ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಕೃಷ್ಣ ಮೂರ್ತಿ ಎಸ್‌.ಟಿ (55), ತಂದೆ: ದಿ| ತಿಮ್ಮಯ್ಯ, ವಾಸ: ಸಂಕೋಡನ ಹಳ್ಳಿ, ಜಾಜೂರು ಅಂಚೆ, ಅರಸೀಕೆರೆ ತಾಲೂಕು, ಹಾಸನ ಜಿಲ್ಲೆ ಎಂಬವರು 13 ವರ್ಷಗಳಿಂದ ಸಾಸ್ತಾನ – ಪಾಡೇಶ್ವರ ಎಂಬಲ್ಲಿ ತೆಂಗಿನ ನಾರಿನ ತರಭೇತಿ ಕೇಂದ್ರದಲ್ಲಿ  ಗುತ್ತಿಗೆ ಆಧಾರದಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಅವರು ದಿನಾಂಕ 13/07/2021  ರಂದು ಬ್ರಹ್ಮಾವರ ಎಸ್‌ಬಿಐ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವರೇ ಅವರ KA-20-W-1691 ನೇ ನಂಬ್ರದ ಟಿವಿಎಸ್ ಸ್ಕೂಟರ್‌ನಲ್ಲಿ  ಸಾಸ್ತಾನ ಕಡೆಯಿಂದ ಬ್ರಹ್ಮಾವರ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಬೆಳಿಗ್ಗೆ 11:30 ಗಂಟೆ ಸುಮಾರಿಗೆ ವಾರಂಬಳ್ಳಿ ಗ್ರಾಮದ, ಹಂದಾಡಿ ಕ್ರಾಸ್‌ನ ಧರ್ಮಾವರಂ ಆಡಿಟೋರಿಯಮ್ ಎದುರು ರಾಷ್ಟ್ರೀಯ ಹೆದ್ದಾರಿ 66 ರ ಎಡಬದಿಯ ಸರ್ವಿಸ್ ರಸ್ತೆಯಲ್ಲಿ ಹೋಗುವಾಗ ಅವರ ಸ್ಕೂಟರ್‌ನ ಎಡಬದಿಯಲ್ಲಿ ಆರೋಪಿ ಮೋಹನದಾಸ್‌ ಶೆಟ್ಟಿ ರವರು ತನ್ನ KA-20-P-8566 ನೇ ನಂಬ್ರದ ಹುಂಡೈ ವರ್ಣ ಕಾರನ್ನು ಬ್ರಹ್ಮಾವರ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೇ ಮಾಡಿ ಕಾರನ್ನು ನಿರ್ಲಕ್ಷತನದಿಂದ ಸ್ವಲ್ಪ ಬಲಕ್ಕೆ ಚಲಾಯಿಸಿದ ಪರಿಣಾಮ ಕೃಷ್ಣ ಮೂರ್ತಿ ಎಸ್‌.ಟಿ ಇವರು ಸವಾರಿ ಮಾಡುತ್ತಿದ್ದ ಸ್ಕೂಟರ್‌ನ ಎಡ ಹಿಂಬದಿಗೆ ಸದ್ರಿ ಕಾರಿನ ಎದುರು ಬಲ ಭಾಗ ಡಿಕ್ಕಿ ಆಗಿರುತ್ತದೆ. ಈ ಅಪಘಾತದಿಂದ ಸ್ಕೂಟರ್ ಸಮೇತ ರಸ್ತೆಯ ಮೇಲೆ ಬಿದ್ದು  ಅವರ ಎಡ ಭುಜಭುಜಕ್ಕೆ ಹಾಗೂ ಎಡತೊಡೆಗೆ ತೀವ್ರ ಮೂಳೆ ಮುರಿತದ ಒಳಜಖಂ ಆಗಿರುತ್ತದೆ. ಗಾಯಾಳು ಕೃಷ್ಣ ಮೂರ್ತಿ ಎಸ್‌.ಟಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಪ್ರಣವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ವೈಧ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆ  ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 134/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಸದಾನಂದ (55) ತಂದೆ: ಲೋಕಯ್ಯ ಪೂಜಾರಿ ವಾಸ: ಪೂಂಜಾಜೆ ದರ್ಖಾಸ್ ಮನೆ ನೂರಾಳ್ ಬೆಟ್ಟು ಅಂಚೆ ಮತ್ತು  ಗ್ರಾಮ, ಕಾರ್ಕಳ ಇವರ ಮಗ ಸುರೇಶ್ ಪೂಜಾರಿ (24) ಇವರು ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಪೂಂಜಾಜೆ ದರ್ಖಾಸು ಮನೆಯಲ್ಲಿ ವಾಸ ಮಾಡಿಕೊಂಡಿದ್ದು, ಆತನ ತಾಯಿ ಮೃತಪಟ್ಟ ಬಳಿಕ ಮಾನಸಿಕವಾಗಿ ನೊಂದಿದ್ದು ಅದೇ ಕಾರಣದಿಂದ ಅಥವಾ ಬೇರೆ ಯಾವುದೋ ಕಾರಣದಿಂದ ಮನನೊಂದು ದಿನಾಂಕ 14/07/2021 ರಂದು 04:00 ಗಂಟೆಯಿಂದ 07:00  ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಎದುರಿನ ಪೇರಳೆ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದು ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಮೃತ ಶರೀರವನ್ನು ಮುಂದಿನ ಕ್ರಮದ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ, ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 23/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಸುಲಿಗೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಬೀಬಿಜಾನ್‌(52) ಗಂಡ: ದಾವುಲ್‌ಸಾಬ್‌ವಾಸ: ಕೇರ್‌ಆಫ್‌ ಗೋವಿಂದ, ಸಾಕೇತ್‌, ಮೂಡನಿಡಂಬೂರು ಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. ಖಾಯಂ ವಿಳಾಸ: ಮುಷ್ಟಿಗೇರಿ ಗ್ರಾಮ ಮತ್ತು ಅಂಚೆ, ಬಾದಾಮಿ ತಾಲೂಕು, ಬಾಗಲಕೋಟೆ ಇವರು ಹೋಟೇಲ್‌ ಹಾಗೂ ಮನೆಗಳಲ್ಲಿ ಪಾತ್ರೆ ತೊಳೆಯುವ ಕೆಲಸ ಮಾಡಿಕೊಂಡಿದ್ದು, ದಿನಾಂಕ 12/07/2021 ರಂದು ಸಂಜೆ ಎಂದಿನಂತೆ ಉಡುಪಿ ಸಾಯಿ ಲಾಡ್ಜ್‌ಗೆ ಪಾತ್ರೆ ಸ್ವಚ್ಚ ಮಾಡುವ ಕೆಲಸಕ್ಕೆ ಹೋಗಿ, ಕೆಲಸ ಮುಗಿಸಿ ರಾತ್ರಿ 10:45 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣದ ಕಡೆಯಿಂದ ಹೊರಟು ಪ್ರಗತಿ ನಗರ ರಸ್ತೆಯಲ್ಲಿ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಹಿಂಬದಿಯಿಂದ ಸುಮಾರು 20 ರಿಂದ 30 ವರ್ಷ ಪ್ರಾಯದ ಓರ್ವ ಅಪರಿಚಿತ ವ್ಯಕ್ತಿ ಮೋಟಾರ್‌ ಸೈಕಲ್‌ನಲ್ಲಿ ಬಂದು ಸ್ವಲ್ಪ ಮುಂದಕ್ಕೆ ಹೋಗಿ ವಾಪಾಸು ಮೋಟಾರ್‌ಸೈಕಲ್‌ನ್ನು ತಿರುಗಿಸಿಕೊಂಡು ಬಂದು, ಬೀಬಿಜಾನ್‌ ರವರ ಕುತ್ತಿಗೆಯಲ್ಲಿದ್ದ 18 ಗ್ರಾಂ ತೂಕದ ಚಿನ್ನದ ಸರವನ್ನು ಬಲಾತ್ಕಾರವಾಗಿ ಸುಲಿಗೆ ಮಾಡಿಕೊಂಡು ಹೋಗಿದ್ದು, ಸುಲಿಗೆಯಾದ ಸೊತ್ತಿನ ಅಂದಾಜು ಮೌಲ್ಯ ರೂಪಾಯಿ 65,000/- ಆಗಿರುತ್ತದೆ. ಕೃತ್ಯ ನಡೆದ ಬಳಿಕ ಘಟನೆಯಿಂದ ಬೀಬಿಜಾನ್‌ ರವರು ಹೆದರಿ ಜ್ವರ ಬಂದಿರುವುದರಿಂದ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುವುದಾಗಿದೆ, ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 101/2021 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಪಡುಬಿದ್ರಿ: ಕೆಲವು ದಿನಗಳ ಹಿಂದೆ ಪಲಿಮಾರು ಕ್ರಿಕೆಟ್ ತಂಡದವರಿಗೆ ಹಾಗೂ ಕರ್ನಿರೆ ಕ್ರಿಕೆಟ್ ತಂಡದವರಿಗೆ ಕ್ರಿಕೆಟ್ ಆಟವಾಡುವ ವಿಚಾರದಲ್ಲಿ ಗಲಾಟೆಗಳಾಗಿದ್ದು, ಈ ಬಗ್ಗೆ ಪಡುಬಿದ್ರಿ ಠಾಣೆ ಹಾಗೂ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕರ್ನಿರೆ ತಂಡದ ಪರವಾಗಿ ಪ್ರಕರಣ ದಾಖಲಾಗಲು ಪಿರ್ಯಾದಿದಾರರಾಧ ಸಂಪತ್ ಕುಮಾರ್ ಶೆಟ್ಟಿ, (37) ತಂದೆ: ಹರಿಶ್ಚಂದ್ರ ಶೆಟ್ಟಿ, ವಾಸ: ಕರ್ನಿರೆ ಗುತ್ತು ಮನೆ, ಕರ್ನಿರೆ ಗ್ರಾಮ, ಮುಲ್ಕಿ, ಮಂಗಳೂರು ತಾಲೂಕು, ದಕ್ಷಿಣ ಕನ್ನಡ ಇವರೇ ಕಾರಣ ಎಂದು ಪಡುಬಿದ್ರಿಯ ಜಿತೇಂದ್ರ ಜೆ ಶೆಟ್ಟಿ ರವರು ಇವರ ವಿರುದ್ಧ ದ್ವೇಷಗೊಂಡು ದಿನಾಂಕ 13/07/2021 ರಂದು ಸಂಪತ್ ಕುಮಾರ್ ಶೆಟ್ಟಿ ರವರ ಗೆಳೆಯರಾದ ಸಂತೋಷ್ ಕರ್ನಿರೆ ಮತ್ತು ಚಂದ್ರ ಶೇಖರ ಕರ್ನೀರೆ ಎಂಬುವರಿಗೆ ಫೋನ್ ಮಾಡಿ ಸಂಪತ್ ಕುಮಾರ್ ಶೆಟ್ಟಿ ರವರನ್ನು ಪಲಿಮಾರಿಗೆ ಬರುವಂತೆ, ಮತ್ತು ಬಂದರೆ ಅಲ್ಲಿಯೇ ಆತನನ್ನು ಮುಗಿಸುವುದಾಗಿ ಹೇಳಿ, ನಂತರ ಸಂಜೆ 17:30 ಗಂಟೆಗೆ ಆರೋಪಿ ಜಿತೇಂದ್ರ ಜೆ ಶೆಟ್ಟಿಯವರು ಸಂಪತ್ ಕುಮಾರ್ ಶೆಟ್ಟಿ ರವರಿಗೆ ಕರೆ ಮಾಡಿ “ನೀನು ಕರ್ನಿರೆ ಕ್ರಿಕೆಟ್ ತಂಡದವರಿಗೆ ಬಾರೀ ಸಪೋರ್ಟ್‌ ಮಾಡುತ್ತೀಯಾ, ನನ್ನ ಕೈಕಾಲು ಸರಿ ಇಲ್ಲವೆಂದು ಹೇಳಿಕೊಂಡು ಬರುತ್ತೀಯಾ? ಪಲಿಮಾರಿಗೆ ಬಾ ನಿನ್ನನ್ನು ಇವತ್ತೇ ಮುಗಿಸಿ ಬಿಡುತ್ತೇವೆ, ಎಂದು ಅವಾಚ್ಯ ಶಬ್ದಗಳಿಂದ ಬೈದಿದ್ದು, ನಂತರ ಸಂಜೆ 18:30 ಗಂಟೆಯ ವೇಳೆಗೆ ಸಂಪತ್ ಕುಮಾರ್ ಶೆಟ್ಟಿ ರವರು ಹಾಗೂ ಅವರ ತಮ್ಮ ರಂಜಿತ್ ಶೆಟ್ಟಿ ರವರು ಕಾಪು ತಾಲೂಕು ಪಲಿಮಾರು ಗ್ರಾಮದ ಪಲಿಮಾರು ಪೇಟೆಗೆ ಬಂದಾಗ, ಜಿತೇಂದ್ರ ಜೆ ಶೆಟ್ಟಿ ಪುನಃ ಫೋನ್ ಕರೆ ಮಾಡಿ ನಮ್ಮೊಳಗಿನ ವಿಷಯವನ್ನು ಸರಿ ಮಾಡುವ ಎಂದು ಪಲಿಮಾರು ವಿಮಲ್ ಬಾರ್ ಅಂಡ್ ರೆಸ್ಟೋರಂಟ್‌ಬಳಿ ಕರೆಸಿದ್ದು,  ಅದರಂತೆ ಅಲ್ಲಿಗೆ ಹೋದಾಗ ಜಿತೇಂದ್ರ ಜೆ ಶೆಟ್ಟಿ, ಸೂರಜ್, ತನುಜ್, ಕಿರಣ್ ಭಟ್, ಸಚಿನ್ ಶೆಟ್ಟಿ, ಶರತ್ ಶೆಟ್ಟಿ, ಕೃಷ್ಣ ಮತ್ತಿತರರು ಅಲ್ಲಿದ್ದು, ಸೂರಜ್ ಹಾಗೂ ಸಚಿನ್ ಶೆಟ್ಟಿಯವರು ಕೈಯಲ್ಲಿ ಚೂರಿಯನ್ನು ಹಿಡಿದುಕೊಂಡಿದ್ದು, ಉಳಿದವರು ಕೈಯಲ್ಲಿ ಸೋಡಾಬಾಟಲಿಗಳನ್ನು ಹಿಡಿದುಕೊಂಡು ಸಮಯ ಸುಮಾರು 19:45 ಗಂಟೆಗೆ ಬಾರಿನಿಂದ ಹೊರ ಬಂದು ಜಿತೇಂದ್ರ  ಶೆಟ್ಟಿಯು ಸಂಪತ್ ಕುಮಾರ್ ಶೆಟ್ಟಿ ಇವರನ್ನುದ್ದೇಶಿಸಿ ನಿನ್ನನ್ನು ಈ ದಿನ ಮುಗಿಸಿ ಬಿಡುತ್ತೇನೆಎಂದು ಹೇಳುತ್ತಾ ಉಳಿದವರಿಗೆ ಸನ್ನೆ ಮಾಡುತ್ತಾ ಕೈಯಿಂದ ಹೊಡೆದಿದ್ದು, ನಂತರ ಆರೋಪಿತರು ಸೋಡಾ ಬಾಟಲಿಯಿಂದ ಹೊಡೆಯುತ್ತಾ, ಸೂರಜನು ಕೊಲ್ಲುವುದಾಗಿ ಹೇಳುತ್ತಾ ಸಂಪತ್ ಕುಮಾರ್ ಶೆಟ್ಟಿ ಇವರ ಎದೆಗೆ ಹಾಗೂ ಅವರ ತಮ್ಮ ರಂಜಿತ್ ಶೆಟ್ಟಿಯ ಹೊಟ್ಟೆಗೆ ಚೂರಿಯಿಂದ ಬಲವಾಗಿ ತಿವಿದ ಕಾರಣ ಅವರಿಬ್ಬರೂ ತೀವ್ರ ಗಾಯಗೊಂಡಿದ್ದು, ಇಬ್ಬರನ್ನು ಚಿಕಿತ್ಸೆ ಬಗ್ಗೆ ಮಂಗಳೂರಿನ ಎ ಜೆ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 67/2021 ಕಲಂ: 143, 147, 148, 504, 506, 323, 324, 307, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-07-2021 06:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080