ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ದಿನಾಂಕ 13/11/2021 ರಂದು ಸಂಜೆ 4:00 ಗಂಟೆಗೆ KA-20 ED-8147 ನೇ ಸ್ಕೂಟರ್ ನಲ್ಲಿ ದಿವ್ಯಾ ಜಿ ನಾಯಕ್ ಎಂಬುವವರು ಹಿಂಬದಿಯಿಂದ ತನ್ನ ಮಗಳು ಪ್ರಣಮ್ಯ ಜಿ ನಾಯಕ್(8) ರವರನ್ನು ಕುಳ್ಳಿರಿಸಿಕೊಂಡು ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ಅಂಬಾಗಿಲು ಬಳಿಯ ನಾರಾಯಣ ನಗರ ರಸ್ತೆಯ ಜಂಕ್ಷನ್ ನನ್ನು ತಲುಪುವಾಗ ಅದರ ಹಿಂದಿನಿಂದ ಅಂದರೆ ಸಂತೆಕಟ್ಟೆ ಕಡೆಯಿಂದ ಉಡುಪಿ ಕಡೆಗೆ KA-20 MD-2388 ಟ್ರಾನ್ಸಿಟ್ ಮಿಕ್ಸರ್ ಲಾರಿ ಚಾಲಕ ಅರುಪ್ ನಾಥ್  ಎಂಬುವವನು ತನ್ನ ಟ್ರಾನ್ಸಿಟ್ ಮಿಕ್ಸರ್ ಲಾರಿಯನ್ನು ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಾಲಾಯಿಸಿ ಸ್ಕೂಟರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರಿನಲ್ಲಿದ್ದ ಸವಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ದಿವ್ಯಾ ಜಿ ನಾಯಕ್ ರವರಿಗೆ ಕೈಗೆ ಮತ್ತು ಕಾಲಿಗೆ ತರಚಿದ ಗಾಯವಾಗಿದ್ದು, ಸಹ ಸವಾರಳಾದ ಪ್ರಣಮ್ಯ ಜಿ ನಾಯಕ್ ರವರ ದೇಹದ ಮೇಲೆ ಲಾರಿಯ ಚಕ್ರವು ಹರಿದು ಹೋಗಿ ಮಗುವಿನ ತಲೆ, ಹೊಟ್ಟೆ ಮತ್ತು ಕಾಲಿನ ಮೇಲಿನ ಚರ್ಮ ಹರಿದು ಹೋಗಿ ಛಿದ್ರವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಎಂಬುದಾಗಿ ವಿಘ್ನೇಶ ಬಿ ನಾಯಕ್ (28) ತಂದೆ: ಭಾಸ್ಕರ ಕೆ ನಾಯಕ್  ವಾಸ: “ವಾಮನ ನಿಲಯ” ಎಲ್ ವಿ ಟಿ ದೇವಸ್ಥಾನದ ಹಿಂಬದಿ ಪುತ್ತೂರು ಗ್ರಾಮ ಉಡುಪಿ ಇವರು ಇವರು ನೀಡಿದ ದೂರಿನಂತೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ದಿನಾಂಕ 12/11/2021 ರಂದು ಪಿರ್ಯಾದಿದಾರರಾದ ನಾವಾಜ್‌ (32) ತಂದೆ: ಇಬ್ರಾಹಿಂ, ವಾಸ: ಜವನರಕಟ್ಟೆ, ಬೆಳಪು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು, ಉಡುಪಿ ಇವರು ಕೆಲಸದ ನಿಮಿತ್ತ ಕಳತ್ತೂರಿನಿಂದ  ಬೆಳಪು ಕಡೆಗೆ ಬರುತ್ತಿರುವಾಗ  ಬೆಳಪುವಿನ ಬದ್ರಿಯಾ ಮಸೀದಿ ಬಳಿ ತಲುಪುವಾಗ ಸಮಯ ಸುಮಾರು ರಾತ್ರಿ 10:30 ಗಂಟೆಗೆ ಹಿಂದಿನಿಂದ ಇವರ ಪರಿಚಯದ ಫರಾನ್ ಆಲಿ ತನ್ನ ಮೋಟಾರು ಸೈಕಲ್ ನಂ  KA-20 EM-0346 ನೇಯದ್ದನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ನಾವಾಜ್‌ ರವರನ್ನು