ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

 • ಮಣಿಪಾಲ: ಪಿರ್ಯಾದಿ ಜ್ಯೋತಿ ಇವರು ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ನೇತಾಜಿನಗರ ಎಂಬಲ್ಲಿ ತನ್ನ  ಅತ್ತೆಯೊಂದಿಗೆ ವಾಸವಾಗಿದ್ದು, ಅವರ ತಮ್ಮ 1 ನೇ ಆರೋಪಿ ಗಣೇಶ ಎಂಬಾತನು ಆತನ ತಂಗಿ, ತಮ್ಮ ಹಾಗೂ ತಾಯಿಯೊಂದಿಗೆ ಪಿರ್ಯಾದಿದಾರರ ಮನೆಯ ಹತ್ತಿರದಲ್ಲಿ ಬೇರೆ ಮನೆಯಲ್ಲಿ ವಾಸವಾಗಿರುವುದಾಗಿದೆ. ದಿನಾಂಕ:11.08.2021 ಪಿರ್ಯಾದಿದಾರ ಗಂಡನ ತಮ್ಮನ ಹೆಂಡತಿಯ ತಂದೆ ಮುನಿಯನ್ ಎಂಬವರು ಅಸೌಖ್ಯದಿಂದ ಪಿರ್ಯಾದಿದಾರ ಮನೆಯಲ್ಲಿ ಮರಣ ಹೊಂದಿದ್ದು, ದಿನಾಂಕ 12.08.2021 ರಂದು ಅವರ ಅಂತ್ಯ ಕ್ರಿಯೆ ನಡೆದಿದ್ದು ಅದೇ ದಿನ ಸಂಜೆ 7 ಗಂಟೆಗೆ 1 ನೇ ಆರೋಪಿ ಗಣೇಶ್   2ನೇ ರಾಕೇಶ 3ನೇ ಶರತ್ ಮತ್ತು 4 ನೇ ನಾಗರಾಜ ಸಾಲಿಯಾನ್ ಆರೋಪಿಗಳೊಂದಿಗೆ ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿಕೊಂಡು ಬಂದು 1 ನೇ ಆರೋಪಿಯ ತಂಗಿ ಲಕ್ಷ್ಮಿಯನ್ನು ಉದ್ದೇಶಿಸಿ ಅವಾಚ್ಯವಾಗಿ ಬೈದು ಮರದಗಾರೆ ಕೋಲಿನಿಂದ ಲಕ್ಷ್ಮಿಯ ಕೈ ಹಾಗೂ ಕಾಲಿಗೆ ಹೊಡೆದಿದ್ದು ಆಗ ಪಿರ್ಯಾದಿದಾರರು ತಡೆಯಲು ಹೋದಾಗ 1 ನೇ ಆರೋಪಿಯು ಪಿರ್ಯಾದಿದಾರರಿಗೆ ಹೊಡೆಯಲು ಬಂದಿದ್ದು, ಆಗ ಪಿರ್ಯಾದಿದಾರರು ಮನೆಯ ಒಳಗೆ ಓಡಿಗಾಗ 1 ನೇ ಆರೋಪಿಯು ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ ಮರದ ಕೋಲಿನಿಂದ ಪಿರ್ಯಾದಿದಾರರ ಎಡ ಮಾಲಿನ ಮೊಣಗಂಟಿನ ಬಳಿ ಹೊಡೆದಿರುತ್ತಾನೆ. ಆಗ ಪಿರ್ಯಾದಿದಾರರ ಮೈದುನನ ಹೆಂಡತಿ ಗೀತಾ ತಡೆಯಲು ಅಡ್ಡ ಬಂದಾಗ 1 ನೇ ಆರೋಪಿಯು ಗೀತಾರವರ ಕೆನ್ನೆಗೆ ಕೈಯಿಂದ ಹೊಡೆದು ಕುತ್ತಿಗೆಗೆ ಕೈ ಹಾಕಿ ದೂಡಿ ಹಾಕಿರುತ್ತಾನೆ. ಆಗ ಪಿರ್ಯಾದಿದಾರರ ಮೈದುನ ರಮೇಶ ಹಾಗೂ ಅವರ ಮಗ  ಪ್ರತಾಪ ತಡೆಯಲು ಬಂದಾಗ 1 ನೇ ಆರೋಪಿಯು ರಮೇಶನವರಿಗೆ ಕೈಯಿಂದ ಎದೆಗೆ ಗುದ್ದಿ ಎಡ ಭುಜಕ್ಕೆ ಕಚ್ಚಿರುತ್ತಾನೆ.  