ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಮಣಿಪಾಲ: ದಿನಾಂಕ 13/06/2021ರಂದು ಸಂಜೆ ಪಾಂಡು, ಸಹಾಯಕ ಪೊಲೀಸ್ ಉಪನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ  ಮಣಿಪಾಲ ವಿ.ಪಿ ನಗರದ 1ನೇ ಮೈನ್ 4 ನೇ ಕ್ರಾಸ್‌ ಸಾರ್ವಜನಿಕ ರಸ್ತೆಯಲ್ಲಿ  6 - 7 ಯುವಕರು ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅನಾವಶ್ಯಕವಾಗಿ  ಸಂಚರಿಸುತ್ತಿರುವ ಬಗ್ಗೆ  ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ  ಹೋದಾಗ  ಆರೋಪಿಗಳಾದ ಅಕ್ಷಯ್ ವಿ.ಕೆ,  ಆದಿತ್ಯ,  ಪ್ರಣವ್‌‌ , ಮಹಾನ್ ರಾವ್‌, ರಚನ್.ಆರ್.ಪೂಜಾರಿ,  ಭುವನ್, ಅದ್ವಿತ್, ಮತ್ತು  ರಕ್ಷಿತ್  ಪೂಜಾರಿ ರವರು ಸಾರ್ವಜನಿಕ ರಸ್ತೆಯಲ್ಲಿ  ಅನಾವಶ್ಯಕವಾಗಿ ಸಂಚರಿಸುತ್ತಿದ್ದು ಅವರಲ್ಲಿ ಲಾಕ್‌‌ಡೌನ್‌ ಸಮಯದಲ್ಲಿ ಸಂಚರಿಸುತ್ತಿದ್ದ  ಬಗ್ಗೆ ವಿಚಾರ ಮಾಡಿದಾಗ ಸಮರ್ಪಕವಾದ ಕಾರಣವನ್ನು ನೀಡಿರುವುದಿಲ್ಲ. ಆರೋಪಿತರು ಕೋವಿಡ್ ಸೊಂಕು 2ನೇ ಅಲೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್ ಡೌನ್ ಇದ್ದು ಉಡುಪಿಯ ಮಾನ್ಯ ಜಿಲ್ಲಾಧಿಕಾರಿಗಳು ಅನಗತ್ಯ ಸಂಚಾರ ನಿರ್ಭಂಧಿಸಿ ಆದೇಶವನ್ನು ಹೊರಡಿಸಿರುವ ವಿಚಾರವನ್ನು ತಿಳಿದಿದ್ದರೂ ಕೂಡಾ ಯಾವುದೇ ಸಕಾರಣವಿಲ್ಲದೇ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವವಿರುವ ಬಗ್ಗೆ ನಿರ್ಲಕ್ಷ್ಯ ವಹಿಸಿ  ತಿರುಗಾಡುತ್ತಿದ್ದರಿಂದ  ಆರೋಪಿಗಳನ್ನು ಹಾಗೂ ಆರೋಪಿಗಳು ಸಂಚರಿಸುತ್ತಿದ್ದ   KA36 N 6556 ನೇ ಕಾರು ,  KA20 EV 0159  ಮತ್ತು  KA20 EK 7771 ನೇ  ದ್ವಿ ಚಕ್ರ ವಾಹನಗಳನ್ನು  ವಶಕ್ಕೆ ಪಡೆಯಲಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-06-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080