಾಗ ಕಂಪೌಂಡ್, ಗಾಂಧಿ ಪಾರ್ಕ್ ಪೂರ್ವ, ಕುಂದಾಪುರ ಇವರ ತಾಯಿ ಶ್ರೀಮತಿ ಬಿ ಸುಮತಿ ಬಾಯಿಯವರು ಖಾರ್ವಿ ಷೇರ್ಸ್ ಬ್ರೋಕರೇಜ್ ಲಿಮಿಟೆಡ್ ( KSBL) ಕಂಪೆನಿಯ ಕುಂದಾಪುರ ಶಾಖೆಯಲ್ಲಿ  ಡಿ ಮ್ಯಾಟ್ ಎಕೌಂಟನ್ನು ತೆರೆದು ಅದರಲ್ಲಿ ಅವರ ಜೀವಿತದ ದುಡಿಮೆಯ ಉಳಿಕೆಯ ಹಣವನ್ನು ಹೂಡಿಕೆ ಮಾಡಿರುತ್ತಾರೆ.  ಸಂಸ್ಥೆಯ ಮುಖೇನ Viz Larsen and turbo Ltd ಕಂಪೆನಿಯ 4167 ಷೇರುಗಳನ್ನು ಖರೀದಿಸಿದ್ದು ಅದಕ್ಕೆ ಪಿರ್ಯಾದಿದಾರರನ್ನು ನಾಮಿನಿ ಮಾಡಿರುತ್ತಾರೆ. ಬಳಿಕ ಪಿರ್ಯಾದಿದಾರರ ತಾಯಿ ದಿನಾಂಕ 02/12/2014 ರಂದು ಮೃತಪಟ್ಟಿರುತ್ತಾರೆ. ಬಳಿಕ ಪಿರ್ಯಾದಿದಾರರು ಆಪಾದಿತರಲ್ಲಿ ಷೇರು ಬಗ್ಗೆ ಸ್ಟೇಟ್ ಮೆಂಟ್ ಕೇಳಿ ಸ್ಟೇಟ್ ಮೆಂಟ್ ನೋಡಲಾಗಿ ತಾಯಿಯವರ ಡಿಮ್ಯಾಟ್ ಅಕೌಂಟ್ ನಲ್ಲಿ ಬ್ಯಾಲೆನ್ಸ್ ಇಲ್ಲದೇ ಇರುವುದು  ತಿಳಿದುಬಂದಿರುತ್ತದೆ. ಈ ಬಗ್ಗೆ ಆಪಾದಿತರಿಗೆ ಪತ್ರ ವ್ಯವಹಾರ ಮಾಡಲಾಗಿ ಅವರು ಯಾವುದೇ ಉತ್ತರವನ್ನು ನೀಡಿರುವುದಿಲ್ಲ. ನಂತರ ತಿಳಿಯಲಾಗಿ ಆಪಾದಿತರಾದ ನಿರ್ದೇಶಕರು, ಖಾರ್ವಿ ಷೇರ್ಸ್ ಬ್ರೋಕರೇಜ್ ಲಿಮಿಟೆಡ್ ಇವರು ಪಿರ್ಯಾದಿದಾರರಿಗೆ ತಿಳಿಸದೇ ಅವರ ತಾಯಿಯ ಷೇರಿನಲ್ಲಿದ್ದ  ರೂಪಾಯಿ 83,90,005/- ನ್ನು  ವಿತ್ ಡ್ರಾ ಗೊಳಿಸಿ ಅವರ ಸ್ವಂತಕ್ಕೆ ಉಪಯೋಗಿಸಿ ನಂಬಿಕೆ ದ್ರೋಹ ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 132/2021 ಕಲಂ:  409, 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 14-12-2021 10:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080