ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಚಂದ್ರ ಶೇಖರ (40), ತಂದೆ: ಚಂದು, ವಾಸ:ಶ್ರೀ ದೇವಿ ನಿಲಯ ಬಾರಾಳಿ ಬೆಟ್ಟು ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 12/10/2021 ರಂದು ಎಂದಿನಂತೆ ಮಹೇಶ ಎಂಬುವವರ ಜೊತೆಯಲ್ಲಿ  ಅವರ KA-20-EW-9650 ನೇ ನಂಬ್ರದ ಎಕ್ಟೀವಾ ಸ್ಕೂಟಿಯಲ್ಲಿ  ಪಾರಂಪಳ್ಳಿ ಪಡುಕೆರೆ ಎಂಬಲ್ಲಿಗೆ ಕೆಲಸಕ್ಕೆ ಹೋಗಿದ್ದು  ಅಲ್ಲಿ ಕೆಲಸ ಮುಗಿಸಿಕೊಂಡು  ಸಂಜೆ ವೇಳೆಗೆ ಮನೆಯಾದ ತೆಕ್ಕಟ್ಟೆ ಬಾರಾಳಿಗೆ ಹೊರಟು ಪಿರ್ಯಾದಿದಾರರು ಸಹ ಸವಾರನಾಗಿ ಹಿಂದೆ ಕುಳಿತುಕೊಂಡು ಪಾರಂಪಳ್ಳಿ ಕಡೆಯಿಂದ  ಪಡುಕೆರೆ ಕಡೆಯ ರಸ್ತೆಯಲ್ಲಿ ಸಾಗುತ್ತಾ ಸಂಜೆ 6.00 ಗಂಟೆಯ ಸಮಯಕ್ಕೆ ಬಾಬಣ್ಣ ಎಂಬುವವರ ಅಂಗಡಿಯ ಬಳಿಯಲ್ಲಿ ತಲುಪುವಾಗ ಸ್ಕೂಟಿಯನ್ನು ಓಡಿಸುತ್ತಿದ್ದ ಮಹೇಶ ರವರು ತನ್ನ ಸ್ಕೂಟಿಯನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಎದುರಿನಲ್ಲಿದ್ದ ನಾಯಿಯನ್ನು  ನೋಡಿ ಒಮ್ಮೆಲೆ ನಿರ್ಲಕ್ಷವಾಗಿ  ಬ್ರೇಕ್  ಹಾಕಿದ ಪರಿಣಾಮ ಸ್ಕೂಟಿಯು ಎಡಕ್ಕೆ ಚಲಿಸಿ ಸ್ಕೂಟಿಯು ಬಿದ್ದ ಪರಿಣಾಮ  ಪಿರ್ಯಾದಿದಾರರು  ರಸ್ತೆಯ ಎಡ ಬದಿಯಲ್ಲಿದ್ದ  ಸಿಮೆಂಟಿನ  ಚರಂಡಿಗೆ ಬಿದ್ದಿದ್ದು ಹಾಗೂ ಸ್ಕೂಟಿ ಸವಾರ ಮಹೇಶ ಕೂಡ ಬಿದ್ದಿದ್ದು  ಅಲ್ಲದೇ ಸ್ಕೂಟಿಯು ಜಖಂ ಗೊಂಡಿರುತ್ತದೆ. ಪಿರ್ಯಾದಿದಾರರ ಕುತ್ತಿಗೆಗೆ  ,ಬೆನ್ನು ಮೂಳೆಗೆ ಒಳ ನೋವು ಉಂಟಾಗಿದ್ದು ಹಣೆಗೆ ಕೈಗೆ ಕಾಲಿಗೆ  ತರಚಿದ ಗಾಯ  ಮತ್ತು ಮಹೇಶನಿಗೆ ಎಡ ಕಾಲಿನ ಗಂಟಿಗೆ ಮತ್ತು ಗಂಟಿನ ಕೆಳಗೆ ಪಾದಕ್ಕೆ ರಕ್ತ ಗಾಯ ಉಂಟಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 176/2021 ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕುಂದಾಪುರ: ಪಿರ್ಯಾದಿದಾರರಾದ ಗುರುರಾಜ ಆಚಾರ್‌‌(34), ತಂದೆ: ವಾಸುದೇವ ಆಚಾರ್‌‌‌, ವಾಸ: ಹೆಗ್ಡೆಬೈಲು, ನೇರಳಕಟ್ಟೆ, ಕರ್ಕುಂಜೆ ಗ್ರಾಮ, ಕುಂದಾಪುರ ಇವರ ತಾಯಿ ಶ್ರೀಮತಿ ರತ್ನಾವತಿ (54) ಇವರು ದಿನಾಂಕ 13/10/2021 ರಂದು ಸಂಜೆ 03:00 ಗಂಟೆಗೆ ಮೇಯಲು ಬಿಟ್ಟ ದನಗಳನ್ನು ಹೊಡೆದುಕೊಂಡು ಬರಲು ಮನೆಯಿಂದ ಹೋದವರು ವಾಪಾಸು ಬಾರದ ಕಾರಣ ಪಿರ್ಯಾದಿದಾರರ ಚಿಕ್ಕಮ್ಮನ ಮಗ ಜಗದೀಶ ರವರೊಂದಿಗೆ ಹುಡುಕಾಡುತ್ತಿದ್ದ ಸಮಯ ಸಂಜೆ 6:00 ಗಂಟೆಗೆ ರತ್ನಾವತಿ ಯವರ ಮೃತದೇಹವು ಮನೆಯ ಬಳಿಯ ನಾರಾಯಣ ಶೆಟ್ಟಿಯವರಿಗೆ ಸೇರಿದ ಜಾಗದಲ್ಲಿರುವ ಕೆರೆಯಲ್ಲಿ ಕಂಡುಬಂದಿದ್ದು, ರತ್ನಾವತಿ ಇವರು ಈ ಸ್ಥಳದಲ್ಲಿ ಕಾಲುದಾರಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆರೆಯ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 31/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ 02/10/2021 ರಂದು ರಾತ್ರಿ 10:15 ಗಂಟೆಗೆ ಪಿರ್ಯಾದಿದಾರರಾದ ಲಿಖಿತ್ ಪೂಜಾರಿ (20),ತಂದೆ: ವಿಶ್ವನಾಥ ಪೂಜಾರಿ, ವಾಸ: ಎಂ.