ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿ ಸುಜನ್ ಕುಮಾರ್ ಪ್ರಾಯ 23 ವರ್ಷ, ತಂದೆ: ಸುಬ್ಬಯ್ಯ ಪೂಜಾರಿ, ವಾಸ:ಗುರುಕೃಪಾ ಹನೆಹಿತ್ಲು ಹೌಸ್,ಕಟ್ಟು ಹೆಮ್ಮಾಡಿ ,ಕುಂದಾಪುರ  ಇವರು ದಿನಾಂಕ:14-07-2022ರಂದು ತನ್ನ ಸ್ನೇಹಿತ ವರುಣ್ ನೊಂದಿಗೆ KA20EC5588ನೇ ಮೋಟಾರು ಸೈಕಲ್ ನಲ್ಲಿ ಸಹಸವಾರನಾಗಿ  ಬನ್ನಂಜೆ ಕಡೆಯಿಂದ ಬ್ರಹ್ಮಗಿರಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 11-30 ಗಂಟೆಗೆ ಬ್ರಹ್ಮಗಿರಿ ಕ್ಯಾಸೆಲ್  ಫ್ಲಾಟ್ ನ ಎದುರುಗಡೆ ಹಾದು ಹೋಗಿರುವ ಸಾರ್ವಜನಿಕ ರಸ್ತೆ ತಲುಪುವಾಗ ಶ್ಯಾಮಿಲಿ ಕಡೆಯಿಂದ KA20ME0050 ನೇ ಕಾರಿನ ಚಾಲಕ ಹರೀಶ್ ಎಂಬಾತನು ತನ್ನ ಕಾರನ್ನು ಒಮ್ಮಲೇ ಬನ್ನಂಜೆ - ಬ್ರಹ್ಮಗಿರಿ ಮುಖ್ಯ ರಸ್ತೆಗೆ ಚಲಾಯಿಸಿದ್ದು,ಅದೇ ಸಮಯ ಬ್ರಹ್ಮಗಿರಿ ಕಡೆಯಿಂದ ಬನ್ನಂಜೆ ಕಡೆಗೆ ಹೋಗುತ್ತಿದ್ದ ಓಂಕಾರ ರವರು ಚಲಾಯಿಸುತ್ತಿದ್ದ KA20P6019ನೇ ಕಾರಿಗೆ ಡಿಕ್ಕಿ ಹೊಡೆದನು ಪರಿಣಾಮ KA20P6019ನೇ ಕಾರಿನ ಚಾಲಕ ಓಂಕಾರ ರವರ ನಿಯಂತ್ರಣ ತಪ್ಪಿ ಪಿರ್ಯಾದಿದಾರರು ಮತ್ತು ವರುಣ್ ರವರು ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರು ಸೈಕಲ್ ಗೆ ಡಿಕ್ಕಿ ಹೊಡೆದಿದ್ದು,ಪರಿಣಾಮ ಪಿರ್ಯಾದಿದಾರರು ಮತ್ತು ಸವಾರ ವರುಣ್‌ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು, ಪಿರ್ಯಾದಿದಾರರಿಗೆ ಎಡಕಾಲಿನ ಹೆಬ್ಬೆರಳಿಗೆ ಮೂಲೆ ಮುರಿತದ ಜಖಂ ಮತ್ತು ವರುಣ್ ರವರ ಬಲಕೈಗೆ ಮೂಳೆಮುರಿತದ ಗಂಭೀರ ಸ್ವರೂಪದ ಎಡಕೈಯ ಮೊಣಗಂಟಿನ ಬಳಿ, ಎಡ ಕಾಲಿನ ಗಂಟಿನ ಬಳಿ ಹಾಗೂ ಹಣೆಗೆ ರಕ್ತಗಾಯವಾಗಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಅಫಗಾತಕ್ಕೆ KA20ME0050 ನೇ ಕಾರಿನ ಚಾಲಕ ಹರೀಶ್ ಮತ್ತು KA20P6019 ನೇ ಕಾರಿನ ಚಾಲಕ ಓಂಕಾರ ರವರ ದುಡುಕುತನ ಮತ್ತು ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ  ಉಡುಪಿ ಸಂಚಾರ ಪೊಲೀಸ್‌ ಠಾಣೆ  ಅಪರಾಧ ಕ್ರಮಾಂಕ  55/2022 ಕಲಂ: 279, 337,338 ಐ.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ ನೊರ್ಮಾನ್‌ ಪೌಲ್‌ ಲೂವಿಸ್‌ (43) ತಂದೆ: ದಿ| ಲಾರೆನ್ಸ್‌ ಲೂವಿಸ್‌, ವಾಸ: ಮನೆ ನಂ 4-250 (1), ಮಾಷಲ್‌, ತೆಂಕಬೆಟ್ಟು, ಇವರ ಅಣ್ಣನ ಮನೆಯಲ್ಲಿ ಪಿರ್ಯಾದಿದಾರರು ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ವಾಸವಾಗಿದ್ದು, ದಿನಾಂಕ: 13.07.2022 ರಂದು ಸಂಜೆ ಮನೆಯಲ್ಲಿ ಎಲ್ಲಾರು ಮಾತನಾಡಿಕೊಂಡಿದ್ದಾಗ, ಪಿರ್ಯಾದಿದಾರರ ಮಗನಾದ ಲೊರೆನ್‌ ಗ್ಯಾವಿನ್‌ ಲೂವಿಸ್‌ (ಪ್ರಾಯ: 5 ವರ್ಷ) ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದು,  ಆ ಸಮಯ ಮಳೆ ಗಾಳಿ ಜೋರು ಬಂದಾಗ ಸಂಜೆ 5:15 ಗಂಟೆಯ  ಸಮಯಕ್ಕೆ ಆಟವಾಡುತ್ತಿದ್ದವನು ಕಾಣಿಸದೇ ಇದ್ದು, ನಂತ್ರ ಹುಡುಕುತ್ತಿದ್ದಾಗ ಸಂಜೆ 5:30 ಗಂಟೆಯ ಸಮಯಕ್ಕೆ  ಮನೆಯ ಹಿಂಭಾಗದ ತೋಟದ ಕೆರೆಯಲ್ಲಿ  ಮಗು ಮುಳುಗಿ ಏಳುತ್ತಿದ್ದುದನ್ನು ನೋಡಿ, ನೀರಿನಿಂದ ಮೇಲಕ್ಕೆತ್ತಿ, ಕೂಡಲೇ ಚಿಕಿತ್ಸೆ ಬಗ್ಗೆ ಉಡುಪಿ ಹೈಟೆಕ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಸಂಜೆ 7:15 ಗಂಟೆಗೆ ಪರೀಕ್ಷಿಸಿದ ವೈಧ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಲೊರೆನ್‌ ಗ್ಯಾವಿನ್‌ ಲೂವಿಸ್‌ ಆಟವಾಡುತ್ತಾ ಮನೆಯ ಹಿಂಭಾದ ಕೆರೆಯ ಬಳಿ ಹೋದಾಗ ವಿಪರೀತ ಗಾಳಿ ಹಾಗೂ ಮಳೆಯ ಸೆಳತಕ್ಕೆ ಸಿಕ್ಕಿ ಆಕಸ್ಮಿಕವಾಗಿ ಆಯತಪ್ಪಿ, ಕಾಲು ಜಾರಿ ಕೆರೆಯ ನೀರಿನಲ್ಲಿ ಮುಳುಗಿ, ಉಸಿರುಗಟ್ಟಿ ಮೃತಪಟ್ಟಿರುವುದಾಗಿದೆ. ಅವನ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ  ಯುಡಿಆರ್ ನಂ. 31/2022 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 14-07-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080