ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರದೀಪ್ ಶೆಟ್ಟಿ (35), ತಂದೆ: ಭೋಜ ಶೆಟ್ಟಿ, ವಾಸ:  ಶ್ರೀ ಶಬರಿ ಹೌಸ್, ಗುಮ್ಮಗುಂಡಿ ಬಲ್ಲಾಡಿ ಗ್ರಾಮ, ಮುದ್ರಾಡಿ ಅಂಚೆ ಹೆಬ್ರಿ ತಾಲೂಕು ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಂದೆ ಭೋಜ ಶೆಟ್ಟಿ ರವರುದಿನಾಂಕ 13/11/2022 ರಂದು ಪುತ್ತೂರು ಗ್ರಾಮ ನಿಟ್ಟೂರು ಜಂಕ್ಷನ್ ಬಳಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-66 ನೇ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ನಿಂತುಕೊಂಡಿರುವಾಗ ಮಧ್ಯಾಹ್ನ 2:00 ಗಂಟೆಗೆ ಉಡುಪಿ ಕರಾವಳಿ ಜಂಕ್ಷನ್ ಕಡೆಯಿಂದ ಸಂತೆಕಟ್ಟೆ ಜಂಕ್ಷನ್ ಕಡೆಗೆ KA-20-ES-2684 ನೇ ಸ್ಕೂಟರ್ ಸವಾರ ಅಜಿತ್  ತಾನು ಸವಾರಿ ಮಾಡುತ್ತಿದ್ದ ಸ್ಕೂಟರ್ ನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಭೋಜ ಶೆಟ್ಟಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ತಲೆಗೆ ಗುದ್ದಿದ್ದ ಒಳನೋವು ಮತ್ತು ಎಡ ಕಾಲಿನ ಮೂಳೆಮುರಿತದ ಜಖಂ ಆಗಿ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯ ಪಡೆಯುತ್ತಿರುವುದಾಗಿದೆ. ಅಲ್ಲದೇ KA-20-ES-2684 ನೇ ಸ್ಕೂಟರ್ ಸವಾರ ಅಜಿತ್ ರವರು ಕೂಡಾ ಅಫಘಾತ ಸಮಯ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಸಣ್ಣಪುಟ್ಟ ಗಾಯಗಳಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  92/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

  • ಬ್ರಹ್ಮಾವರ : ಫಿರ್ಯಾದಿದಾರರಾದ ವಿಜೇಂದ್ರ ಕುಮಾರ (59), ತಂದೆ: ಮಹಾಲಿಂಗ , ವಾಸ: ಗೋ ವಿಮಲ  ,  ಹೊಸಾಳ ಗ್ರಾಮ, ಬಾರಕೂರು ಅಂಚೆ ಬ್ರಹ್ಮಾವರ ತಾಲೂಕು ಇವರು ದಿನಾಂಕ 11/11/2022 ರಂದು ಬೆಳಿಗ್ಗೆ 8:45 ಗಂಟೆಗೆ ಮನೆಯ ಬಾಗಿಲಿಗೆ ಬೀಗ ಹಾಕಿ ಎಲ್ಲರೂ ತಿರುಪತಿ ಯಾತ್ರೆಗೆ ಹೋಗಿದ್ದು,  ದಿನಾಂಕ 13/11/2022 ರಂದು ಮಧ್ಯಾಹ್ನ 1:50 ಗಂಟೆಗೆ  ವಾಸಾಸು ಬಂದು ನೋಡಿದಾಗ ಯಾರೋ ಕಳ್ಳರು ಮನೆಯ ಎದುರಿನ ಪ್ರವೇಶ ಬಾಗಿಲಿನ ಚಿಲಕದ ಕೊಂಡಿಯನ್ನು ಮುರಿದು ಒಳ ಪ್ರವೇಶಿಸಿ ಎರಡು ಬೆಡ್‌ ರೂಂ ಕವಾಟುಗಳಿನ ಬಾಗಿಲು ತೆರೆದುಕೊಂಡಿದ್ದು ಕಪಾಟಿನ ಲಾಕರ್‌ನ ಬೀಗವನ್ನು ಮುರಿದು