ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ದಿನಾಂಕ 12/09/2022 ರಂದು ಫಿರ್ಯಾದಿದಾರರಾದ ರೋಹಿತ್ ದಾಸ್ ಹರಿಕಾಂತ (:23) ತಂದೆ: ಗೋವಿಂದ ಹರಿಕಾಂತ ವಾಸ: ಹರಿಕಾಂತ್ರಕೇರಿ, ಬೈಲೂರು, ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆ ಇವರ ಸ್ನೇಹಿತನಾದ  ನಾಗೇಂದ್ರ ಹರಿಕಾಂತ ರವರೊಂದಿಗೆ KA-47 W-7062  ನೇ ಮೋಟಾರು ಸೈಕಲ್ ನಲ್ಲಿ ಸಹ ಸವಾರನಾಗಿ ಮುರ್ಡೆಶ್ವರದಿಂದ ಉಪ್ಪುಂದಕ್ಕೆ  ಸಂಬಂಧಿಕರ ಮನೆಗೆ ಬಂದು ಊಟ ಮುಗಿಸಿ ವಾಪಾಸು ಉಪ್ಪುಂದದಿಂದ ಮುರ್ಡೆಶ್ವರಕ್ಕೆ  ಹೊರಟು  ನಾಗೇಂದ್ರ ಹರಿಕಾಂತನು ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿರುವಾಗ ಸಂಜೆ 5:30 ಗಂಟೆಗೆ ಶಿರೂರು ಗ್ರಾಮದ ಗ್ರೀನ್ ವ್ಯಾಲಿ ಶಾಲೆಯ ಬಳಿ ರಾ ಹೆ 66 ರಲ್ಲಿ ರಸ್ತೆಯ ಇಳಿಜಾರಿನಲ್ಲಿ ನಾಗೇಂದ್ರ ಹರಿಕಾಂತನಿಗೆ ಮೋಟಾರು ಸೈಕಲ್ ನ  ನಿಯಂತ್ರಣ ತಪ್ಪಿ  ರಸ್ತೆಯ ಡಿವೈಡರ್  ಗೆ ಡಿಕ್ಕಿ ಹೊಡೆದ ಅಪಘಾತದ ಪರಿಣಾಮ ಸಹ ಸವಾರ ಫಿರ್ಯಾದುದಾರರು ಮತ್ತು ಮೋಟಾರು ಸೈಕಲ್ ಸವಾರ  ಮೋಟಾರು ಸೈಕಲ್ ನೊಂದಿಗೆ ರಸ್ತೆಗೆ ಬಿದ್ದು ಫಿರ್ಯಾದುದಾರರ ಎಡಕಾಲು ಮತ್ತು ಎಡ ಕೈಗೆ ಒಳ ಜಖಂ ಮತ್ತು ತಲೆಗೆ ರಕ್ತಗಾಯ ಹಾಗೂ  ಸವಾರ ನಾಗೇಂದ್ರ ಹರಿಕಾಂತನಿಗೆ  ತಲೆ, ಮುಖ ಮತ್ತು ಹೊಟ್ಟೆ ಭಾಗಕ್ಕೆ ಒಳ ಜಖಂ ಆಗಿ , ಕಿವಿ, ಕೈ ಕಾಲುಗಳಿಗೆ ರಕ್ತಗಾಯ ಉಂಟಾಗಿದ್ದು ಇವರನ್ನು ಚಿಕಿತ್ಸೆ ಬಗ್ಗೆ  ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 184/2022 ಕಲಂ.: 279 , 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಶಿರ್ವಾ: ಪಿರ್ಯಾದಿದಾರರಾದ ಆದರ್ಶ ಜಿ (37) ತಂದೆ: ಗುರುರಾಜ ಸೇರಿಗಾರ ವಾಸ: ಮನೆ  ನಂ. 3-12-ಬಿ-6, ದೇವಕಿ ನಿಲಯ,76 ಬಡಗಬೆಟ್ಟು, ಬೈಲೂರು ಚಿಟ್ಪಾಡಿ, ಉಡುಪಿ ಇವರು ಉಡುಪಿ ಕುಕ್ಕಿಕಟ್ಟೆಯಲ್ಲಿ ತ್ರಿವೇಣಿ ಎಲೆಕ್ಟ್ರಿಕಲ್ಸ್‌ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು  ಉಡುಪಿ ವಿಭಾಗ  ಮೆಸ್ಕಾಂ ಉಪ ವಿಭಾಗ  ಕಾಪು  ಶಾಖೆ ಶಿರ್ವ  ಇಲಾಖೆಯಿಂದ  ಶಿರ್ವ ಗ್ರಾಮದ  ನ್ಯಾರ್ಮ  ಬಳಿ  ಹೊಸ  ವಿದ್ಯುತ್‌ಕಂಬಗಳನ್ನು ಅಳವಡಿಸಲು ಗುತ್ತಿಗೆ  