ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕೊಲ್ಲೂರು: ಪಿರ್ಯಾದಿದಾರರಾದ ಶ್ರೀನಿವಾಸ ಆಚಾರಿ (39) ,ತಂದೆ: ದಾಮೋದರ ಆಚಾರಿ ವಾಸ: ನಾಗದ್ದೆ ಮನೆ ,ಮುದೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 13/08/2021 ರಂದು ಸಂಜೆ 5:30 ಗಂಟೆಗೆ ಚಿತ್ತೂರು ಗ್ರಾಮದ ಅಡಾರಬೆಟ್ಟು ಚಿತ್ತೂರು - ಕೆರಾಡಿ ಮುಖ್ಯರಸ್ತೆಯಲ್ಲಿ ಡಾ: ಅತುಲ್‌ ಕುಮಾರ್‌ ಶೆಟ್ಟಿಯವರ ಮನೆ ಬಳಿ ಕೆಲಸದ ನಿಮಿತ್ತ ನಡೆದುಕೊಂಡು ಹೋಗುತ್ತಿದಾಗ ಕೆರಾಡಿ ಕಡೆಯಿಂದ ಚಿತ್ತೂರು ಕಡೆಗೆ ಆರೋಪಿ ಗೂಡ್ಸ್‌ ರಿಕ್ಷಾ ಚಾಲಕ ಉದಯ ಪೂಜಾರಿ ತನ್ನ KA 20 AA 9643 ನೇ APPE ಗೂಡ್ಸ್‌ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಡಾ: ಅತುಲ್‌ ಕುಮಾರ್‌ ಶೆಟ್ಟಿ ಯವರ ಮನೆ ಸಮೀಪ ಕಂಪೌಂಡ ಬಳಿ ತೀರಾ ಬಲ ಬದಿಗೆ ಚಲಾಯಿಸಿ ಕೆರಾಡಿ ಕಡೆಯಿಂದ ಚಿತ್ತೂರು ಕಡೆಗೆ ಆನಂದ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA 20 EM 1493 ನೇ ಹಿರೋ ಡಿಲಕ್ಸ್‌ ಮೋಟಾರು ಸೈಕಲ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್‌ ಸವಾರ ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು ಆತ ತಲೆಗೆ ಧರಿಸಿದ ಹೆಲ್ಮೆಟ್ ಜಾರಿ ಹೋಗಿ ತಲೆಗೆ ತೀವ್ರ ಸ್ವರೂಪದ ರಕ್ತಗಾಯಗೊಂಡು ಪ್ರಜ್ಙಾ ಹೀನ ಸ್ಥಿತಿಯಲ್ಲಿದ್ದವರನ್ನು ಚಿಕಿತ್ಸೆ ಬಗ್ಗೆ ಅಂಬುಲೆನ್ಸ್‌ ವಾಹನದಲ್ಲಿ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರಿಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆ ಅಗತ್ಯವಿರುವುದಾಗಿ ಸೂಚಿಸಿದಂತೆ ಮಣೆಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದು ಅಲ್ಲಿ ವೈದ್ಯರು ಪರೀಕ್ಷೀಸಿ ಚಿಕಿತ್ಸೆ ನೀಡುತ್ತಿರುವಾಗ ಸಂಜೆ 7:30 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ: 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 14-08-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080