ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:     

 • ಪಡುಬಿದ್ರಿ:  ಪಿರ್ಯಾದಿ ಮಹಮ್ಮದ್ ರಫೀಕ್, ಪ್ರಾಯ: 49 ವರ್ಷ, ತಂದೆ: ದಿ. ಸುಲೈಮಾನ್. ವಾಸ: ಭಾಸ್ಕರನಗರ, ಉಚ್ಚಿಲ ಇವರು ಉಚ್ಚಿಲದಲ್ಲಿ ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ: 14.09.2022 ರಂದು ಬೆಳಿಗ್ಗೆ ಬಾಡಿಗೆಗೆಂದು ಉಚ್ಚಿಲದಿಂದ ಎರ್ಮಾಳು ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ ಉಚ್ಚಿಲ ಕಡೆಯಿಂದ ಪಡುಬಿದ್ರಿ ಕಡೆಗೆ ಹೋಗುತ್ತಾ 06:00 ಗಂಟೆಯ ವೇಳೆಗೆ ಕಾಪು ತಾಲೂಕು ಬಡಾ ಗ್ರಾಮದ ಉಚ್ಚಿಲದ ಮಹಾಲಕ್ಷ್ಮೀ ಇಂಗ್ಲೀಷ್ ಮೀಡಿಯಂ ಶಾಲೆಯ ಎದುರು ತಲುಪುತ್ತಿದ್ದಂತೆ, ಪಿರ್ಯಾದಿದಾರರ ರಿಕ್ಷಾದ ಹಿಂದಿನಿಂದ ಗೂಡ್ಸ್ ಲಾರಿಯ ಚಾಲಕನೊಬ್ಬ ಒಂದು ದೊಡ್ಡ ಗೂಡ್ಸ್  ಲಾರಿಯನ್ನು ಉಡುಪಿ ಕಡೆಯಿಂದ ಪಡುಬಿದ್ರಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷತನದಿಂದ ತನ್ನ ಲಾರಿಯನ್ನು ರಸ್ತೆಯ ತೀರಾ ಎಡಕ್ಕೆ ಚಲಾಯಿಸಿದ ಪರಿಣಾಮ ಲಾರಿಯು ಮಣ್ಣು ರಸ್ತೆಗೆ ಇಳಿದು ಮುಂದಕ್ಕೆ ಚಲಿಸುತ್ತಾ ಬೆಳಗಾವಿ ಹುಕ್ಕೇರಿ ಮೂಲದ ಪ್ರಭಾಕರ ಪೋದ್ದಾರ್ ಎಂಬುವರು ಅವರ ಮಗನನ್ನು ಕುತ್ಯಾರು ಆನೆಗೊಂದಿ ಮಠದ ಶಾಲೆಗೆ ಬಿಡಲು ಅವರ ಊರಿನಿಂದ ಬಸ್ಸಿನಲ್ಲಿ ಬಂದು ಉಚ್ಚಿಲದಲ್ಲಿ ಇಳಿದು ರಸ್ತೆಯ ಬದಿಯ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ  ಪ್ರಭಾಕರ ಪೋದ್ದಾರ್(56) ಹಾಗೂ ಅವರ ಮಗ ಸಮರ್ಥ ಪೋದ್ದಾರ್ (13) ಎಂಬುವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಪ್ರಭಾಕರ ಪೋದ್ದಾರ್ ರವರ ಮೈಮೇಲೆ ಲಾರಿ ಹರಿದು ಹೋಗಿದ್ದು, ಅವರ ಮಗ ಡಿಕ್ಕಿಯ ರಭಸಕ್ಕೆ ಡಾಮಾರು ರಸ್ತೆಯ ಮೇಲೆ ಬಿದ್ದಿರುತ್ತಾರೆ. ನಂತರ ಲಾರಿಯ ಚಾಲಕನು ಲಾರಿಯನ್ನು ಮಹಾಲಕ್ಷ್ಮೀ ದೇವಸ್ಥಾನದ ಎದುರು ಇರುವ ಡಿವೈಡರ್ ಮೇಲೆ ಹತ್ತಿಸಿಕೊಂಡು ನಿಲ್ಲಿಸದೇ ಅಲ್ಲಿಂದ ಹೋಗಿರುತ್ತಾನೆ. ಸದ್ರಿ ಅಪಘಾತದಲ್ಲಿ ಲಾರಿಯು ಪ್ರಭಾಕರ ಪೋದ್ದಾರ್ ರವರ ಮೈಮೇಲೆ ಹಾದು ಹೋಗಿದ್ದರಿಂದ ಅವರ ಸೊಂಟ ಹಾಗೂ ತಲೆಯ ಭಾಗ ಸಂಪೂರ್ಣ ಜಖಂಗೊಂಡು