ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ನಜುರುಲ್ಲಾ (32), ತಂದೆ: ಬಶೀರ ಸಾಬ್ವಾಸ: ಮೆಕ್ಕಾ ಕಾಲೋನಿ ಹೆಬ್ಬಾಳ ಗ್ರಾಮ ಭಟ್ಕಳ ತಾಲೂಕು ಉತ್ತರ ಕನ್ನಡ ಇವರು KA-19 AA-9250 ನೇ ಇನ್ಸುಲೇಟರ್ ಲಾರಿಯ ಚಾಲಕನಾಗಿದ್ದು ಕೇರಳದ ಚಾವಕಾಡದಿಂದ ಭಟ್ಕಳಕ್ಕೆ, ಲಾರಿಯನ್ನು ಚಲಾಯಿಸಿಕೊಂಡು ಬಂದು ಕೇರಳದ ಬಾರ್ಡರ್ ತಲಪಾಡಿಯಿಂದ ಎಂಬಲ್ಲಿ 13/12/2021 ರಂದು ರಾತ್ರಿ  ಲಾರಿಯಲ್ಲಿದ್ದ ಮಹಮ್ಮದ್ ತೌಫಿಕ್  ಮತ್ತು ನಜುರುಲ್ಲಾ ರವರು ಲಾರಿಯಲ್ಲಿ ವಿಶ್ರಾಂತಿಯಲ್ಲಿದ್ದಾಗ, ಮಹಮ್ಮದ್ ತೌಫಿಕ್ ಎಂಬುವರು ಚಲಾಯಿಸಿ ಕೊಂಡು ಬಂದು ಸಂತೆಕಟ್ಟೆ ಬಳಿ ಶಮಾ ಹೋಂಡಾ  ಶೋ ರೂಮ್ ಎದುರುಗಡೆ ರಾಷ್ಟ್ರಿಯ ಹೆದ್ದಾರಿ 66 ರಲ್ಲಿ  ಸಮಯ ಸುಮಾರು 14/12/2021 ರಂದು ಮುಂಜಾನೆ 01:00 ಗಂಟೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಚಾಲಾಯಿಸಿ ಲಾರಿಯನ್ನು ಡಿವೈಡರ್ ಮೇಲೆ ಹತ್ತಿಸಿ ಕುಂದಾಪುರ- ಕಾರವಾರ_ ಪಣಜಿ ಸೂಚನಾ ಪಲಕದ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂ ಗೋಂಡಿದ್ದು ಮಹಮ್ಮದ್ ತೌಫಿಕ್ ರವರಿಗೆ ಮುಖ ಮತ್ತು ಕೈ ಕಾಲುಗಳಿಗೆ ಗಂಭಿರ ಗಾಯವಾಗಿದ್ದು ಮಾತನಾಡದೇ ಇದ್ದವರನ್ನು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕೆತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆ ಗೆ ಕರೆದು ಕೊಂಡು ಹೋದಲ್ಲಿ ಪರಿಕ್ಷೀಸಿದ ವೈದ್ಯರು ಈಗಾಗಲೇ ಮಹಮ್ಮದ್ ತೌಫಿಕ್ (29) ಮೃತಪಟ್ಟಿರುವುದಾಗಿದೆ, ಎಂಬುದಾಗಿ ತಿಳಿಸಿದ್ದು ನಜುರುಲ್ಲಾ ರವರಿಗೆ ಎಡ ಕೈ ಹಾಗೂ ಎರಡು ಕಾಲುಗಳಿಗೆ ತರಚಿದ ಗಾಯಾವಾಗಿದ್ದು ಮತ್ತು ರಸ್ತೆಯ ಬದಿಯ ಸೂಚನಾ ಪಲಕದ ಕಂಬ ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 89/2021 ಕಲಂ: 