ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಗೋಪಾಲ ನಾಯ್ಕ (52), ತಂದೆ: ಸುಕುಡಿ ನಾಯ್ಕ, ವಾಸ: ಹೊಸ ಗದ್ದೆ ಹಿಲಿಯಾಣ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 13/10/2022 ರಂದು ಬೆಳಿಗ್ಗೆ ಮನೆಯ ಹತ್ತಿರದ  ಪ್ರವೀಣ ಎಂಬುವವರೊಂದಿಗೆ  ಮೊಟಾರ್ ಸೈಕಲ್  KA-20-EF-0893ನೇದರಲ್ಲಿ  ಸಹ ಸವಾರನಾಗಿ ಕುಳಿತುಕೊಂಡು ಬಾರ್ಕೂರಿಗೆ ಹೊರಟು ಗೋಳಿಯಂಗಡಿ ಸೈಬ್ರಕಟ್ಟೆ ರಸ್ತೆಯಲ್ಲಿ ಸಾಗುತ್ತಾ ಬೆಳಿಗ್ಗೆ 08:30 ಗಂಟೆಯ ಸಮಯಕ್ಕೆ ನಂಚಾರು ಗ್ರಾಮದ ಸರ್ಕಲ್ ನಿಂದ ಸ್ವಲ್ಪ ಮುಂದಕ್ಕೆ  ಪ್ರವೀಣ ಮೋಟಾರ್ ಸೈಕಲ ನ್ನು ಒಮ್ಮೆಲೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಹೋಗುತ್ತಾ ನಿರ್ಲಕ್ಷವಾಗಿ ಬ್ರೇಕ್ ಹಾಕಿದ್ದು ಪರಿಣಾಮ ಮೋಟಾರ್ ಸೈಕಲ್  ಸಮೇತ  ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲಿನ  ಗಂಟಿನ ಕೆಳಗೆ ಮುಳೆ ಮುರಿತದ ಗಾಯ ಉಂಟಾಗಿದ್ದು ಹಾಗೂ ಸವಾರನಿಗೆ  ಬಲ ಕಾಲಿನ ಗಂಟಿಗೆ ಪಾದದ ಮೇಲೆ  ಮತ್ತು ಎರಡೂ ಕೈಗೆ ತರಚಿದ  ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 174/2022 ಕಲಂ:  279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .   
 • ಪಡುಬಿದ್ರಿ: ಪಿರ್ಯಾದಿದಾರರಾದ ದನಿ ಜಗಜೀವನ್ ನಾಯ್ಕ (34), ತಂದೆ: ಕೃಷ್ಣನಾಯ್ಕ ವಾಸ: ಮನೆ ನಂಬ್ರ. 1-7 ಎ3 ಮಾರ್ಕೇಟ್ ರಸ್ತೆ, ಹೆರ್ಗ ಗ್ರಾಮ, ಪರ್ಕಳ ಅಂಚೆ, ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ರಾಷ್ಟ್ರೀಯ ಸಾಂಖ್ಯಿಕ ಕಛೇರಿ ಮಂಗಳೂರು ಇಲ್ಲಿ ಕಿರಿಯ ಸಾಂಖ್ಯಿಕ ಅಧಿಕಾರಿಯಾಗಿ ಕೆಲಸ ಮಾಡಿಕೊಂಡಿದ್ದು,  ದಿನಾಂಕ 13/10/2022 ರಂದು ಕೆಲಸ ಮುಗಿಸಿಕೊಂಡು  ತನ್ನ ಕಾರು KA-20 MD-2075 ನಂಬ್ರದ ಮಾರುತಿ ಸುಜುಕಿ ಎರಿಟಿಗಾ ಕಾರಿನಲ್ಲಿ  ಸಂಜೆ 6:30 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮಂಗಳೂರು-ಉಡುಪಿ ಏಕಮುಖ ರಸ್ತಯಲ್ಲಿ ಕಾರನ್ನು ಚಲಾಯಿಸಿಕೊಂಡು ಬರುತ್ತಾ ಉಚ್ಚಿಲ ಪೇಟೆ ದಾಟಿ ಮುಂದೆ ಇರುವ ಮಸೀದಿಯ ಎದುರಿನ ಡೈವರ್ಶನ್ ನಿಂದ ಸುಮಾರು 50 ಮೀಟರ್ ಹಿಂದೆ ತಲುಪುವಾಗ ಮಂಗಳೂರು-ಉಡುಪಿ ಏಕಮುಖ ರಸ್ತೆಯ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯ ಕಾಮಗಾರಿಯನ್ನು NHAI ಇಲಾಖೆಯ ವತಿಯಿಂದ ಮಾಡುತ್ತಿದ್ದು, ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ಮಣ್ಣು ತುಂಬಿದ ಸಿಮೆಂಟ್ ಚೀಲಗಳನ್ನು ಇರಿಸಿ ಡೈವರ್ಶನ್ ಮಾಡಿದ್ದು, ಕಾರನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಾ  ಡೈವರ್ಶನಿಂದ 40 ಮೀ ಹಿಂದೆ ಇದ್ದಾಗ ಅದೇ ರಸ್ತೆಯಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸ್ಕಾರ್ಪಿಯೋ ಕಾರೊಂದನ್ನು ಅದರ ಚಾಲಕನು ಅತೀವೇಗ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆ ಕಾರು ಪಿರ್ಯಾದಿದಾರರ  ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದಿರುತ್ತದೆ. ಡಿಕ್ಕಿಯಾದ ರಭಸಕ್ಕೆ ಪಿರ್ಯಾದಿದಾರರ ಕಾರು ಒಮ್ಮೇಲೆ ಮುಂದಕ್ಕೆ ತಳ್ಳಲ್ಪಟ್ಟು ಸ್ವಲ್ಪ ದೂರ ಅಪಘಾತ ಮಾಡಿದ ಸ್ಕಾರ್ಪಿಯ ಕಾರು ಪಿರ್ಯಾದಿದಾರರ ಕಾರನ್ನು ತಳ್ಳಿಕೊಂಡು ಹೋದ ಪರಿಣಾಮ ಕಾರು ರಸ್ತೆಯ ಬಲಬದಿಯ ಡಿವೈಡರ್ ಮೇಲೆ ಹತ್ತಿ, ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಸುಮಾರು ದೂರ ಚಲಿಸಿ ಮಸೀದಿಯ ಎದುರು ರಸ್ತೆಯಲ್ಲಿ ನಿಂತಿರುತ್ತದೆ. ಅಫಘಾತ ಮಾಡಿದ  ಸ್ಕಾರ್ಪಿಯೋ ಕಾರು ಮಂಗಳೂರು-ಉಡುಪಿ ಏಕಮುಖ ರಸ್ತೆಯಲ್ಲಿ ಚಲಿಸಿ ಸ್ಕೂಟಿ ಒಂದಕ್ಕೆ ಡಿಕ್ಕಿ ಹೊಡೆದು ಅದನ್ನು ತಳ್ಳಿಕೊಂಡು ಮಸೀದಿ ಎದುರಿನ ಡೈವರ್ಶನ್ ಗೆ ಚಲಿಸಿ ಅಲ್ಲಿ ಹೆದ್ದಾರಿ ಇಲಾಖೆಯಲ್ಲಿ ಕಾಮಗಾರಿಗಾಗಿ ಹಾಕಿದ್ದ ಜಲ್ಲಿ ಕಲ್ಲಿನ ರಾಶಿಗೆ ತಾಗಿ ನಿಂತಿರುತ್ತದೆ. ಅಪಘಾತದಿಂದ ಪಿರ್ಯಾದಿದಾರರ ಕಾರಿನ ಹಿಂಬದಿ ಸಂಫೂರ್ಣ ಜಖಂಗೊಂಡಿದ್ದು, ಬಲ ಬದಿ, ಎದುರುಗಡೆ ಎಡ ಬದಿ, ಹಾಗೂ ಹಿಂಬದಿ ಜಖಂಗೊಂಡಿರುತ್ತದೆ. ಪಿರ್ಯಾದಿದಾರರ ಎರಡೂ ಕಾಲಿಗೆ ಒಳ ನೋವಾಗಿರುತ್ತದೆ. ಸ್ಥಳೀಯರು ಬಂದು ಪಿರ್ಯಾದಿದಾರರನ್ನು ಉಪಚರಿಸಿರುತ್ತಾರೆ. ಅಫಘಾತ ಮಾಡಿದ ಕಾರಿನ ನಂಬ್ರ KA-01-MB-9267 ಆಗಿದ್ದು, ಅದರ ಚಾಲಕನಿಗೂ ಗಾಯವಾಗಿರುತ್ತದೆ.    ಸ್ಕಾರ್ಪಿಯೋ ಕಾರು ಚಾಲಕನು ಮದ್ಯಪಾನ ಮಾಡಿದಂತೆ ವಾಸನೆ ಬರುತ್ತಿತ್ತು. ಸ್ಕಾರ್ಪಿಯೋ ಕಾರು ಡಿಕ್ಕಿ ಹೊಡೆದ ಸ್ಕೂಟಿಯು ನಂಬ್ರ ಇಲ್ಲದ ಇಲೆಕ್ಟ್ರೀಕ್ ಸ್ಕೂಟಿಯಾಗಿದ್ದು, ಅದರ ಸ್ಕೂಟಿ ಸವಾರ ಅಪಘಾತದ ಸಮಯ ಸ್ಕೂಟಿಯಿಂದ ಎಗರಿ ಬಿದ್ದಿದ್ದಾಗಿ ತಿಳಿದಿದ್ದು, ಆತನ ಹೆಸರು ಅಸ್ಗರ್ ಎಂದು ತಿಳಿಯಿತು. ಆ ಸ್ಕೂಟಿ ಜಖಂಗೊಂಡಿದ್ದು, ಅಫಘಾತ ಮಾಡಿದ ಕಾರಿನ ಎದುರು ಭಾಗ, ಎದುರು ಗ್ಲಾಸ್  ಜಖಂಗೊಂಡಿರುತ್ತದೆ. ಅಲ್ಲಿ ಸೇರಿದ ಸ್ಥಳೀಯರು ಅಫಘಾತ ಮಾಡಿದ ಕಾರಿನ ಚಾಲಕನನ್ನು ಚಿಕಿತ್ಸೆ ಬಗ್ಗೆ ಒಂದು ಅಂಬ್ಯುಲೇನ್ಸ್ ನಲ್ಲಿ ಉಡುಪಿ ಕಡೆಗೆ ಕಳುಹಿಸಿಕೊಟ್ಟಿರುತ್ತಾರೆ. ಅಫಘಾತ ಅದ ಸ್ಥಳದಲ್ಲಿ ಹೆದ್ದಾರಿ ಇಲಾಖೆಯವರು ಕಾಮಗಾರಿ ನಡೆಸುತ್ತಿದ್ದು, ಸ್ಥಳದಲ್ಲಿ ಯಾವುದೇ ಸೂಚನಾ ಫಲಕವನ್ನು ಡೈವರ್ಶನ್ ಬೋರ್ಡ್ ನ್ನು ಹಾಕಿರುವುದಿಲ್ಲ, ಸ್ಥಳದಲ್ಲಿ ಹೆದ್ದಾರಿ ಇಲಾಖೆಯಿಂದ ನೆಟ್ಟ ಬೀದಿ ದೀಪದ ಕಂಬಗಳಾಗಲೀ, ಯಾವುದೇ ಲೈಟ್ ಆಗಲೀ ಅಥವಾ ಇನ್ನಿತರ ಬೆಳಕಾಗಲೀ ಇರುವುದಿಲ್ಲ. ರಸ್ತೆ ಮಧ್ಯೆ ಮಣ್ಣು ತುಂಬಿದ ಸಿಮೆಂಟ್ ಚೀಲಗಳನ್ನು ಅಲ್ಲಲ್ಲಿ ಇಟ್ಟಿದ್ದಾರೆ ಹೊರತಾಗಿ ಬೇರೆ ಯಾವುದೇ ಬ್ಯಾರಿಕೇಡ್ ಗಳಾಗಲೀ, ಸೂಚನಾ ಫಲಕಗಳಾಗಲೀ, ಸೂಚನೆ ನೀಡಲು ವ್ಯಕ್ತಿಗಳಾಗಲೀ ಇಲ್ಲದಿದ್ದು, ಹೆದ್ದಾರಿ ಇಲಾಖೆಯರು ತೀರಾ ನಿರ್ಲಕ್ಷತನದಿಂದ ಯಾವುದೇ ಅಗತ್ಯ ಸೂಚನೆ ಇಲ್ಲದೇ ಕಾಮಗಾರಿ ನಡೆಸುತ್ತಿರುವುದಾಗಿದೆ. ಹೆದ್ದಾರಿ ಇಲಾಖೆಯವರ  ನಿರ್ಲಕ್ಷತನ ಮತ್ತು KA-01-MB-9267 ನೇ ನಂಬ್ರದ ಸ್ಕಾರ್ಪಿಯೋ  ಕಾರಿನ ಚಾಲಕ ಸಚಿನ್  ಅತೀವೇಗ ಮತ್ತು ನಿರ್ಲಕ್ಷತನದಿಂದ ಕಾರನ್ನು  ಚಲಾಯಿಸಿರುವುದೇ ಕಾರಣವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 127/2022 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಆಕಾಶ್‌.