ಅದರೊಳಗೆ ಇಟ್ಟಿರುವ 1) 28 ಗ್ರಾಂ ತೂಕದ ಚಿನ್ನದ ರೋಪ್‌ ಸರ ಮೌಲ್ಯ 58,800/- 2) 6 ಗ್ರಾಂ ತೂಕದ ಚಿನ್ನದ ಸರ ಮೌಲ್ಯ 12,600,  3) ತಲಾ 12 ಗ್ರಾಂ ತೂಕದ 2 ಬಳೆಗಳು ಮೌಲ್ಯ 51,400/-,  4)  4 ಗ್ರಾಂ ತೂಕದ ಚಿನ್ನದ ಉಂಗುರು  ಮೌಲ್ಯ 8,400,   5) ಕಿವಿಯ ಬೆಂಡೊಲೆ ಬಿಳಿ ಮಣಿಗಳ ಸಹಿತ 8 ಗ್ರಾಂ ಮೌಲ್ಯ 16,800/-  ಓಟ್ಟು ಮೌಲ್ಯ  1,48,000/- ರೂ ಆಗಿರುತ್ತದೆ . ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 190/2022 ಕಲಂ : 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ : ಪಿರ್ಯಾದಿದಾರರಾದ ದೇವದಾಸ್ ತಿಂಗಳಾಯ (44), ತಂದೆ: ಸಂಜೀವ ಸಾಲಿಯಾನ್, ವಾಸ: ಸುಮನಾ ನಿವಾಸ, ಮಟ್ಟು, ಕಟಪಾಡಿ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಮ್ಮ ಸಂತೋಷ್‌@ ಸಂತೋಷ್‌ತಿಂಗಳಾಯ ( 35) ಇವರು ಮಲ್ಪೆಯ ಪ್ರವೀಣ್‌ ಕಾಂಚನ್‌ ರವರ ಜೈಬಲರಾಮ್‌ ಮೀನುಗಾರಿಕೆ ಬೋಟ್‌ನಲ್ಲಿ ಕಲಾಸಿಯಾಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ  13/11/2022ರಂದು ಮೀನುಗಾರಿಕೆ ನಿಮಿತ್ತ ಸಂಜೆ 6:30 ಗಂಟೆಗೆ ಮಲ್ಪೆ ಬಂದರಿನಿಂದ ಬೋಟ್‌ನಲ್ಲಿ ಮೀನುಗಾರಿಕೆ ನಿಮಿತ್ತ ಹೋಗಲು ಬೋಟ್‌ನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ಸಮಯದಲ್ಲಿ ಸಂತೋಷ್‌@ ಸಂತೋಷ್‌ ತಿಂಗಳಾಯರವರು ಕಾಲು ಜಾರಿ ನೀರಿಗೆ ಬಿದ್ದಿದವರನ್ನು ಇತರ ಮೀನುಗಾರರ ಸಹಾಯದಿಂದ ಹುಡುಕಾಡಿ ಸಂಜೆ 7:00 ಗಂಟೆಗೆ ನೀರಿನಿಂದ ಮೇಲಕ್ಕೆ ಎತ್ತಿ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ನಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ, ಅಜ್ಜರಕಾಡುಗೆ ಕರೆದುಕೊಂಡು ಹೋಗಿದ್ದಾಗ ಅಲ್ಲಿ ಪರೀಕ್ಷಿಸಿದ ವೈದ್ಯರು ಸಂತೋಷ್‌@ ಸಂತೋಷ್‌ ತಿಂಗಳಾಯ ಈಗಾಗಲೇ ಮೃತಪಟ್ಟಿರುವುದಾಗಿ ರಾತ್ರಿ 7:40 ಗಂಟೆಗೆ ತಿಳಿಸಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 66/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಪಡುಬಿದ್ರಿ: ಪಿರ್ಯಾದಿದಾರರಾದ ಅಮರ್‌‌ಪಾಲ್ (18), ತಂದೆ: ದಿ. ಸುಕುಲ್ ಬುಯಾನ್, ವಾಸ: ಉಜಿಯಾರ್ ಬಹೇರಾ, ನಗ್ವಾನ್ ಪಾತ್ರ, ಗಯಾ ಜಿಲ್ಲೆ, ಬಿಹಾರ ರಾಜ್ಯ ಇವರು ಅಣ್ಣ ಶಿಶುಪಾಲ್(28) ಎಂಬುವವರೊಂದಿಗೆ ಕಳೆದ ಒಂದು ವರ್ಷದಿಂದ ಮಂಗಳೂರಿನ ಆರ್‌‌.