ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

 • ಉಡುಪಿ: ಪಿರ್ಯಾದಿ ತಬಸ್ಸುಮ್‌ ಇವರು 1 ನೇ  ಅಪಾದಿತ ಜಿ. ರಾಜ ಹುಸೇನ್‌ನೊಂದಿಗೆ ದಿನಾಂಕ: 13/01/2022 ರಂದು ಉಡುಪಿ ಸಬ್‌ ರಿಜಿಸ್ಟರ್‌ ಆಫೀಸ್‌‌‌‌ನಲ್ಲಿ ರಿಜಿಸ್ಟರ್‌ ಮದುವೆಯಾಗಿದ್ದು, ಮದುವೆಯಾದ ನಂತರ ಉಡುಪಿ ಅಂಬಾಗಿಲು ಪ್ರಿನ್ಸ್‌ ಪ್ಯಾಲೇಸ್‌ನಲ್ಲಿ ದಾಂಪತ್ಯ ಜೀವನ ಮಾಡಿಕೊಂಡಿರುತ್ತಾರೆ. ಮದುವೆಯಾದ ನಂತರ ಒಂದು ವಾರ ಮಾತ್ರ 1ನೇ ಆಪಾದಿತ ಪಿರ್ಯಾದಿದಾರರೊಂದಿಗೆ ಒಳ್ಳೆಯ ರೀತಿಯಲ್ಲಿ ಜೀವನ ಮಾಡಿದ್ದು, ನಂತರ  ಹಣಕ್ಕಾಗಿ 1ನೇ ಆಪಾದಿತ ಪಿರ್ಯಾದಿದಾರರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದನು. ಆಪಾದಿತ  2.ಶೆಹನಾಜ್‌ ಬೇಗಂ 3.ಶಬ್ಬೀರ್‌ 4.ಶಮ ಪರ್ವಿನ್‌ 5.ಅಜರುದ್ದೀನ್‌ 6.ಇರ್ಫಾನ್‌ ಇವರುಗಳು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರು 1ನೇ ಆಪಾದಿತನೊಂದಿಗೆ ಜೀವನ ಮಾಡಬೇಕಾದರೆ ಚಿನ್ನ ಹಾಗೂ ಹಣ ಕೊಡಬೇಕೆಂದು ಬೇಡಿಕೆ ಇಟ್ಟಿದ್ದು, ಪಿರ್ಯಾದಿದಾರರು 1ನೇ ಆಪಾದಿತನಿಗೆ ಹೊಸಪೇಟೆಯಲ್ಲಿ 3,60,000/- ರೂಪಾಯಿ ಬಟ್ಟೆ ಅಂಗಡಿ ಹಾಕಲು ಹಣ ನೀಡಿರುತ್ತಾರೆ.  ಹಾಗೂ 2 ಬೈಕ್‌ಗಳನ್ನು ತೆಗೆಸಿಕೊಟ್ಟಿರುತ್ತಾರೆ. ದಿನಾಂಕ: 07/07/2022 ರಂದು 1ನೇ ಆಪಾದಿತ ಪಿರ್ಯಾದಿದಾರರನ್ನು ಹೊಸಪೇಟೆಗೆ ಕರೆದುಕೊಂಡು ಹೋಗಿದ್ದು,  ವಾಪಾಸು ಮನೆಗೆ ಬಂದಾಗ 1ನೇ ಆಪಾದಿತ ನನ್ನ ಹೆಂಡತಿಯ ಮುಂದೆ ಯಾಕೆ ಗಲಾಟೆ ಮಾಡಿದೆ ಎಂದು ಪಿರ್ಯಾದಿದಾರರ ಮುಖಕ್ಕೆ, ಹೊಟ್ಟೆಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿದು ಹಲ್ಲೆ ಮಾಡಿರುತ್ತಾನೆ. ಅಲ್ಲದೇ ಪಿರ್ಯಾದಿದಾರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ನೀನು ನನ್ನ ಮನೆಯವರ ವಿಷಯದಲ್ಲಿ ಸುಮ್ಮನೇ ಇರಬೇಕು. ಅವರು ಕೇಳಿದಷ್ಟು ಹಣ ಕೊಡಬೇಕು ಇಲ್ಲದಿದ್ದರೆ ನನ್ನ ಮಕ್ಕಳನ್ನು ಕರೆಯಿಸಿ ನಿನ್ನನ್ನು ಕೊಂದು ಬಿಸಾಡುವುದಾಗಿ ಜೀವ ಬೆದರಿಕೆ ಹಾಕಿ ಮನೆ ಬಿಟ್ಟು ಹೋಗಿರುತ್ತಾನೆ ಎಂಬಿತ್ಯಾದಿ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 57/2022  ಕಲಂ: 498(ಎ), 323, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬೈಂದೂರು: ಫಿರ್ಯಾದಿ ಯು.