ಸಿ (26), ತಂದೆ: ಆರ್‌. ಚಂದ್ರಕಾಂತ ಶೇರಿಗಾರ್‌, ವಾಸ: ಮನೆ ನಂಬ್ರ 197/7, ಶ್ರೀ ರಾಮ ಕೃಪಾ, ರಾಮ ಮಂದಿರದ ಹತ್ತಿರ, ಕೋಡಿ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ಈ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದವರು ಕಳೆದ 1 ½ ತಿಂಗಳಿಂದ ಮನೆಯಲ್ಲಿಯೇ ಇದ್ದಿರುತ್ತಾರೆ.  ಅವರಿಗೆ ಕಳೆದ 5 ವರ್ಷಗಳ ಹಿಂದೆ ಪೀಡ್ಸ್‌ ಖಾಯಿಲೆ ಬಂದಿದ್ದು, ಅದಕ್ಕೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು, ದಿನಾಂಕ 08/10/2022 ರಂದು ಪಿರ್ಯಾದಿದಾರರ ತಂದೆ ತಾನು ಬೆಂಗಳೂರಿನ ಇಂಚರ ಹೋಟೆಲ್‌ಗೆ ಕೆಲಸಕ್ಕೆ ಹೋಗುತ್ತೇನೆ ಕೋಡಿಯ ರಾಜು ಎಂಬುವವರು ಇವತ್ತು ಹೋಗುವವರಿದ್ದು ನಾನು ಅವರು ಜೊತೆಯಲ್ಲಿ ಹೋಗುತ್ತೇವೆ ಎಂದು ಮನೆಯಲ್ಲಿ ಹೇಳಿ ಸಂಜೆ 07:30 ಗಂಟೆಗೆ ಕೋಡಿಯ ಗಣೇಶ ರವರ ಆಟೋ ರಿಕ್ಷಾದಲ್ಲಿ ಮನೆಯಿಂದ ಹೊರಟು ಹೋಗಿದ್ದು ನಂತರ ರಾತ್ರಿ  ತಂದೆಯ ಬಳಿ ಮೊಬೈಲ್‌ ಪೋನ್‌ ಇಲ್ಲದ ಕಾರಣ ರಾಜು ರವರ ಮೊಬೈಲ್‌ಗೆ ಪೋನ್‌ಮಾಡಿ ಕೇಳಿದಾಗ ಪಿರ್ಯಾದಿದಾರರ ತಂದೆ ಬೆಂಗಳೂರಿಗೆ ಹೋಗಲು ಮುಡ್ಲಕಟ್ಟೆ ರೈಲ್ವೆ ಸ್ಟೇಷನ್‌ಗೆ ಹೋಗುವಾಗ ದಾರಿ ಮದ್ಯೆ ವಿಪರೀತ ಮದ್ಯಪಾನ ಮಾಡಿದ್ದರಿಂದ ರೈಲಿಗೆ ಹತ್ತಲು ಆಗದೇ ಇದ್ದು ನಾನು ಮಾತ್ರ ರೈಲು ಹತ್ತಿ ಬಂದಿರುತ್ತೇನೆ ಎಂಬುದಾಗಿ ರಾಜುರವರು ತಿಳಿಸಿರುತ್ತಾರೆ. ನಂತರ ಪಿರ್ಯಾದಿದಾರರು ಮತ್ತು ಮನೆಯವರು ಅವರ ಸಂಬಂಧಿಕರ ಮನೆಗೆ ಬಂದಿರುವ ಬಗ್ಗೆ ವಿಚಾರಿಸಿದಾಗ ಬಾರದೇ ಇದ್ದು ಕಾಣೆಯಾಗಿರುವುದಾಗಿದೆ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2022
  ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಕಳವು ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ದಿನೇಶ್ ಡಿ ಸಾಲಿಯಾನ್ (38), ತಂದೆ: ದಿ. ದಯಾನಂದ ಸಾಲಿಯಾನ್, ವಾಸ: ಶ್ರೀಲಕ್ಷ್ಮೀ, ಪೂಂದಾಡು, ಎರ್ಮಾಳು ತೆಂಕ ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆ ಇವರು ಬೆಂಗಳೂರಿನ ಎಸ್.ಎಸ್. ಪವರ್ ಕಂಪನಿಯ ಉದ್ಯೋಗಿಯಾಗಿದ್ದು, ಕಂಪನಿಯವರು ವಹಿಸಿಕೊಂಡ ಬಿಎಸ್‌‌ಎನ್‌‌ಎಲ್ ಟವರ್ ಮೆಂಟೆನೆನ್ಸ್ ಮಾಡಿಕೊಂಡಿದ್ದು, ಪಿರ್ಯಾದಿದಾರರು ಹೆಜಮಾಡಿಯಿಂದ ಕಟಪಾಡಿವರೆಗಿನ ಒಟ್ಟು 13 ಸೈಟು‌ಗಳಿಗೆ ಅಳವಡಿಸಿದ ಜನರೇಟರ್‌ಗಳ ನಿರ್ವಹಣೆಯನ್ನು ನೋಡಿಕೊಳ್ಳುತ್ತಿರುವುದಾಗಿದೆ. ಅದರಂತೆ ಪಿರ್ಯಾದಿದಾರರು ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಕಲ್ಯಾಣಿ ಪೆಟ್ರೋಲ್ ಪಂಪ್ ಬಳಿ ಇರುವ ಬಿಎಸ್‌‌ಎನ್ಎಲ್ ಟವರ್ ಜಾಗದಲ್ಲಿ ಅಳವಡಿಸಿದ ಜನರೇಟರ್ ಸುತ್ತಮುತ್ತ ದಿನಾಂಕ 04/10/2022 ರಂದು 15:00 ಗಂಟೆಯ ವೇಳೆಗೆ ಸ್ವಚ್ಛ ಮಾಡಿ ಬಂದಿದ್ದು, ನಂತರ ದಿನಾಂಕ 10/10/2022ರಂದು ಬೆಳಿಗ್ಗೆ 11:00 ಗಂಟೆಯ ವೇಳೆಗೆ ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿ ಜನರೇಟರಿಗೆ ಅಳವಡಿಸಿದ ಆಲ್ಟರ್‌‌ನೇಟರ್‌‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳುವಾದ ಜನರೇಟರ್ ಆಲ್ಟರ್‌‌ನೇಟರ್‌ನ ಮೌಲ್ಯ ರೂಪಾಯಿ 40,000/- ಆಗಿರುವುದಾಗಿದೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಲಕ್ಕಪ್ಪ ಶರಣಪ್ಪ ಕಂಬಳಿ(32), ತಂದೆ; ಶರಣಪ್ಪ ಕಂಬಳಿ, ವಾಸ: ಬೆನಹಾಳ ಗ್ರಾಮ, ರೋಣ ತಾಲೂಕು, ಗದಗ ಜಿಲ್ಲೆ ಇವರು ಮಂಗಳೂರಿನ 3 ನೇ ಘಟಕದ ಕೆ.ಎಸ್.ಆರ್.ಟಿ.ಸಿ. ಬಸ್ಸು ಚಾಲಕನಾಗಿ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/10/2022 ರಂದು KA-19-F-3464 ನೇ ನಂಬ್ರದ ಮಂಗಳೂರು-ಕಬ್ಬರಗಿ ರೂಟಿನ ಬಸ್ಸು ಚಾಲಕನಾಗಿ ಪಿರ್ಯಾದಿದಾರರು ಮತ್ತು ನಿರ್ವಾಹಕರಾಗಿ ಹಾಲಸಿದ್ದಪ್ಪ ಎಂಬುವವರು