ಅಭಿಪ್ರಾಯ / ಸಲಹೆಗಳು

 

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಕಂದಲ್ ಕೋಡಿ ನೌಷಾದ್ (59), ತಂದೆ: ಕೆ.ಕೆ. ಅಬ್ದುಲ್ ಖಾದರ್, ವಾಸ: ಮ.ನಂ: 15-23-1422/41, ಪ್ಲ್ಯಾಂಟ್ ನಂ:1102, ಪ್ರೆಸಿಡೆನ್ಸಿಯಲ್ ಎನ್ಕ್ಲೇವ್, ಡೈಮಂಡ್ ಬ್ಲಾಕ್, ಕೊಲಾಸೋ ಆಸ್ಪತ್ರೆ ಬಳಿ, ಕಂಕನಾಡಿ ಅಂಚೆ, ಮಂಗಳೂರು ತಾಲೂಕು,ದ.ಕ ಜಿಲ್ಲೆ ಇವರು ದಿನಾಂಕ 13/08/2022 ರಂದು ತನ್ನ ಮಗನ ಜೊತೆ ಉಚ್ಚಿಲಕ್ಕೆ ತನ್ನ HP-14-D-7080 ನೇ ನಂಬ್ರದ ಕಾರಿನಲ್ಲಿ ಹೊರಟಿದ್ದು, ಕಾರನ್ನು ಪಿರ್ಯಾದಿದಾರರ ಮಗ ನಬೀಲ್ ಚಲಾಯಿಸುತ್ತಿದ್ದು, ವಾಪಾಸ್ಸು ರಾಷ್ಟ್ರೀಯ ಹೆದ್ದಾರಿ-66 ರ ಉಡುಪಿ-ಮಂಗಳೂರು ಏಕಮುಖ ರಸ್ತೆಯಲ್ಲಿ ಹೋಗುತ್ತಾ ಸಂಜೆ 5.30 ಗಂಟೆಗೆ ಕಾಪು ತಾಲೂಕು ತೆಂಕ ಎರ್ಮಾಳು ಗ್ರಾಮದ ಕಲ್ಸಂಕ ಸೇತುವೆ ಬಳಿ ಇರುವ ಜೆ.ಎಮ್.ಜೆ ಸರ್ವಿಸ್ ಸ್ಟೇಷನ್ ಬಳಿ ರಸ್ತೆ ತಿರುವಿನಲ್ಲಿ ನಬೀಲ್ ನು ಕಾರನ್ನು ಅತೀವೇಗ ಮತ್ತು ಅಜಾಗರೂತೆಯಿಂದ ಚಲಾಯಿಸಿದ ಪರಿಣಾಮ ಕಾರು ಆತನ ನಿಯಂತ್ರಣ ತಪ್ಪಿ ರಸ್ತೆಯ ಎಡ ಬದಿಯ ತಗ್ಗು ಜಾಗಕ್ಕೆ ಉರುಳಿ ಬಿದ್ದು, ಅಲ್ಲಿದ್ದ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದ್ದು, ಈ ಅಪಘಾತದಿಂದ ಕಾರು ಬಹುಪಾಲು ಜಖಂಗೊಂಡಿದ್ದು ಹಾಗೂ ವಿದ್ಯುತ್ ಕಂಬ ತುಂಡಾಗಿ ಮೆಸ್ಕಾಂ ಇಲಾಖೆಗೆ 17,000/- ರೂಪಾಯಿ ನಷ್ಟವಾಗಿರುತ್ತದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 279, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ 