ಓವರ್ ಟೇಕ್ ಮಾಡಿಕೊಂಡು ಮುಂದಕ್ಕೆ ಹೋಗಿ ರಸ್ತೆಯಲ್ಲಿದ್ದ  ದನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸಮೇತ ಫರಾನ್ ಆಲಿಯು ರಸ್ತೆಗೆ ಬಿದ್ದು, ದನವೂ ಕೂಡಾ ರಸ್ತೆಗೆ ಬಿತ್ತು. ಈ ಆಫಘಾತದಿಂದ ಫರಾನ್ ಆಲಿಯ ತಲೆಗೆ ತೀವ್ರ ತರಹದ ಗಾಯವಾಗಿದ್ದಲ್ಲದೇ ಎಡಕೈ ಮೊಣಗಂಟಿನ ಬಳಿ, ಕಾಲಿನ ಎರಡು ಪಾದದ ಬಳಿ ತರಚಿದ ಗಾಯವಾಗಿರುತ್ತದೆ. ಆ ಸಮಯ ಸ್ಥಳೀಯರು ಬಂದು ಫರಾನ್ ಆಲಿಯವರನ್ನು ಉಡುಪಿಯ ಆದರ್ಶ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲು ಮಾಡಿದ್ದು, ಬೆಳಪು ನಿವಾಸಿ ಹಸನಬ್ಬರವರು ಅಫಘಾತಕ್ಕೀಡಾದ ಹೋರಿಯನ್ನು ಗುರುತಿಸಿ ಚಿಕಿತ್ಸೆ ನೀಡುವರೇ ಮನೆಗೆ ಕೊಂಡು ಹೋಗಿದ್ದು, ನಂತರ ಹೋರಿಯು ಮೃತಪಟ್ಟಿರುತ್ತದೆ. ಈ ಅಘಫಾತಕ್ಕೆ ಫರಾನ್ ಆಲಿ ತನ್ನ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 67/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಫಿರ್ಯಾದಿದಾರರಾದ ಮಹಮ್ಮದ್‌ ಸಾದಿಕ್‌ ಶೇಖ್‌ (76) ತಂದೆ: ಅಬ್ದುಲ್‌ ಕಯ್ಯುಮ್‌ಶೇಖ್‌ ವಾಸ: ಸಾದಿಕ್‌ ಮಂಜಿಲ್‌ ಕರಾವಳಿ ಐಸ್‌ಪ್ಲ್ಯಾಂಟ್‌ಬಳಿ ಅಣ್ಣಪ್ಪಯ್ಯ ಸಭಾ ಭವನ ಹಾಲ್‌ಬಳಿ ತ್ರಾಸಿ ಗ್ರಾಮ ಕುಂದಾಪುರ ಇವರು ದಿನಾಂಕ 13/11/2021 ರಂದು ತ್ರಾಸಿ ಪೇಟೆಗೆ ಸಾಮಾನು ತರುವ ಬಗ್ಗೆ ಬೆಳಿಗ್ಗೆ 10:30 ಗಂಟೆ ಸಮಯಕ್ಕೆ ತ್ರಾಸಿ ಗ್ರಾಮದ ಅಣ್ಣಪ್ಪಯ್ಯ ಸಭಾ ಭವನದ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಆಪಾದಿತನು ತನ್ನ KA-20 EN-3049 ನೇ ಮೋಟಾರ್‌ ಸೈಕಲ್‌ ನನ್ನು ಮುಳ್ಳಿಕಟ್ಟೆ ಕಡೆಯಿಂದ ತ್ರಾಸಿ ಕಡೆಗೆ ರಸ್ತೆಯ ವಿರುದ್ಧ ದಿಕ್ಕಿಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಇವರು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ಮಹಮ್ಮದ್‌ ಸಾದಿಕ್‌ ಶೇಖ್‌ ರವರ ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದು ಬಲಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021  ಕಲಂ: 279, 337  ಐಪಿಸಿ & Rule 218, 177 IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-11-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080