ಪಡೆದುಕೊಂಡಿದ್ದು,  ಅದರಂತೆ ದಿನಾಂಕ 13/09/2022 ರಂದು ಬೆಳಿಗ್ಗೆ 08:45 ಗಂಟೆಗೆ ಶಿರ್ವ  ಗ್ರಾಮದ  ನ್ಯಾರ್ಮ  ಸೇತುವೆ ಬಳಿ ಕೆಲಸಗಾರರಾದ  1) ಭರತ್‌ಲಾಲ್‌ ಮಾಂಡವಿ  2) ಸೋನಾ ರಾಮ್‌ನೇತಾಮ್‌ 3) ಪ್ರಮೋದ್‌ಸಲಾಮ್‌, 4) ಜಗಧೀಶ್‌ ಕುಮಾರ್‌ಕುಮೇತಿ  5) ಸುಧೀರ್‌ ಕುಮಾರ್‌ 6) ಸೋಮ ರಾಮ್‌ಸಲಾಮ್‌ 7) ಪುನುರಾಮ್‌ಕೊರಮ್‌ 8) ವಿಜಯ, 9) ಮಿಲಪ್‌ ಸಿಂಗ್‌ಸಲಾಮ್‌ 10) ಕಲಿರಾಮ್‌ಮಾಂಡವಿ 11) ಚಂದ್ರ ಕುಮಾರ್‌ಮಾಂಡವಿ, 12) ಸುರೇಂದ್ರ ಕುಮಾರ್‌ಸಲಾಮ್‌ ರವರೊಂದಿಗೆ  ಶಿರ್ವ  ಗ್ರಾಮದ ಸೇತುವೆಯ  ಎರಡೂ ಬದಿ  ಸಾರ್ವಜನಿಕ  ರಸ್ತೆಯಲ್ಲಿ ಹಾದುಹೋಗುವ ವಾಹನಗಳಿಗೆ  ಸೂಚನೆಯನ್ನು  ನೀಡುವರೇ  ಕೆಲಸದವರನ್ನು ನೇಮಿಸಿದ್ದು, ನಂತರ  ನಮ್ಮ  ಸಿಬ್ಬಂದಿಯವರ  ಸಹಾಯದಿಂದ   ಬ್ರಿಡ್ಜ್‌ ಬಳಿ  ಇದ್ದ  ಹೊಸ  ವಿದ್ಯುತ್‌ ಕಂಬವನ್ನು ಎತ್ತಿಕೊಂಡು  ರಸ್ತೆ ದಾಟುವಾಗ ಬಂಟಕಲ್‌ಕಡೆಯಿಂದ ಓರ್ವ ಕಾರು ಚಾಲಕನು  ಶಿರ್ವ ಕಡೆಗೆ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿದ್ಯುತ್‌ಕಂಬವನ್ನು ಎತ್ತಿಕೊಂಡು  ಹೋಗುತ್ತಿದ್ದ ಕೆಲಸದವರಿಗೆ  ಮತ್ತು  ವಿದ್ಯುತ್‌ಕಂಬಕ್ಕೆ  ಡಿಕ್ಕಿ  ಹೊಡೆದ.  ಪರಿಣಾಮ  ಕೆಲಸದವರು ರಸ್ತೆಗೆ ಬಿದ್ದಿದ್ದು ಕಂಬ  ಕಾರಿನ ಮೇಲೆ  ಬಿತ್ತು.  ಇದರಿಂದ  ಕಾರು ಜಖಂಗೊಂಡಿದ್ದಲ್ಲದೆ  ವಿದ್ಯುತ್‌ಕಂಬ  ತುಂಡಾಗಿದ್ದು ಸುಮಾರು 8,000/- ನಷ್ಟವುಂಟಾಗಿರುತ್ತದೆ.  ಈ ಅಪಘಾತದಿಂದ  ಕೆಲಸಗಾರರಾದ  ಪ್ರಮೋದ್‌ಸಲಾಮ್‌,  ಜಗಧೀಶ್‌ ಕುಮಾರ್‌ಕುಮೇತಿ , ಸುಧೀರ್‌ ಕುಮಾರ್‌, ಸೋನಾ ರಾಮ್‌ನೇತಾಮ್‌   ಮತ್ತು  ಕಲಿರಾಮ್‌ಮಾಂಡವಿ ರವರಿಗೆ ತರಚಿದ ರಕ್ತಗಾಯವಾಗಿರುತ್ತದೆ.  ಈ ಅಪಘಾತಕ್ಕೆ  KA-20 Z-6371 ನೇ ನೊಂದಣಿ ಸಂಖ್ಯೆಯ ಕಾರಿನ ಚಾಲಕನ ಅಬ್ದುಲ್‌ರೆಹಮಾನ್‌ಎಂಬಾತನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುವುದಾಗಿದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 69/22 ಕಲಂ: 279, 337, 427  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಮಾಧಕ ವಸ್ತು ಸೇವನೆ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ದಾಮೋದರ ಕೆ ಬಿ ಪಿ ಎಸ್ ಐ ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ 10/09/2022  ರಂದು ಬೆಳಿಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಸಾಲ್ಮರ ಗ್ಯಾಲಕ್ಸಿ ಹಾಲ್ ಸಮೀಪ ಸಾರ್ವಜನಿಕ ರಸ್ತೆ ಬಳಿ ತಲುಪಿದಾಗ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಪೇಪರ್‌ನಲ್ಲಿ ಸೇರಿಸಿ ಸಿಗರೇಟ್ ನಂತೆ ರೋಲ್ ಮಾಡಿ  ಸೇದುತ್ತಿದ್ದ ಆಪಾದಿತ ಪ್ರಕಾಶ್, (34), ತಂದೆ: ಶೇಖರ ಪೂಜಾರಿ, ವಾಸ: ರೋಟರಿ ಆಸ್ಪತ್ರೆ  ಬಳಿ, ತಾಲೂಕು ಕಛೇರಿ ಬಳಿ, ಕಸಬಾ ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಇತನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ದಿನಾಂಕ 13/09/2022 ರಂದು 16:00 ಗಂಟೆಗೆ ಆಪಾದಿತನು ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವುದಾಗಿ ವೈದ್ಯಕೀಯ ವರದಿ  ಬಂದಿದ್ದು  ಅಪಾದಿತನು ಗಾಂಜಾ ಎಂಬ ಮನೋ ಉದ್ರೇಕ ಮಾದಕ ಪದಾರ್ಥ ಸೇವಿಸಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 117/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾಧ ಅನಿಲ್ ಬಿ ಎಂ ಪಿಎಸ್‌ಐ ಹಿರಿಯಡ್ಕ ಪೊಲೀಸ್ ಠಾಣೆ  ಇವರು ದಿನಾಂಕ 13/09/2022 ರಂದು ಸಿಬ್ಬಂದಿಯವರೊಂದಿಗೆ  ರೌಂಡ್ಸನಲ್ಲಿರುವಾಗ ಬೆಳಿಗ್ಗೆ 9:00 ಗಂಟೆಗೆ ಆತ್ರಾಡಿ  ಗ್ರಾಮದ ಶ್ರೀನಿಧಿ ಬಾರ್ ಬಳಿ  ಸಾರ್ವಜನಿಕ ಸ್ಥಳದಲ್ಲಿ ದೀರಜ್ (22) ತಂದೆ: ಸುಧಾಕರ ಸುವರ್ಣ ಅಂಜಾರು ಗ್ರಾಮ ಎಂಬಾತನು ತೂರಾಡಿಕೊಂಡಿದ್ದು  ಆತನು ಯಾವುದೋ ನಿಷೇಧಿತ ಮಾಧಕ  ವಸ್ತು ಸೇವಿಸಿರುವ ಸಂಶಯದ ಮೇಲೆ  ವಶಕ್ಕೆ ಪಡೆದು, ಫಾರೆನ್ಸಿಕ್‌ ಮೆಡಿಸಿನ್‌ ವಿಭಾಗ, ಕೆ.ಎಂ.ಸಿ. ಮಣಿಪಾಲ ಇಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಲ್ಲಿ, ಈ ದಿನ ವೈದ್ಯರು ಆಪಾದಿತನು ನಿಷೇಧಿತ ಗಾಂಜಾ ಎಂಬ ಮಾದಕ ವಸ್ತುವನ್ನು ಸೇವಿಸಿರುವುದಾಗಿ  ದೃಢಪತ್ರ ನೀಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 50/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾಧ ನಿರಂಜನ್ ಗೌಡ ಬಿ ಎಸ್  ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ. ಬೈಂದೂರು