ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಕಾಶ್ ದೇವಾಡಿಗ (33), ತಂದೆ: ರಾಮ ದೇವಾಡಿಗ, ವಾಸ: ಹಾಡಿ ಮನೆ ಹೇನ್ ಬೇರು ಪಡುವರಿ ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 12/07/2022 ರಂದು ಬಾಡಿಗೆ ಬಗ್ಗೆ ಅವರ ಕಾರಿನಲ್ಲಿ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹೋಗಿ, ರಾತ್ರಿ 10:30 ಗಂಟೆಗೆ ಬಾಡಿಗೆ ಮುಗಿಸಿ ಮನೆಗೆ ಬಂದಿದ್ದು, ದಿನಾಂಕ 13/07/2022 ರಂದು ಬೆಳಿಗ್ಗೆ 7:30 ಗಂಟೆಗೆ ಅವರ ಕಾರಿನಲ್ಲಿ ಬಾಡಿಗೆಯ ಬಗ್ಗೆ ಬೈಂದೂರು ರೈಲ್ವೆ ನಿಲ್ದಾಣಕ್ಕೆ ಹೋಗುತ್ತಿರುವಾಗ ಪಡುವರಿ ಗ್ರಾಮದ ಹೇನ್ ಬೇರು ಶಾಲೆ ರಸ್ತೆಯ ರಾಮಕೃಷ್ಣ ದೇವಾಡಿಗರವರ ಜಾಗದ ಬಳಿ ಅರಣ್ಯ ಇಲಾಖೆಯ ಜಾಗದ ರಸ್ತೆಯ ಎಡಭಾಗದಲ್ಲಿ ಒಂದು ಕಾರು ಸಂಪೂರ್ಣ ಸುಟ್ಟು ಹೋದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಪಿರ್ಯಾದಿದಾರರು ಅವರ ಸ್ನೇಹಿತನೊಂದಿಗೆ ಹೋಗಿ ಕಾರನ್ನು ನೋಡಿದಾಗ Ford ಕಂಪೆನಿಯ Ikon ಕಾರಾಗಿದ್ದು, ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಕಾರಿನ ಹಿಂಬದಿಯ ಸೀಟಿನ ಬಲಭಾಗದಲ್ಲಿ ಒಂದು ಅಪರಿಚಿತ ವ್ಯಕ್ತಿಯ ಮೃತಶರೀರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಂಡು ಬಂದಿದ್ದು, ಕಾರಿನ ಎಲ್ಲಾ ಡೋರ್ ಗಳು ಲಾಕ್ ಆಗಿದ್ದು, ಕಾರಿನ ಕೀ ಕಂಡು ಬಂದಿರುವುದಿಲ್ಲ. ಕಾರಿನ ಸ್ವಲ್ಪ ದೂರದಲ್ಲಿ ಪೆಟ್ರೋಲ್ ವಾಸನೆ ಬರುವ 2 ಲೀಟರ್ ನ ಪ್ಲಾಸ್ಟಿಕ್ ಬಾಟಲಿ ಬಿದ್ದು ಕೊಂಡಿರುತ್ತದೆ.  ದಿನಾಂಕ 12/07/2022ರ ರಾತ್ರಿ 10:30 ಗಂಟೆಯಿಂದ ದಿನಾಂಕ 13/07/2022ರ ಬೆಳಿಗ್ಗೆ 7:30 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ವ್ಯಕ್ತಿಗಳು ಯಾರನ್ನೋ ಕೊಲೆ ಮಾಡಿ, ಕಾರಿನಲ್ಲಿ ಹಾಕಿ, ನಿರ್ಜನ ಪ್ರದೇಶದಲ್ಲಿ ಕಾರನ್ನು ಇರಿಸಿ, ಕಾರಿನ ಎಲ್ಲಾ ಡೋರ್ ಗಳನ್ನು ಲಾಕ್ ಮಾಡಿ, ಕಾರಿಗೆ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿ ಸುಟ್ಟು ಹಾಕಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 140/2022 ಕಲಂ: 302, 201 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-07-2022 09:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080