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಫಿರ್ಯಾದಿ ಪ್ರವೀಣ್ ಕಾಂಚನ್ (34) ತಂದೆ: ಸುಂದರ್ ತಿಂಗಳಾಯ ವಾಸ:ಓಂ ದುರ್ಗಾ  ಬಡನಿಡಿಯೂರು  ದಿನಾಂಕ 13-12-2021 ರಂದು ವೈಯಕ್ತಿಕ ಕೆಲಸದ ಬಗ್ಗೆ  ಪಡುತೋನ್ಸೆ ಬೇಂಗ್ರೆ ಹೋಗುತ್ತಿರುವ ಸಮಯ ಸುಮಾರು  ಸಂಜೆ 4:30 ಗಂಟೆಗೆ  ಅಡ್ಡಬೇಂಗ್ರೆ ಮಸೀದಿ ಬಳಿ  ತಲುಪುವಾಗ  ಕೋಡಿಬೇಂಗ್ರೆ  ಕಡೆಯಿಂದ  ಹೂಡೆ ಕಡೆಗೆ ನನ್ನ ಪರಿಚಯದ ನಾಗೇಶ ಎಂಬುವವನು  KA 20 L 2599 ನೇ ನಂಬ್ರದ  ಮೋಟಾರು ಸೈಕಲ್ ನ್ನು ನಿರ್ಲಕ್ಷ್ಯತನ ಹಾಗೂ ಅಜಾಕರೂಕತೆಯಿಂದ ಚಲಾಯಿಸಿಕೊಂಡು ಬಂದ ಪರಿಣಾಮ ಮೋಟಾರು ಸೈಕಲ್ ನಾಗೇಶನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ತೆಂಗಿನ ಮರಕ್ಕೆ  ಢಿಕ್ಕಿ ಹೊಡೆದ ಪರಿಣಾಮ  ನಾಗೇಶನ ತಲೆ ಕಾಲಿಗೆ ತೀವ್ರತರದ ಮೂಳೆ ಮೂರಿತದ ರಕ್ತಗಾಯವಾಗಿದ್ದು  ಅಲ್ಲದೆ ಮೋಟಾರು ಸೈಕಲ್ ಜಖಂಗೊಂಡಿರುತ್ತದೆ. ಅಸ್ವಸ್ಥಗೊಂಡ ನಾಗೇಶನನ್ನು ಅಲ್ಲೆ ಇದ್ದ ಫಿರ್ಯಾದಿದಾರರು ಉಪಚರಿಸಿ ಚಿಕಿತ್ಸೆಯ ಬಗ್ಗೆ ಅಂಬುಲೆನ್ಸ್ ನಲ್ಲಿ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುತ್ತಾರೆ ಈ ಅಪಘಾತಕ್ಕೆ KA 20 L 2599 ಮೋಟಾರು ಸೈಕಲ್ ಸವಾರನ  ನಿರ್ಲಕ್ಷ್ಯತನ ಹಾಗೂ ಅಜಾಕರೂಕತೆಯ ಚಾಲನೆಯೆ ಕಾರಣವಾಗಿದೆ.ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ :134/2021 ಕಲಂ 279,338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ಶ್ರೀನಿವಾಸ ಕೆ, (46) ತಂದೆ: ದಿ. ರಾಮಣ್ಣ ಗೌಡ ಬಿ, ವಾಸ: ಕಲ್ಲಾಜೆ ಮನೆ, ಬಲ್ಪಾಡು ಗ್ರಾಮ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಇವರು ಪಳ್ಳಿ ಗ್ರಾಮದ ಗ್ರಾಮಕರಣಿಕರಾಗಿದ್ದು ದಿನಾಂಕ ದಿನಾಂಕ 03/12/2021 ರಂದು ಅಪಾದಿತ ಸತೀಶ ಸಾಲಿಯಾನ್ ಪಳ್ಳಿ ಗ್ರಾಮ ಎಂಬವರಿಗೆ MAG TAX CR.58/2021.22 ರಂತೆ ಜಪ್ತಿಯಾದ ಹರಾಜು ಬಗೆಗಿನ ನೋಟೀಸನ್ನು ಜ್ಯಾರಿಗೊಳಿಸುವ ಬಗ್ಗೆ ಗ್ರಾಮ ಸಹಾಯಕರು ಹೋದಾಗ ನೋಟೀಸನ್ನು ತಿರಸ್ಕರಿಸಿದ್ದಲ್ಲದೇ ಗ್ರಾಮ ಕರಣಿಕರು ಹರಾಜು ಮಾಡುವ ಸ್ವತ್ತಿನ ಮೇಲೆ ಪ್ರಚುರಪಡಿಸಿದ್ದು ಸದ್ರಿ ನೋಟೀಸನ್ನು ಹರಿದು ಬಿಸಾಡಿದ್ದಲ್ಲದೇ ಅದೇ ದಿನ ಸಂಜೆ 17:45 ಗಂಟೆಗೆ  ದೂರವಾಣಿ ಕರೆಮಾಡಿ ಜೀವಬೆದರಿಕೆ ಮಾಡಿ ‘ನೋಟೀಸನ್ನು ನನ್ನ ಆಸ್ತಿಯ ಮೇಲೆ ಅಂಟಿಸಲು ನೀವು ಯಾರು ನಿಮಗೆ ಯಾರು ಅಧಿಕಾರ ಕೊಟ್ಟದ್ದು’ ಎಂಬುದಾಗಿ ಬೆದರಿಕೆ ಹಾಕಿದ್ದಲ್ಲದೇ ದಿನಾಂಕ 13/12/2021 ರಂದು  ಶ್ರೀನಿವಾಸ ಕೆ, ಇವರು ಕಛೇರಿಯಲ್ಲಿ ಪಿಂಚಣಿದಾರರ ಭೌತಿಕ ಪರಿಶೀಲನೆ ಕರ್ತವ್ಯ ಮಾಡುತ್ತಿರುವಾಗ  10:07 ಗಂಟೆಗೆ ಅಪಾದಿತನು ಇನ್ನೊಬ್ಬ ಅಪರಿಚಿತ ವ್ಯಕ್ತಿಯೊಂದಿಗೆ ಕಛೇರಿಗೆ ಬಂದು ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಧಾಳಿಗೆ ಮುಂದಾಗಿ ಕರ್ತವ್ಯಕ್ಕೆ  ಅಡ್ಡಿಪಡಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2021 ಕಲಂ: 353, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ವರದಕ್ಷಿಣೆ ಕಿರುಕುಳ

  • ಉಡುಪಿ : ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದಿ ನಂಬ್ರ:66/2021ರಂತೆ ಪಿರ್ಯಾದಿದಾರರಾದ ಶ್ರೀಮತಿ ವಸಂತಿ (28), ಗಂಡ:ಯಮನೂರಪ್ಪ ಡಿ.ಕೆ ವಾಸ: ಅನಂತಕೃಪಾ ಬಿಲ್ಡಿಂಗ್ ಬಳಿ, ಮಾರುತೀ ವೀಥಿಕಾ ರಸ್ತೆ, ಶಿವಳ್ಳಿ ಗ್ರಾಮ, ಉಡುಪಿ ಇವರು ದಿನಾಂಕ 27-11-2009 ರಂದು ಆಪಾದಿತನನ್ನು ಉಡುಪಿ ಚಿಟ್ಪಾಡಿ ದೇವಸ್ಥಾನದಲ್ಲಿ ಗುರು ಹಿರಿಯರು ನಿಶ್ಚಯಿಸಿದಂತೆ ವಿವಾಹವಾಗಿದ್ದು, ವಿವಾಹದ ಸಂದರ್ಭದಲ್ಲಿ ಗಂಡನ ಕಡೆಯವರ ಬೇಡಿಕೆಯಂತೆ ವಧುವಿಗೆ 7 ತೊಲೆ, ವರನಿಗೆ 7 ತೊಲೆ, ಒಟ್ಟು 14 ತೊಲೆ ಬಂಗಾರವನ್ನು