ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಪಡುಬಿದ್ರಿ: ದಿನಾಂಕ 13/07/2021 ರಂದು ಮದ್ಯಾಹ್ನ 12:30 ಗಂಟೆಗೆ  ಎರ್ಮಾಳು ತೆಂಕ ಗ್ರಾಮದ ಸಿ ಎ ಬ್ಯಾಂಕ್ ಎದುರು ಪಿರ್ಯಾದಿದಾರರಾದ ಜಯಂತ್ ಕುಮಾರ್ (58),ತಂದೆ: ದಿ.ಕೃಷ್ಣಮೂರ್ತಿ ರಾವ್ , ಹೊಸಮುರುಡಿ ಮನೆ ಎಲ್ಲೂರು ಗ್ರಾಮ ನಂದಿಕೂರು ಕಾಪು ತಾಲೂಕು, ಉಡುಪಿ ಜಿಲ್ಲೆ ಇವರ ಚಿಕ್ಕಮ್ಮ ರತ್ನಾ ಭಟ್ ಎಂಬುವವರು  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಹಾದು ಹೋಗುವ ರಾಷ್ಟ್ರೀಯ  ಹೆದ್ದಾರಿ 66 ನ್ನು ದಾಟಲು ಡಿವೈಡರ್ ಬಳಿ  ರಸ್ತೆ ಬದಿಯಲ್ಲಿ ನಿಂತಿರುವ ಸಮಯ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-04-MF-2344  ನೇ ಮಾರುತಿ ಆಲ್ಟೋ ಕಾರು ಚಾಲಕ ದಿಪೇಶ್ ಬಂಗೇರ ಇವರು ಕಾರನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷವಾಗಿ ಚಲಾಯಿಸಿ ರಸ್ತೆ ಬದಿಯಲ್ಲಿ ನಿಂತಿದ್ದ ರತ್ನಾ ಭಟ್ ಇವರಿಗೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಕೈ ಕಾಲುಗಳಿಗೆ ಗಾಯಗೊಂಡವರನ್ನು ಅದೇ ಕಾರಿನಲ್ಲಿ ಆರೋಪಿ ದಿಪೇಶ್ ಬಂಗೇರ ಹಾಗೂ ಜೊತೆಯಲ್ಲಿದ್ದ ಸಚಿನ್ ಮತ್ತು ಶಶಾಂಕ್ ಎಂಬುವವರು ಸೇರಿ ಕಾಪು ಪ್ರಶಾಂತ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಅಂಬುಲೆನ್ಸ್ ಒಂದರಲ್ಲಿ ಉಡುಪಿ ಹೈ ಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ,ಗಂಭೀರ ಗಾಯಗೊಂಡು ಪ್ರಜ್ಙಾಹೀನರಾಗಿದ್ದ  ರತ್ನಾ ಭಟ್ ಇವರನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಗಾಯಾಳುವಿನ ಸಂಬಂದಿಕರಾದ ಪರಶುರಾಮ ವಿ ಆರ್  ರವರು ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸುವ ಸಮಯ ವೈದ್ಯರು ಪರೀಕ್ಷಿಸಿದಾಗ ಮದ್ಯಾಹ್ನ 2:40 ಗಂಟೆಗೆ  ಗಾಯಾಳು  ರತ್ನಾ ಭಟ್  ಮೃತಪಟ್ಟಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 279,   304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬೈಂದೂರು: ದಿನಾಂಕ 13/07/2021 ರಂದು ಪಿರ್ಯಾದಿದಾರರಾದ ಸಚಿನ್  ದೇವಾಡಿಗ (31), ತಂದೆ; ಈಶ್ವರ  ದೇವಾಡಿಗ, ವಾಸ; ಕಠಾರಿಮನೆ, ನಾಯ್ಕನಕಟ್ಟೆ, ಕೆರ್ಗಾಲ್  ಗ್ರಾಮ, ಬೈಂದೂರು  ತಾಲೂಕು ಇವರ ರಿಕ್ಷಾ ನಂಬ್ರ KA-20-C- 3378ನೇದರಲ್ಲಿ ಬಾಡಿಗೆ ಮಾತನಾಡಿಕೊಂಡು ಅವರ ಪರಿಚಯದ ಗೀತಾ ಮತ್ತು ಸವಿತಾರವರನ್ನು ಕರೆದುಕೊಂಡು ಕೊಲ್ಲೂರಿಗೆ ಹೋಗಲು ಹೊರಟಿದ್ದು, ಬೆಳಿಗ್ಗೆ 10:00 ಗಂಟೆಗೆ ವಸ್ರೆ ಮೈಕಳದಿಂದ ಸುಮಾರು ಒಂದು ಕೀ, ಮೀ ದೂರ ತಿರುವಿನಲ್ಲಿ ಹೋಗುವಾಗ ಎದುರಿನಿಂದ ತೂಫಾನ್ ಟ್ರಾಕ್ಸ್ ನಂಬ್ರ KA-35-N- 8857 ನೇದನ್ನು ಅದರ ಚಾಲಕನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ರಿಕ್ಷಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಸಂಪೂರ್ಣ ಜಖಂಗೊಂಡು ಪಿರ್ಯಾದಿದಾರರಿಗೆ ಬಲಗೈಗೆ ತೀವ್ರವಾದ ರಕ್ತಗಾಯವಾಗಿದ್ದು , ತೊಡೆಗೆ ತರಚಿದ ಗಾಯ ಹಾಗೂ ಎಡಕೈಗೆ ರಕ್ತಗಾಯವಾಗಿರುತ್ತದೆ. ರಿಕ್ಷಾದಲ್ಲಿದ್ದ ಗೀತಾ ಹಾಗೂ ಸವಿತಾ ರವರಿಗೆ ಮೈಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡವರು ಒಂದು ಖಾಸಗಿ ವಾಹನದಲ್ಲಿ ಬೈಂದೂರು ಅಂಜಲಿ ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ತೋರಿಸಿದ್ದಲ್ಲಿ ವೈದ್ಯರು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಯ ಬಗ್ಗೆ ವೈದರ ಸಲಹೆಯಂತೆ ಪಿರ್ಯಾದಿದಾರರು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಹಾಗೂ ಗೀತಾ ಮತ್ತು ಸವಿತಾರವರು ಕುಂದಾಪುರ ನ್ಯೂ ಮೆಡಿಕಲ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 118/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣಗಳು

 • ಕುಂದಾಪುರ: ದಿನಾಂಕ: 12/07/2021 ರಂದು ಪಿರ್ಯಾದಿದಾರರಾದ ಆದರ್ಶ (35), ತಂದೆ: ಶಂಕರ ದೇವಾಡಿಗ, ವಾಸ: ಶಂಕರ ನಿವಾಸ ಹರೆಗೋಡು ಕಟ್ ಬೇಲ್ತೂರು ಗ್ರಾಮ ಕುಂದಾಪುರ ತಾಲೂಕು ಇವರು 09:00 ಗಂಟೆಗೆ ಕೆಲಸದ ನಿಮಿತ್ತ ಕಾರ್ಕಳಕ್ಕೆ ಹೋಗಿದ್ದು ದಿನಾಂಕ 13/07/2021  ರಂದು ಕೆಲಸ  ಮುಗಿಸಿ ವಾಪಾಸು 22:30 ಗಂಟೆಗೆ ಮನೆಗೆ ಬಂದು ನೋಡುವಾಗ ಯಾರೋ ಕಳ್ಳರು ಮನೆಯ ಎದುರಿನ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ಲಾಕರ್ ಒಡೆದು ಲಾಕರ್ ನಲ್ಲಿ ಇರಿಸಿದ್ದ ಪಿರ್ಯಾದಿದಾರರ ಹಾಗೂ ಅವರ ಹೆಂಡತಿಯ ಒಡವೆ 2 ಪವನ್ ನ ಜುಮಕಿ ಬೆಂಡೋಲೆ ಸೆಟ್ -1 , 1½ ಪವನ್ ಮುತ್ತಿನ ಬೆಂಡೋಲೆ ಸೆಟ್ -1 , 3 ಪವನ್ ತೆಂಡೂಲ್ಕರ್ ಚೈನ್ -1, 1 ಪವನ್  ಡಿಸ್ಕೋ ಚೈನ್ -1, 3 ಪವನ್  ಬ್ರಾಸ್ ಲೈಟ್ -1, ½ ಪವನ್ ಹರಳು ಉಂಗುರ -1 . ½ ಪವನ್ ಉಂಗುರ -1 ವಾಚ್ -1 ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಸೊತ್ತಿನ ಒಟ್ಟು ಮೌಲ್ಯ ರೂಪಾಯಿ 4,66,000/-  ಆಗಿರುತ್ತದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021, ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 10/07/2021 ರಂದು ಪಿರ್ಯಾದಿದಾರರಾದ ತುಕಾರಾಮ ಭಟ್ (65), ತಂದೆ: ದಿ: ಗೋವಿಂದ ಭಟ್, ವಾಸ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿ ದೇವಿನಗರ, ಬಂಟಕಲ್, ಶಿರ್ವ ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರು ಪತ್ನಿ ಮತ್ತು ಮಗಳ ಚಿನ್ನದ ಆಭರಣಗಳನ್ನು 2  ಬ್ಯಾಗ್ ನಲ್ಲಿ ಬಟ್ಟೆಯ ಮಧ್ಯೆ ಇಟ್ಟು ಪತ್ನಿ ಮತ್ತು ಮಗಳೊಂದಿಗೆ ರೈಲಿನಲ್ಲಿ ಮಹಾರಾಷ್ಟ್ರದ ಥಾಣೆ ರೈಲ್ವೇ ಸ್ಟೇಷನ್ ನಿಂದ - ಉಡುಪಿಗೆ ಟಿಕೆಟ್ ನಂಬರ್ S-3  ರಲ್ಲಿ ಸೀಟ್ ನಂಬರ್  59, 61, 62 ರಲ್ಲಿ ಕುಳಿತುಕೊಂಡು ಚಿನ್ನಾಭರಣಗಳು ಇದ್ದ ಬ್ಯಾಗ್ ಗಳನ್ನು ರೈಲ್ವೇ ಸೀಟ್ ನ ಅಡಿಭಾಗದಲ್ಲಿ ಇಟ್ಟುಕೊಂಡು ರಾತ್ರಿ 10:45 ಗಂಟೆಗೆ ಹೊರಟಿದ್ದು, ರೈಲಿನಲ್ಲಿ ಪಿರ್ಯಾದಿದಾರರ ಪಕ್ಕದ ಸೀಟಿನಲ್ಲಿ ಇಬ್ಬರು ವ್ಯಕ್ತಿಗಳು