ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 12.05.2023 ರಂದು ಫಿರ್ಯಾದಿ ಶೇಖಪ್ಪ, (35), ತಂದೆ: ಹವಳಪ್ಪ ಮಾದರ, ವಾಸ: ಕೆರೂರು, ಬೆನ್ನಗುಂಡಿ ಪ್ಲಾಟ, ಹನುಮಂತ ದೇವಸ್ಥಾನ, ಬಾದಾಮಿ ತಾಲೂಕು, ಬಾಗಲಕೋಟೆ ರವರು ಬಿಜಾಪುರದ ಸಮೀರ್‌ ಎಂಬವರಿಗೆ ಸೇರಿದ ಗೂಡ್ಸ್‌ ಲಾರಿಯನ್ನು ಚಲಾಯಿಸಿಕೊಂಡು ಮಂಗಳೂರಿನಿಂದ ಯಾದವಾಡಕ್ಕೆ ಹೊರಟು ಉಡುಪಿ – ಕುಂದಾಪುರ ರಾಹೆ 66 ರಲ್ಲಿ ಹೋಗುವಾಗ ಸಂಜೆ ಸುಮಾರು 6:30 ಗಂಟೆಗೆ ಬ್ರಹ್ಮಾವರ ಎಸ್‌.ಎಮ್‌.ಎಸ್‌ ಕಾಲೇಜು ಎದರು ತಲುಪುವಾಗ, ಅವರ ಮಾಲಿಕರಿಗೆ ಸೇರಿದ ನೊಂದಣಿ ನಂಬ್ರ KA.28.AA.0722 ನೇ ಲಾರಿಯನ್ನು ಚಲಾಯಿಸಿಕೊಂಡು ಬರುತ್ತಿದ್ದ ವಿರೇಶ್‌ ಎಂಬವರು ಹೇರೂರು ಗ್ರಾಮದ, ಹೇರೂರು ಎಣ್ಣೆ ಫ್ಯಾಕ್ಟರಿ ಎದುರು ರಾಹೆ 66 ರಲ್ಲಿ ತನ್ನ ಲಾರಿಯನ್ನು ನಿಲ್ಲಿಸಿ ಲಾರಿಯ ಹಿಂಬದಿ ನಿಂತಿರುವಾಗ, ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66 ರಲ್ಲಿ ಅಪರಿಚಿತ ಬಸ್ಸು ಚಾಲಕನು ತನ್ನ ಬಾಬ್ತು ಬಸ್ಸ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿರೇಶನಿಗೆ ಡಿಕ್ಕಿ ಹೊಡೆದು ಬಸ್ಸ್‌ನ್ನು ನಿಲ್ಲಿಸದೇ ಪರಾರಿಯಾಗಿ ಹೋಗಿರುತ್ತಾನೆ. ಈ ಅಪಘಾತದ ಪರಿಣಾಮ ವಿರೇಶನ ತಲೆಯ ಹಿಂಬದಿ ರಕ್ತ ಗಾಯವಾಗಿ, ಮಾತನಾಡದೇ ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುತ್ತಾನೆ. ಗಾಯಗೊಂಡ ವಿರೇಶನನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಿ, ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 99/2023 : ಕಲಂ 279, 338 ಐಪಿಸಿ ಹಾಗೂ134 (A) & (B), 187 ಐಎಮ್‌ವಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ 14/05/2023 ರಂದು ಬೆಳಿಗ್ಗಿನ ಜಾವ ಸಮಯ 03:00 ಗಂಟೆ ಸುಮಾರಿಗೆ  ಫಿರ್ಯಾದಿದಾರರಾಧ ಅರುಣ ಖಾರ್ವಿ (43) ಗಂಡ : ಮಾಧವ ಖಾರ್ವಿ ವಾಸ: ಅನುಷಾ ನಿಲಯ, ಲೈಟ್‌ಹೌಸ್ ಬಳಿ   ಗಂಗೊಳ್ಳಿ ಗ್ರಾಮ, ಕುಂದಾಪುರ ಇವರು ತಮ್ಮ ಮನೆಯಲ್ಲಿರುವಾಗ  ಆಪಾದಿತರಾದ ರಾಜು ಪೂಜಾರಿ ಮತ್ತು ಗಣೇಶ ರವರು ಇವರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅರುಣಾ ಖಾರ್ವಿ ರವರ ಗಂಡನನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದುದನ್ನು ಖಾರ್ವಿ ರವರ ರವರು ಕೇಳಿಸಿಕೊಂಡು ಮನೆಯ ಹೊರಗಿನ ಲೈಟ್‌ಹಾಕಿ ನೋಡಿ ಹೊರಗೆ ಬಂದಾಗ ನಿನ್ನ ಗಂಡನನ್ನು ಹೊರಗೆ ಕರೆ ಅವನನ್ನು ಸುಮ್ಮನೇ ಬಿಡುವುದಿಲ್ಲ”  ಎಂದು ಅವಾಚ್ಯ ಶಬ್ದದಿಂದ ಬೈದಿದ್ದು ಆಗ ಖಾರ್ವಿ ರವರ ರವರ ಗಂಡ ಹೊರಗೆ ಬಂದಾಗ ಅವರನ್ನುದ್ದೇಶಿಸಿ ಆಪಾದಿತರು ನಿನ್ನ ಕೈ ಕಾಲುಗಳನ್ನು ಮುರಿದು ಹಾಕುತ್ತೇವೆ ಎಂದು ಹೊಡೆಯಲು ಮುಂದಾಗಿದ್ದು, ಆ ಸಮಯ ನೆರೆಕರೆಯರು ಮನೆ ಬಳಿ ಬರುವುದನ್ನು ನೋಡಿ ಮುಂದಕ್ಕೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಲ್ಲದೇ ಖಾರ್ವಿ ರವರ ರವರಿಗೆ ಅವಾಚ್ಯ ವಾಗಿ ಬೈದು ಮಾನಕ್ಕೆ ಕುಂದು ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 57/2023 ಕಲಂ: 341, 447, 504, 506, 509  ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ
  • ಉಡುಪಿ: ದಿನಾಂಕ 01/05/2023 ರಂದು ಮೊಬೈಲ್ ನಂಬ್ರದಿಂದ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ರಾಜಾಸ್ಥಾನದ ತಮ್ಮ ಪರಿಚಯದ ವ್ಯಕ್ತಿ ಎಂದು ಹೇಳಿ, ಆತನ ಸಂಬಂಧಿಕರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಿಸಲು ಇದ್ದು, ಅದಕ್ಕಾಗಿ ತುರ್ತಾಗಿ ಹಣದ ಅವಶ್ಯಕತೆ ಇದೆ ಎಂದು ಪಿರ್ಯಾದಿದಾರ ಭೀಮಾರಾಮ್, (43) ತಂದೆ: ಕೇಶಾರಾಮ್, ವಾಸ: ನಂಬ್ರ 6-118A, 17, ರಾಮ್ ನಿವಾಸ: ಪುತ್ತೂರು, ಕೊಡಂಕೂರು ವಾರ್ಡ್, ಉಡುಪಿ ತಾಲೂಕು ಇವರನ್ನು ನಂಬಿಸಿ, ಬ್ಯಾಂಕ್ ಖಾತೆ ನೀಡಿದ್ದು, ಇದನ್ನು ನಂಬಿದ ಪಿರ್ಯಾದಿದಾರರು ಆತನು ತಿಳಿಸಿದ ಬ್ಯಾಂಕ್ ಖಾತೆಗೆ ಅದೇ ದಿನ ಕ್ರಮವಾಗಿ ರೂ. 49,000/-, 49,000/- ಮತ್ತು ರೂ. 40,000/- ರಂತೆ ಒಟ್ಟು ರೂ. 1,38,000/- ಹಣವನ್ನು ಆನ್ ಲೈನ್ ಮುಖೇನ ವರ್ಗಾವಣೆ ಮಾಡಿರುತ್ತಾರೆ. ಯಾರೋ ಅಪರಿಚಿತ ವ್ಯಕ್ತಿ ಇವರನ್ನು ನಂಬಿಸಿ, ಮೋಸದಿಂದ ಹಣ ಪಡೆದಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 88/2023 ಕಲಂ: 66(D)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 14-05-2023 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080