ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಹರ್ಷ (32), ತಂದೆ: ಕೃಷ್ಣ ಕರ್ಕೆರ, ವಾಸ: ಶ್ರೀ ಲಕ್ಷ್ಮಿನಿಲಯ ಹಾರಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 13/06/2022 ರಂದು ಕೆಲಸದ ನಿಮಿತ್ತ ಮನೆಯಿಂದ ಬಿದ್ಕಲ್ ಕಟ್ಟೆಗೆ ತನ್ನ ಮೋಟಾರ್ ಸೈಕಲಿನಲ್ಲಿ ಹೊರಟು ಬ್ರಹ್ಮಾವರ ಸೈಬ್ರಕಟ್ಟೆ ಮಾರ್ಗವಾಗಿ  ಹೋಗುತ್ತಿದ್ದು ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ  ಜನ್ನಾಡಿ ಬಿಪಿಸಿಎಲ್ ಗಿರಿಜಾ ಪೆಟ್ರೋಲ್ ಬಂಕ್ ನಿಂದ ಸ್ವಲ್ಪ ಮುಂದಕ್ಕೆ ಹೋದಾಗ ಪಿರ್ಯಾದಿದಾರರ ಮುಂದಿನಿಂದ KA-20-EU-4440 ನೇ ಮೋಟಾರ್ ಸೈಕಲ್ ಸವಾರ   ಹಿಂಬದಿ ಸಹ ಸವಾರಿಣಿಯನ್ನು  ಕುಳ್ಳಿರಿಸಿಕೊಂಡು  ಅತಿವೇಗ ಹಾಗೂ ಅಜಾಗರೂಕತೆಯಿಂದ  ಹೋಗುತ್ತಿದ್ದು  ಹಾಗೆಯೇ  ಹೋಗುವಾಗ  ಮುಂದಕ್ಕೆ  ಒಬ್ಬ ಅಪರಿಚಿತ ವ್ಯಕ್ತಿ ಒಮ್ಮೆಲೆ  ರಸ್ತೆಯ ಎಡ ಬದಿಯಿಂದ ಬಲಬದಿಗೆಒಮ್ಮೆಲೆ ದಾಟುತ್ತಿದ್ದು  ಅದನ್ನು ನೋಡಿದ ಮೋಟಾರ್ ಸೈಕಲ್ ಸವಾರ ಒಮ್ಮೆಲೆ ಬ್ರೇಕ್ ಹಾಕಿದ್ದು ಬೈಕಿನಿಂದ ಹಿಂದೆ ಕುಳಿತಿದ್ದ ಸಹಸವಾರಿಣಿ  ಅಕ್ಷತಾ ರವರು ಬೈಕಿನಿಂದ ಕೆಳಗೆ ಬಿದ್ದ ಪರಿಣಾಮ  ಎಡ ಭುಜದ ಮೂಳೆ  ಮುರಿದ ಗಾಯವಾಗಿದ್ದು ಮತ್ತು  ಬಲ ಕೈ  ಮತ್ತು ಕಾಲಿಗೆ  ತರಚಿದ ಗಾಯವಾಗಿರುತ್ತದೆ  . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2022 ಕಲಂ:279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 12/06/2022 ರಂದು ರಾತ್ರಿ 7:30  ಗಂಟೆಗೆ ಕುಂದಾಪುರ ತಾಲೂಕು, ಕಾವ್ರಾಡಿ  ಗ್ರಾಮದ ದೂಪದಕಟ್ಟೆ ಹಳ್ನಾಡು ಕ್ರಾಸ್‌ಬಳಿ, ರಾಜ್ಯ ರಸ್ತೆಯಲ್ಲಿ,  ಆಪಾದಿತ ಹೆಚ್‌ ದಿವಾಕರ ಶೆಟ್ಟಿ KA-20-ES-0635 ಸ್ಕೂಟಿ ಯಲ್ಲಿ ಪ್ರೇಮಾ ಹಾಗೂ ಪ್ರಮೋದಾ ಎಂಬುವವರನ್ನು  ಸಹ  ಸವಾರರಾಗಿ ಕುಳ್ಳಿರಿಸಿಕೊಂಡು ಕುಂದಾಪುರ ಕಡೆಯಿಂದ ಸಿದ್ದಾಪುರ ಕಡೆಗೆ ಇಳಿಜಾರು ರಸ್ತೆಯಲ್ಲಿ  ಅತೀವೇಗ ಹಾಗೂ ನಿರ್ಲಕ್ಷ್ಯ ತನದಿಂದ  ಸವಾರಿ ಮಾಡಿಕೊಂಡು ಬಂದು, ಯಾವುದೇ  ಸೂಚನೆ ನೀಡದೇ  ರಸ್ತೆಯ  ಬಲ ಬದಿಯ ಹಳ್ನಾಡು  ಕಡೆಗೆ  ತಿರುಗಿಸಿ, ಸಿದ್ದಾಪುರ ಕಡೆಯಿಂದ  ಕುಂದಾಪುರ ಕಡೆಗೆ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ  ಲಾಯ್ಡ್‌‌ ರೆಬೆಲ್ಲೋ ಎಂಬುವವರು ಚಲಾಯಿಸಿಕೊಂಡು ಬರುತ್ತಿದ್ದ KA-19-MC-8791ನೇ ಕಾರಿಗೆ ಡಿಕ್ಕಿ ಹೊಡೆದು, ಹೆಚ್‌ ದಿವಾಕರ,  ಪ್ರೇಮಾ ಹಾಗೂ ಪ್ರಮೋದಾ ರವರು ಗಾಯಗೊಂಡು  ಚಿಕಿತ್ಸೆ  ಬಗ್ಗೆ ಕುಂದಾಪುರ ನ್ಯೂ  ಮೆಡಿಕಲ್‌‌ ಆಸ್ಪತ್ರೆಗೆ  ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022  ಕಲಂ: 279, 337 ಐಪಿಸಿ & 128(1) ಜೊತೆಗೆ 177 imv Act ರಂತೆ ಪ್ರಕರಣ ದಾಖಲಾಗಿರುತ್ತದೆ.   

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಕಾಶ್‌ಎಸ್‌(38), ವಾಸ: ಸುಹಾಸ ನಿಲಯ, ಮಧ್ವನಗರ, ಕೊಡವೂರು ಗ್ರಾಮ, ಮೂಡಬೆಟ್ಟು ಅಂಚೆ, ಉಡುಪಿ ತಾಲೂಕು ಇವರು ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸುಮಾರು 4 ವರ್ಷಗಳಿಂದ ಇಂಜಿನಿಯರ್‌ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ 11/06/2022 ರಂದು ಮದ್ಯಾಹ್ನ 2:00 ಗಂಟೆಗೆ  ಮೇಲಾಧಿಕಾರಿಯವರ ಅನುಮತಿ ಪಡೆದು ರಜೆಯಲ್ಲಿ ಹೋಗಿದ್ದು, ದಿನಾಂಕ 12/06/2022ರಂದು ಬೆಳಿಗ್ಗೆ 08:30 ಗಂಟೆಗೆ ಆಸ್ಪತ್ರೆಗೆ ಬಂದು ನೋಡಲಾಗಿ ಪಿರ್ಯಾದಿದಾರರು ಕೆಲಸ ಮಾಡುತ್ತಿದ್ದ ಟೇಬಲ್‌ನ ಮೇಲೆ ಕಂಪ್ಯೂಟರ್‌ ಕಾಣದೇ ಇದ್ದು, ದಿನಾಂಕ 11/06/2022 ರಂದು ಮದ್ಯಾಹ್ನ 2:00 ಗಂಟೆಯಿಂದ ದಿನಾಂಕ 12/06/2022 ರಂದು ಬೆಳಿಗ್ಗೆ 08:30 ಗಂಟೆಯ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಪಿರ್ಯಾದಿದಾರರ ಕಂಪ್ಯೂಟರ್‌, ಸಿಪಿಯು, ಕೀ ಬೋರ್ಡ್‌, ಮೌಸ್‌ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಕಂಪ್ಯೂಟರ್‌ನ ಒಟ್ಟು  ಮೌಲ್ಯ ರೂಪಾಯಿ 8,000/- ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 96/2022 ಕಲಂ :  454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ವನಜ ಅಮೀನ್ (58), ತಂದೆ: ದಿ ನಾರಾಯಣ ಅಮೀನ್ , ವಾಸ: ದಾಸ ಹೌಸ್ ಸಂಕೇಶ ಕಿದಿಯೂರು, ಕಿದಿಯೂರು ಗ್ರಾಮ ಇವರ ತಮ್ಮ  ಸುಧಾಕರ ಅಮೀನ್ (55) ರವರು ದಿನಾಂಕ 08/06/2022  ರಂದು 16:45 ಗಂಟೆಗೆ  ಮನೆಯ ಕೋಣೆಯಲ್ಲಿ  ಕಪಾಟಿನ  ಮೇಲೆ ಇದ್ದ  ಅಂಗಿಯನ್ನು ತೆಗೆಯಲು ಹೋದಾಗ  ಕಪಾಟಿನ  ಮೇಲೆ ಇದ್ದ ಒಂದು ನಾಗರಹಾವು  ಕಚ್ಚಿದ್ದು ಕೂಡಲೇ ಸುಧಾಕರ ಅಮೀನ್ ರವರನ್ನು ಚಿಕಿತ್ಸೆ ಯ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿದ್ದು , ದಿನಾಂಕ 13/06/2022 ರಂದು ಮಧ್ಯಾಹ್ನ 2:45 ಗಂಟೆಗೆ ಪಿರ್ಯಾದಿದಾರರ ತಮ್ಮ ಸುಧಾಕರ ಅಮೀನ್  ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಸುಧಾಕರ ಅಮೀನ್  ರವರು ದಿನಾಂಕ 08/06/2022 ರಂದು  ವಿಷಪುರಿತ ಹಾವು ಕಡಿದು ಚಿಕಿತ್ಸೆ ಫಲಕಾರಿಯಾಗದೆ  ಮೃತಪಟ್ಟಿರುವುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 36/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಸರೋಜಾ   ಮಹೇಶ  ನಾಯ್ಕ (35), ತಂದೆ: ತಿಮ್ಮ ನಾಯ್ಕ, ವಾಸ: ಅಸಿಕೊಡ್ಲು  ಯಳಂತ್ತೂರು  ಬೆಳ್ಬೆ ಗ್ರಾಮ   ಹೆಬ್ರಿ ತಾಲೂಕು ಇವರ  ತಂದೆ  ತಿಮ್ಮ ನಾಯ್ಕ ಇವರ  ಸಹೋದರ  ಅಪ್ಪು  ನಾಯ್ಕ  ಇವರಿಗೆ   ಹೆಬ್ರಿ ತಾಲೂಕಿನ   ಬೆಳ್ಬೆ  ಗ್ರಾಮದ ಯಳಂತ್ತೂರು  ಅಸಿಕೊಡ್ಲು  ಎಂಬಲ್ಲಿ  ದಿನಾಂಕ   09/06/1982  ರಂದು  ಡಿಆರ್ ಸಖ್ಯೆ 22/1982-83(2) ರಂತೆ   ಭೂಮಿ  ಮಂಜೂರಾಗಿದ್ದು,  ಇದನ್ನು  ಅಪ್ಪು  ನಾಯ್ಕ  ಇವರು  ತಿಮ್ಮ  ನಾಯ್ಕ  ಇವರ ಹೆಸರಿಗೆ   ದಿನಾಂಕ  21/10/1993  ರಂದು  ದಸ್ತಾವೇಜು ಸಂಖ್ಯೆ 35;1993-94 ರಂತೆ  ನೊಂದಣಿ   ವೀಲು  ನಾಮೆ ಮುಖಾಂತರ ನೀಡಿರುತ್ತಾರೆ, ಈ ಜಾಗವನ್ನು  ಪಿರ್ಯಾದಿದಾರರು ಹಾಗೂ   ಅವರ ತಂದೆ  ಸ್ವಾಧೀನ ಹೊಂದಿ  ಅನುಭವಿಸಿಕೊಂಡು ಬಂದಿರುತ್ತಾರೆ. ಆರೋಪಿಗಳಾದ  1.ಬಾಲಕೃಷ್ಣ ಶೆಟ್ಟಿ ,  ತಾಯಿ: ಅಂತಮ್ಮ ಶೆಡ್ತಿ, 2. ಜಯಪ್ರಕಾಶ ಶೆಟ್ಟಿ,  ತಾಯಿ: ಸುಮತಿ  ಶೆಡ್ತಿ, 3.ನರಸಿಂಹ  ಶೆಟ್ಟಿ, ತಾಯಿ : ಅಂತಮ್ಮ  ಶೆಡ್ತಿ , 4. ಭವಾನಿ  ಶೆಡ್ತಿ,  ತಂದೆ: ನಾಗಪ್ಪ  ಶೆಟ್ಟಿ, 5.ಸುಮತಿ  ಶೆಡ್ತಿ,  ತಂದೆ: ನಾಗಪ್ಪ ಶೆಟ್ಟಿ, 6.ದೇವಕಿ ಶೆಡ್ತಿ ,ತಂದೆ:  ನಾಗಪ್ಪ  ಶೆಟ್ಟಿ, 7.ಪ್ರೇಮ ಶೆಡ್ತಿ, ತಾಯಿ: ಜಲಜಮ್ಮ  ಶೆಡ್ತಿ ಇವರು ಪಿರ್ಯಾದಿದಾರರು ಹಾಗೂ ಅವರ ಮನೆಯವರ ಸ್ವಾಧೀನತೆ  ಹಕ್ಕಿನ ಆಸ್ತಿಯಲ್ಲಿ  ಸುಮಾರು   1.15  ಎಕ್ರೆ ಭೂಮಿಯನ್ನು   ಅಕ್ರಮವಾಗಿ  ಒತ್ತುವರಿ ಮಾಡಿಕೊಂಡು ಪಿರ್ಯಾದಿದಾರರ ಮನೆಯವರ   ಸ್ವಾಧೀನ ತಪ್ಪಿಸಿ ದೌರ್ಜನ್ಯ  ಎಸಗಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 447 ಐಪಿಸಿ, ಕಲಂ:.3(1)(f),  3(2)(v-a)SC AND THE ST (PREVENTION OF ATTROCITIES) ACT, 1989 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-06-2022 09:47 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080