ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕಾರ್ಕಳ :  ಪಿರ್ಯಾದಿ   ರುಕ್ಮಯ್ಯ ಶೆಟ್ಟಿಗಾರ್ ಪ್ರಾಯ: 48 ವರ್ಷ, ತಂದೆ: ಶೀನ ಶೆಟ್ಟಿಗಾರ್ ವಾಸ:ಅಯ್ಯಪ್ಪ ನಗರ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 12/09/2021 ರಂದು ಮದ್ಯಾಹ್ನ ಸುಮಾರು 3.00 ಘಂಟೆಗೆ ಕಾರ್ಕಳ ತಾಲೂಕು ಕುಕ್ಕುಂದೂರು ಗ್ರಾಮದ ದೇವಿಕೃಪಾ ಕಲ್ಯಾಣ ಮಂಟಪದ ಎದುರು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ನಿಂತಿರುವಾಗ KA20EU6530 ನೇ ನಂಬ್ರದ ದ್ವಿಚಕ್ರ ವಾಹನದಲ್ಲಿ ಶಿವಶಂಕರ ನಾಯರ್ ಎನ್ನುವವರು ಕಾರ್ಕಳ ಕಡೆಯಿಂದ ಜಾರ್ಕಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಅದೇ ದಿಕ್ಕಿನಲ್ಲಿ ಕಾರ್ಕಳ ಕಡೆಯಿಂದ KA21N8809 ನೇ ಕಾರಿನ ಚಾಲಕನು ಅತೀ ವೇಗ ಮತ್ತು ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ದ್ವಿಚಕ್ರ ವಾಹನ ನಂಬ್ರ KA20EU6530 ನೇಯದಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನು ವಾಹನ ಸಮೇತ ರಸ್ತೆಗೆ ಬಿದ್ದು ಆತನ ತಲೆಗೆ ಮತ್ತು ಮೈಕೈಗೆ ರಕ್ತಗಾಯವಾಗಿದ್ದು, ಅಪಘಾತವೆಸಗಿದ ಕಾರಿನ ಚಾಲಕ ದಿನೇಶ ಶೆಟ್ಟಿಯವರಿಗೂ ಗಾಯಗಳಾಗಿದ್ದು, ಅಪಘಾತದಿಂದ ಕಾರು ಮತ್ತು ದ್ವಿಚಕ್ರ ವಾಹನ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ ಅಪರಾಧ ಕ್ರಮಾಂಕ 115/2021 ಕಲಂ  279, 337ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು

  • ಬ್ರಹ್ಮಾವರ:  ಪಿರ್ಯಾದಿ ಮಂಜುನಾಥ್ ಬೈಲೂರು,(43),ತಂದೆ: ಚಂದ್ರಪ್ಪ, ವಾಸ: ನೀಲಾ ನಿವಾಸ, ಬಿಸಿಎಮ್ ಹಾಸ್ಟೆಲ್ ಹತ್ತಿರ, ಮಿಷನ್ ಕಂಪೌಂಡ್, ನೀರೆ ಬೈಲೂರು, ಕಾರ್ಕಳ ಇವರು ಕರ್ನಾಟಕ ರಾಜ್ಯ ಋಣಮುಕ್ತಹೋರಾಟ ಸಮಿತಿ, ಬೆಳ್ತಂಗಡಿ ಇದರ ಉಡುಪಿ ಜಿಲ್ಲಾ ಸಮಿತಿಯ ಜಿಲ್ಲಾಧ್ಯಕ್ಷರಾಗಿರುತ್ತಾರೆ. ಅವರ ಹೋರಾಟ ಸಮಿತಿಯ ಬ್ರಹ್ಮಾವರ ತಾಲೂಕಿನ ಸದಸ್ಯರಾದ ಶ್ರೀಮತಿ ಚಂದ್ರಿಕಾ, (31 ವರ್ಷ) ಗಂಡ: ಅಂಬರೀಷ್,  ವಾಸ: ಗಾಂಧಿ ನಗರ, ಬೈಕಾಡಿ ಇವರ ಮನೆಗೆ  BSS ಮೈಕ್ರೋ ಫೈನಾನ್ಸ್‌ ನ ಸಿಬ್ಬಂದಿಗಳಾದ ಆರೋಪಿ ಹರೀಶ್, ರಾಕೇಶ್, ವಿಶ್ವನಾಥ ಹಾಗೂ ಇನ್ನೊಬ್ಬ ದಿನಾಂಕ: 07/09/2021 ರಂದು ಬೆಳಿಗ್ಗೆ 10:00 ಗಂಟೆಗೆ ಕೋರ್ಟ್‌ ಆದೇಶದೊಂದಿಗೆ ಕೋರ್ಟ್‌ ಹಾಗೂ ಪೊಲೀಸ್ ಇಲಾಖೆಯವರೊಂದಿಗೆ ಬಾಕಿ ಇರುವ ಸಾಲದ ಹಣದ ಜಪ್ತಿಗೆಂದು ಬಂದಿದ್ದು ಚಂದ್ರಿಕಾರವರು ಬಾಕಿ ಇರುವ ರೂ 40000/- ಹಣವನ್ನು ಸ್ಥಳದಲ್ಲೇ ಪಾವತಿಸಿರುತ್ತಾರೆ. ಈ ಘಟನೆಯನ್ನು ಸ್ಥಳದಲ್ಲಿಯೇ ಉಪಸ್ಥಿತರಿದ್ದ ಆರೋಪಿ ರಾಕೇಶ್ ವಿಡಿಯೋ ಚಿತ್ರೀಕರಣ ಮಾಡಿದ್ದು, ಈ ವಿಡಿಯೋವನ್ನು ಆರೋಪಿಗಳಾದ ರಾಕೇಶ್,ಹರೀಶ್, ವಿಶ್ವನಾಥ, ಅವಿನಾಶ್, ಗುರುರಾಜ್, ಮಧುಸೂಧನ, ಸಂದೇಶ ರವರು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುತ್ತಾರೆ. ಅಲ್ಲದೇ ದಿನಾಂಕ 09/09/2021 ರಂದು ಶ್ಯಾಮಲ (34) ಗಂಡ: ಹರೀಶ್, ವಾಸ: ಸಾಲಿಕೇರಿ, ವಾರಂಬಳ್ಳಿ  ಗ್ರಾಮ ಎಂಬವರ ಮನೆಗೆ ಬೆಳಿಗ್ಗೆ 07:45 ಗಂಟೆಗೆ   BSS ಮೈಕ್ರೋ ಫೈನಾನ್ಸ್‌ ನ ಸಿಬ್ಬಂದಿಗಳಾದ ಆರೋಪಿ ಗುರುರಾಜ್ ಮತ್ತು ಹರೀಶ್ ಏಕಾ ಎಕಿ ಅಕ್ರಮ ಪ್ರವೇಶ ಮಾಡಿ ಶ್ಯಾಮಲರನ್ನು ಉದ್ದೇಶಿಸಿ “ ಬೈಕಾಡಿ ವಾಸಿಯಾದ ಚಂದ್ರಿಕಾ ರವರಿಂದ ನಾವು ಹೇಗೆ ಸಾಲ ವಸೂಲಿ ಮಾಡಿದ್ದೇವೆ ಗೊತ್ತಾ ? ನಿಮಗೆ ಅದೇ ರೀತಿಯಲ್ಲಿ ನಿಮ್ಮಿಂದ ಕೂಡ ವಸೂಲಿ ಮಾಡುತ್ತೇವೆ ಎಂದು