ನಾಗರಾಜ ಭಟ್ ಇವರು ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದು, ತಂದೆ ದಿವಂಗತ ಲಕ್ಷ್ಮೀ ನಾರಾಯಣ ಭಟ್ ಇವರಿಗೆ ಸಂಬಂದಿಸಿದ ಉಪ್ಪುಂದ ಗ್ರಾಮದ ಮಠದಗಡಿ ಎಂಬಲ್ಲಿ ಸರ್ವೆ ನಂಬ್ರ  209 ಮತ್ತು  210 ರ ಜಾಗದಲ್ಲಿ ಫಿರ್ಯಾದಿದಾರರು ಬೇಸಾಯವನ್ನು ಮಾಡಿಕೊಂಡು ಬಂದಿರುತ್ತಾರೆ. ಸದ್ರಿ ಭೂಮಿಯಲ್ಲಿ  ಫಿರ್ಯಾದುದಾರರು ಸುಮಾರು 3 ತಿಂಗಳ ಹಿಂದೆ ಭತ್ತದ ಸಸಿಗಳನ್ನು ನೆಟ್ಟು ಬೇಸಾಯ ಮಾಡಿದ್ದರು. ಫಿರ್ಯಾದಿದಾರರ ಚಿಕ್ಕಪ್ಪನ ಮಗನಾದ ಆರೋಪಿ ಗೋಪಾಲಕೃಷ್ಣ ಭಟ್ ಎಂಬವರು ಮೇಲಿನ ಸರ್ವೆ ನಂಬ್ರ  209 ಮತ್ತು  210  ರ ಜಾಗದ ವಿಚಾರದಲ್ಲಿ ಫಿರ್ಯಾದುದಾರರೊಂದಿಗೆ ಆಗಾಗ ತಕರಾರು ಮಾಡಿಕೊಂಡಿದ್ದು  ದಿನಾಂಕ 08-08-2022 ರಂದು ಮಧ್ಯಾಹ್ನ  ಸಮಯ ಆರೋಪಿಯು ಫಿರ್ಯಾದಿದಾರರ ಗದ್ದೆಗೆ ಅಕ್ರಮ ಪ್ರವೇಶ ಮಾಡಿ ಗದ್ದೆಯಲ್ಲಿ ನೆಟ್ಟಿರುವ ಸಸಿಗಳನ್ನು ಕಿತ್ತು  ಹಾಕಿ ನಷ್ಟ ಉಂಟು ಮಾಡಿದ್ದು ಸಂಜೆ 4:30 ಗಂಟೆಗೆ ಫಿರ್ಯಾದುದಾರರಿಗೆ ಆರೋಪಿತನು ಮಠದಗಡಿ ಎಂಬಲ್ಲಿ ದಾರಿಯಲ್ಲಿ ಸಿಕ್ಕಿದಾಗ  ಸಸಿಗಳನ್ನು ಕಿತ್ತು ಹಾಕಿರುವುದರ ಬಗ್ಗೆ   ಕೇಳಿದಾಗ  ಆರೋಪಿಯು ಫಿರ್ಯಾದುದಾರರನ್ನು ಉದ್ದೇಶಿಸಿ  ಸಸಿ ಕಿತ್ತು ಹಾಕಿದ್ದು  ನಾನೇ ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು ಮಾತನಾಡಿದರೆ  ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ  ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 158/2022 ಕಲಂ. 447,427,504, 506  ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೊರಿಯಲ್‌ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿರುವ ಪಿರ್ಯಾದಿ ಶ್ರೀ ಅರುಣ್‌ ಕುಮಾರ್‌ ಹೆಚ್‌.ಆರ್‌ ಇವರು ದಿನಾಂಕ 12.08.2022 ರ ಮಧ್ಯಾಹ್ನ 1:40 ಗಂಟೆಯಿಂದ  2:10 ಗಂಟೆಯ ಮಧ್ಯಾವಧಿಯಲ್ಲಿ  ಕಾಲೇಜು ಕ್ಯಾಂಟೀನ್‌ಗೆ ತೆರಳಿದಾಗ ಅಲ್ಲಿದ್ದ ಅವರ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಆರೋಪಿತೆ ಅನ್ನಪೂರ್ಣೇಶ್ವರಿ  ರವರು ಪಿರ್ಯಾದಿದಾರರನ್ನು ಏಕವಚನದಿಂದ ಕೂಗಿ ಕರೆದಿದ್ದು, ಇದಕ್ಕೆ ಪಿರ್ಯಾದಿದಾರರು