ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಾಸ್ತಿ ಗೌಡ (52) ತಂದೆ: ಕುಪ್ಪಯ್ಯ ಗೌಡ ,ವಾಸ: ಮೆಲ್ ಕೈರಾಣ,ಕಾಲ್ತೋಡು ಗ್ರಾಮ ಬೈಂದೂರು ಇವರ ಕಿರಿಯ ತಮ್ಮನಾದ ಸುಧಾಕರ ಗೌಡ (49) ರವರು ಸುಮಾರು 26 ವರ್ಷದ ಹಿಂದೆ ಗೋಳಿಹೊಳೆ ಗ್ರಾಮದ ಹಿಲ್ಲಾರು ಬಚ್ಚೆಗೌಡ ಇವರ ಮಗಳಾದ ನೀಲಾವತಿಯನ್ನು ಮದುವೆಯಾಗಿ ಹೆಂಡತಿ ಮಕ್ಕಳೊಂದಿಗೆ ವಾಸ ಮಾಡಿಕೊಂಡು 2-3 ದಿನಕ್ಕೊಮ್ಮೆ ಮಾಸ್ತಿ ಗೌಡ ರವರ ಮನೆಗೆ ಬಂದು ಹೋಗುತ್ತಿದ್ದು ಮಧ್ಯ ಸೇವನೆ ಅಭ್ಯಾಸ ಇರುತ್ತದೆ. ಪಿರ್ಯಾದಿದಾರರ ತಮ್ಮ ಸುಧಾಕರ ಗೌಡ ದಿನಾಂಕ 10/11/2021 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯಿಂದ ಕಾಯಿ ಮಾರಾಟ ಮಾಡುವುದಾಗಿ ಅರೆಶಿರೂರಿಗೆ ಕಾಯಿಯನ್ನು ತೆಗೆದುಕೊಂಡು ಹೋಗಿದ್ದು ಬಳಿಕ ಮಾಸ್ತಿ ಗೌಡ ರವರು ಹೆಂಡತಿ ಮನೆಯಾದ ಅರೆಶಿರೂರಿಗೆ ಹೋಗಿ ಅದೇ ದಿನ ರಾತ್ರಿ ಮನೆಗೆ ಬಂದಿದ್ದು ಅಕ್ಕ ಮುಕಾಂಬುರವರಲ್ಲಿ “ಸುಧಾಕರ ಗೌಡ ಮನೆಗೆ ಬಂದಿರುತ್ತಾನಾ “ ಎಂದು ಕೇಳಿದಾಗ ಮಧ್ಯಾಹ್ನ 02:00 ಗಂಟೆಗೆ ಆತನ ಮಗಳ ಗಂಡ ಸುರೇಶ ಇವರ ಜೊತೆ ಬೈಕಿನಲ್ಲಿ ಬಂದು ವಾಪಸ್ಸು ಸುಧಾಕರ ಗೌಡನು ಹೆಂಡತಿ ಮನೆಗೆ ಹೋಗುದಾಗಿ ಸುರೇಶನ ಬೈಕಿನಲ್ಲಿ ಹೋಗಿರುತ್ತಾನೆ ಎಂದು ಮಾಸ್ತಿ ಗೌಡ ರವರ ಬಳಿ ಹೇಳಿದ್ದು ದಿನಾಂಕ 13/11/2021 ರಂದು ಸಂಜೆ :18:30 ಗಂಟೆಗೆ ಮಾಸ್ತಿ ಗೌಡ ರವರು ತಮ್ಮನ ಮಗಳಾದ ನಾಗರತ್ನಳ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ತಮ್ಮನ ಬಗ್ಗೆ ವಿಚಾರಿಸುತ್ತಿದ್ದ ಸಮಯದಲ್ಲಿ ಮಾಸ್ತಿ ಗೌಡ ರವರ ತಮ್ಮನ ಅಳಿಯ ಸುರೇಶ ಆಕೆಯಿಂದ ಮೊಬೈಲ್ ಪಡೆದುಕೊಂಡು ಸುಧಾಕರ ಗೌಡ ನಮ್ಮ ಮನೆಯ ಪಕ್ಕದಲ್ಲಿರುವ ಮಂಜು ಪೂಜಾರಿರವರ ಬಾವಿಗೆ ಬಿದ್ದು ಸತ್ತು ಹೋಗಿರುತ್ತಾನೆ ಎಂದು ತಿಳಿಸಿದ್ದು ಬಳಿಕ ಮಾಸ್ತಿ ಗೌಡ ರವರ ತಮ್ಮನ ಹೆಂಡತಿ ಮನೆಯ ಬಳಿ ಹೋಗಿ ಮಂಜು ಪೂಜಾರಿರವರ ಜಾಗದಲ್ಲಿರುವ ಬಾವಿಯನ್ನು ನೋಡಲಾಗಿ ಮಾಸ್ತಿ ಗೌಡ ರವರ ತಮ್ಮ ಸುಧಾಕರರವರ ಮೃತದೇಹವು ಬಾವಿಯಲ್ಲಿ ತೇಲುತ್ತಿತ್ತು ಮೃತ ಸುಧಾಕರ ಗೌಡರವರ ಮರಣದಲ್ಲಿ ಅನುಮಾನವಿರುತ್ತದೆ, ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 46/2021 ಕಲಂ: 174 (ಸಿ) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ದಿನಾಂಕ 13/11/2021 ರಂದು ರಾತ್ರಿ 11:00 ಘಂಟೆಯಿಂದ ದಿನಾಂಕ 14/11/2021 ರಂದು ನಸುಕಿನ 4:00 ಘಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರಾದ ಆನಂದ ಶೆಟ್ಟಿ, (63) ತಂದೆ: ಬೊಗ್ರ ಶೆಟ್ಟಿ, ವಾಸ: “ ಶ್ರೀ” ನಿವಾಸ ನಿಲಯ, ಕೋಟ ಮಸೀದಿ ಹತ್ತಿರ, ಕೋಟ ಪೋಸ್ಟ್‌, ಕೋಟತಟ್ಟು ಗ್ರಾಮ, ಬ್ರಹ್ಮಾವರ ಇವರ ಮನೆಯಲ್ಲಿದ್ದ ಗುಜರಿ ಅಂಗಡಿಯ ಹೊರಗಡೆ ಇದ್ದ ಗುಜರಿ ಸ್ವತ್ತುಗಳಾದ 1) ಕೆಂಪು ಕಪ್ಪು ಬಣ್ಣದ ಹೊಂಡಾ ಕಂಪನಿಯ ಜನರೇಟರ್‌ ಮೌಲ್ಯ 8,000/- ರೂಪಾಯಿ 2) ದೊಡ್ಡ ಬ್ಯಾಟರಿಗಳು 4 ಮೌಲ್ಯ 2,000/- ರೂಪಾಯಿ 3) ಸಣ್ಣ ಬ್ಯಾಟರಿಗಳಿದ್ದ 3 ಸಿಮೆಂಟ್‌ ಚೀಲ ಮೌಲ್ಯ 3,000/- ರೂಪಾಯಿ , 4) ಇನವೋಟರ್‌-2 ಮೌಲ್ಯ 500/- ರೂಪಾಯಿ 5) ಸ್ಟೀಲ್‌ ಗುಜರಿ ವಸ್ತುಗಳಿದ್ದ ಸಿಮೆಂಟ್‌ ಚೀಲ -1 ಮೌಲ್ಯ 1,000/- ರೂಪಾಯಿ ಹಾಗೂ ಗುಜರಿ ಅಂಗಡಿಯ ಹಿಂಬದಿಯಲ್ಲಿದ್ದ ಕೋಣೆಯ ಬಾಗಿಲ ಬೀಗವನ್ನು ತೆಗೆದು ಕೋಣೆಯಲ್ಲಿದ್ದ 6)2 ದೊಡ್ಡ ತಾಮ್ರದ ಕಟ್ಟಾರ,1 ಸಣ್ಣ ತಾಮ್ರದ ಕಟಾರ್‌, 1 ದೊಡ್ಡ ತಾಮ್ರದ ಹಂಡೆ, ಗುದ್ದಿ ಹಾಕಿರುವ ತಾಮ್ರದ ಸಾಮಾನುಗಳಿರುವ 2 ಚೀಲ ಸದ್ರಿ ಸ್ವತ್ತುಗಳ ಮೌಲ್ಯ 40,000/- ರೂಪಾಯಿ, 7) ಗುದ್ದಿ ಹಾಕಿರುವ ಅಲ್ಯೂಮಿನಿಯಂ ಸಾಮಾನುಗಳಿರುವ 2 ಪ್ಲಾಸ್ಟಿಕ್‌ ಚೀಲ ಮೌಲ್ಯ 5,000/- ರೂಪಾಯಿ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ವಾದ ಸ್ವತ್ತುಗಳ ಒಟ್ಟು ಮೌಲ್ಯ 59,500/- ರೂಪಾಯಿ ಆಗಬಹುದಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 195/2021 ಕಲಂ: 457,380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-11-2021 07:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080