ಇವರು ದಿನಾಂಕ 13/09/2022 ರಂದು ಸಿಬ್ಬಂದಿಗಳಾದ ಹೆಚ್ ಸಿ 26, ಪಿಸಿ 1172  ಮತ್ತು ಎಪಿಸಿ 1596  ನೇಯವರೊಂದಿಗೆ ಇಲಾಖಾ ಜೀಪು ನಂಬ್ರ ಕೆಎ-20 ಜಿ-164 ನೇದರಲ್ಲಿ ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಬೈಂದೂರು ಠಾಣಾ ವ್ಯಾಪ್ತಿಯ ಶಿರೂರು ಗ್ರಾಮದ ಶಿರೂರು ಮಾರ್ಕೆಟ್ ಬಳಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಸದ್ಕೆ ಅಬ್ರಾರುಲ್  ಹಕ್ (28)ತಂದೆ: ಸದ್ಕೆ  ಮೀರಾ ವಾಸ: ಸದ್ಕೆ ಕರೀಂ ಮಂಜಿಲ್ ನ್ಯೂ ಕಾಲೋನಿ ಶಿರೂರು ಗ್ರಾಮ ಬೈಂದೂರು ತಾಲೂಕು ರವರನ್ನು ವಶಕ್ಕೆ ಪಡೆದು ಠಾಣೆಗೆ ಕರೆ ತಂದಿದ್ದು ಸದ್ರಿ ಆರೋಪಿಯು ನಿಷೇದಿತ  ಮಾಧಕ ವಸ್ತುಗಳನ್ನು ಸೇವಿಸಿರುವ ಸಂಶಯವಿದ್ದು ಆರೋಪಿತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಗಳು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ಇವರನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ದಿನಾಂಕ 13/09/2022 ರಂದು ಸದ್ಕೆ ಅಬ್ರಾರುಲ್  ಹಕ್ ರವರು  ಗಾಂಜಾ ಸೇವಿಸಿರುವುದು ದೃಢ ಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 183/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 12/09/2022 ರಂದು ಗುರುನಾಥ ಬಿ. ಹಾದಿಮನಿ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಸಾರ್ವಜನಕರಿಂದ ಬಂದ ದೂರಿನ ಮೇರೆಗೆ ಮೇಲಾಧಿಕಾರಿಯವರ  ಸೂಚನೆಯಂತೆ ಠಾಣಾ  ಸಿಬ್ಬಂದಿಯವರ ಜೊತೆ ಬೆಳಿಗ್ಗೆ 10:45 ಗಂಟೆಗೆ ವಾರಂಬಳ್ಳಿ ಗ್ರಮದ, ಅಕ್ಷಯ್‌ ಫರ್ನಿಚರ್‌ ಬಳಿ ಆರೋಪಿ ಹಿತೇಶ್‌ ಕುಮಾರ್‌, (38), ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ. ಅವನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ಮೆಡಿಸಿನ್‌ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,. ದಿನಾಂಕ 13/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 151/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 12/09/2022 ರಂದು ಪಿರ್ಯಾದಿದಾರರಾದ ಗುರುನಾಥ ಬಿ. ಹಾದಿಮನಿ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಸಾರ್ವಜನಕರಿಂದ ಬಂದ ದೂರಿನ ಮೇರೆಗೆ ಮೇಲಾಧಿಕಾರಿಯವರ  ಸೂಚನೆಯಂತೆ ಠಾಣಾ  ಸಿಬ್ಬಂದಿಯವರ ಜೋತೆ  ಬೆಳಿಗ್ಗೆ 11:30 ಗಂಟೆಗೆ ನೀಲಾವರ ಗ್ರಾಮದ, ನೀಲಾವರ ಚರ್ಚ್‌ ಬಳಿ  ಆರೋಪಿ ಚಂದ್ರ ಶೇಖರ ಶೆಟ್ಟಿ, (35) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ. ಅವನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ಮೆಡಿಸಿನ್‌ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,. ದಿನಾಂಕ 13/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 152/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 12/09/2022 ರಂದು  ಗುರುನಾಥ ಬಿ. ಹಾದಿಮನಿ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಸಾರ್ವಜನಕರಿಂದ ಬಂದ ದೂರಿನ ಮೇರೆಗೆ ಮೇಲಾಧಿಕಾರಿಯವರ  ಸೂಚನೆಯಂತೆ ಠಾಣಾ  ಸಿಬ್ಬಂದಿಯವರ ಜೋತೆ  ಮಧ್ಯಾಹ್ನ 2:00 ಗಂಟೆಗೆ  ನೀಲಾವರ ಗ್ರಾಮದ, ನೀಲಾವರ ಜಂಕ್ಷನ್‌ ಬಳಿ ಆರೋಪಿ ಮಹೇಂದ್ರ ಪೂಜಾರಿ , (34) ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ. ಅವನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ ಮೆಡಿಸಿನ್‌ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,. ಈ ದಿನ ದಿನಾಂಕ 13/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 153/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ: 12/09/2022 ರಂದು  ಗುರುನಾಥ ಬಿ. ಹಾದಿಮನಿ ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ,  ಸಾರ್ವಜನಿಕರಿಂದ ಬಂದ ದೂರಿನ ಮೇರೆಗೆ ಮೇಲಾಧಿಕಾರಿಯವರ  ಸೂಚನೆಯಂತೆ ಠಾಣಾ  ಸಿಬ್ಬಂದಿಯವರ ಜೊತೆ  ಮಧ್ಯಾಹ್ನ 2:00 ಗಂಟೆಗೆ  ನೀಲಾವರ ಗ್ರಾಮದ, ನೀಲಾವರ ಜಂಕ್ಷನ್‌ ಬಳಿ ಆರೋಪಿ ರವೀಂದ್ರ ಆಚಾರ್ಯ ಪ್ರಾಯ: 34 ವರ್ಷ, ಎಂಬಾತನನ್ನು ಪರಿಶೀಲಿಸಿದಾಗ ಆತನ ಬಾಯಿಯಿಂದ ಗಾಂಜಾದಂತಹ ವಾಸನೆ ಬರುತ್ತಿದ್ದು, ಅವನಲ್ಲಿ ವಿಚಾರಿಸಿದಾಗ ತಾನು ಗಾಂಜಾ ಸೇವನೆ ಮಾಡಿರುವುದಾಗಿ ತಿಳಿಸಿದ ಮೇರೆಗೆ. ಅವನನ್ನು ವಶಕ್ಕೆ ತೆಗೆದುಕೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್‌ಮೆಡಿಸಿನ್‌ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಿದ್ದು,. ಈ ದಿನ ದಿನಾಂಕ:13/09/2022 ರಂದು ವೈಧ್ಯಕೀಯ ವರದಿ ಪಡೆಯಲಾಗಿ ಆರೋಪಿಯು ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದರಿಂದ ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 154/2022  ಕಲಂ: 27 (B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಪ್ರಕರಣ

  • ಹಿರಿಯಡ್ಕ: ಅನಿಲ್ ಬಿ ಎಂ, ಪಿಎಸ್‌ಐ, ಹಿರಿಯಡ್ಕ ಪೊಲೀಸ್ ಠಾಣೆ ಇವರು ದಿನಾಂಕ: 13/09/2022 ರಂದು 11:00  ಗಂಟೆಗೆ ಠಾಣೆಯಲ್ಲಿರುವಾಗ ಉಡುಪಿ ತಾಲೂಕು ಬೊಮ್ಮರಬೆಟ್ಟು ಗ್ರಾಮದ ಹಳೆ ಸಂತೆ ಮಾರ್ಕೆಟ್  ಬಳಿ ಒಬ್ಬ  ವ್ಯಕ್ತಿ ಮಟ್ಕ ಜುಗಾರಿ ಆಟದ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು 14:15 ಗಂಟೆಗೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟಕ್ಕೆ ನಡೆಸುತ್ತಿದ್ದ ವಾಸು ಶೇರಿಗಾರ ಎಂಬವರನ್ನು ವಶಕ್ಕೆ ಪಡೆದು ಆಪಾದಿತರನ್ನು ವಿಚಾರಿಸಿದಾಗ ತಾನು ತನ್ನ ಸ್ವಂತ ಲಾಭಕೊಸ್ಕರ ಸಾರ್ವಜನಿಕರಿಂದ ಮಟ್ಕಾ ಜುಗಾರಿ ಆಟದ ಬಗ್ಗೆ ಹಣವನ್ನು ಸಂಗ್ರಹಿಸುತ್ತಿರುವುದಾಗಿ ತಿಳಿಸಿರುತ್ತಾರೆ. ಆಪಾದಿತರಿಂದ ಮಟ್ಕಾ ಜುಗಾರಿ ಆಟಕ್ಕೆ ಸಂಗ್ರಹಿಸಿದ ನಗದು ರೂ 1150/- ಮತ್ತು ಮಟ್ಕಾ ನಂಬ್ರ ಬರೆದ ಚೀಟಿ- 1,  ಬಾಲ್‌ಪೆನ್‌ನ್ನು ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022    ಕಲಂ : 78 (i)(iii)ಕೆ ಪಿ  ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾಧ ಹನುಮಂತ (32) ತಂದೆ: ಪರಸಪ್ಪ ಬಮ್ಮಣಗಿ ವಾಸ: ಕಿರುಸೂರು, ಹುನಗುಂದ ತಾಲೂಕು, ಬಾಗಲಕೋಟೆ ಜಿಲ್ಲೆ. ಪ್ರಸ್ತುತ: ಬೀಡಿನಗುಡ್ಡೆ, ಉಡುಪಿ ಇವರ ಅಣ್ಣ ಸುರೇಶ ಸಂದಿಮನಿ ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/09/2022 ರಂದು ಬೆಳಿಗ್ಗೆ ಸುನೀಲ್‌ಎಂಬವರು ಸುರೇಶ ಸಂದಿಮನಿ (32) ರವರನ್ನು ಕೆಲಸಕ್ಕೆಂದು ಕರೆದುಕೊಂಡು