  • ಕೋಟ : ಪಿರ್ಯಾದಿದಾರರಾದ ಕೃಷ್ಣ ಎನ್ ಅಮೀನ್ (70), ತಂದೆ: ನರ್ವ ಪೂಜಾರಿ, ವಾಸ: ಮೂಡುಬೆಟ್ಟು ಕೊಡವೂರು ಗ್ರಾಮ ಉಡುಪಿ ತಾಲೂಕು ಇವರ ಅಣ್ಣನ ಮಗ ಅಶೋಕ ಸುವರ್ಣ (49) ಇವರು ಹೆಂಡತಿ ಮಕ್ಕಳೊಂದಿಗೆ ವಾಸವಾಗಿದ್ದವನು ಆರ್ ಟಿ ಓ ಬ್ರೋಕರ್ ಕೆಲಸ ಮಾಡಿಕೊಂಡಿದ್ದು ಸುಮಾರು ಹದಿನೈದು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದಕ್ಕೆ ಚಿಕಿತ್ಸೆ ಮಾಡುತ್ತಿದ್ದರು. ಗುಣಮುಖವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡಿದ್ದು ಬ್ರಹ್ಮಾವರ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಚೀಟಿ ಬರೆದಿಟ್ಟು ದಿನಾಂಕ 13/08/2022 ರಂದು ಬೆಳಿಗ್ಗೆ 11:30 ಗಂಟೆಗೆ ತನ್ನ ಮೋಟಾರ್ ಸೈಕಲ್ ನಲ್ಲಿ ಮನೆಯಿಂದ ಹೊರಟು ಹೋಗಿರುದ್ದು ,ವಾಪಸ್ಸು ಮನೆಗೆ ಬಾರದ ಕಾರಣ ಎಲ್ಲಾ ಕಡೆ ಹುಡುಕಾಡಿ ಪತ್ತೆಯ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ದೂರು ನೀಡಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 14/08/2022 ರಂದು ಅವರ ಮೃತ ದೇಹ ಬ್ರಹ್ಮಾವರ ಹಂಗಾರ ಕಟ್ಟೆಯ ಹೊಳೆಯ ದಡದಲ್ಲಿ ಪತ್ತೆಯಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 36 /2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಎಸ್. ನರಹರಿ ಶೆಣೈ (58),ತಂದೆ : ಎಸ್.ದಾಸಪ್ಪ ಶೆಣೈ, ವಾಸ: ಶ್ರಿ ದಾಸ ಸರಸ್ವತಿ ವಾಸ, ಸಾಲಿಗ್ರಾಮ ಅಂಚೆ ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರು ಸಾಲಿಗ್ರಾಮದಲ್ಲಿ ವ್ಯಾಪಾರದ ಕೆಲಸ ಮಾಡಿಕೊಂಡಿದ್ದು, ಸುಮಾರು 35 ರಿಂದ 40 ವರ್ಷ ಪ್ರಾಯದ ದುರ್ಗಾಪ್ಪ ಎಂಬುವವರು ಸುಮಾರು 2-3 ವರ್ಷಗಳಿಂದ ಸಾಲಿಗ್ರಾಮಕ್ಕೆ ಬಂದು ಕೂಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದು, 15 ರಿಂದ 20 ದಿನಗಳ ಹಿಂದೆ ಸಾಲಿಗ್ರಾಮಕ್ಕೆ ಕೂಲಿ ಕೆಲಸದ ಬಗ್ಗೆ ಬಂದಿದ್ದು, ವಿಪರೀತ ಶರಾಬು ಕುಡಿಯುವ ಹವ್ಯಾಸದವನಾಗಿದ್ದು, ಸಾಲಿಗ್ರಾಮ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದು, ದುರ್ಗಪ್ಪನಿಗೆ ರಾತ್ರಿ ಮಲಗಲು ತೊಂದರೆಯಾಗುತ್ತಿದ್ದರಿಂದ ಪಿರ್ಯಾದಿದಾರರ ಮನೆಯ ಮೆಟ್ಟಿಲಿನ ಕೆಳಗಡೆ ಇರುವ ಸ್ಥಳದಲ್ಲಿ ರಾತ್ರಿ ಮಲಗುತ್ತಿದ್ದು, ದಿನಾಂಕ 05/08/2022 ರಂದು ಬೆಳಿಗ್ಗೆ 07:00 ಗಂಟೆಗೆ ನೋಡಿದಾಗ ದುರ್ಗಪ್ಪನು ಎದ್ದೇಳದೇ ಇರುವುದು ಕಂಡು ಬಂದಿದ್ದು, ಅವನ ಬಳಿಗೆ ಹೋದಾಗ ಸರಿಯಾಗಿ ಮಾತನಾಡದೇ ಇದ್ದು, ಪ್ರಜ್ಞೆ ತಪ್ಪಿದಂತಿರುತ್ತದೆ. ಕೂಡಲೇ 108 ಅಂಬುಲೈನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ನಂತರ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಗೆ ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿರುತ್ತಾರೆ. ದುರ್ಗಪ್ಪನು ಚಿಕಿತ್ಸೆಯಲ್ಲಿರುವಾಗ ದಿನಾಂಕ 13/08/2022 ರಂದು ಸಂಜೆ 6:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 35/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 14-08-2022 06:13 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080