ಪ್ರತಿಕ್ರಿಯಿಸದೇ ಇದ್ದಾಗ, ಆರೋಪಿತೆಯು ಪ್ರಾಂಶುಪಾಲರ ಕೊಠಡಿಯ ವರೆಗೆ ಅರ್ಜಿದಾರರನ್ನು ಹಿಂಬಾಲಿಸಿಕೊಂಡು ಬಂದು  ಅರ್ಜಿದಾರರಿಗೆ ಮತ್ತು ಅವರ ತಂದೆ-ತಾಯಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಸಾರ್ವಜನಿಕವಾಗಿ ಮುಜುಗರವುಂಟು ಮಾಡಿರುತ್ತಾರೆ, ಈ ಬಗ್ಗೆ ಪಿರ್ಯಾದಿದಾರರು ಪ್ರಾಂಶುಪಾಲರಲ್ಲಿ ದೂರು ನೀಡಿದಾಗ ಪ್ರಾಂಶುಪಾಲರ ಎದುರೆ ಆರೋಪಿತೆಯು ತೇಜೋವಧೆ ಮಾಡುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾದಿ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 134/2022 ಕಲಂ : 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹನೇಹಳ್ಳಿ ಗ್ರಾಮದ, ಬಾರ್ಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೊರಿಯಲ್‌ ಪದವಿ ಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಆಗಿರುವ ಪಿರ್ಯಾದಿ ಅನ್ನಪೂರ್ಣ ಇವರು ದಿನಾಂಕ 12.08.2022 ರಂದು ಮಧ್ಯಾಹ್ನ ಸುಮಾರು 2:00 ಗಂಟೆಗೆ ಕಾಲೇಜಿನಲ್ಲಿಆಪಾದಿತ ಅರುಣ್‌ ಕುಮಾರ್‌ ಹೆಚ್‌.ಆರ್‌ , ಇವರಲ್ಲಿ  ಭೇಟಿಯಾಗಿ ಅವರಲ್ಲಿ  ನನ್ನ ಬಗ್ಗೆ ಯಾಕೆ ಈ ರೀತಿ ಮಾತನಾಡುತ್ತೀರಿ ಎಂದು ಕೇಳಿದ್ದಕ್ಕೆ ಆರೋಪಿಯು ಅವಾಚ್ಯ ಶಬ್ದದಿಂದ ಬೈದಿದ್ದು ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 135/2022 ಕಲಂ : 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಮನುಷ್ಯ ಕಾಣೆ ಪ್ರಕರಣ

 • ಉಡುಪಿ: ಅಶೋಕ್ ಸುವರ್ಣ ಪ್ರಾಯ 49 ವರ್ಷ ಎಂಬವರು ಸುಮಾರು 20 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ದಿನಾಂಕ 13/04/2022 ರಂದು ಬೆಳಿಗ್ಗೆ 11:30ಗಂಟೆಯಿಂದ ಉಡುಪಿ ತಾಲೂಕು ಪುತ್ತೂರು ಗ್ರಾಮದ ಕೊಡಂಕೂರು ಎಂಬಲ್ಲಿ ವಾಸ್ತವ್ಯದ ಮನೆಯಿಂದ  ಹೋಗಿದ್ದು, ಈವರೆಗೂ ವಾಪಾಸು ಮನೆಗೆ ಬಾರದೇ, ಸಂಬಂಧಿಕರ ಮನೆಗೂ ಹೋಗದೇ, ಕಾಣೆಯಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ : 126/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-08-2022 10:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080