ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಮಲ್ಪೆ: ಪಿರ್ಯಾಧಿದಾರರದ ನರೇಶ (45) ತಂದೆ: ಕೃಷ್ಣ ನಾಯ್ಕ ವಾಸ:ಮನೆ ನಂಬ್ರ 7-14 ಕೆಮ್ಮಣ್ಣು ,ಪಡುತೋನ್ಸೆ ಗ್ರಾಮ, ಉಡುಪಿ ಇವರು ದಿನಾಂಕ 10/09/2021 ರಂದು ತನ್ನ KA-20-EH-4355 ನೇ  ಮೋಟಾರು ಸೈಕಲ್ ನಲ್ಲಿ ತನ್ನ ತಂದೆ: ಕೃಷ್ಣನಾಯ್ಕ್ (70) ರವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು   ಕೆಮ್ಮಣ್ಣುವಿನ ತನ್ನ ಮನೆಯಿಂದ ಗುಜ್ಜರಬೆಟ್ಟು  ಗಣಪತಿ ದೇವಸ್ಥಾನ ಕ್ಕೆ  ಬರುತ್ತಿರುವಾಗ ಸಮಯ ಸುಮಾರು 16:10 ಗಂಟೆಗೆ ಗುಜ್ಜರ ಬೆಟ್ಟು ಅಮ್ಮನವರ ದುರ್ಗಾಪರಮೇಶ್ವರಿ ದೇವಸ್ಥಾನ ಹತ್ತಿರ ಎದುರುಗಡೆಯಿಂದ ಅಂದರೆ ಗುಜ್ಜರಬೆಟ್ಟು ಗಣದೇವಸ್ಥಾನ ಕಡೆಯಿಂದ ಓರ್ವ ಕಾರು ಚಾಲಕನು ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿಕೊಂಡು ತೀರ ಬಲ ಬದಿಗೆ ಬಂದು ನರೇಶ ರವರ ಮೋಟಾರು ಸೈಕಲ್ ಗೆ ಢಿಕ್ಕಿ ಹೊಡೆ ಪರಿಣಾಮ ಸೈಕಲ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ತಂದೆಗೆ  ಬಲಕಾಲಿನ  ಹಿಮ್ಮಡಿಗೆ ರಕ್ತಗಾಯವಾಗಿದ್ದು, ನರೇಶ್‌ ರವರಿಗೆ ಯಾವುದೇ ರೀತಿ ಗಾಯವಾಗಿರುವುದಿಲ್ಲ, ನರೇಶ ಇವರ ತಂದೆಯನ್ನು ಉಪಚರಿಸಿ ಚಿಕಿತ್ಸೆಯ ಬಗ್ಗೆ  ಆಟೋರಿಕ್ಷಾದಲ್ಲಿ  ಸಂತೆಕಟ್ಟೆ ಗೊರಟ್ಟೆ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ,ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಸಿಟಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿರುತ್ತಾರೆ . ಅಫಘಾತ ನಡೆಸಿದ ಕಾರಿನ ನಂಬ್ರ  KA-20-MD-1006  ಆಗಿದ್ದು ಚಾಲಕರ ಹೆಸರು ಸೌಂದರ್ಯ ಎಂದು ತಿಳಿದಿರುತ್ತದೆ, ಇವರ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 106/2021 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 12/09/2021 ರಂದು ಪಿರ್ಯಾದಿದಾರರಾದ ಕೃಷ್ಣ ಪೂಜಾರಿ, (53) ತಂದೆ: ಶೀನ ಪೂಜಾರಿ, ವಾಸ: ಸಣಗಲ್ಲು, ಮಾತಾಶ್ರೀ ನಿಲಯ, ಗರಿಕೆ ಮಠದ ಹತ್ತಿರ, ಕಾವಾಡಿ ರವರು ಸಾಯಿಬ್ರಕಟ್ಟೆ ಜಂಕ್ಷನ್‌ನಿಂದ ಅವರ ಮನೆ ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಸಂಜೆ ಸಮಯ ಸುಮಾರು 5:30 ಗಂಟೆಗೆ  ಆರೋಪಿ ಜಯಾನಂದ ನಾಯ್ಕ ಎಂಬವರು ಅವರ KA-20-EK-6279 ನೇ ಹೀರೊ ಹೊಂಡಾ ಶೈನ್ ಮೋಟಾರ್ ಸೈಕಲ್‌ನ್ನು ಸಾಯಿಬ್ರಕಟ್ಟೆ ಜಂಕ್ಷನ್ ಕಡೆಯಿಂದ ಯಡ್ತಾಡಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಡ್ತಾಡಿ ಜನತಾ ಕಾಲೋನಿ ಬಸ್ಸ್ ನಿಲ್ದಾಣದ ಎದುರು ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ಬಸವ ಕುಲಾಲ್ (68),  ರವರಿಗೆ ಡಿಕ್ಕಿ ಹೊಡೆದಿರುತ್ತಾರೆ. ಈ ಅಪಘಾತದ ಪರಿಣಾಮ ಬಸವ ಕುಲಾಲ್ ಹಾಗೂ ಆರೋಪಿಯು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಬಸವ ಕುಲಾಲ್ ರವರ ತಲೆಯ ಹಿಂಭಾಗ ಸ್ವಲ್ಪ ರಕ್ತ ಬಂದಿದ್ದು, ಕೈ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಆರೋಪಿ ಜಯಾನಂದ ನಾಯ್ಕ ರವರಿಗೂ ತರಚಿದ ಗಾಯವಾಗಿದ್ದು, ಮೋಟಾರ್ ಸೈಕಲ್ ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 168/2021 ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