ಜಿ.ಎಂ ಕಾಂಪ್ಲೆಕ್ಷ್ ಗುರುನಗರ ಮಾರ್ಕೇಟ್, ಶಿರೂರು ಗ್ರಾಮ ಬೈಂದೂರು ತಾಲೂಕು ಇವರ  ತಾಯಿಯ ಹೆಸರಿನಲ್ಲಿರುವ ಭೂಮಿಕ ಲಾಡ್ಜ್ ಗೆ ಎಂ.ಆರ್ ಬಾಬು ಎಂಬುವವರು ರೂಂ ಕೇಳಿಕೊಂಡು ಬಂದಿದ್ದವರಿಗೆ ಬಾಡಿಗೆ ರೂಂ ನೀಡಿ ರಾತ್ರಿ 11:30 ಗಂಟೆಗೆ ಮನೆಗೆ ಹೋಗಿದ್ದು ದಿನಾಂಕ 03/10/2021 ರಂದು ಬೆಳಿಗ್ಗೆ 8:30 ಗಂಟೆಗೆ ಪಿರ್ಯಾದಿದಾರರು ಲಾಡ್ಜ್ ಗೆ ಬಂದಾಗ ಲಾಡ್ಜ್ ರೂಮ್ ಗೆ ಹೋಗುವ ಮೆಟ್ಟಿಲಿನಲ್ಲಿ ರಾತ್ರಿ ಬಾಡಿಗೆಗೆ ರೂಂ ಪಡೆದ ಎಂ.ಆರ್ ಬಾಬು ರವರು ಬಿದ್ದುಕೊಂಡಿದ್ದು ಅವರ ತಲೆಗೆ ರಕ್ತಗಾಯವಾಗಿರುವುದು ಕಂಡು ಸ್ಥಳಿಯರ ಸಹಾಯದಿಂದ ಅಂಬುಲೆನ್ಸ್ ನಲ್ಲಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕಳುಹಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ  ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ನಂತರ ದಿನಾಂಕ 04/10/2021 ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದು ದಿನಾಂಕ 13/10/2021 ರಂದು ಬಂದ ವೆನ್ಲಾಕ್ ಆಸ್ಪತ್ರೆಯ ಡೆತ್ ಇಂಟಿಮೆಶನ್ ನಲ್ಲಿ  ಎಂ.ಆರ್ ಬಾಬು ರವರು ದಿನಾಂಕ 12/10/2021 ರಂದು ಸಂಜೆ 4:31 ಗಂಟೆಯ ಸುಮಾರಿಗೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟ ಬಗ್ಗೆ ಮಾಹಿತಿ ತಿಳಿದು ಬಂದಿದ್ದು ಮೃತ ಎಂ ಆರ್ ಬಾಬು ರವರು ಪಿರ್ಯಾದಿದಾರರ ಲಾಡ್ಜ್ ನಲ್ಲಿ ದಿನಾಂಕ 02/10/2021 ರಂದು ರಾತ್ರಿ 10:15 ಗಂಟೆಗೆ ಲಾಡ್ಜ್ ರೂಮ್ ಬಾಡಿಗೆ ಪಡೆದವರು ದಿನಾಂಕ 03/10/2021 ರಂದು ಬೆಳಿಗ್ಗೆ 8:30 ಗಂಟೆಯ ಮಧ್ಯಾವಧಿಯಲ್ಲಿ ಲಾಡ್ಜ್ ಗೆ ಹೋಗುವ ಮೆಟ್ಟಿಲನ್ನು  ಇಳಿಯುವಾಗ ಅಥವಾ ಹತ್ತುವಾಗ ಆಕಸ್ಮಿಕವಾಗಿ ಬಿದ್ದು ತಲೆಗೆ ರಕ್ತಗಾಯವಾಗಿದ್ದವರನ್ನು ಚಿಕಿತ್ಸೆಯ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದವರು ದಿನಾಂಕ 12/10/2021 ರಂದು ಸಂಜೆ 4:31 ಗಂಟೆಗೆ ಚಿಕಿತ್ಸೆ ಸ್ಪಂದಿಸದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
     

ಇತ್ತೀಚಿನ ನವೀಕರಣ​ : 14-10-2021 08:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080