ನೀಡಿ ಮದುವೆಯ ಎಲ್ಲಾ ಖರ್ಚನ್ನು ಪಿರ್ಯಾದಿದಾರರ ಹೆತ್ತವರೇ ಭರಿಸಿರುತ್ತಾರೆ. ಪಿರ್ಯಾದಿದಾರರು ವಿವಾಹವಾದ ನಂತರ ಸ್ವಲ್ಪ ಸಮಯ ಗಂಡನ ಮನೆಯಾದ ಪ್ರಗತಿ ನಗರದಲ್ಲಿದ್ದು ನಂತರ ಬೆಂಗಳೂರಿಗೆ ಗಂಡನ ಜೊತೆ ಹೋಗಿರುತ್ತಾರೆ. ಅಲ್ಲಿ ಪಿರ್ಯಾದಿದಾರರಿಗೆ ಆರೋಪಿಯು ದೈಹಿಕ ಮಾನಸಿಕ ಹಿಂಸೆಯನ್ನು ನೀಡಲು ಪ್ರಾರಂಭಿಸಿದ್ದು ಪಿರ್ಯಾದಿದಾರರು ಮೊದಲ ಬಾರಿ ಗರ್ಭಿಣಿಯಾದಾಗ ಸೀಮಂತ ಮಾಡಲು ಆರೋಪಿಯು 2 ಪವನ್ ಚಿನ್ನಕ್ಕೆ ಬೇಡಿಕೆ ಇಟ್ಟಂತೆ ಪಿರ್ಯಾದಿದಾರರ ಮನೆಯವರು 1 ಪವನ್ ಚಿನ್ನವನ್ನು ಉಡುಗೊರೆಯಾಗಿ ನೀಡಿರುತ್ತಾರೆ. ಪಿರ್ಯಾದಿದಾರರ ಎರಡೂ ಹೆರಿಗೆಯ ಖರ್ಚನ್ನು ಹೆತ್ತವರೇ ಭರಿಸಿದ್ದು, ವರದಕ್ಷಿಣೆ ಸರಿಯಾಗಿ ನೀಡಲಿಲ್ಲವೆಂದು ಆಗಾಗ ಪಿರ್ಯಾದಿದಾರರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿರುವುದಾಗಿದೆ. ದಿನಾಂಕ:03/06/2021 ರಂದು  ಪಿರ್ಯಾದಿದಾರರ ಅತ್ತೆ  ಉಡುಪಿಯಲ್ಲಿ ಮೃತಪಟ್ಟಾಗ ಆರೋಪಿಯು, ಪಿರ್ಯಾದಿ ಹಾಗೂ ಮಕ್ಕಳ ಜೊತೆ ಉಡುಪಿಗೆ ಬಂದು ತಾಯಿಯ ಕ್ರಿಯೆಗಳನ್ನು ಮುಗಿಸಿ  ವಾಪಾಸು ಬೆಂಗಳೂರಿಗೆ ಹೋಗುವಾಗ ಆರೋಪಿಯು ತನ್ನ ತಂದೆ ಹಾಗೂ ಇಬ್ಬರು ಮಕ್ಕಳನ್ನು  ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರನ್ನು ಅವರ ತವರು ಮನೆಯಲ್ಲಿ ಬಿಟ್ಟಿದ್ದು, ವಾಪಾಸು ಕರೆದುಕೊಂಡು ಹೋಗಬೇಕೆಂದರೆ 5 ಪವನ್ ಚಿನ್ನ ತರಬೇಕು, ಇಲ್ಲವಾದರೆ ಮನೆಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಬೆದರಿಸಿರುತ್ತಾರೆ. ಈ ಬಗ್ಗೆ ಉಡುಪಿ ಮಹಿಳಾ ಠಾಣಾ ಅಪರಾಧ ಕ್ರಮಾಂಕ 54/2021 ಕಲಂ:498(ಎ), 323, 506 ಐಪಿಸಿ & 3, 4 ಡಿಪಿ ಕಾಯಿದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-12-2021 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080