ಜಿ. ಪೈಪ್‌ಲೈನ್ ಸರ್ವಿಸ್ ಪ್ರೈ.ಲಿಮಿಟೆಡ್ ಕಂಪನಿಯಲ್ಲಿ ಗ್ಯಾಸ್  ಪೈಪ್ ಲೈನ್ ಅಳವಡಿಸುವ ಕೆಲಸ ಮಾಡಿಕೊಂಡಿದ್ದು, ಈಗ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬ್ರಹ್ಮ ಬೈದರ್ಕಳ ಗರಡಿಯ ಬಳಿ ಪೈಪ್‌‌ಲೈನ್ ಅಳವಡಿಸುತ್ತಿದ್ದು, ದಿನಾಂಕ  13/11/2022 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಎಲ್ಲರೂ ಕಂಟೈನರ್ ರೂಮಿನಲ್ಲಿರುವ ಸಮಯ 13:00 ಗಂಟೆಗೆ ಪಿರ್ಯಾದಿದಾರರ ಅಣ್ಣ ಶಿಶುಪಾಲ ರವರು 2-3 ಬಾರಿ ವಾಂತಿ ಮಾಡಿದ್ದು, ನಂತರ ಅವರನ್ನು ಚಿಕಿತ್ಸೆಯಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು, ನಂತರ ಅವರು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆಗೆ ಸ್ಪಂದಿಸದೇ 16:00 ಗಂಟೆಯ ವೇಳೆಗೆ ಮೃತಪಟ್ಟಿರುವುದಾಗಿದೆ.   ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 27/2022, ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣದ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕಾರ್ಕಳ: ದಿನಾಂಕ 13/11/2022 ರಂದು ಪ್ರಸನ್ನ ಎಂ.ಎಸ್, ಪೊಲೀಸ್‌ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಗಸ್ತಿನಲ್ಲಿದ್ದಾಗ ಠಾಣಾ ಸರಹದ್ದಿನ ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಪಾದೆ ಬಳಿ ಹಾಡಿಯ  ಸರಕಾರಿ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳನ್ನು ಉಪಯೋಗಿಸಿ ಅಂದರ್‌ಬಾಹರ್‌ ಜುಗಾರಿ ಆಟ ಆಡುತ್ತಿದ್ದಾರೆ ಎಂಬುವುದಾಗಿ ಮಾಹಿತಿ ಬಂದಂತೆ ದಾಳಿ  ನಡೆಸಿ   ಅಂದರ್  ಬಾಹರ್ ಜುಗಾರಿ ಆಟವನ್ನು ಆಡುತ್ತಿದ್ದ 1) ಉಮೇಶ (32),ತಂದೆ: ದಿ; ಅಣ್ಣು ವಾಸ: ನಿಜಮುಂಡೆ, ಗರಡಿ ರೋಡ್, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು, 2) ಸುರೇಶ (24),ತಂದೆ: ಕುಮಾರ ಬೋವಿ, ವಾಸ: ಜಾರ್ಕಳ ಶಾಂತಿಪಲ್ಕೆ, ಎರ್ಲಪಾಡಿ ಗ್ರಾಮ, ಕಾರ್ಕಳ ತಾಲೂಕು,  3) ಪ್ರಜ್ವಲ್ (25),ತಂದೆ: ಕೃಷ್ಣಪ್ಪ ಪೂಜಾರಿ ವಾಸ:  ಶಂಕರಬೆಟ್ಟು, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರನ್ನು ವಶಕ್ಕೆ ಪಡೆದಿದ್ದು ಉಳಿದ 4 ಜನ ಸ್ಥಳದಿಂದ ಓಡಿ ಹೋಗಿರುತ್ತಾರೆ . ಅಪಾದಿತರು  ಜುಗಾರಿ ಆಟಕ್ಕೆ ಬಳಸಿದ ನಗದು ರೂಪಾಯಿ 3600/-,  52 ಇಸ್ಪೀಟ್‌ಎಲೆಗಳು, ಹಳೆಯ ದಿನಪತ್ರಿಕೆ -1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 141/2022 ಕಲಂ:  87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಶಂಕರನಾರಾಯಣ: ದಿನಾಂಕ  12/11/2022 ರಂದು  ಹೆಬ್ರಿ ತಾಲೂಕಿನ  ಅಲ್ಬಾಡಿ  ಕೊಂಜಾಡಿ ಎಂಬಲ್ಲಿ  ಕ್ರಿಕೆಟ್  ಪಂದ್ಯಾಟವಿತ್ತು, ಈ   ಪಂದ್ಯಾಟಕ್ಕೆ ಪಿರ್ಯಾದಿದಾರರಾದ ಸುಮಂತ್ ಶೆಟ್ಟಿ (18), ತಂದೆ: ಸಂತೋಷ ಕುಮಾರ  ಶೆಟ್ಟಿ,   ವಾಸ, ಕೆರ್ಜಾಡಿ  ಗುಡ್ಡೆಯಂಗಡಿ  ಅಲ್ಬಾಡಿ ಗ್ರಾಮ ಹೆಬ್ರಿ  ತಾಲೂಕು ಇವರು  ಹೋಗಿದ್ದು, ಈ  ಸಮಯ  ಪಿರ್ಯಾದಿದಾರರ  ತಂಡಕ್ಕೆ  ಹಾಗೂ ಆರೋಪಿಗಳಾದ  1)ಸುಪ್ರೀತ  ಶೆಟ್ಟಿ  ಅರ್ಡಿ ಮಳಗಿ ಮನೆ, 2)ವಿಶ್ವಾಸ  ಶೆಟ್ಟಿ ಆರ್ಡಿ ಅಡೋಲು, 3) ಪ್ರೀತಮ ಶೆಟ್ಟಿ  ಕೆರ್ಜಾಡಿ  ಗುಡ್ಡೆಯಂಗಡಿ, 4) ಉಲ್ಲಾಸ  ಶೆಟ್ಟಿ ಆರ್ಡಿ ಅಡೋಲ ಇವರ   ತಂಡಕ್ಕೆ  ವಾಲಿಬಾಲ್  ಪಂದ್ಯಾಟವಿದ್ದು, ಈ  ಸಮಯ ಪಿರ್ಯಾದಿದಾರರ  ತಂಡಕ್ಕೆ  ಬೆಂಬಲ ಮಾಡಿದ್ದು, ಇದೇ  ವಿಷಯದಲ್ಲಿ ಆರೋಪಿಗಳು ಕೋಪಗೊಂಡು ದಿನಾಂಕ 13/11/2022 ರಂದು ಬೆಳಿಗ್ಗೆ  6:30  ಗಂಟೆಗೆ   ಹೆಬ್ರಿ ತಾಲೂಕಿನ  ಅಲ್ಬಾಡಿ  ಕೊಂಜಾಡಿ  ಅಟದ  ಮೈದಾನದ  ಬಳಿ  ಪಿರ್ಯಾದಿದಾರನ್ನು  ಅಡ್ಡಗಟ್ಟಿ ಅವಾಚ್ಯ  ಶಬ್ದದಿಂದ  ಬೈದು ಕಟ್ಟಿ ಹಾಕಿ  ಕೈ ಕಾಲು  ಮುರಿದು  ಹಾಕುತ್ತೇನೆ  ಎಂದು  ಬೆದರಿಕೆ  ಹಾಕಿರುತ್ತಾರೆ.  ಆ  ಬಳಿಕ  ಬೆಳಿಗ್ಗೆ  6:45 ಗಂಟೆಗೆ   ಅಲ್ಬಾಡಿ ಗಣೇಶ  ಆಚಾರ್ಯ ರವರ ಅಂಗಡಿಯ   ಬಳಿ   ಮೋಟಾರ್  ಸೈಕಲ್‌ನಲ್ಲಿ ಹೋಗುತ್ತಿರುವಾಗ ಆರೋಪಿಗಳು ಪುನ: KA-20-Z- 6676 ನೇ   ನಂಬ್ರದ  ಮೋಟಾರ್  ಸೈಕಲ್‌ನಲ್ಲಿ  ಬಂದು ಪಿರ್ಯಾದಿದಾರರ  ಮೋಟಾರ್  ಸೈಕಲ್‌ಗೆ  ಬೊಲೇರೊ  ವಾಹನ  ಅಡ್ಡನಿಲ್ಲಿಸಿ  ಅವಾಚ್ಯ  ಶಬ್ದದಿಂದ ಬೈದು   ಹೋಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 122/2022  ಕಲಂ:. 341, 323, 506, 504  ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 14-11-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080