ಆರೋಪಿ ಹರೀಶ್ ರವರ ಮೊಬೈಲ್‌ನಲ್ಲಿದ್ದ ವಿಡಿಯೋ ತೋರಿಸಿ, “ ಸಾಲವನ್ನು ನಿಮ್ಮಂದ ಹೇಗೆ ವಸೂಲಿ ಮಾಡ ಬೇಕೆಂದು ಗೊತ್ತಿದೆ , ನಿಮ್ಮ ಹೆಸರನ್ನು ಊರು ತುಂಬಾ ಮೈಕ್‌ನಲ್ಲಿ ಪ್ರಚಾರ ಮಾಡಿಕೊಂಡು ಬರುತ್ತೇವೆ, ಎಂದು ಮಾನಸಿಕ ಹಿಂಸೆ ನೀಡಿ ಬೆದರಿಕೆ ಹಾಕಿರುತ್ತಾರೆ. ದಿನಾಂಕ: 10/09/2021 ರಂದು ಬೆಳಿಗ್ಗೆ 07:30 ಗಂಟೆಗೆ ಶ್ರೀಮತಿ ಮಲ್ಲಿಕಾ (40), ಗಂಡ: ಗಣೇಶ್, ವಾಸ: ಗಾಂಧಿ ನಗರ, ಬೈಕಾಡಿ  ಇವರ ಮನೆಗೂ BSS ಮೈಕ್ರೋ ಫೈನಾನ್ಸ್‌ ನ ಸಿಬ್ಬಂದಿಗಳಾದ ಆರೋಪಿ ರಾಕೇಶ್ ಮತ್ತು ಹರೀಶ್ ಎಂಬವರು ಅಕ್ರಮ ಪ್ರವೇಶ ಮಾಡಿ ಚಂದ್ರಿಕಾ ರವರ ಮನೆ ಜಪ್ತಿ ಮಾಡುವ ವಿಡಿಯೋವನ್ನು ತೋರಿಸಿ, ನಿಮ್ಮ ಸಾಲವನ್ನು ಇದಕ್ಕಿಂತ ಹಿನಾಯ ರೀತಿಯಲ್ಲಿ ವಸೂಲಿ ಮಾಡುತ್ತೇವೆ, ಕಟ್ಟದಿದ್ದಲ್ಲಿ ನಿಮ್ಮನ್ನುನೋಡಿ ಕೊಳ್ಳುತ್ತೇವೆಂದು ಬೆದರಿಕೆ ಹಾಕಿ, ಹೀನಾಯವಾಗಿ ಬೈದಿರುತ್ತಾರೆ. ಇಷ್ಟಲ್ಲದೇ ಸಮಿತಿಯ ಸದಸ್ಯರುಗಳಾದ ಭಾಗ್ಯಲಕ್ಷ್ಮೀ, ಹೇಮಲತಾ, ವನಜ ಇವರಿಗೂ ಇದೇ ವಿಡಿಯೋವನ್ನು ತೋರಿಸಿ ಬೆದರಿಸಿರುತ್ತಾರೆ. ಅಲ್ಲದೇ ಆರೋಪಿಗಳು ವಿಡಿಯೋವನ್ನು ಹೋರಾಟ ಸಮಿತಿಯ ಬೇರೆ, ಬೇರೆ ತಾಲೂಕುಗಳಾದ ಕಾರ್ಕಳ, ಉಡುಪಿ, ಕಾಪು, ಮೂಡುಬಿದ್ರೆ, ಮಂಗಳೂರು, ಬೆಳ್ತಂಗಡಿ, ಕೊಪ್ಪ ಮುಂತಾದ ಕಡೆಗಳ ವಾಟ್ಸಪ್ ಗ್ರೂಪ್ ಗಳಿಗೆ ಹರಿಯ ಬಿಟ್ಟು ಸಾಲ ಸಂತ್ರಸ್ತ ಮಹಿಳೆಯರನ್ನು ಮಾನಸಿಕವಾಗಿ ಹಿಂಸಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 167/2021 ಕಲಂ  341, 447, 448, 354 r/w 149 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-09-2021 10:16 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080