ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾರ್ಕಳ : ದಿನಾಂಕ 13/10/2021 ರಂದು ಪಿರ್ಯಾದಿದಾರರಾದ ಸಯ್ಯದ್ ಹುಸೇನ್ ,ತಂದೆ: ಸಯ್ಯದ್ ಅಕ್ಬರ್ ಸಾಹೇಬ್,ವಾಸ: ಪ್ರವೀಣ್ ರೈಸ್ ಮಿಲ್ ಬಳಿ, ತೆಳ್ಳಾರ್ ಅಂಚೆ , ದುರ್ಗಾ ಗ್ರಾಮ, ಕಾರ್ಕಳ ಇವರು ತನ್ನ KA-19-ME-1398 ನೇ ಕಾರಿನಲ್ಲಿ ಕಾರ್ಕಳ ಪೇಟೆಗೆ ಬಂದಿದ್ದು ಕಾರನ್ನು ಮಗ ಅಶಿಕ್ ಚಲಾಯಿಸುತ್ತಿದ್ದು, ಬಟ್ಟೆ ಖರೀದಿಸಿ ವಾಪಾಸ್ಸು ಹೋಗುವಾಗ 18:30 ಗಂಟೆಗೆ ತೆಳ್ಳಾರಿನ ಪಲಾಯಿ ಬಾಕ್ಯಾರು ಎಂಬಲ್ಲಿ ತಲುಪುತಿದ್ದಂತೆ ತೆಳ್ಳಾರ್ ಕಡೆಯಿಂದ ಕಾರ್ಕಳ ಕಡೆಗೆ ಒರ್ವ ರಿಕ್ಷಾ ಚಾಲಕನು ಆತನ KA-20-AA-9023 ನೇ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ತೆಳ್ಳಾರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮೋಟಾರ್ ಸೈಕಲ್ ನಂಬ್ರ KA-20-EF-5626 ಕ್ಕೆ ಡಿಕ್ಕಿ ಹೊಡೆದು ಬಳಿಕ ರಿಕ್ಷಾವನ್ನು ತೀರಾ ಬಲ ಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರು ಸಂಚರಿಸುತ್ತಿದ್ದ ಕಾರಿನ ಮಧ್ಯ ಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರ್ ಸೈಕಲ್ ನಲ್ಲಿದ್ದ ಸವಾರ ಮತ್ತು ಸಹ ಸವಾರೆ ರಸ್ತೆಗೆ ಬಿದ್ದಿದ್ದು , ಮೋಟಾರ್ ಸೈಕಲ್ ಸವಾರ ಆದರ್ಶ್ ಹೆಗ್ಡೆಯವರಿಗೆ ರಕ್ತ ಗಾಯವಾಗಿದ್ದಲ್ಲದೇ ರಿಕ್ಷಾ ಚಾಲಕನ ತಲೆಗೆ ಕೂಡಾ ಗಾಯವಾಗಿರುತ್ತದೆ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಗಾಜ್ರಿಯಾ ಆಸ್ಪತ್ರೆಗೆ ಒಂದು ಕಾರಿನಲ್ಲಿ ಕಳುಹಿಸಿಕೊಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2021ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಬೈಂದೂರು : ಪಿರ್ಯಾದಿದಾರರಾದ ರಂಜಿತ, ರಾಮಕೃಷ್ಣ ಸಾಲಿಯಾನ್ (43),ತಂದೆ:ದಿ.ರಾಮಕೃಷ್ಣ ಸಾಲಿಯಾನ್ ವಾಸ: 2-14-1204/1 ಸೂರ್ಯ ವಂಶ,ಬಿಜೈ,ನ್ಯೂ ರೋಡ್ ,ಕದ್ರಿ ಗ್ರಾಮ,ಮಂಗಳೂರು ಇವರ ಅಣ್ಣ ಮನೋಜ್ ಆರ್ ಸಾಲಿಯಾನ್ ಪ್ರಾಯ:45 ವರ್ಷರವರು ಸುಮಾರು 4 ವರ್ಷಗಳ ಹಿಂದೆ ಮಂಗಳೂರಿನಿಂದ ಭಟ್ಕಳದ ಶಿರಾಲಿ ಎಂಬಲ್ಲಿ ಇರುವ “ ನೆಟ್ ಕಾನ್” ಕಂಪೆನಿಯಲ್ಲಿ ಕೆಲಸ ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದು ವಾರಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದು ಆ ಸಮಯ ಮನೋಜ್ ನು ಪತ್ನಿ ಸೌಮ್ಯಳ ಬಳಿ ತನಗೆ ಕಂಪೆನಿಯಲ್ಲಿ ಕೆಲಸ ಮಾಡಿದ ಬಗ್ಗೆ ಅದರ ಮಾಲಕರಾದ ಪ್ರಸನ್ನ ಡಿ ಕೋಸ್ತ್ ರವರು ಸರಿಯಾಗಿ ವೇತನ ಹಾಗೂ ವ್ಯವಹಾರದ ಬಾಬ್ತು ಪಾವತಿಸದ ಬಗ್ಗೆ ಎರಡೂ-ಮೂರು ಬಾರಿ ಹೇಳಿದ್ದು ದಿನಾಂಕ 13/10/2021 ರಂದು ಮನೋಜ್ ಆರ್ ಸಾಲ್ಯಾನ್ ಬೈಂದೂರು ತಾಲೂಕು ಯಡ್ತರೆ ಗ್ರಾಮದ ಶಿವ ದರ್ಶನ್ ಲಾಡ್ಜ್ ರೂಮ್ ನಂಬ್ರ 101 ರಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ ಎಂಬ ಮಾಹಿತಿ ದೊರೆತ ಕೂಡಲೇ ಪಿರ್ಯಾದಿದಾರರು ಸಂಬಂಧಿಕರೊಂದಿಗೆ ಅಲ್ಲಿಗೆ ಬಂದು ನೋಡಲಾಗಿ ಪಿರ್ಯಾದಿದಾರರ ಅಣ್ಣ ಮನೋಜ್ ಆರ್ ಸಾಲ್ಯಾನ್ ಶಿವ ದರ್ಶನ್ ಲಾಡ್ಜ್ ರೂಮಿನ ಫ್ಯಾನಿಗೆ ಟಿವಿ ಕೇಬಲ್ ವಯರ್ ನಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದು ಶವವನ್ನು ಕೆಳಗೆ ಇಳಿಸಿ ಬೈಂದೂರು ಸರಕಾರಿ ಆಸ್ಪತ್ರೆ ಶವಾಗಾರದಲ್ಲಿ ಇರಿಸಿದ್ದು ಮೃತ ಮನೋಜ್ ಆರ್ ಸಾಲ್ಯಾನ್ ನ ಮೊಬೈಲ್ ನಲ್ಲಿ ಸ್ವಲ್ಪ ವಿಡಿಯೋ ತುಣುಕುಗಳು ಲಭ್ಯವಾಗಿದ್ದು ಅದರಲ್ಲಿ ಪ್ರಸನ್ನ ಡಿ ಕೋಸ್ತರವರು ಮೋಸ ಮಾಡಿದ್ದು ಅದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂಬುವುದಾಗಿ ಇದ್ದು ಪಿರ್ಯಾದಿದಾರರ ಅಣ್ಣ ಮೃತ ಮನೋಜ್ ಆರ್ ಸಾಲ್ಯಾನ್ ನ ಸಾವಿನ ಬಗ್ಗೆ ಅನುಮಾನವಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ :174 (ಸಿ) ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಪಿರ್ಯಾದಿದಾರರಾದ ಶಾಂತಿ ಭಾಯಿ(40), ಗಂಡ:ಸುಂದರ ನಾಯ್ಕ್‌‌,ವಾಸ: ಬೀರ್ಲಬೆಟ್ಟು ಕೆಂಜೂರು ಗ್ರಾಮ,ಬ್ರಹ್ಮಾವರ ತಾಲೂಕು ಇವರೊಂದಿಗೆ ವಾಸವಾಗಿರುವ ಅವರ ಗಂಡ ಸುಂದರ ನಾಯ್ಕ್‌‌‌‌ 49 ವರ್ಷ ಎಂಬುವವರು ಕೃಷಿ ಕೆಲಸ ಮಾಡಿಕೊಂಡಿದ್ದು, ಸುಮಾರು 5 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ದೊಡ್ಡಣಗುಡ್ಡೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಂದರ ನಾಯ್ಕ್‌‌‌‌‌ರವರು ಅವರಿಗಿದ್ದ ಮಾನಸಿಕ ಕಾಯಿಲೆಯಿಂದ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 13/10/2021 ರಂದು ರಾತ್ರಿ 10:45 ಗಂಟೆಯಿಂದ ದಿನಾಂಕ 14/10/2021 ರಬೆಳಿಗ್ಗೆ 7:15 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಪಶ್ಚಿಮ ಬದಿಗೆ ಇರುವ ಬೇವಿನ ಮರಕ್ಕೆ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 61/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-10-2021 06:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080