ಉಳಿದ ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಅಲ್ಲದೇ 1 ನೇ ಆರೋಪಿಯು ಪಿರ್ಯಾದಿದಾರರನ್ನುದ್ದೇಶಿಸಿ ಈಗ ಬಚಾವಾಗಿದ್ದೀರ ಮುಂದಕ್ಕೆ ಸರಿಯಾಗಿ ನನ್ನ ಸಿಕ್ಕಿ ನಿಮಗೆ ಗತಿ ಕಾಣಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ. ಈ ಹಲ್ಲೆಯಿಂದ ಪಿರ್ಯಾದಿದಾರರಿಗೆ ಎಡ ಕಾಲಿನ ಬಳಿ ರಕ್ತಗಾಯವಾಗಿದ್ದು, ರಮೇಶನವರಿಗೆ ಎಡ ಭುಜದ ಬಳಿ ಕಚ್ಚಿದ ಗಾಯ ಹಾಗೂ ಎದೆಗೆ ಗುದ್ದಿದ ನೋವಾಗಿರುತ್ತದೆ. ಲಕ್ಷ್ಮಿಗೆ ಕೈಗೆ ಮತ್ತು ಕಾಲಿಗೆ ನೋವಾಗಿರುತ್ತದೆ. ಪಿರ್ಯಾದಿದಾರರು ಹಾಗೂ ರಮೇಶನವರು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021 ಕಲಂ:447,448,504,323,324,354,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಪಘಾತ ಪ್ರಕರಣ

 • ಬೈಂದೂರು: ಫಿರ್ಯಾದಿ ಬಿ ಮಂಜುನಾಥ ಶೇರಿಗಾರ ಇವರು ದಿನಾಂಕ; 31/07/2021 ರಂದು ಕೆಲಸ ಮುಗಿಸಿ ಉಪ್ಪುಂದದ ಅಂಬಾಗಿಲಿನಿಂದ ರಾಹೆ 66ರಲ್ಲಿ ಅವರ ಬಾಬ್ತು ಕೆಎ 25 ಬಿ 5891ನೇ ಮೋಟಾರ್ ಸೈಕಲ್ ನಲ್ಲಿ ಸಮಯ ಸುಮಾರು ಸಂಜೆ 04:30 ಗಂಟೆಗೆ ಉಪ್ಪುಂದ ಗ್ರಾಮದ ಶಾಲೆ ಬಾಗಿಲು ಸಂಕಸ್ಟಿ ಸೂಪರ್ ಮಾರ್ಕೆಟ್ ಎದುರು ರಾಹೆ 66 ಪಶ್ಚಿಮ ಬದಿಯಲ್ಲಿ ಬರುತ್ತಿರುವಾಗ ಕುಂದಾಪುದಿಂದ ಬೈಂದೂರು ಕಡೆಗೆ ಕೆಎ 47 ಎಮ್ 5648 ನೇ ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಫಿರ್ಯಾದಿದಾರರ ಮೋಟಾರ್ ಸೈಕಲನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ ಮೋಟಾರ್ ಸೈಕಲ್ ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಫಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಫಿರ್ಯಾದಿದಾರರಿಗೆ ಎಡಬದಿಯ ಬೆನ್ನು, ಬಲಕೈಯ ಮಣಿಕಟ್ಟಿಗೆ, ಎಡಕಾಲಿನ ಮಂಡಿಗೆ ತರಚಿದ ಗಾಯ ಹಾಗೂ ಎಡಕಾಲಿನ ಪಾದದ ಗಂಟಿನ ಮೂಳೆ ಜಖಂಗೊಂಡಿದ್ದು, ಗಾಯಗೊಂಡ ಫಿರ್ಯಾದಿದಾರರನ್ನು ಅವರ ಪರಿಚಯದ ಮಂಜುನಾಥ, ಸುಬ್ರಾಯರವರು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಪಡೆದು ಮನೆಯಲ್ಲಿದ್ದು, ನಂತರ ದಿನಾಂಕ; 11/08/2021 ರಂದು ಫಿರ್ಯಾದಿದಾರರಿಗೆ ಎಡಕಾಲಿನ ಪಾದದ ಗಂಟಿಗೆ ನೋವು ಕಾಣಿಸಿಕೊಂಡಿದ್ದರಿಂದ ಚಿನ್ಮಯಿ ಆಸ್ಪತ್ರೆಗೆ ಬಂದು ವೈದ್ಯರಲ್ಲಿ ತೋರಿಸಿದ್ದು ವೈದ್ಯರ ಸಲಹೆಯಂತೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ:.279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ : ಬ್ರಹ್ಮಾವರ ತಾಲೂಕು ಹೆಗ್ಗುಂಜೆ  ಗ್ರಾಮದ, ಮಂದಾರ್ತಿ ಎಂಬಲ್ಲಿರುವ ಶ್ರೀ ಹರ್ಷ ಎಂಬ ಮನೆಯಲ್ಲಿ ಪಿರ್ಯಾದಿ ಪದ್ಮಾವತಿ ಇವರು ತನ್ನ ಮಗನಾದ ಹರ್ಷ ಆಚಾರ್ಯ, ಪ್ರಾಯ: 33 ವರ್ಷ, ಎಂಬವರೊಂದಿಗೆ ವಾಸವಾಗಿರುವುದಾಗಿದೆ. ಹರ್ಷ ಆಚಾರ್ಯ ರವರು 2019 ರಲ್ಲಿ ಲಂಡನ್‌ಗೆ ತೆರಳಿ ಅಲ್ಲಿ ಪ್ರೊಜೆಕ್ಟ್ ಕೆಲಸ ಮಾಡಿಕೊಂಡಿದ್ದು, 2020 ರಲ್ಲಿ Lockdown ಇದ್ದುದರಿಂದ ಜುಲೈಯಲ್ಲಿ ಊರಿಗೆ ಬಂದು ಪ್ರಸ್ತುತ ಮನೆಯಲ್ಲಿಯೇ Work from home ಕೆಲಸ ಮಾಡಿಕೊಂಡಿರುವುದಾಗಿದೆ. ಅವರು Project ವಿಚಾರದಲ್ಲಿ ಕಷ್ಟ ಆಗುತ್ತಿರುವ ಬಗ್ಗೆ ಪಿರ್ಯಾದಿದಾರರಲ್ಲಿ ಹಾಗೂ ಅವರ ದೊಡ್ಡ ಅಕ್ಕನ ಹತ್ತಿರ ಹೇಳುತ್ತಿದ್ದು, ಆಗ ಕೆಲಸ ಬಿಡು ಅಂತ ಹೇಳಿದ್ರು ಕೆಲಸ ಮಾಡುತ್ತಿದ್ದರು,  ಆದರೆ ಈ ದಿನ ದಿನಾಂಕ 13.08.2021 ರಂದು ಬೆಳಿಗ್ಗೆ 10:45 ಗಂಟೆಯಿಂದ ಮಧ್ಯಾಹ್ನ 1:50 ಗಂಟೆಯ ಮಧ್ಯಾವಧಿಯಲ್ಲಿ ಹರ್ಷ ಆಚಾರ್ಯ ರವರು ಕೆಲಸ ಮಾಡುತ್ತೇನೆಂದು ಮನೆಯ ತಾರಸಿ ಮೇಲಿರುವ ರೂಮಿಗೆ ಹೋದವರು ರೂಮಿನ ಫ್ಯಾನಿಗೆ ಟಿಲಿಫೋನ್ Cable wire ಕಟ್ಟಿ ಕುತ್ತಿಗೆಗೆ ಬಿಗಿದುಕೊಂಡು ನೇತಾಡುತ್ತಿದ್ದವರನ್ನು, wire ಕಟ್ಟಮಾಡಿ ಕೆಳಗಿಳಿಸಿದ್ದು, ಮೈ ಬಿಸಿ ಇದ್ದುದರಿಂದ ಚಿಕಿತ್ಸೆ ಬಗ್ಗೆ ಮಂದಾರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಮಧ್ಯಾಹ್ನ 2:30 ಗಂಟೆಗೆ ಹೋದಲ್ಲಿ ವೈಧ್ಯರು ಪರಿಶೀಲಿಸಿ ಹರ್ಷ ಆಚಾರ್ಯ ರವರು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದ . ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ  47/2021  ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಗಾಂಜಾ ಪ್ರಕರಣ  

 • ಪಡುಬಿದ್ರಿ: ದಿಲೀಪ್ ಜಿ ಆರ್, ಪೊಲೀಸ್ ಉಪನಿರೀಕ್ಷಕರು(ಕಾ.ಸು) ಪಡುಬಿದ್ರಿ ಪೊಲೀಸ್ ಠಾಣೆ. ಇವರು ದಿನಾಂಕ: 13.08.2021 ರಂದು ಠಾಣೆಯಲ್ಲಿರುತ್ತಾ, ಬೆಳಿಗ್ಗೆ 11:45 ಗಂಟೆಗೆ ಬಾತ್ಮೀದಾರರೊಬ್ಬರು ಕರೆ ಮಾಡಿ, ನಿಟ್ಟೆ ಕಡೆಯಿಂದ ಪಡುಬಿದ್ರಿ ಕಡೆಗೆ KA-04-MJ -6329 ನೇ ನಂಬ್ರದ ಕೆಂಪು ಬಣ್ಣದ ಕಾರಿನಲ್ಲಿ ವ್ಯಕ್ತಿಯೊಬ್ಬನು ಮಾದಕ ವಸ್ತುವನ್ನು ಹಿಡಿದುಕೊಂಡು ಬರುತ್ತಿರುವುದಾಗಿ ನೀಡಿದ ಖಚಿತ ಮಾಹಿತಿಯಂತೆ, ಈ ಬಗ್ಗೆ ಮಾನ್ಯ ಪೊಲೀಸ್ ಅಧಿಕ್ಷಕರು ಉಡುಪಿ ಜಿಲ್ಲೆ ರವರಿಂದ ಅನುಮತಿ ಪಡೆದುಕೊಂಡು, ಪತ್ರಾಂಕಿತ ಅಧಿಕಾರಿಯಾದ ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಪಂಚಾಯತುದಾರರು ಹಾಗೂ ಠಾಣಾ ಸಿಬ್ಬಂದಿಗಳನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಹೊರಟು, ಕಾಪು ತಾಲೂಕು ಪಾದೆಬೆಟ್ಟು ಗ್ರಾಮದ  ಪಾದೆಬೆಟ್ಟು ಶ್ರೀ ಸುಬ್ರಹ್ಮಣ್ಯ  ದೇವಸ್ಥಾನಕ್ಕೆ ಹೋಗುವ ಸ್ವಾಗತ ಗೋಪುರದ ಹತ್ತಿರ ಪಡುಬಿದ್ರಿ – ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಕಾರ್ಕಳ ಕಡೆಯಿಂದ ಬರುತ್ತಿರುವ ವಾಹನಗಳನ್ನು ತಪಾಸಣೆ ಮಾಡುತ್ತಾ, 12:15 ಗಂಟೆಗೆ ಕಾರ್ಕಳ ಕಡೆಯಿಂದ ಬಂದ KA-04-MJ -6329 ನೇ ನಂಬ್ರದ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಲಾಗಿ ಕಾರಿನ ಡಿಕ್ಕಿಯಲ್ಲಿ ಕಪ್ಪು  ಟೇಪ್ ನಿಂದ  ಸುತ್ತಿರುವ ಒಂದು ಪ್ಲಾಸ್ಟಿಕ್ ಕವರ್ ನ ಕಟ್ಟು ಇದ್ದು, ಅದರಲ್ಲಿ ಬೇರೆ ಬೇರೆ ತೂಕದ 20 ಪ್ಯಾಕೇಟ್‌‌ಗಳಿದ್ದು, ಅವುಗಳಲ್ಲಿ ಎಲೆ, ಮೊಗ್ಗು, ದಂಟು, ಕಾಂಡ  ಮಿಶ್ರಿತ ಗಾಂಜಾದಂತ  ತೇವಭರಿತವಾದ  ವಸ್ತು ಇದ್ದು, ಅದರ ತೂಕ 356.190 ಗ್ರಾಂ ಇದ್ದು, ಅದರ ಅಂದಾಜು  ಮೌಲ್ಯ  17,810   ರೂಪಾಯಿ ಆಗಿರುತ್ತದೆ. ಮತ್ತು ಇನ್ನೊಂದು ಪಾರದರ್ಶಕ ಪ್ಲಾಸ್ಟಿಕ್ ಪ್ಯಾಕೆಟ್‌‌ನಲ್ಲಿ 61.430  ಗ್ರಾಂ ತೂಕ ಇರುವ ಬಿಳಿ  ಬಣ್ಣದ  ಪೌಡರ್ ಇದ್ದು, ಅದನ್ನು ಅಮಲು ಪದಾರ್ಥ ಎಂದು ಆರೋಪಿ ಅಬ್ದುಲ್  ರಹಿಮಾನ್,  ಪ್ರಾಯ:  49 ವರ್ಷ, ತಂದೆ:  ಆಲಿಯಬ್ಬ, ವಾಸ: ರಜಾಕ್   ಮಂಜಿಲ್,  ಬೋರ್ಗಲ್ ಗುಡ್ಡೆ,  ನಿಟ್ಟೆ  ಅಂಚೆ  ಮತ್ತು  ಗ್ರಾಮ,  ಕಾರ್ಕಳ   ತಾಲೂಕು,  ಉಡುಪಿ ಜಿಲ್ಲೆ, ಈತನು ತಿಳಿಸಿದ್ದು, ಅದರ ಅಂದಾಜು ಮೌಲ್ಯ 2,000/- ರೂಪಾಯಿ ಆಗಿರುತ್ತದೆ. ಮೇಲಿನ ವಸ್ತುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ತೆಗೆದುಕೊಂಡು ಬಂದಿರುವುದಾಗಿ ತಿಳಿಸಿದಂತೆ, ಆರೋಪಿಯನ್ನು ದಸ್ತಗಿರಿಗೊಳಿಸಿ, ಅವನ ವಶದಲ್ಲಿದ್ದ ಗಾಂಜಾ, ಬಿಳಿ ಪೌಡರ್, 2 ಲಕ್ಷ ರೂ ಮೌಲ್ಯದ ಕಾರು ಹಾಗೂ  ರೂ. 5,000/- ಮೌಲ್ಯದ ಒಂದು ಮೊಬೈಲ್ ಫೋನ್ ಹಾಗೂ 720 ರೂಪಾಯಿನಗದುಇರುವಕಪ್ಪ ಬಣ್ಣದ ಹಳೆಯ ಪರ್ಸ್‌-1 ನ್ನು ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2021 ಕಲಂ 8(c), 20(b), NDPS Act ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 14-08-2021 10:20 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080