ಹೋಗಿದ್ದು, ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಕಲ್ಸಂಕ ಬಳಿ ನಿಧಿ ಹೋಮ್ಸ್‌ಎಂಬ ಮನೆಯ ಹಿಂಭಾಗದಲ್ಲಿರುವ ಜಾಗದಲ್ಲಿ ಬೆಳೆದಿರುವ ಮರಗಳನ್ನು ಆಪಾದಿತರಾದ ಸುನೀಲ್‌ ಮತ್ತು ಜಾಗದ ಮಾಲಕರಾದ ಪ್ರಭಾಕರ ಸಾಲ್ಯಾನ್‌ರವರು ಯಾವುದೇ ಸುರಕ್ಷಾ ಕವಚವನ್ನು ನೀಡದೇ ನಿರ್ಲಕ್ಷ ವಹಿಸಿ ಮರ ಕಡಿಸಿದ್ದು, 13:45 ಗಂಟೆಗೆ ಸುರೇಶ ಸಂದಿಮನಿ ರವರು ಕಡಿಯುತ್ತಿದ್ದ ಮರವು ತುಂಡಾಗಿ ಅವರ ಮೈಮೇಲೆ ಬಿದ್ದು, ಹೊಟ್ಟೆಗೆ ಸೊಂಟಕ್ಕೆ ಹಾಗೂ ಕಾಲುಗಳಿಗೆ ತೀವ್ರ ಗಾಯವಾಗಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಪಾದಿತರ ನಿರ್ಲಕ್ಷತನವೇ ಸುರೇಶ ಸಂದಿಮನಿ ರವರ ಸಾವಿಗೆ ಕಾರಣವಾಗಿರುವುದಾಗಿದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ: 304(A) Rw 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿ ಗೌತಮ್ ದಾರರ  ದೊಡ್ಡಮ್ಮನ  ಮಗನಾದ ರಾಘವೇಂದ್ರ ಪ್ರಾಯ: 40 ವರ್ಷ ಎನ್ನುವವರು ಅವಿವಾಹಿತರಾಗಿದ್ದು, ಆಟೋ ರಿಕ್ಷಾ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಮದ್ಯಪಾನ ಮಾಡುವ ಹವ್ಯಾಸವುಳ್ಳವನಾಗಿರುತ್ತಾನೆ. ರಾಘವೇಂದ್ರನು ಹೆಚ್ಚಾಗಿ ತನ್ನ ಮನೆ ಎದುರಿಗಿರುವ ಗಿರಿಜಾ ಪೂಜಾರ್ತಿ ರವರ ಮನೆಯಲ್ಲಿ ಗಿರಿಜಾ ಪೂಜಾರ್ತಿ ಅವರ ಮಗನಾದ ರಾಮ ಎನ್ನುವವರೊಂದಿಗೆ ಸೇರಿ ಮದ್ಯಪಾನ ಮಾಡುತ್ತಿದ್ದು  ದಿನಾಂಕ 12/09/2022 ರಂದು ರಾತ್ರಿ ಎಂದಿನಂತೆ   ಅವರ ಮನೆಯ ಜಗುಲಿ ಕಟ್ಟೆ ಮೇಲೆ ಮಲಗಿಕೊಂಡಿದ್ದು ಈ ದಿನ ದಿನಾಂಕ 13/09/2022 ರಂದು ಮದ್ಯಾಹ್ನ02:30 ಗಂಟೆಯರೆಗೆ ಮಲಗಿದ್ದ ಸ್ಥಿತಿಯಲ್ಲಿದ್ದವನನ್ನು ಕಂಡು ಗಿರಿಜಾ ಪೂಜಾರ್ತಿಯವರು ಪಿರ್ಯದಿದಾರರಿಗೆ ತಿಳಿಸಿದಂತೆ ಪಿರ್ಯಾದಿದಾರರು ಪರೀಕ್ಷಿಸಿ ನೋಡಿದಾಗ ರಾಘವೇಂದ್ರನು ಉಸಿರಾಡುತ್ತಿಲ್ಲವಾಗಿದ್ದು, ಮೃತಪಟ್ಟಿರುವುದಾಗಿ ತಿಳಿದು ಬಂದಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ UDR NO 29/2022 U/s 174 CRPC ಯಂತೆ ಪ್ರಕರಣ ಸಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-09-2022 10:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080