ಕುಳಿತುಕೊಂಡಿದ್ದರು. ರೈಲು ಕರ್ನಾಟಕದ ಕುಮಟಾ ಬಳಿ ಬರುತ್ತಿದ್ದಾಗ ಜೋರಾಗಿ ಮಳೆ ಸುರಿಯಲು ಪ್ರಾರಂಬಿಸಿದ್ದು,  ಆಗ ಪಿರ್ಯಾದಿದಾರರು ಕುಳಿತಿದ್ದ ಪಕ್ಕದ ಸೀಟ್ ನಲ್ಲಿದ್ದ ಓರ್ವ ವ್ಯಕ್ತಿಯು ನಿಮ್ಮ ಬ್ಯಾಗ್ ಗೆ ಮಳೆ ನೀರು ಬೀಳುತ್ತದೆ ಅದನ್ನು ಮೇಲ್ಗಡೆ ಇಡುವುದೋ ಎಂದು ಕೇಳಿದಾಗ ಪಿರ್ಯಾದಿದಾರರು ಆಯಿತು ಇಟ್ಟುಬಿಡಿ ಎಂದು ಹೇಳಿದಾಗ ಆತನು ಬ್ಯಾಗ್ ನ್ನು ಮೇಲ್ಗಡೆ ಇಟ್ಟಿದ್ದು, ಪಿರ್ಯಾದಿದಾರರು ಆತನಲ್ಲಿ ನಿಮ್ಮೊಂದಿಗೆ ಇದ್ದ ಇನ್ನೊಬ್ಬ ವ್ಯಕ್ತಿ ಎಲ್ಲಿ ಅಂತ ಕೇಳಿದಾದ ಆತನು ಮಡ್ ಗಾಂ ನಲ್ಲಿ ಇಳಿದಿದ್ದಾನೆ ಎಂದು ಹೇಳಿ ನಂತರ ಆತನು ಭಟ್ಕಳ ರೈಲ್ವೇ ಸ್ಟೇಷನ್ ನಲ್ಲಿ ಇಳಿದು ಹೋಗಿರುತ್ತಾನೆ. ಆಗ ದಿನಾಂಕ 11/07/2021 ರ ಮದ್ಯಾಹ್ನ 12:00 ಗಂಟೆ ಸಮಯ ಆಗಿರುತ್ತದೆ. ಆತನು ಇಳಿದು ಹೋದ ನಂತರ ಸಂಶಯದಿಂದ ಪಿರ್ಯಾದಿದಾರರು ಬ್ಯಾಗ್ ಗಳನ್ನು ಚೆಕ್ ಮಾಡಿದಾಗ ಚಿನ್ನಾಭರಣಗಳು ಇಲ್ಲದೇ ಇದ್ದು, ರೈಲು ಚಲನೆಯಲ್ಲಿ ಇದ್ದ ಕಾರಣ ಪ್ರಯಾಣ ಮುಂದುವರೆಸಿ ಮನೆಗೆ ತೆರಳಿ ಪರಿಚಯದವರೊಂದಿಗೆ ಚರ್ಚಿಸಿ ಠಾಣೆಗೆ ಮಾಹಿತಿ ನೀಡುತ್ತಿರುವುದಾಗಿದೆ. ಒಟ್ಟು 169 ಗ್ರಾಂ ಚಿನ್ನದ ಆಭರಣಗಳು ಕಳವಾಗಿದ್ದು, ಅದರ ಮೌಲ್ಯ 6,76,000/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ:454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಸಚಿನ್ ಶೆಟ್ಟಿ.(31), ತಂದೆ: ರಮೇಶ್ ಶೆಟ್ಟಿ, ವಾಸ: ಪಾರಂಬೆಟ್ಟು ಹೌಸ್, ಪಲಿಮಾರು ಅಂಚೆ ಮತ್ತು ಗ್ರಾಮ, ಕಾಪು ತಾಲೂಕು ಇವರ ಸ್ನೇಹಿತರಾದ ಹೆಜಮಾಡಿ, ಎಲ್ಲೂರು ಗ್ರಾಮದ ಸೂರಜ್, ಕಿರಣ್, ತನುಜ್, ಕೃಷ್ಣ, ಶರತ್ ಶೆಟ್ಟಿ ಹಾಗೂ ಪಡುಬಿದ್ರಿಯ ಜಿತೇಂದ್ರ ಶೆಟ್ಟಿ ರವರನ್ನು ದಿನಾಂಕ 13/07/2021 ರಂದು ಪಾರ್ಟಿ ನೀಡುವ ಬಗ್ಗೆ ಕರೆದಿದ್ದು, ಅವರೆಲ್ಲಾ ಪಿರ್ಯಾದಿದಾರರ  KA-19-MC-6054 ನೇ ನಂಬ್ರದ ರಿಟ್ಜ್ ಕಾರಿನಲ್ಲಿ ಹಾಗೂ ಕೃಷ್ಣ ರವರ ಕಾರಿನಲ್ಲಿ ಪಡುಬಿದ್ರಿಯಿಂದ ಹೊರಟು 18:30 ಗಂಟೆಗೆ ಕಾಪು ತಾಲೂಕು ಪಲಿಮಾರು ಗ್ರಾಮದ ವಿಮಲ್ ಬಾರ್ ಅಂಡ ರೆಸ್ಟೋರಂಟ್ ತಲುಪಿ, ಅಲ್ಲಿ ಮದ್ಯಪಾನ ಮಾಡಿ ಪಾರ್ಟಿ ಮುಗಿಸಿ 19:45 ಗಂಟೆಗೆ ಬಾರಿನಿಂದ ಹೊರ ಬರುತ್ತಿದ್ದಂತೆ ಪಿರ್ಯಾದಿದಾರರಿಗೆ ಪರಿಚಯದ ಮಂಗಳೂರು ತಾಲೂಕು ಕರ್ನಿರೆ ಗ್ರಾಮದ ನಿವಾಸಿಗಳಾದ ಸಂಪತ್ ಶೆಟ್ಟಿ, ರಂಜಿತ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಅಭಿಜಿತ್ ಶೆಟ್ಟಿ, ದಿನೇಶ್ ಪುತ್ರನ್, ನಿತೇಶ್ ದೇವಾಡಿಗ, ಕೀರ್ತೇಶ್ ದೇವಾಡಿಗ, ದಿನೇಶ್, ನಿತೇಶ್, ಮೋಹಿತ್ ಹಾಗೂ ಇತರರು ಕೈಯಲ್ಲಿ ಬ್ಯಾಟ್, ಚೂರಿ, ಬಿಯರ್ ಬಾಟಲಿ, ಮರದ ಸೋಂಟೆಗಳನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದು, ಆರೋಪಿ ಸಂಪತ್ ಶೆಟ್ಟಿಯು ಜಿತೇಂದ್ರ ಶೆಟ್ಟಿಗೆ ಅವಾಚ್ಯವಾಗಿ ಬೈದು ಕೊಲ್ಲುವ ಉದ್ದೇಶದಿಂದ ಸೂರಜ್ ನ ಮರ್ಮಾಂಗಕ್ಕೆ ಕಾಲಿನಿಂದ ತುಳಿದುದಲ್ಲದೆ  ತಡೆಯಲು ಹೋದ ಶರತ್ ಶೆಟ್ಟಿಗೆ ರಂಜಿತ್ ಶೆಟ್ಟಿಯು ಆತನ ಕೈಯಲ್ಲಿದ್ದ ಚೂರಿಯಿಂದ ಕುತ್ತಿಗೆಗೆ ತಿವಿದಾಗ ತಪ್ಪಿಸಿರುವುದರಿಂದ ಚೂರಿಯ ಪೆಟ್ಟು ಎಡ ಕಣ್ಣಿನ ಬಳಿ ತಾಗಿ ಗಾಯವಾಗಿರುತ್ತದೆ. ಹಾಗೂ ಉಳಿದವರು ಕೈಯಿಂದ ಹೊಡೆದು ಕಾಲುಗಳಿಂದ ತುಳಿದಿರುತ್ತಾರೆ. ನಂತರ ಎರಡೂ ಕಡೆಯವರಿಗೆ ಪರಸ್ಪರ ಜಗಳವಾಗಿರುವುದರಿಂದ ಸಂಪತ್ ಶೆಟ್ಟಿ ಹಾಗೂ ರಂಜಿತ್ ಶೆಟ್ಟಿಯವರಿಗೂ ಗಾಯಗಳಾಗಿರುತ್ತದೆ. ಶರತ್ ಶೆಟ್ಟಿ ಹಾಗೂ ಸೂರಜ್ ರವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪಿರ್ಯಾದಿದಾರರು ಕಾರಿನ ಬಳಿ ಕರೆದುಕೊಂಡು ಹೋಗುವಾಗ ಆರೋಪಿತರು ಪಿರ್ಯಾದಿದಾರರ ಕಾರಿನ ಗ್ಲಾಸನ್ನು ಹುಡಿಮಾಡಿ ಹಾನಿ ಮಾಡಿದ್ದು, ಗಾಯಾಳು ಸೂರಜ್ ಮತ್ತು ಶರತ್ ಶೆಟ್ಟಿಯವರು ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 143, 147, 148, 504, 506, 323, 324, 307, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 14-07-2021 10:23 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080