ಕರ್ತವ್ಯದಲ್ಲಿದ್ದು,  19:15 ಗಂಟೆಗೆ ಮಂಗಳೂರು ಬಸ್ಸು ನಿಲ್ದಾಣದಿಂದ ಕೊಪ್ಪಳ ಜಿಲ್ಲೆಯ ಕಬ್ಬರಗಿಗೆ ಹೊರಟು, ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಾ ಸಮಯ  20:15 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿ ಪೇಟೆಯ ಕಾರ್ಕಳ ಜಂಕ್ಷನ್ ನಲ್ಲಿ ಬಸ್ಸಿನಿಂದ ಇಬ್ಬರು ಪ್ರಯಾಣಿಕರನ್ನು ಇಳಿಸಿ ಹೊರಡುವ ವೇಳೆ KA-20-MD-5675 ನೇ ನಂಬ್ರದ ಬಿಳಿ ಬಣ್ಣದ ಕಾರನ್ನು ಅದರ ಚಾಲಕ ಕಿರಣ್ ಆಳ್ವ ಬಸ್ಸಿನ ಎದುರು ಅಡ್ಡ ನಿಲ್ಲಿಸಿ, ಬಸ್ಸು ಮುಂದೆ ಹೋಗದಂತೆ ತಡೆದು ಕಿರಣ್ ಆಳ್ವ ಹಾಗೂ ಪ್ರವೀಣ್ ಕುಂದರ್  ಕಾರಿನಿಂದ ಇಳಿದು, ಬಸ್ಸಿನ ಹೊರಗೆ ಬಲಬದಿ ಚಾಲಕನ ಸೀಟಿನ ಬಳಿ ಬಂದು ಪಿರ್ಯಾದಿದಾರರಿಗೆ ಬೈದು ಸೀಟಿನಿಂದ ಬಾಗಿಲಿನ ಮುಖಾಂತರ ಹೊರಗೆ ಎಳೆದು ಹಾಕಿ, ಕೈಯಿಂದ ಹೊಡೆದಿದ್ದು, ಆಗ ಬಿಡಿಸಲು ಬಂದ ಬಸ್ಸು ನಿರ್ವಾಹಕ ಹಾಲಸಿದ್ದಪ್ಪ ರವರಿಗೆ ಕೂಡ ಇಬ್ಬರೂ ಆಪಾದಿತರು ಕೈಯಿಂದ ಹೊಡೆದು ಕಾಲಿಂದ ತುಳಿದು ಸಾರ್ವಜನಿಕ ನೌಕರನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ.  ಹಲ್ಲೆಯಿಂದ ಪಿರ್ಯಾದಿದಾರರ ಮುಖಕ್ಕೆ, ಎದೆಗೆ ಗುದ್ದಿದ ನೋವು ಹಾಗೂ ನಿರ್ವಾಹಕ ಹಾಲಸಿದ್ದಪ್ಪ ರವರ ಬಲಕೈಗೆ, ಬಲಕಾಲಿಗೆ ಗುದ್ದಿದ ನೋವು ಮತ್ತು ಬಲಕೈಗೆ ರಕ್ತಗಾಯವಾಗಿರುತ್ತದೆ.  ಘಟನೆಯ ಸಮಯ ನಿರ್ವಾಹಕ ಹಾಲಸಿದ್ದಪ್ಪ ರವರ ಸಮವಸ್ತ್ರದ ಅಂಗಿಯ 3 ಗುಂಡಿಗಳು ಕಿತ್ತು ಹೋಗಿದ್ದು, ಅವರ ಕಿಸೆಯಲ್ಲಿದ್ದ ದಿನದ ಕಲೆಕ್ಷನ್ ಹಣ 6158/- ರೂಪಾಯಿ ಅಲ್ಲಿ ಎಲ್ಲೋ ಬಿದ್ದು ಹೋಗಿರುತ್ತದೆ. ನಂತರ ಬಸ್ಸಿನ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 128/2022 ಕಲಂ: 341, 353,  504, 506, 332 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .  

ಇತ್ತೀಚಿನ ನವೀಕರಣ​ : 14-10-2022 09:28 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080