ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ :

  • ಬೈಂದೂರು : ಫಿರ್ಯಾದಿ ಪವನ್ ಕುಮಾರ್ ಪ್ರಾಯ 19 ವರ್ಷ, ತಂದೆ: ಪಂಜು ಪೂಜಾರಿ, ವಾಸ: ತೂದಳ್ಳಿ ಸರ್ಕಲ್ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರ ಯಡ್ತರೆ ಗ್ರಾಮ ಬೈಂದೂರು ಇವರು ಕೋಟೇಶ್ವರದ ವರದಾರಾಜ ಎಂ ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿದ್ದು, ದಿನಾಂಕ 13/05/2023 ರಂದು ಬೆಳಿಗ್ಗೆ ಮನೆಯಿಂದ ಕಾಲೇಜಿಗೆ ಹೋಗಿ ವಾಪಾಸ್ಸು ಶಿರೂರು ಮಾರ್ಕೆಟ್ ಬಳಿ ಬಸ್ಸಿನಿಂದ ಇಳಿದು, ಮನೆಗೆ ಹೋಗಲು ತೂದಳ್ಳಿ ಕ್ರಾಸ್ ಬಳಿ ಇರುವ ಶಿರೂರಿನ ಕೋಟೆ ಮಂಜುರವರ ಅಂಗಡಿಗೆ  ಬಂದು ಜಗಲಿಯಲ್ಲಿ ಕುಳಿತು ರಿಕ್ಷಕ್ಕಾಗಿ ಕಾಯುತ್ತಿರುವಾಗ  ಮಧ್ಯಾಹ್ನ 3:00 ಗಂಟೆಗೆ  ಆರೋಪಿ  ಪ್ರವೀಣ ಪೂಜಾರಿಯು ಆತನ ಬಾಬ್ತು ಮೋಟಾರ್ ಸೈಕಲ್ ನಲ್ಲಿ ಕೋಟೆ ಮಂಜುರವರ ಅಂಗಡಿ ಬಳಿ ಬಂದು, ಬೈಕ್ ನ್ನು ನಿಲ್ಲಿಸಿ ಫಿರ್ಯಾದುದಾರರ ಬಳಿ ಬಂದು ಏರುಧ್ವನಿಯಲ್ಲಿ ಫಿರ್ಯಾದುದಾರರನ್ನು  ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ, ಫಿರ್ಯದುದಾರರು ಆರೋಪಿತನಲ್ಲಿ ನನಗೆ ಯಾಕೆ ಬೈಯುತ್ತೀಯಾ? ನೀನು ನನ್ನ ಬಳಿ ಏನೂ ಮಾತನಾಡಬೇಡ. ನೀನು ಇಲ್ಲಿಂದ ಹೋಗು ಎಂದು ಹೇಳಿದ್ದಕ್ಕೆ ಆರೋಪಿಯು ಫಿರ್ಯಾದುದಾರರಿಗೆ  ಬೋಳಿ ಮಗನೇ ನನ್ನನ್ನು ಕೇಳಲು ನೀನ್ಯಾರು? ಎಂದು ಹೇಳಿ ಅಂಗಡಿಯ ಬಳಿ ಇದ್ದ ಬಾಜಲ್ ಬಾಟಲಿಯನ್ನು ಒಡೆದು, ಬಾಟಲಿಯಿಂದ ತಿವಿಯಲು ಬಂದಾಗ ಫಿರ್ಯಾದುದಾರರು ಕೈಯನ್ನು ಅಡ್ಡ ಹಿಡಿದಾಗ ಬಾಟಲಿಯು ಎಡ ಕೈಗೆ ತಾಗಿ ರಕ್ತಗಾಯವಾಗಿದ್ದು ನೋವಿನಿಂದ ಹೆದರಿ ಬೊಬ್ಬೆ ಹಾಕಿದಾಗ ಸಾರ್ವಜನಿಕರು ಬರುವುದನ್ನು ಕಂಡು, ಆರೋಪಿತನು ಈ ರಾತ್ರಿಯೇ ಬಂದು ನೋಡಿಕೊಳ್ಳುತ್ತೇನೆ ಎಂಬುದಾಗಿ ಬೆದರಿಕೆ ಹಾಕಿ ಮೋಟಾರ್ ಸೈಕಲ್ ನಲ್ಲಿ ಹೋಗಿರುವುದಾಗಿದೆ. ಗಾಯಗೊಂಡ ಫಿರ್ಯಾದುದಾರರು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಆರೋಪಿಯು ಫಿರ್ಯಾದುದಾರರ ಸಂಬಂಧಿಯಾಗಿದ್ದು, ಅವರೊಳಗೆ  ವೈಮನಸ್ಸು ಇದ್ದು, ಇದೇ ಕಾರಣದಿಂದ ಆರೋಪಿಯು ಫಿರ್ಯಾದುದಾರರ ಮೇಲೆ  ದ್ವೇಷದಿಂದ ಈ ಹಲ್ಲೆ ಮಾಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 80/2023 ಕಲಂ: 324, 504, 506 ಭಾದಂಸಂ.ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ  : ಫಿರ್ಯಾದು ಸಂತೋಷ ಪೂಜಾರಿ  ಪ್ರಾಯ 32  ವರ್ಷ ತಂದೆ, ತಮ್ಮ ಪೂಜಾರಿ ವಾಸ, ಆಶ್ರಯ ಕಾಲೋನಿ, ಕ್ರೋಡಬೈಲೂರು, ಶಂಕರನಾರಾಯಣ ಗ್ರಾಮ ಕುಂದಾಪುರ ತಾಲೂಕು ಇವರು ಹಾಗೂ ಆತನ ಸ್ನೆಹಿತ ರಕ್ಷಿತ್ ಎಂಬುವರು ದಿನಾಂಕ 13.05.2023 ರಂದು ಸುಮಾರು 19;30 ಘಂಟೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕ್ರೋಢ ಬೈಲೂರಿನ ಆಶ್ರಯ ಕಾಲೋನಿ ಬಳಿ ನಿಂತುಕೊಂಡಿರುವಾಗ, ಸ್ಥಳಿಯ ಬಿಜೆಪಿ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಮೆರವಣಿಗೆ ಮುಖಾಂತರ ಹೋಗುತ್ತಿರುವಾಗ, ಆ ಗುಂಪಿನಲ್ಲಿರುವ ರಂಜೀತ್ ಮೊಗವೀರ, ವಿಜೇತ್ ಮೊಗವೀರ ಹಾಗೂ ಅರುಣ ಎಂಬುವರು ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಸ್ನೇಹಿತ ರಕ್ಷಿತ್ ಇವರಿಗೆ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿರುತ್ತಾರೆ.  ನಂತರ ಫಿರ್ಯಾದುದಾರರು ಹಾಗೂ ಆತನ ಸ್ನೇಹಿತ ಮನೆಗೆ ಹೊಗುತ್ತಿರುವಾಗ ಆರೋಪಿಗಳು ಸಮಾನ ಉದ್ದೇಶದಿಂದ ಬಂದು ಫಿರ್ಯಾದುದಾರರು ಹಾಗೂ ಆತನ ಸ್ನೇಹಿತನನ್ನು ಅಡ್ಡಗಟ್ಟಿ ದೊಣ್ಣೆಯಿಂದ ಮತ್ತು ಹರಿತವಾದ ಆಯುಧದಿಂದ ಹೊಡೆದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ ಆರೋಪಿಗಳು ಹಲ್ಲೆ ಮಾಡಿದ ಪರಿಣಾಮ ಫಿರ್ಯಾಧುದಾರರ ಎಡಗೈ ತೋಳು ಹಾಗೂ ಭುಜಕ್ಕೆ ರಕ್ತಗಾಯವಾಗಿರುತ್ತದೆ ಹಾಗೂ ಆತನ ಸ್ನೆಹಿತ ರಕ್ಷಿತ್ ಎಂಬುವರಿಗೂ ಹೊಡೆದು ಅಂಗಿಯನ್ನು ಹರಿದಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 49/2023 ಕಲಂ:,   341, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ  :  ಫಿರ್ಯಾದು ಉಮೇಶ ಶೆಟ್ಟಿ  ಪ್ರಾಯ 40  ವರ್ಷ ತಂದೆ,ಶಿವರಾಮ ಶೆಟ್ಟಿ ವಾಸ, ಕಲ್ಲುಗದ್ದೆ, ಶಂಕರನಾರಾಯಣ ಗ್ರಾಮ ಕುಂದಾಪುರ  ತಾಲೂಕು ಇವರು ಹಾಗೂ ಆತನ ಸ್ನೆಹಿತರಾದ ಅರುಣ, ರಂಜೀತ್ ಹಾಗೂ ವಿಜೇತ್ ಎಂಬುವರೊಂದಿಗೆ ದಿನಾಂಕ 13.05.2023 ರಂದು ಸುಮಾರು 19;30 ಘಂಟೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಕ್ರೋಢ ಬೈಲೂರಿನ ಆಶ್ರಯ ಕಾಲೋನಿ ಬಳಿ ಹೋಗುತ್ತಿರುವಾಗ, ಆರೋಪಿತರಾದ ಸಂತೋಷ ಪೂಜಾರಿ ಹಾಗೂ ರಕ್ಷಿತ್ ಪೂಜಾರಿ ಎಂಬುವರು ಸಮಾನ ಉದ್ದೇಶದಿಂದ ಫಿರ್ಯಾದುದಾರರು ಹಾಗೂ ಆತನ ಸ್ನೇಹಿತರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈದು,ಕೈಯಿಂದ ದೂಡಿ, ಕೈಯಿಂದ ಹೊಡೆದು ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ.  ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 50/2023 ಕಲಂ:, 341,323,504,506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ  : ಫಿರ್ಯಾದು ರಿತೇಶ್, ಪ್ರಾಯ 27 ವರ್ಷ, ತಂದೆ ರವೀಂದ್ರ  ಪೂಜಾರಿ, ವಾಸ ಕಲ್ಲಂಜೆ ಹೌಸ್, ನಿಂಜೂರು ಗ್ರಾಮ,ಕಾರ್ಕಳ ತಾಲೂಕು ಇವರು ಪಳ್ಳಿಯಲ್ಲಿ ಅಟೋರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 13-05-2023 ರಂದು ನಿಂಜೂರಿಗೆ  ಬಾಡಿಗೆ ಬಿಟ್ಟು ರಿಕ್ಷಾದಲ್ಲಿ ಬರುತ್ತಾ 18-00 ಗಂಟೆಗೆ ಕಾರ್ಕಳ ತಾಲೂಕು ನಿಂಜೂರು ಗ್ರಾಮದ ಪಾತಾವು ಎಂಬಲ್ಲಿ  ತಲುಪಿದಾಗ  ಅಪಾದಿತನಾದ ಪಳ್ಳಿ ಗ್ರಾಮದ ವಾಸಿ  ಚರಣ್  ಎಂಬಾತನು  KA19MH3171 ನಂಬ್ರದ ಕಾರಿನಲ್ಲಿ ಬಂದು ಫಿರ್ಯಾದುದಾರರ ರಿಕ್ಷಾವನ್ನು ತಡೆದು ನಿಲ್ಲಿಸಿ ನೀನು ಯಾರಿಗೆ ಓಟು ಹಾಕಿದ್ದೀ ಎಂದು ಅವಾಚ್ಯ  ಶಬ್ದಗಳಿಂದ  ಬೈದು ರಿಕ್ಷಾವನ್ನು ತೋಡಿಗೆ ದೂಡಲು ಪ್ರಯತ್ನಿಸಿದ್ದಲ್ಲದೇ ನಿಮ್ಮ ಅಣ್ಣ  ಅನೂರು  ಶೆಟ್ಟಿ  ಎಲ್ಲಿದ್ದಾನೆ  ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ  ಬೈದು ಜೀವ ಬೆದರಿಕೆ  ಹಾಕಿರುತ್ತಾನೆ.  