ಛಿದ್ರಗೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾರೆ. ಸದ್ರಿ ಅಪಘಾತಕ್ಕೆ ದೊಡ್ಡ ಗೂಡ್ಸ್ ಲಾರಿ ಚಾಲಕನ ಅತೀವೇಗ ಹಾಗೂ ನಿರ್ಲಕ್ಷತನದ ಚಾಲನೆಯೇ ಕಾರಣವಾಗಿದ್ದು, ಸದ್ರಿ ಲಾರಿಯ ಹಿಂಬದಿ SPT ಎಂದು ಬರೆದಿದ್ದು, ಲಾರಿಯ ಹಿಂಬದಿ ಗಾರ್ಡ್‌ನಲ್ಲಿ 2 ಟೈರ್‌‌ಗಳನ್ನು ಸಿಕ್ಕಿಸಿರುತ್ತದೆ . ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ. ಅಪರಾಧ ಕ್ರಮಾಂಕ. 117/2022 ಕಲಂ: 279, 338, 304(A) ಐಪಿಸಿ. ಮತ್ತು ಕಲಂ: 134(ಎ)(ಬಿ) ಜೊತೆಗೆ 187 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿ ಶ್ರೀ ಸೌಮ್ಯ ಹೆಗ್ಡೆ ಪ್ರಾಯ 26  ವರ್ಷ ತಂದೆ: ಭಾಸ್ಕರ ಹೆಗ್ಡೆ ವಾಸ: ನೆಲೆಬೆಟ್ಟು ಮನೆ ದುರ್ಗಾ ಗ್ರಾಮ ಇವರ ತಂದೆ ಭಾಸ್ಕರ ಹೆಗ್ಡೆರವರು ಸಾಲ ಮಾಡಿಕೊಂಡಿದ್ದು, ಇದೇ ಚಿಂತೆಯಿಂದ ಮಾನಸಿಕವಾಗಿ ನೊಂದು  ದಿನಾಂಕ 14/09/2022 ರಂದು ಬೆಳಿಗ್ಗೆ 6:55  ಗಂಟೆಗೆ  ಕಾರ್ಕಳ ತಾಲೂಕು ದುರ್ಗಾ ಗ್ರಾಮದ  ಅವರ ಮನೆಯ ಜಗುಲಿ ಮೇಲಿನ ಮಂಚದ ಮೇಲೆ ಕುಳಿತುಕೊಂಡು ಮೃತರು ಬೆಳೆ ರಕ್ಷಣೆಗಾಗಿ ಹೊಂದಿದ್ದ ಕೋವಿಯಿಂದ ಎದೆಗೆ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು.ಡಿ.ಆರ್ ನಂಬ್ರ: 30/2022 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹಿರಿಯಡ್ಕ: ಪಿರ್ಯಾದಿ ಶೈಲಜಾ ಕರ್ಕೇರಾ (42) ಗಂಡ: ರವೀಂದ್ರ ಕರ್ಕೇರಾ ವಾಸ: ಪಂಡುಕಟ್ಟೆ ಇವರ ಅಣ್ಣನ ಮಗನಾದ ಕೃತಿಕ್ (22) ನು ಒಂದು ವರ್ಷದ ಹಿಂದೆ ಪದವಿ ವಿದ್ಯಾಬ್ಯಾಸ ಮುಗಿಸಿ ಮನೆಯಲ್ಲಿಯೇ ಇರುವುದಾಗಿದೆ. ಆತನ ತಂದೆ ಐದು ತಿಂಗಳ ಹಿಂದೆ ಮರದಿಂದ ಬಿದ್ದು ಮೃತಪಟ್ಟಿರುವುದಾಗಿದೆ. ಅಲ್ಲದೆ ಆತನ ತಾಯಿ ಕೂಡ ಸುಮಾರು ವರ್ಷಗಳ ಹಿಂದೆ ಮೃತಪಟ್ಟಿದ್ದು ತನ್ನ ತಂದೆ ತಾಯಿ  ತೀರಿದ ಬಳಿಕ ಅದೇ ವಿಚಾರದಲ್ಲಿ ಅಥಾವ ಇನ್ನಾವುದೋ ವೈಯಕ್ತಿಕ ಕಾರಣದಿಂದ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ:  14/09/2022 ರಂದು ಬೆಳಗಿನ ಜಾವ 4:45 ಗಂಟೆಯಿಂದ 7:30 ಗಂಟೆಯ ಮಧ್ಯಾವಧಿಯಲ್ಲಿ  ಮನೆಯ ಹತ್ತಿರ ಲಕ್ಷ್ಮಿಯವರ ಹಾಡಿಯಲ್ಲಿರುವ ಧೂಪದ ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು  ಆತ್ಮಹತ್ಯೆ ಮಾಡಿಕೊಂಡು  ಮೃತಪಟ್ಟಿರುವುದಾಗಿದೆ .ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ. ಯುಡಿಆರ್ ನಂಬ್ರ: 36/2022 ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 • ಬೈಂದೂರು: ಫಿರ್ಯಾದಿ ವೆಂಕಟೇಶ್ ದೇವಾಡಿಗ ಪ್ರಾಯ: 49 ವರ್ಷ ತಂದೆ: ಗೋವಿಂದ ದೇವಾಡಿಗ  ವಾಸ: ಚರುಮಕ್ಕಿ, ಕಾವೇರಿ ಮನೆ, ನಾಗೂರು ಇವರ ಅಕ್ಕನ ಮಗ ಪ್ರಮೋದ್ ಎಂಬವನು ಬೆಂಗಳೂರಿನಲ್ಲಿದ್ದು ಫಿರ್ಯಾದಿದಾರರ ಮೊಬೈಲ್ ಗೆ ಕರೆ ಮಾಡಿ ನೀನು ನಿನ್ನ ಹೆಂಡತಿಯನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ  ಎಂದು ಬೈದು ಬೆದರಿಕೆ ಹಾಕುತ್ತಿದ್ದನು. ಹಾಗೆಯೇ ದಿನಾಂಕ 06-09-2022 ರಂದು ಮಧ್ಯಾಹ್ನ 2;00 ಗಂಟೆಗೆ ಫಿರ್ಯಾದುದಾರರು ಮೋಟಾರು ಸೈಕಲ್ ನಲ್ಲಿ ಕಿರಿಮಂಜೇಶ್ವರಕ್ಕೆ ಹೋಗಿ ವಾಪಾಸ್ಸು  ಮನೆಗೆ  ಬರುತ್ತಿರುವಾಗ ಕಿರಿಮಂಜೇಶ್ವರ ಮೂಕಾಂಬಿಕಾ ಟಿಂಬರ್ಸ ಎದುರು ಆಪಾದಿತರಾದ ಶಿವರಾಜ ಮತ್ತು ಸಂಜೀವ ಎಂಬವರು ಫಿರ್ಯಾದುದಾರರ ಮೋಟಾರು ಸೈಕಲ್ ನ್ನು ಅಡ್ಡಗಟ್ಟಿ ನಿಲ್ಲಿಸಿ  ಪ್ರಮೋದನ ಮೇಲೆ ಯಾಕೆ ಠಾಣೆಯಲ್ಲಿ ದೂರು ನೀಡಿದ್ದಿಯಾ ಎಂದು ಹೇಳಿ ಕೈಯಿಂದ ಹೊಡೆದು , ಮೊಟಾರು ಸೈಕಲ್ ನ್ನು ಚರಂಡಿಗೆ ದೂಡಿ ಜಖಂಗೊಳಿಸಿ ,ಜೀವ ಬೆದರಿಕೆ ಹಾಕಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 185/2022 ಕಲಂ.341, 504, 506, 427 ಜೊತೆಗೆ 34  ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

 • ಹೆಬ್ರಿ:  ಪಿರ್ಯಾದಿ ಹರೀಶ ಹೆಗ್ಡೆ ಪ್ರಾಯ 41 ವರ್ಷ ತಂದೆ: ಮಹಾಬಲ ಹೆಗ್ಡೆ ವಾಸ: ಹುತ್ತುರ್ಕೆ ನೆಹರೂ ನಗರ ಹೆಬ್ರಿ, ರವರು ಆಗುಂಬೆ ಹೆಬ್ರಿ ರಸ್ತೆಯ ಬಳಿಯಿರುವ ಕೆನರಾ ಬ್ಯಾಂಕಿನ ಕೆಳಗಡೆ ಶ್ರೀ ಗಣೇಶ ಎಂಬ ಜ್ಯುವೆಲ್ಲರ್ ಅಂಗಡಿ ಇಟ್ಟುಕೊಂಡು ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 13/09/2022 ರಂದು ಸಂಜೆ 07:30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು , ದಿನಾಂಕ:14/09/2022 ರಂದು ಬೆಳಿಗ್ಗೆ 09:00 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಯಾರೋಕಳ್ಳರು ಅಂಗಡಿಯ  ಮುಂದಿನ ರೋಲಿಂಗ್ ಶೆಟರ್ ನ ಎರಡು ಬೀಗ ಹಾಗೂ ಗ್ರಿಲ್ ನ ಎರಡು ಬೀಗ ಹಾಗೂ ಅದರ ಒಳಬದಿಯಲ್ಲಿರುವ ಗ್ಲಾಸ್ ಡೋರಿನ ಬೀಗವನ್ನು ಯಾವುದೋ ಆಯುಧವನ್ನು ಬಳಸಿ ಮುರಿದು ಒಳಗಡೆ ಹೋಗಿ ಅಂಗಡಿಯ ಶೋಕೇಸ್ ನಲ್ಲಿರುವ ಹಾಗೂ ಸೇಲ್ ಕೌಂಟರ್ ನಲ್ಲಿ ಇರಿಸಿದ 5 ಕೆ.ಜಿ ಹೊಸ ಬೆಳ್ಳಿ ಹಾಗೂ 1 ಕೆ.ಜಿ ಹಳೆ ಬೆಳ್ಳಿ ಆಭರಣಗಳು ಅಲ್ಲದೇ 1 ಪವನ್ ತೂಕದ 2 ಚಿನ್ನದ ಉಂಗುರಗಳು ಇವುಗಳ ಒಟ್ಟು ಅಂದಾಜು ಮೌಲ್ಯ ರೂ 3,50,000/- ಆಗಿದ್ದು ಯಾರೋ ಕಳ್ಳರು ಬಂಗಾರದ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2022,  457,380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
 • ಹೆಬ್ರಿ :ಪಿರ್ಯಾದಿ: ರುದ್ರಯ್ಯಆಚಾರ್ಯ ಪ್ರಾಯ63 ವರ್ಷ ತಂದೆ: ಅನಂತಯ್ಯ ಆಚಾರ್ಯ ವಾಸ: ಕುಚ್ಚೂರು ಕಾನ್ ಬೆಟ್ಟು ಕುಚ್ಚೂರು ಇವರಿಗೆ ಹೆಬ್ರಿಯ ಕುಚ್ಚೂರು ರಸ್ತೆಯಲ್ಲಿ ಶ್ರೀ ರಾಜರಾಜೇಶ್ವರಿ ಜುವೆಲ್ಲರ್ ಅಂಗಡಿ ಇದ್ದು.  ಅವರು ಎಂದಿನಂತೆ ದಿನಾಂಕ; 13/09/2022 ರಂದು ಸಂಜೆ 7-30 ಗಂಟೆಗೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿದ್ದು ಈ ದಿನ ದಿನಾಂಕ:14/09/2022 ರಂದು ಬೆಳಿಗ್ಗೆ 09:30 ಗಂಟೆಗೆ ಅಂಗಡಿಗೆ ಬಂದು ನೋಡಿದಾಗ ಯಾರೋ ಕಳ್ಳರು ಯಾವುದೇ ಅಯುಧವನ್ನು ಬಳಸಿ ಅಂಗಡಿಯ ಮುಂದಿನ ಷಟರ್ ನ ಬೀಗವನ್ನು ಮುರಿದು ಒಳಗೆ ಪ್ರವೇಶಿಸಿ ಅಂಗಡಿಯ ಶೋಕೇಸಿನಲ್ಲಿ ಇರಿಸಿದ ಸುಮಾರು 3,750/- ರೂ ಮೌಲ್ಯದ ಸುಮಾರು ಒಟ್ಟು 50 ಗ್ರಾಂ ಇರುವ 1) ಬೆಳ್ಳಿಯ ಹವಳ ಇರುವ ಕನಕ ಮಾಲೆ, 2) ಬೆಳ್ಳಿಯ ಗುಂಡು ಇರುವ ಕರಿಮಣಿ ಸರ   3) ಬೆಳ್ಳಿಯ ಹಳೆಯ ಕರಿಮಣಿ ಸರ  ಇವುಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2022, 457,380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-09-2022 06:45 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080