 • ಹೆಬ್ರಿ: ಫಿರ್ಯಾದಿದಾರರಾದ ಹಸೈನಾರ್ (48) ತಂದೆ: ಶೇಕಬ್ಬ ಬ್ಯಾರಿ ವಾಸ:ಸಮೀನಾ ಮಂಜಿಲ್ ಜನತಾ ಕಾಲೊನಿಮೂಡುಗೋಪಾಡಿ ಗ್ರಾಮ ಕುಂದಾಪುರ ಇವರ ಅಣ್ಣ ತಾಜ್ ಮೊಹಮ್ಮದ್ (57) ರವರು ಸುಮಾರು ಒಂದು ತಿಂಗಳಿಂದ ಬೇಳಂಜೆ ಗ್ರಾಮದ ಕಪ್ಪೆಕೆರೆ ಎಂಬಲ್ಲಿ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದು. ಅವರು ಕೂಲಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ 14/09/2021 ರಂದು ಬೆಳಿಗ್ಗೆ 11:20 ಗಂಟೆಗೆ ತಾಜ್ ಮೊಹಮ್ಮದ್ ಇವರು ಬೇಳಂಜೆ ಗ್ರಾಮದ ಕಪ್ಪೆಕೆರೆ ಎಂಬಲ್ಲಿ ಮನೆಯಲ್ಲಿರುವಾಗ ಅವರಿಗೆ ಎದೆ ನೋವುಂಟಾಗಿದ್ದು. ಅವರನ್ನು ಚಿಕಿತ್ಸೆಯ ಬಗ್ಗೆ  ಒಂದು ವಾಹನದಲ್ಲಿ ಬೆಳಿಗ್ಗೆ 11:45 ಗಂಟೆಗೆ  ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಅವರು ದಾರಿ ಮದ್ಯೆ ಮೃತ ಪಟ್ಟಿರುತ್ತಾರೆಂದು ತಿಳಿಸಿರುತ್ತಾರೆ. ಮೃತ ತಾಜ್ ಮೊಹಮ್ಮದ್ ಇವರು ಹೃದಯಾಘಾತದಿಂದ ಮೃತ ಪಟ್ಟಿರುವ ಸಾಧ್ಯತೆ ಇರುತ್ತದೆ. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 29/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಬ್ರಹ್ಮಾವರ: ಪಿರ್ಯಾದಿದಾರರಾಧ ಕಾಳಪ್ಪ ನಾಯ್ಕ, (54) ತಂದೆ: ಕುಯಿರ ನಾಯ್ಕ, ವಾಸ: ಸಪ್ತಮಿ ನಿಲಯ, ಕೇಸಪುರ, ಯಡ್ತಾಡಿ ಗ್ರಾಮ, ಬ್ರಹ್ಮಾವರ ಇವರ ನೆರೆಕೆರೆ ವಾಸಿಯಾದ ಬಾಬು @ ಬಾಬಣ್ಣ (65) ಎಂಬವರು ಸುಮಾರು 30 ವರ್ಷಗಳಿಂದ ಸ್ಥಳೀಯ ರಮೇಶ್ ನಾಯ್ಕ ಎಂಬವರಿಗೆ ಸೇರಿದ ಜಾಗದ ಶೆಡ್ಡಿನಲ್ಲಿ ಒಂಟಿಯಾಗಿ ವಾಸವಾಗಿದ್ದು, ಅವರ ಕುಟುಂಬದ ಬಗ್ಗೆ ಯಾರಿಗೂ ತಿಳಿದಿರುವುದಿಲ್ಲ. ಅವರು ಕಳೆದ 4-5 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ ಫೆಬ್ರವರಿ ತಿಂಗಳಲ್ಲಿ ಹೃದಯಾಘಾತವಾಗಿರುತ್ತದೆ. ಅವರಿಗೆ ಚಿಕಿತ್ಸೆ ಹಾಗೂ ಆರ್ಥಿಕ ಸಹಾಯವನ್ನು ಸ್ಥಳೀಯರೇ ಮಾಡುತ್ತಿರುವುದಾಗಿದೆ. ಬಾಬು @ ಬಾಬಣ್ಣ ರವರು ತನಗಿದ್ದ ಅನಾರೋಗ್ಯದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದಲೋ ದಿನಾಂಕ 11/09/2021 ರಂದು ಬೆಳಿಗ್ಗೆ 09:00 ಗಂಟೆಯಿಂದ ದಿನಾಂಕ 13/09/2021 ರಂದು ಮಧ್ಯಾಹ್ನ 1:00 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಾಗಿರುವ ಶೆಡ್ಡಿನ ಮಾಡಿಗೆ ನೈಲಾನ್‌ ಹಗ್ಗವನ್ನು ಕಟ್ಟಿ ಇನ್ನೊಂದು ತುದಿಯನ್ನು ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅಲ್ಲದೇ ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 53/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 14-09-2021 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080