ಅಪಾದಿತನು ಬಿಜೆಪಿ ಕಾರ್ಯಕರ್ತನಾಗಿದ್ದು ಫಿರ್ಯಾದುದಾರರು  ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿರುತ್ತಾರೆಂದು ಅಪಾದಿತನು  ಫಿರ್ಯಾದುದಾರರನ್ನು ತಡೆದು ನಿಲ್ಲಿಸಿ   ಅವಾಚ್ಯ ಶಬ್ದಗಳಿಂದ  ಬೈದು  ಜೀವ ಬೆದರಿಕೆ ಹಾಕಿದ್ದಾಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾದ ಕ್ರಮಾಂಕ : 62/2023 ಕಲಂ. 341,504,506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕೋಟ  : ಫಿರ್ಯಾದು ಶ್ರೀಮತಿ. ರತ್ನ (50), ಗಂಡ; ರಾಜು, ವಾಸ; ದಿವಾಳಿಮಕ್ಕಿ ಶಿರಿಯಾರ ಗ್ರಾಮ ಕುಂದಾಪುರ ಇವರು ದಿನಾಂಕ: 13.05.2023 ರಂದು ಮಧ್ಯಾಹ್ನ 2:45 ಗಂಟೆಗೆ ಆರೋಪಿತೆ ಜಯಂತಿ ರವರ ಮನೆ ಎದುರು ದಾರಿಯಲ್ಲಿ ಹೋಗುವಾಗ, ಅಲ್ಲಿ ಜಯಂತಿ ರವರು ನಿಂತುಕೊಂಡಿದ್ದು, ಫಿರ್ಯಾದುದಾರರು ಅವರಲ್ಲಿ “ ಮೊನ್ನೆ ಯಾಕೆ ಆ ರೀತಿ ನನ್ನ ಮಗಳಿಗೆ ತಮಾಷೆ ಮಾಡಿ ನನಗೆ ಬೈದದ್ದು” ಎಂದು ಕೇಳಿದಾಗ ಆರೋಪಿತೆ ಜಯಂತಿ ಹಾಗೂ ಅಲ್ಲಿಗೆ ಬಂದ ಆಕೆಯ ಮಗ ಪ್ರಮೋದ್‌‌‌‌‌‌‌‌‌‌‌ ಶೆಟ್ಟಿ ಎಂಬಾತನು ಸೇರಿಕೊಂಡು ಫಿರ್ಯಾದುದಾರರನ್ನು ಉದ್ದೇಶಿಸಿ, ಅವಾಚ್ಯವಾಗಿ ಬೈದಿದ್ದು, ಅದಕ್ಕೆ ಫಿರ್ಯಾದುದಾರರು ಗಲಾಟೆ ಬೇಡ ಎಂದು ಅಲ್ಲಿಂದ ಹೊರಟಾಗ, ಆರೋಪಿತೆ ಜಯಂತಿ ಶೆಟ್ಟಿ ಮತ್ತು ಆಕೆಯ ಮಗ ಪ್ರಮೋದ್‌‌‌‌‌‌‌‌ ಶೆಟ್ಟಿ ರವರು ಹಿಂದಿನಿಂದ ಬಂದು, ಗೇಟಿಗೆ ಹಾಕಿದ್ದ ಕೋಲನ್ನು ಎಳೆದು ತೆಗೆದು, ಏಕಾಏಕಿ ಫಿರ್ಯಾದುದಾರರ ಕಾಲಿಗೆ ಹೊಡೆದು, “ನಿನ್ನಂತ ಸುಮಾರು ಜನ ನೋಡಿದ್ದೇನೆ. ನಿನಗೆ ಏನು ಮಾಡಲಿಕ್ಕೆ ಆಗುತ್ತೆ” ಎಂಬುದಾಗಿ ಅವಾಚ್ಯ ಶಬ್ದಗಳಿಂದ ಬೈದು“ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ, ನೋಡಿಕೊಳ್ಳುತ್ತೇನೆ” ಎಂದು ಜೀವ ಬೆದರಿಕೆಹಾಕಿ, ಕೋಲನ್ನು ಅಲ್ಲಿಯೇ ಬಿಸಾಡಿ ಹೋಗಿರುತ್ತಾನೆ. ಈ ಘಟನೆಗೆ ಫಿರ್ಯಾದುದಾರರ ಮಗಳು ಸುಮಾಳು ಅಂತರ್ಜಾತಿ ವಿವಾಹವಾದ ಬಗ್ಗೆ ಆರೋಪಿಗಳು ಪದೇ ಪದೇ ಫಿರ್ಯಾದುದಾರರಿಗೆ ಹಂಗಿಸಿ, ಬೈಯುತ್ತಿದ್ದು ಇದನ್ನು ಫಿರ್ಯಾದುದಾರರು ಅವರಲ್ಲಿ ಕೇಳಿದ ಕೋಪ ಹಾಗೂ ಹಾಗೂ ದಾರಿಯ ವಿಚಾರದಲ್ಲಿ ಇರುವ ತಕರಾರು ಕಾರಣವಾಗಿರುತ್ತದೆ. ಈ ಬಗ್ಗೆ  ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ : 90/2023 ಕಲಂ: 324, 354, 504, 506 ಜೊತೆಗೆ 34 IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಗಂಗೊಳ್ಳಿ  : ದಿನಾಂಕ: 13/05/2023 ರಂದು ಸಮಯ ಸಂಜೆ ಸುಮಾರು 19:00 ಗಂಟೆಗೆ  ಫಿರ್ಯಾದು ರಾಧಾ ಖಾರ್ವಿ,  ಪ್ರಾಯ : 65 ವರ್ಷ, ಗಂಡ:ದಿ. ನರಸಿಂಹ ಖಾರ್ವಿ, ವಾಸ: ಅಂಗನವಾಡಿ ಹತ್ತಿರ ಲೈಟ್ಹೌಸ್ ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು, ಇವರು ಕುಂದಾಪುರ ತಾಲೂಕು ಗಂಗೊಳ್ಳಿ ಗ್ರಾಮದ  ಲೈಟ್‌ಹೌಸ್ ಬಳಿ ಅಂಗನವಾಡಿ ಹತ್ತಿರ ಇರುವ ತಮ್ಮ ಮನೆಯ ಬಳಿ ಕೆಲಸ ಮಾಡಿಕೊಂಡಿರುವಾಗ ಆಪಾದಿತರಾದ ಹರೀಶ್ ಖಾರ್ವಿ, ಶೀನ ಖಾರ್ವಿ, ಎಸ್‌ಐ ಮಾಧವ, ನಿತೀಶ್ ಖಾರ್ವಿ ಹಾಗೂ ಇತರರು ಸೇರಿ ಏಕಾಏಕಿ ಫಿರ್ಯಾದುದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಫಿರ್ಯಾದುದಾರರನ್ನು ಉದ್ದೇಶಿಸಿ ಅವಾಚ್ಛ್ಯ ಶಬ್ದಗಳಿಂದ ಬೈದಿದ್ದು, ಆಗ ಫಿರ್ಯದುದಾರರ ಮಗ ಗಣೇಶ ರವರು ಯಾಕೆ ಬಯ್ಯುತ್ತಿದ್ದೀರಾ ಎಂದು ಆಪಾದಿತರಲ್ಲಿ ಪ್ರಶ್ನಿಸಿದ್ದಕ್ಕೆ ಆಪಾದಿತರು ಗಣೇಶ ರವರಿಗೂ ಕೂಡ ಅವಾಚ್ಛ್ಯ ಶಬ್ದಗಳಿಂದ ಬೈದು ನಿನ್ನನ್ನು ಸುಮ್ಮನೇ ಬಿಡುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಿರುವುದಲ್ಲದೆ ಈ ಬಗ್ಗೆ ಫಿರ್ಯಾದುದಾರರು ಹಾಗೂ ಗಣೇಶ ರವರು ದೂರು ನೀಡಲು ಠಾಣೆಗೆ ಬರಲು ಮುಂದಾದಾಗ  ಆಪಾದಿತ ಹರೀಶ್‌ ಖಾರ್ವಿಯು ಅವರನ್ನು ಅಡ್ಡಗಟ್ಟಿ ತಡೆದು ನಿಲ್ಲಿಸಿ ತೆಂಗಿನ ಹೆಡೆಮಂಡೆಯಿಂದ ಹೊಡೆಯಲು ಬಂದಿರುತ್ತಾರೆ. ಈ ಬಗ್ಗೆ  ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 56/2023 ಕಲಂ: 341, 447, 504, 506, 509  R/W 34  IPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ :

  • ಕುಂದಾಪುರ  : ಪಿರ್ಯಾದು ಸಂದೀಪ್ (24), ತಂದೆ: ರಾಮ ದೇವಾಡಿಗ  ವಾಸ: ಸ್ವಾಮಿ ನಿಲಯ, ಕಳಿಹಿತ್ಲು, ಉಪ್ಪಿನಕುದ್ರು ಗ್ರಾಮ ಕುಂದಾಪುರ ತಾಲೂಕು ಉಡುಪಿ ಇವರ ತಂದೆಯವರಾದ ರಾಮ ದೇವಾಡಿಗ (57 ವರ್ಷ) ಸೆಂಟ್ರಿಂಗ್‌ ಕೆಲಸ ಮಾಡಿಕೊಂಡಿದ್ದು ತನ್ನ ಸಂಸಾರದೊಂದಿಗೆ ಕುಂದಾಪುರ ತಾಲೂಕಿನ ಉಪ್ಪಿನಕುದ್ರು ಗ್ರಾಮದ ಕಳಿಹಿತ್ಲುವಿನ ಸ್ವಾಮಿ ನಿಲಯ ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರ ತಂದೆಯವರಿಗೆ ಸುಮಾರು 9 ತಿಂಗಳಿನಿಂದ ಟಿ ಬಿ ಕಾಯಿಲೆಯಿದ್ದು, ಆದರ್ಶ ಆಸ್ಪತ್ರೆಯಲ್ಲಿ ಡಾ. ನಾಗೇಶ್ ಅವರ ಬಳಿ ಚಿಕಿತ್ಸೆ ಪಡೆದು ಗುಣಮುಖರಾಗಿರುತ್ತಾರೆ. ಪಿರ್ಯಾದಿದಾರರ ತಂದೆಯವರಿಗೆ ಕಳೆದ 3 ತಿಂಗಳಿನಿಂದ ಶಾಸಕೋಶದ ರಂಧ್ರ ಆಗಿದ್ದು, ಅದಕ್ಕೆ ಕುಂದಾಪುರ ಆದರ್ಶ ಆಸ್ಪತ್ರೆಯ ಡಾ; ನಾಗೇಶ್‌ ರವರ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ದಿನಾಂಕ 12/05/2023 ರಂದು ಮದ್ಯಾಹ್ನ ಸುಮಾರು 03:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ತಂದೆಯವರಿಗೆ ಮನೆಯಲ್ಲಿ ಸುಸ್ತು ಕಾಣಿಸಿಕೊಂಡಿದ್ದು ಅವರನ್ನು ಕುಂದಾಪುರ ಡಾ. ನಾಗೇಶ್‌ ರವರ ಸಂಜಯ ಕ್ಲಿನಿಕ್‌ಗೆ ಕರೆ ತಂದಿದ್ದು ಅಲ್ಲಿ ಪರೀಕ್ಷಿಸಿದ ಡಾ. ನಾಗೇಶ್‌ರವರು ಆದರ್ಶ ಆಸ್ಪತ್ರೆಗೆ ದಾಖಲಿಸಲು ತಿಳಿಸಿರುತ್ತಾರೆ. ಆ ಪ್ರಕಾರ ಪಿರ್ಯಾದಿದಾರರು ತಂದೆಯವರನ್ನು ಕುಂದಾಪುರ ಆದರ್ಶ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯಲ್ಲಿರುತ್ತಾ, ದಿನಾಂಕ 13/05/2023 ರಂದು ಬೆಳಿಗ್ಗೆ 10:10 ಗಂಟೆಗೆ ಪಿರ್ಯಾದಿದಾರರ ತಂದೆಯವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ  ಯುಡಿಆರ್‌ ಕ್ರಮಾಂಕ :  24/2023 ಕಲಂ: 174 CrPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 14-05-2023 09:15 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080